ಬೆಂಗಳೂರು: ಸ್ಯಾಂಡಲ್ವುಡ್'ನಲ್ಲಿ ಸಾಕಷ್ಟು ಹೆಸರು ಮಾಡಿರುವ ನಟಿ ಅನುಪ್ರಭಾಕರ್ ಯಾರಿಗೆ ತಾನೇ ಗೊತ್ತಿಲ್ಲಾ ಹೇಳಿ. ತಮ್ಮ ಕ್ಯೂಟ್ ಸ್ಮೈಲ್'ನಿಂದಲೇ ಎಲ್ಲರ ಗಮನಸೆಳೆಯುವ ನಟಿ ಅನುಪ್ರಭಾಕರ್ ಈಗ ಹೇಗಿದ್ದಾರೆ ಅನ್ನೋ ಕುತೂಹಲ ನಿಮ್ಮಲ್ಲೂ ಮೂಡಿರಬಹುದಲ್ಲವೇ? ಹಾಗಿದ್ದರೆ ಈ ಸುದ್ದಿ ಓದಿ...
ಬಾಲನಟಿಯಾಗಿ ಚಿತ್ರರಂಗಕ್ಕೆ ಎಂಟ್ರಿಕೊಟ್ಟ ನಂತರ ಹೃದಯಾ ಹೃದಯಾ ಚಿತ್ರದ ಮೂಲಕ ನಾಯಕಿಯಾದ ಮುದ್ದು ನಗುಮೊಗದ ಚೆಲುವೆ ಅನುಪ್ರಭಾಕರ್. ಕನ್ನಡದ ಬಹುತೇಕ ಘಟಾನುಘಟಿಗಳ ಜೊತೆ ನಟಿಸಿ, ಸೈ ಎನಿಸಿಕೊಂಡಿರುವ ನಟಿ ಅನುಪ್ರಭಾಕರ್ ಇಂದಿಗೂ ಸಾಕಷ್ಟು ಅಭಿಮಾನಿಗಳನ್ನು ಹೊಂದಿದ್ದಾರೆ.
ತಾಯಿಯಾಗುವ ಸಂಭ್ರಮದಲ್ಲಿ ನಟಿ ಅನುಪ್ರಭಾಕರ್
ಚಿತ್ರರಂಗದಲ್ಲಿ ಪ್ರೇಯಸಿಯಾಗಿ, ಪತ್ನಿಯಾಗಿ, ತಂಗಿಯಾಗಿ ಸಾಕಷ್ಟು ಪಾತ್ರಗಳನ್ನು ಅಚ್ಚುಕಟ್ಟಾಗಿ ಅಭಿನಯಿಸಿರುವ ಅನುಪ್ರಭಾಕರ್ ಈಗ ತಮ್ಮ ನಿಜ ಜೀವನದಲ್ಲಿ ತಾಯಿಯಾಗುತ್ತಿದ್ದಾರೆ ಎಂಬುದು ಇತ್ತೀಚೆಗಷ್ಟೇ ಬಹಿರಂಗವಾಗಿತ್ತು. ಅನುಪ್ರಭಾಕರ್ ಹಾಗೂ ರಘು ಮುಖರ್ಜಿ ದಂಪತಿ ತಮ್ಮ ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿರುವ ಬಗ್ಗೆ ಸ್ವತಃ ರಘು ಮುಖರ್ಜಿ ಅವರೇ ಟ್ವೀಟ್ ಮಾಡಿದ್ದರು.
ಇದೀಗ ಆ ಸುದ್ದಿಯಾದ ಹಲವು ದಿನಗಳ ಬಳಿಕ ಅನುಪ್ರಭಾಕರ್ ಅವರು ಪತಿ ರಘುಮುಖರ್ಜಿ ಅವರೊಂದಿಗಿರುವ ಹೊಸ ಫೋಟೊ ಒಂದನ್ನು ತಮ್ಮ ಫೇಸ್ಬುಕ್ ಹಾಗೂ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.
❤️❣️❤️❣️❤️!!! pic.twitter.com/7jnsX0aIMW
— Anu Prabhakar (@AnuPrabhakar9) June 18, 2018
ಈ ಕ್ಯೂಟ್ ಜೋಡಿ ನೋಡ್ತಿದ್ರೆ ನೀವೂ ಸಖತ್ ಖುಷಿ ಪಡುತ್ತೀರಿ. ನಗುವಿಗೆ ಸಮನಾರ್ಥಕ ಪದ ಅಂತ ಹೇಳಿದ್ರೆ ಅದು ಅನುಪ್ರಭಾಕರ್ ಅಂತನೇ ಹೇಳಬಹುದು ಅಲ್ವಾ! ಬಹುಶಃ 2 ವರ್ಷಗಳ ಹಿಂದೆ ನಟ ಹಾಗೂ ಮಾಡೆಲ್ ರಘು ಮುಖರ್ಜಿ ಅವರು ಅನುಪ್ರಭಾಕರ್ ಅವರ ಕ್ಯೂಟ್ ಸ್ಮೈಲ್ ನೋಡಿನೇ ಲವ್ ಅಲ್ಲಿ ಬಿದ್ರೆನೋ ಅನ್ಸುತ್ತೆ. ಮುದ್ದಾದ ಮಗುವಿನ ನಿರೀಕ್ಷೆಯಲ್ಲಿರುವ ಈ ಮುದ್ದಾದ ಜೋಡಿಗೆ ನಾವೆಲ್ಲರೂ ಶುಭ ಹಾರೈಸೋಣ.