Attack On Terrorism: ಉಗ್ರವಾದದ ಮೇಲೆ ಭಾರಿ ಪ್ರಹಾರ, ಕಳೆದ 72ಗಂಟೆಗಳಲ್ಲಿ 4 ಆಪರೇಶನ್, 12 ಉಗ್ರರ ಬೇಟೆ

Attack On Terrorism - ಬಿಜ್‌ಬೆಹರಾದಲ್ಲಿ ಎನ್‌ಕೌಂಟರ್ ಕೊನೆಗೊಂಡಿದೆ ಎಂದು  ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಡಿಜಿ ದಿಲ್‌ಬಾಗ್ ಸಿಂಗ್ ಮಾಹಿತಿ ನೀಡಿದ್ದಾರೆ. ಇದೇ ವೇಳೆ ಕಳೆದ 72 ಗಂಟೆಗಳಲ್ಲಿ, ಸೈನ್ಯ ಮತ್ತು ಭದ್ರತಾ ಪಡೆ ಯೋಧರು  ನಾಲ್ಕು ವಿಭಿನ್ನ ಕಾರ್ಯಾಚರಣೆಗಳಲ್ಲಿ ಒಟ್ಟು 12 ಭಯೋತ್ಪಾದಕರನ್ನು ಧರೆಗುರುಳಿಸಿದ್ದಾರೆ ಎಂದು ಅವರು ಹೇಳಿದ್ದಾರೆ.

Written by - Nitin Tabib | Last Updated : Apr 11, 2021, 03:05 PM IST
  • ಜಮ್ಮು- ಕಾಶ್ಮೀರದಲ್ಲಿ ಉಗ್ರರ ಮೇಲೆ ಭಾರಿ ಪ್ರಹಾರ.
  • 72 ಗಂಟೆಗಳಲ್ಲಿ 4 ಎನ್ಕೌಂಟರ್, 12 ಉಗ್ರರ ಹತ್ಯೆ.
  • ಬೀಜಬೆಹೆರಾ ಮುಖಾಮುಖಿ ಅಂತ್ಯ.
Attack On Terrorism: ಉಗ್ರವಾದದ ಮೇಲೆ ಭಾರಿ ಪ್ರಹಾರ, ಕಳೆದ 72ಗಂಟೆಗಳಲ್ಲಿ 4 ಆಪರೇಶನ್, 12 ಉಗ್ರರ ಬೇಟೆ title=
Bijbehera Encounter (Photo Courtesy-ANI)

ಶ್ರೀನಗರ:  Attack On Terrorism - ಜಮ್ಮು ಮತ್ತು ಕಾಶ್ಮೀರದಲ್ಲಿ ಶಾಂತಿ ಸ್ಥಾಪಿಸುವ ನಿಟ್ಟಿನಲ್ಲಿ ಉಗ್ರರ ನಿರ್ಮೂಲನಾ ಅಭಿಯಾನ ಮುಂದುವರೆದಿದೆ. ಭಾರತೀಯ ಸೇನೆಯ ಯೋಧರು ಹಾಗೂ ಜಮ್ಮು ಮತ್ತು ಕಾಶ್ಮೀರ್ ಪೊಲೀಸ್ ಪಡೆ ಯೋಧರು ಉಗ್ರರ ಹುಟ್ಟಡಗಿಸುವಲ್ಲಿ ನಿರತರಾಗಿದ್ದಾರೆ. ಇದರದೇ ಒಂದು ಭಾಗವಾಗಿ ಪ್ರದೇಶದಲ್ಲಿ ಕಳೆದ 72 ಗಂಟೆಗಳಲ್ಲಿ ನಾಲ್ಕು ಪ್ರತ್ಯೇಕ ಕಾರ್ಯಾಚರಣೆಗಳನ್ನು ನಡೆಸಲಾಗಿದ್ದು, ಇದುವರೆಗೆ 72 ಉಗ್ರರನ್ನು ಧರೆಗುರಿಳಿಸಲಾಗಿದೆ.

ಇತ್ತೀಚೆಗಷ್ಟೇ ನಡೆಸಲಾಗಿರುವ ಎನ್ಕೌಂಟರ್ ನಲ್ಲಿ ಹತ್ಯೆಗೈಯಲಾಗಿರುವ ಉಗ್ರರ ಲೆಕ್ಕದ ಕುರಿತು ಹೇಳುವುದಾದರೆ, ತ್ರಾಲ್ (Tral Encounter) ಹಾಗೂ ಶೋಪಿಯಾನ್ (Shopian Encounter) ನಲ್ಲಿ 7 ಉಗ್ರರನ್ನು ಮಟ್ಟಹಾಕಲಾಗಿದೆ. ಹರಿಪೋರಾದಲ್ಲಿ (Haripora Encounter) ಉಗ್ರ ಸಂಘಟನೆಯಾಗಿರುವ ಅಲ್ ಬದರ್ ಉಗ್ರ ಸಂಘಟನೆಯ ಮೂವರು ಉಗ್ರರನ್ನು ಧರೆಗುರುಳಿಸಲಾಗಿದೆ.  ಇನ್ನೊಂದೆಡೆ ಬಿಜಬೆಹೆರಾದಲ್ಲಿ (Bijbehera Encounter) ಲಷ್ಕರ್-ಎ-ತೈಬಾ ಬ್ಯಾನರ್ ಅಡಿ ನಿಯೋಜನೆಗೊಂಡಿದ್ದ ಇಬ್ಬರು ಉಗ್ರರನ್ನು ಹತ್ಯೆಗೈಯಲಾಗಿದೆ.

