ಗೌರಿ ಲಂಕೇಶ್ ಹತ್ಯೆಗೆ ಬಳಸಿದ್ದ ಕೋಡ್ ವರ್ಡ್ ಯಾವುದು ಗೊತ್ತೇ?

   

Last Updated : Jun 16, 2018, 12:28 PM IST
ಗೌರಿ ಲಂಕೇಶ್ ಹತ್ಯೆಗೆ ಬಳಸಿದ್ದ ಕೋಡ್ ವರ್ಡ್ ಯಾವುದು ಗೊತ್ತೇ? title=

ಬೆಂಗಳೂರು: ಪತ್ರ ಕರ್ತೆ ಗೌರಿ ಲಂಕೇಶ್ ಹತ್ಯೆಗೆ ಹಂತಕರು  ಕೋಡ್ ವರ್ಡ್ವೊಂದನ್ನು ಕನ್ನಡ,ಮರಾಠಿ ಮತ್ತು ಆಂಗ್ಲ ಮಿಶ್ರಿತ ಭಾಷೆಯಲ್ಲಿ ಬಳಸಿರುವ ಸಂಗತಿ ಈಗ ಬೆಳಕಿಗೆ ಬಂದಿದೆ. 

ಈಗ ಎಸ್ ಐ ಟಿ ಪೊಲೀಸರು ಹಂತಕರಿಂದ ಪಡೆದ ಡೈರಿಯಿಂದ ಈ ಆಘಾತಕಾರಿ ಅಂಶ ತಿಳಿದುಬಂದಿದೆ. ಈಗ ಕೋಡ್ ವರ್ಡ್ ಅನ್ನು ಬೇಡಿಸಿರುವ ಪೊಲೀಸರು ಅದನ್ನು 'ಆಪರೇಶನ್ ಅಮ್ಮ' ಎನ್ನುವುದನ್ನು ಪತ್ತೆ ಹಚ್ಚಿದ್ದಾರೆ. 

ಯಾರಿಗೂ ಹತ್ಯೆಯ ಸಂಚು ತಿಳಿಯಬಾರದೆಂದು ಈ ಕೋಡ್ ವರ್ಡ್  ಬಳಸುತ್ತಿದ್ದರು ಎನ್ನುವ ಅಂಶ ಈಗ ಬೆಳಕಿಗೆ ಬಂದಿದೆ. ಈಗಾಗಲೇ  ಪೊಲೀಸರು ಡೈರಿಯಲ್ಲಿದ್ದಂತಹ ಬಹುತೇಕ ಕೋಡ್ ವರ್ಡ್ ಗಳನ್ನು ಬೇದಿಸುವಲ್ಲಿ ಯಶಸ್ವಿಯಾಗಿದ್ದಾರೆ. 

ಇತ್ತೀಚಿಗೆ ಪೊಲೀಸರು ಗೌರಿ ಲಂಕೇಶ್ ಅವರನ್ನು ಹತ್ಯೆ ಗೈದ ಆರೋಪಿ ಪರಶುರಾಮ್ ವಾಗ್ಮೊರೆಯನ್ನು ಬಂಧಿಸಿದ್ದರು. ಈ ವೇಳೆ ಈ ಎಲ್ಲ ಅಂಶಗಳು ತಿಳಿದುಬಂದಿವೆ ಎನ್ನಲಾಗಿದೆ. 

Trending News