ಕೂದಲಿನ ಉದ್ದವು ನಿಮ್ಮ ವ್ಯಕ್ತಿತ್ವ ಹೇಗಿದೆ ಎಂದು ಹೇಳುತ್ತದೆ: ಇಲ್ಲಿದೆ ನೋಡಿ ಮಾಹಿತಿ

ಹೆಗಲವರೆಗೂ ಕೂದಲು ಹೊಂದಿರುವ ಮಹಿಳೆಯರ ಒಂದು ಪ್ರಯೋಜನವೆಂದರೆ ಅವರಿಗೆ ಯಾವುದೇ ರೀತಿಯ ಕೇಶವಿನ್ಯಾಸವನ್ನು ಸುಲಭವಾಗಿ ಮಾಡಬಹುದು.

Written by - Puttaraj K Alur | Last Updated : Oct 16, 2021, 12:24 PM IST
  • ಕೂದಲು ನಿಮ್ಮ ಸೌಂದರ್ಯವನ್ನು ಹೆಚ್ಚಿಸುವುದಲ್ಲದೆ ನಿಮ್ಮ ವ್ಯಕ್ತಿತ್ವವನ್ನು ಹೆಚ್ಚಿಸುತ್ತದೆ
  • ಚಿಕ್ಕ ಕೂದಲನ್ನು ಹೊಂದಿರುವ ಜನರು ನಿರ್ಭೀತ ವ್ಯಕ್ತಿತ್ವವನ್ನು ಹೊಂದಿರುತ್ತಾರೆ
  • ಉದ್ದ ಕೂದಲಿನವರು ಅತ್ಯಂತ ಕಠಿಣ ಕೆಲಸಗಳನ್ನು ಶ್ರದ್ಧೆಯಿಂದ ಪೂರ್ಣಗೊಳಿಸುತ್ತಾರೆ
ಕೂದಲಿನ ಉದ್ದವು ನಿಮ್ಮ ವ್ಯಕ್ತಿತ್ವ ಹೇಗಿದೆ ಎಂದು ಹೇಳುತ್ತದೆ: ಇಲ್ಲಿದೆ ನೋಡಿ ಮಾಹಿತಿ     title=
ಕೂದಲಿನಿಂದ ನಿಮ್ಮ ವ್ಯಕ್ತಿತ್ವವನ್ನು ತಿಳಿದುಕೊಳ್ಳಿ

ನವದೆಹಲಿ: ಇಲ್ಲಿಯವರೆಗೆ ನಿಮ್ಮ ಭವಿಷ್ಯ (Horoscope) ಮತ್ತು ವ್ಯಕ್ತಿತ್ವವನ್ನು ಕಂಡುಹಿಡಿಯಲು ಕೈಯಲ್ಲಿರುವ ರೇಖೆಗಳ ವಿಶ್ಲೇಷಣೆ ಮಾಡಲಾಗುತ್ತಿತ್ತು. ಆದರೆ ಇತ್ತೀಚಿನ ಸಂಶೋಧನೆಯೊಂದರ ಪ್ರಕಾರ, ಕೂದಲಿನ ಉದ್ದವು ನಿಮ್ಮ ವ್ಯಕ್ತಿತ್ವವು(Hairstyle Personality) ಹೇಗಿದೆ ಎಂಬುದರ ಬಗ್ಗೆ ತಿಳಿಸುತ್ತದೆ ಎಂಬ ಅಂಶವನ್ನು ಬಹಿರಂಗಪಡಿಸಿದೆ. ವಾಸ್ತವವಾಗಿ ನಿಮ್ಮ ಕೂದಲು ಮತ್ತು ಅವುಗಳ ಉದ್ದ ಕೂಡ ನಿಮ್ಮ ಬಗ್ಗೆ ಬಹಳಷ್ಟು ಹೇಳುತ್ತದಂತೆ. ಈ ಮೂಲಕ ನಿಮ್ಮ ಸ್ವಭಾವವನ್ನು ಕಂಡುಕೊಳ್ಳುವುದರ ಜೊತೆಗೆ ಕೆಲಸದ ಒತ್ತಡದ ನಡುವೆ ನೀವು ನಿಮ್ಮನ್ನು ಹೇಗೆ ನಿಭಾಯಿಸುತ್ತೀರಿ ಎಂಬುದನ್ನು ಕೂಡ ಅಂದಾಜಿಸಬಹುದಂತೆ.

