Friendship Day 2021: ಇಂದು ಸ್ನೇಹಿತರ ದಿನ. ಸ್ನೇಹಿತರ ದಿನವನ್ನು ಪ್ರತಿ ವರ್ಷ ಆಗಸ್ಟ್ ತಿಂಗಳ ಮೊದಲ ಭಾನುವಾರದಂದು ಆಚರಿಸಲಾಗುತ್ತದೆ. ಯಾವುದೇ ವ್ಯಕ್ತಿಯ ಜೀವನದಲ್ಲಿ ಸ್ನೇಹಿತರು ದೊಡ್ಡ ಪಾತ್ರವನ್ನು ವಹಿಸುತ್ತಾರೆ. ಒಬ್ಬ ನಿಜವಾದ ಸ್ನೇಹಿತ ವ್ಯಕ್ತಿಯ ಜೀವನವನ್ನು ಯಶಸ್ವಿಗೊಳಿಸಬಹುದು. ಆಚಾರ್ಯ ಚಾಣಕ್ಯನ ಪ್ರಕಾರ, ನಿಜವಾದ ಸ್ನೇಹಿತನು ತನ್ನ ಸ್ನೇಹಿತನನ್ನು ಪ್ರತಿಯೊಂದು ಸನ್ನಿವೇಶದಲ್ಲೂ ಬೆಂಬಲಿಸುತ್ತಾನೆ. ಆಚಾರ್ಯ ಚಾಣಕ್ಯರು ನಿಜವಾದ ಸ್ನೇಹಿತನ (Friends) ಕೆಲವು ಗುಣಗಳನ್ನು ಬಣ್ಣಿಸಿದ್ದಾರೆ. ಹಾಗಾದರೆ ಬನ್ನಿ ಸ್ನೇಹದ ಬಗ್ಗೆ ಆಚಾರ್ಯ ಚಾಣಕ್ಯರ (Chanakya Niti) ಆಲೋಚನೆಗಳನ್ನು ತಿಳಿದುಕೊಳ್ಳೋಣ ...
ವಿಪರೀತ ಪರಿಸ್ಥಿತಿಯಲ್ಲೂ ಕೂಡ ಸಾಥ್ ನೀಡುವವನೆ ನಿಜವಾದ ಸ್ನೇಹಿತ (Chanakya Niti For Friendship)
ಆಚಾರ್ಯ ಚಾಣಕ್ಯರ ಪ್ರಕಾರ ಪ್ರತಿಕೂಲ ಅಥವಾ ಸನ್ನಿವೇಶಗಳಲ್ಲಿಯೂ ಕೂಡ ನಿಮ್ಮೊಂದಿಗೆ ಇರುವವನೇ ನಿಮ್ಮ ನಿಜವಾದ ಸ್ನೇಹಿತ. ಇಂತಹ ಸ್ನೇಹಿತರನ್ನು ಹೊಂದಿರುವ ವ್ಯಕ್ತಿಯು ಯಾವುದೇ ಪ್ರತಿಕೂಲ ಪರಿಸ್ಥಿತಿಯಿಂದ ಹೊರಬರುತ್ತಾನೆ.
ಆರ್ಥಿಕ ಸಂಕಷ್ಟ ಸಹಾಯ ಮಾಡುವವನು ನಿಜವಾದ ಸ್ನೇಹಿತ (Friendship Day)
ಆಚಾರ್ಯ ಚಾಣಕ್ಯನ ಪ್ರಕಾರ, ಹಣಕಾಸಿನ ಸಮಸ್ಯೆ ಇರುವ ಸಂದರ್ಭದಲ್ಲಿ ನಿಮಗೆ ಸಹಾಯ ಮಾಡಲು ಸಿದ್ಧವಿರುವವನು ನಿಮ್ಮ ನಿಜವಾದ ಸ್ನೇಹಿತ. ನಿಮ್ಮನ್ನು ತೊಂದರೆಯಲ್ಲಿ ನೋಡಲು ಸಾಧ್ಯವಾಗದ ಮತ್ತು ನಿಮ್ಮನ್ನು ತೊಂದರೆಯಿಂದ ಹೊರಗೆ ತರಲು ಎಲ್ಲ ಪ್ರಯತ್ನಗಳನ್ನು ಮಾಡುವ ಸ್ನೇಹಿತ ನಿಮ್ಮ ನಿಜವಾದ ಸ್ನೇಹಿತ.
ಇದನ್ನೂ ಓದಿ-ಆಗಸ್ಟ್ ತಿಂಗಳಲ್ಲಿ ಹುಟ್ಟಿದ ಮಕ್ಕಳು ಪ್ರತಿಭಾನ್ವಿತರು, ಆದರೆ ಈ ಗುಣ ಕೂಡಾ ಅವರಲ್ಲಿರುತ್ತದೆ
ನಿಮ್ಮ ಹತ್ತಿರದ ವ್ಯಕ್ತಿ ತೀರಿದಾಗ ನಿಮ್ಮ ಜೊತೆಗೆ ನಿಲ್ಲುವವನೆ ನಿಮ್ಮ ನಿಜ ಸ್ನೇಹಿತ
ಆಪ್ತ ಬಂಧು-ಮಿತ್ರರ ಮರಣದ ನಂತರ ಯಾವುದೇ ಓರ್ವ ವ್ಯಕ್ತಿ ಕುಸಿದುಹೋಗುತ್ತಾನೆ. ಅಂತಹ ಸಂದರ್ಭದಲ್ಲಿ ಅವನಿಗೆ ಹೆಚ್ಚಿನ ಬೆಂಬಲ ಬೇಕು. ಆಚಾರ್ಯ ಚಾಣಕ್ಯರ ಪ್ರಕಾರ, ಅಂತಹ ಪರಿಸ್ಥಿತಿಯಲ್ಲಿ ನಿಮ್ಮ ಬೆಂಬಲವಾಗಿ ನಿಮ್ಮ ಜೊತೆ ನಿಲ್ಲುವ ಸ್ನೇಹಿತ ನಿಮ್ಮ ನಿಜವಾದ ಸ್ನೇಹಿತ.
ಕಾಯಿಲೆಯ ಸಂದರ್ಭದಲ್ಲಿಯೂ ಕೂಡ ನಿಮ್ಮ ಜೊತೆಗೆ ನಿಲ್ಲುವವನೆ ನಿಮ್ಮ ನಿಜವಾದ ಸ್ನೇಹಿತ
ನಿಮಗೆ ಕಾಯಿಲೆ ಇರುವ ಸಂದರ್ಭದಲ್ಲಿಯೂ ನಿಮ್ಮ ಜೊತೆಗಿದ್ದು, ನಿಮಗೆ ನೆರವು ಒದಗಿಸುವವನೆ ನಿಮ್ಮ ನಿಜವಾದ ಸ್ನೇಹಿತ.
ಇದನ್ನೂ ಓದಿ-Vastu Tips: ನಿಮ್ಮ ಮನೆಯಲ್ಲೂ ಇಂತಹ ವಿಗ್ರಹಗಳಿದ್ದರೆ ಸದಾ ಶಾಂತಿ-ಸಮೃದ್ಧಿ ತುಂಬಿರುತ್ತೆ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