ಬೀಜಬೆಹೆರಾದಲ್ಲಿ ಅಂತ್ಯಗೊಂಡ ಎನ್ಕೌಂಟರ್
ಈ ಕುರಿತು ಮಾಹಿತಿ ನೀಡಿರುವ ಜಮ್ಮು-ಕಾಶ್ಮೀರ್ ಪೊಲೀಸ್ DG ದಿಲ್ ಬಾಗ್ ಸಿಂಗ್, ಬೀಜಬೆಹೆರಾನಲ್ಲಿ ನಡೆಯುತ್ತಿದ್ದ ಮುಖಾಮುಖಿ ಅಂತ್ಯಗೊಂಡಿದೆ. ದಕ್ಷಿಣ ಕಾಶ್ಮೀರದ ಅನಂತನಾಗ ಜಿಲ್ಲೆಯಲ್ಲಿ ಬೀಜಬೆಹೆರಾ ಪ್ರದೇಶದ ಸೋಮಥಾನ್ ಎಂಬಲ್ಲಿ ಲಷ್ಕರ್-ಎ- ತೊಯ್ಭಾಗೆ ಸೇರಿದ ಇಬ್ಬರು ಉಗ್ರರನ್ನು ಹತ್ಯೆಗೈಯಲಾಗಿದೆ. ಒಟ್ಟಾರೆ ಹೇಳುವುದಾದರೆ ಭಾರತೀಯ ಸೇನಾ ಯೋಧರು ಹಾಗೂ ಭದ್ರತಾ ಪಡೆ ಯೋಧರು ಒಟ್ಟು 12 ಉಗ್ರರಿಗೆ ಅವರ ಅಂತ್ಯ ತೋರಿಸಿದ್ದಾರೆ.

ಇದನ್ನೂ ಓದಿ-Bank Holidays: April 13 ರಿಂದ ಸತತ 6 ದಿನಗಳ ಕಾಲ ಬ್ಯಾಂಕ್ ಗಳಿಗೆ ಹಾಲಿಡೇ

ಉಗ್ರರಿಂದ ಸೇಡು ತೀರಿಸಿಕೊಳ್ಳಲಾಗಿದೆ
ಈ ಕಾರ್ಯಾಚರಣೆಯಲ್ಲಿ ಹತ್ಯೆಗೈಯಲಾಗಿರುವ ಉಗ್ರರು ಶುಕ್ರವಾರ ಬೀಜಬೆಹೆರಾ ಪ್ರದೇಶದಲ್ಲಿ ಗೊರಿವನನಲ್ಲಿ ಹವಾಲ್ದಾರ್ ಮೊಹಮದ್ ಸಲೀಂ ಅಖೂನ್ ಅವರನ್ನು ಅವರ ನಿವಾಸದ ಹೊರಗೆ ಹತ್ಯೆಗೈಯುವಲ್ಲಿ ಶಾಮೀಲಾಗಿದ್ದರು. ಈ ಕುರಿತು ಮಾಹಿತಿ ನೀಡಿರುವ ಕಾಶ್ಮೀರ್ ಪೋಲೀಸ್ ಮಹಾನಿರೀಕ್ಷಕ ವಿಜಯ್ ಕುಮಾರ್, 'ಬೀಜಬೇಹೆರಾ ಮುಖಾಮುಖಿಯಲ್ಲಿ ಹುತಾತ್ಮನಾಗಿರುವ ಓರ್ವ ಸೇನಾ ಜವಾನ ಹತ್ಯೆಗೆ ಕಾರಣರಾದ ಉಗ್ರರನ್ನು ಕೇವಲ ಎರಡೇ ದಿನಗಳಲ್ಲಿ ಹತ್ಯೆಗೈಯಲಾಗಿದೆ' ಎಂದಿದ್ದಾರೆ.

ಇದನ್ನೂ ಓದಿ- ವರ ಕೊವಿಡ್ ಪಾಸಿಟಿವ್ : ಆದರೂ ಗೈಡ್ ಪಾಲನೆಯೊಂದಿಗೇ ನೆರವೇರಿತು ವಿವಾಹ

ಹೊಸ ಉಗ್ರರ ಶರಣಾಗತಿಯ ಮೇಲೆ ಫೋಕಸ್: IGP
ಈ ಕುರಿತು ಮಾಹಿತಿ ನೀಡಿರುವ ಕಾಶ್ಮೀರ್ IGP, ಪ್ರದೇಶದಲ್ಲಿ ಇತ್ತೀಚೆಗಷ್ಟೇ ಉಗ್ರ ಸಂಘಟನೆಗಳಿಗೆ ಸೇರಿರುವ ಹೊಸ ಯುವಕರ ಶರಣಾಗತಿಯ ಮೇಲೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ ಎಂದಿದ್ದಾರೆ. ಉಗ್ರವಾದದ ದಾರಿ ತುಳಿದ ಈ ಯುವಕರ ಪೋಷಕರು ಕೂಡ ತಮ್ಮ ಮಕ್ಕಳಿಗೆ ಶರಣಾಗತಿಗೆ ಮನವಿ ಮಾಡುತ್ತಿದ್ದಾರೆ. ಆದರೆ, ಹಳೆ ಉಗ್ರರು ಅವರನ್ನು ಹೀಗೆ ಮಾಡುವುದರಿಂದ ತಡೆಯುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ- Lockdown: 15 ದಿನ ಲಾಕ್‌ಡೌನ್? ಸಿಎಂ ಇಂದು ಅಂತಿಮ ನಿರ್ಧಾರ!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News