ಸಣ್ಣ ಕೂದಲಿನ ಗುಣಲಕ್ಷಣಗಳು

ಈ ಅಧ್ಯಯನದ ಪ್ರಕಾರ ಚಿಕ್ಕ ಕೂದಲ(Small Hair)ನ್ನು ಹೊಂದಿದ್ದರೆ ನೀವು ಖಂಡಿತವಾಗಿಯೂ ಬಹಿರಂಗವಾಗಿ ಮಾತನಾಡುವ ವ್ಯಕ್ತಿ. ಭುಜದ ಮೇಲೆ ಸ್ವಲ್ಪ ಕೂದಲು ಇರುವವರ ನಿರ್ಭೀತ ವ್ಯಕ್ತಿತ್ವವು ಅವರನ್ನು ಇತರರಿಗಿಂತ ಭಿನ್ನವಾಗಿಸುತ್ತದಂತೆ. ಅಂತಹ ಜನರು ವಿಶೇಷವಾಗಿ ಮಹಿಳೆಯರು, ತಮ್ಮ ಮನೆ ಜೀವನ ಮತ್ತು ಕಚೇರಿ ಜೀವನದ ನಡುವೆ ಉತ್ತಮ ಸಮತೋಲನವನ್ನು ತಿಳಿಸುವ ಮೂಲಕ ಅತ್ಯುತ್ತಮ ಫಲಿತಾಂಶಗಳನ್ನು ನೀಡುತ್ತಾರೆ. ಇಂತಹ ಜನರು ಸಾಮಾನ್ಯವಾಗಿ ಹೊಸ ಹೊಸ ವಿಷಯ ತಿಳಿದುಕೊಳ್ಳಲು ಪ್ರಯತ್ನಿಸಲು ಇಷ್ಟಪಡುತ್ತಾರಂತೆ. ಈ ಜನರು ಜೀವನದಲ್ಲಿ ಅವ್ಯವಸ್ಥೆಯನ್ನು ಸಹಿಸುವುದಿಲ್ಲವಂತೆ.

ಇದನ್ನೂ ಓದಿ: Wall Clock Vastu: ಗೋಡೆ ಗಡಿಯಾರದ ಬಗ್ಗೆ ಎಂದಿಗೂ ಈ ತಪ್ಪುಗಳು ಆಗದಂತೆ ನಿಗಾವಹಿಸಿ

ಉದ್ದ ಕೂದಲಿನ ವ್ಯಕ್ತಿತ್ವ

ಉದ್ದ ಕೂದಲನ್ನು ನಿಭಾಯಿಸುವುದು ಸುಲಭವಲ್ಲ, ಅದಕ್ಕೆ ಸಾಕಷ್ಟು ತಾಳ್ಮೆ ಬೇಕು. ಅಂತಹ ಜನರು ಜೀವನದಲ್ಲಿ ಎಚ್ಚರಿಕೆಯಿಂದ ಮುಂದುವರಿಯುತ್ತಾರಂತೆ. ಉದ್ದನೆಯ ಕೂದಲು(Psychology of Hair Length) ಹೊಂದಿರುವ ಮಹಿಳೆಯರು ವಿವಾಹವಾಗಿದ್ದರೆ, ತಮ್ಮ ಸಂಗಾತಿಯನ್ನು ಗೌರವಿಸುತ್ತಾರಂತೆ. ಅಷ್ಟೇ ಅಲ್ಲದೆ ನಿಷ್ಠೆಯಿಂದ ತಮ್ಮ ಸಂಬಂಧವನ್ನು ಮುಂದುವರೆಸಿಕೊಂಡು ಹೋಗುತ್ತಾರಂತೆ. ಸಂಗಾತಿಯಿಂದ ಕೂಡ ಅವರು ಅದನ್ನೇ ನಿರೀಕ್ಷಿಸುತ್ತಾರಂತೆ. ಇಂತಹ ಜನರು ಜೀವನದಲ್ಲಿ ಅಸಾಧ್ಯವಾದುದನ್ನು ಕಾಣುವುದಿಲ್ಲ. ಇಂತಹವರು ಅತ್ಯಂತ ಕಷ್ಟಕರವಾದ ಕೆಲಸಗಳನ್ನು ಕೂಡ ಶ್ರದ್ಧೆಯಿಂದ ಪೂರ್ಣಗೊಳಿಸುತ್ತಾರಂತೆ.

