ನವದೆಹಲಿ: ದೆಹಲಿ ರಾಜಧಾನಿ ಸೇರಿದಂತೆ ಸುತ್ತಮುತ್ತಲ ಪ್ರದೇಶಗಳಲ್ಲಿ 24 ಗಂಟೆಗಳಿಂದ ಭಾರೀ ಮಳೆಯಾಗುತ್ತಿದ್ದು ಜನ-ಜೀವನ ಅಸ್ತವ್ಯಸ್ತವಾಗಿದೆ. ಗುರುವಾರ ಭಾರಿ ಮಳೆಯಿಂದಾಗಿ, ರಸ್ತೆಗಳು ಮುಳುಗಿಹೋಗಿವೆ ಮತ್ತು ಅನೇಕ ಪ್ರದೇಶಗಳಲ್ಲಿ ಮನೆಗಳಿಗೆ ನೀರು ನುಗ್ಗಿದೆ. ಭಾರತೀಯ ಹವಾಮಾನ ಇಲಾಖೆಯ ಪ್ರಕಾರ, ಶುಕ್ರವಾರ ಸಹ ಭಾರೀ ಮಳೆಯಾಗಲಿದೆ ಎಂದು ಹೇಳಿದೆ. ಘಾಜಿಯಾಬಾದ್ ನಲ್ಲಿ ಇಂದು ಎಲ್ಲಾ ಶಾಲೆಗಳನ್ನು ಮುಚ್ಚುವಂತೆ ಸೂಚನೆ ನೀಡಲಾಗಿದೆ.
All schools in district till class 12th to remain closed tomorrow on account of heavy rains/ adverse weather conditions ..
— DM Ghaziabad (@dm_ghaziabad) July 26, 2018
ಹವಾಮಾನ ಇಲಾಖೆಯ ಪ್ರಕಾರ, ದೆಹಲಿ-ಎನ್ಸಿಆರ್, ಉತ್ತರ ಪ್ರದೇಶ, ರಾಜಸ್ಥಾನ, ಹರಿಯಾಣ, ಪಂಜಾಬ್, ಚಂಡೀಗಢ, ಹಿಮಾಚಲ ಪ್ರದೇಶ ಮತ್ತು ಉತ್ತರಖಾಂಡ್ ರಾಜ್ಯಗಳಲ್ಲಿ ಮುಂದಿನ ನಾಲ್ಕೈದು ದಿನ ಭಾರಿ ಮಳೆ ಸಂಭವಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಇದಲ್ಲದೆ, ಮಧ್ಯಪ್ರದೇಶ, ಜಾರ್ಖಂಡ್, ಪಶ್ಚಿಮ ಬಂಗಾಳ ಮತ್ತು ಅಸ್ಸಾಂನಲ್ಲಿ ಭಾರಿ ಮಳೆ ಎಚ್ಚರಿಕೆ ನೀಡಲಾಗಿದೆ. ಹವಾಮಾನ ಇಲಾಖೆ ಒದಗಿಸಿದ ಮಾಹಿತಿಯ ಪ್ರಕಾರ, ಜುಲೈ 27 ರಿಂದ 30 ರವರೆಗೆ ಅಸ್ಸಾಂ, ಮೇಘಾಲಯ, ಮಣಿಪುರ, ತ್ರಿಪುರ, ನಾಗಾಲ್ಯಾಂಡ್, ಮಣಿಪುರ ಮತ್ತು ಮಿಜೋರಾಮ್ನಂತಹ ಈಶಾನ್ಯ ರಾಜ್ಯಗಳಲ್ಲಿ ಮಳೆಯಿಂದಾಗಿ ರೆಡ್ ಅಲರ್ಟ್ ಜಾರಿ ಮಾಡಲಾಗಿದೆ.
ಜಲಾವೃತವಾದ ದೆಹಲಿಯ ಕೆಲವು ಪ್ರದೇಶಗಳು
ರಾಷ್ಟ್ರೀಯ ರಾಜಧಾನಿ ದೆಹಲಿಯಲ್ಲಿ ಗುರುವಾರ ಬೆಳಿಗ್ಗೆ 08:30 ರಿಂದ 05:30ರವರೆಗೆ ಅಯಾನಗರ್ ನಲ್ಲಿ 05.6 ಮಿಮೀ, ಲೋದಿ ರೋಡ್ ನಲ್ಲಿ 18.6 ಮಿಮೀ, ಸಫ್ದರ್ಜಂಗ್ ನಲ್ಲಿ 14.8 ಮಿಮೀ, ಪಾಲಂನಲ್ಲಿ 10.2ಮಿಮೀ ಮತ್ತು ನರೇಲಾದಲ್ಲಿ 8.0 ಮಿಮೀ ಮಳೆ ದಾಖಲಾಗಿದೆ. ಅದೇ ಸಮಯದಲ್ಲಿ, ಭಾರಿ ಮಳೆಯಿಂದಾಗಿ ಗ್ರೇಟರ್ ನೋಯ್ಡಾ ಕಲೆಕ್ಟರ್ ಕಚೇರಿ ಜಲಾವೃತವಾಗಿದೆ.
Rain lashes parts of Delhi; visuals from Rajpath. pic.twitter.com/OXRK4UQ9Ij
— ANI (@ANI) July 26, 2018