ಮೋದಿ, ಶಾ ಕುಮ್ಮಕ್ಕಿನಿಂದ ಬಾದಾಮಿಯಲ್ಲಿ ಐಟಿ ದಾಳಿ- ಸಿದ್ದರಾಮಯ್ಯ

ನಾನೂ ರೆಸಾರ್ಟ್ ನಲ್ಲಿ ಉಳಿದುಕೊಂಡು ಬಂದು ನಾಲ್ಕು ದಿನವಾಗಿದೆ. ಈಗ ದಾಳಿ‌ಮಾಡುತ್ತಾರೆ ಎಂದರೆ ಅದರ ಅರ್ಥ ಏನು ?

Last Updated : May 8, 2018, 11:56 AM IST
ಮೋದಿ, ಶಾ ಕುಮ್ಮಕ್ಕಿನಿಂದ ಬಾದಾಮಿಯಲ್ಲಿ ಐಟಿ ದಾಳಿ- ಸಿದ್ದರಾಮಯ್ಯ title=
ಸಂಗ್ರಹ ಚಿತ್ರ

ಮೈಸೂರು: ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಕುಮ್ಮಕ್ಕಿನಿಂದ ಬಾದಾಮಿಯಲ್ಲಿ ಐಟಿ ದಾಳಿ ನಡೆದಿದೆ. ಇದನ್ನು ನಾನು ಖಂಡಿಸುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮೈಸೂರಿನಲ್ಲಿ ಪ್ರತಿಕ್ರಿಯಿಸಿದ್ದಾರೆ.

ಚುನಾವಣಾ ಪ್ರಚಾರಕ್ಕಾಗಿ ಮೈಸೂರಿನಲ್ಲಿರುವ ಸಿದ್ದರಾಮಯ್ಯ, ದಾಳಿಗಳನ್ನು ಮಾಡಿಸಿ ನನ್ನ ಹೆದರಿಸೋಕೆ ಸಾಧ್ಯವಿಲ್ಲ. ನನಗೆ ಯಾವ ಹೆದರಿಕೆಯೂ ಇಲ್ಲ. ನಾನೂ ರೆಸಾರ್ಟ್ ನಲ್ಲಿ ಉಳಿದುಕೊಂಡು ಬಂದು ನಾಲ್ಕು ದಿನವಾಗಿದೆ. ಈಗ ದಾಳಿ‌ಮಾಡುತ್ತಾರೆ ಎಂದರೆ ಅದರ ಅರ್ಥ ಏನು? ನಾನೂ ಅಲ್ಲಿ ದುಡ್ಡು ಅಡಗಿಸಿಟ್ಟು ಬಂದಿದ್ದೇನಾ? ಈಗ ಅಲ್ಲಿ ಹಣ ಸಿಕ್ಕಿರುವುದರ ಅರ್ಥ ಏನು? ಎಂದು ಪ್ರಶ್ನಿಸಿದರು.

ಮುಂದುವರೆದು ಮಾತನಾಡಿದ ಅವರು ಮೊದಲೆಯನದಾಗಿ ನಾನೂ ಆ ಕೊಠಡಿಯಲ್ಲಿ ಇರಲಿಲ್ಲ. ಬಿಜೆಪಿಗೆ ಸೋಲಿನ ಬೀತಿ ಕಾಡುತ್ತಿದೆ. ಚುನಾವಣಾ ವೇಳೆ ಈ ದಾಳಿಗಳು ರಾಜಕೀಯ ಪ್ರೇರಿತವಲ್ಲದೆ ಮತ್ತೇನು ಅಲ್ಲ. ಇದರಿಂದ ವಾಮಮಾರ್ಗದಲ್ಲಿ ನಮ್ಮನ್ನ ಎದುರಿಸಲು ನೋಡುತ್ತಿದ್ದಾರೆ. ಇದರಿಂದ ನನಗೆ ಯಾವ ಭೀತಿಯೂ ಇಲ್ಲ. ಜನತೆ ನನ್ನ ಪರವಾಗಿದ್ದರೆ. ಇಂತಹ ದಾಳಿಗಳಿಂದ ಬಿಜೆಪಿಗೆ ಅನುಕೂಲವಾಗಬಹುದು ಎಂದು ಭಾವಿಸಿದ್ದರೆ ಅವರಂತ ಮೂರ್ಖರಿಲ್ಲ ಎಂದು ಸಿಎಂ ಬಿಜೆಪಿ ವಿರುದ್ಧ ಹರಿಹೈದರು.

Trending News