ನಿಮ್ಮ ಕೂದಲು ಭುಜದವರೆಗೆ ತಲುಪಿದ್ದರೆ?

ಹೆಗಲವರೆಗೂ ಕೂದಲು ಹೊಂದಿರುವ ಮಹಿಳೆಯರ ಒಂದು ಪ್ರಯೋಜನವೆಂದರೆ ಅವರಿಗೆ ಯಾವುದೇ ರೀತಿಯ ಕೇಶವಿನ್ಯಾಸ(Hairstyle)ವನ್ನು ಸುಲಭವಾಗಿ ಮಾಡಬಹುದು. ತಮ್ಮ ಭುಜದವರೆಗೂ ಕೂದಲು ಹೊಂದಿರುವ ಮಹಿಳೆಯರು ಸ್ತ್ರೀವಾದದ ಬಗ್ಗೆ ಹೆಮ್ಮೆಪಡುತ್ತಾರಂತೆ. ಈ ವಿಷಯವನ್ನು ಇತರರಿಗೆ ಹೇಳಲು ಅಥವಾ ವ್ಯಕ್ತಪಡಿಸಲು ಇಷ್ಟಪಡುತ್ತಾರೆಂದು ಹೇಳಲಾಗಿದೆ. ಇಂತಹ ಜನರು ಬಟ್ಟೆಗಳನ್ನು ತುಂಬಾ ಇಷ್ಟಪಡುತ್ತಾರೆ. ನಿಮ್ಮ ಕೂದಲು ಕೂಡ ಈ ರೀತಿ ಇದ್ದರೆ ನೀವು ಸುಲಭವಾಗಿ ಸವಾಲುಗಳನ್ನು ಎದುರಿಸುತ್ತೀರಿ. ನಿಮ್ಮ ಸ್ನೇಹ ಯಾವುದೇ ಆಗಿರಲಿ, ಅದು ದೀರ್ಘಕಾಲ ಉಳಿಯುತ್ತದೆ. ಏಕೆಂದರೆ ಪ್ರತಿಯೊಬ್ಬರೂ ನಿಮ್ಮ ಉತ್ತಮ ಸ್ವಭಾವವನ್ನು ಪ್ರೀತಿಸುತ್ತಾರೆ.

ಇದನ್ನೂ ಓದಿ: Best Face Scrub: ಈ 2 ವಸ್ತುಗಳನ್ನು ಬೆರೆಸಿ ಸ್ಕ್ರಬ್ ಮಾಡಿ, ಕಲೆ-ಮೊಡವೆ ಮಾಯ; ಹೊಳೆಯುತ್ತೆ ತ್ವಚೆ

ಕೂದಲು ನಿಮ್ಮ ಸೌಂದರ್ಯ(Personality and Hair)ವನ್ನು ಹೆಚ್ಚಿಸುವುದಲ್ಲದೆ ನಿಮ್ಮ ವ್ಯಕ್ತಿತ್ವವನ್ನು ಹೆಚ್ಚಿಸುತ್ತದೆ. ಇಂತಹ ಪರಿಸ್ಥಿತಿಯಲ್ಲಿ ನೀವು ನಿಮ್ಮ ಕೂದಲನ್ನು ಸರಿಯಾಗಿ ನೋಡಿಕೊಂಡರೆ ಅದು ನಿಮಗೆ ದೊಡ್ಡ ಲಾಭವನ್ನು ತಂದಕೊಡುತ್ತದಂತೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News