ನವದೆಹಲಿ: ಆಶ್ಚರ್ಯಕರ ಘಟನೆಯಲ್ಲಿ ಮೃತಪಟ್ಟಿದ್ದ ವ್ಯಕ್ತಿಯೊಬ್ಬನು ಮತ್ತೆ ಜೀವಂತವಾಗಿರುವ ಘಟನೆ ಮಧ್ಯಪ್ರದೇಶದ ಚಿಂದ್ವಾರಾ ಜಿಲ್ಲೆಯಲ್ಲಿ ನಡೆದಿದೆ.
ಹಿಮಾನ್ಸು ಭಾರದ್ವಾಜ್ ಎನ್ನುವ ವ್ಯಕ್ತಿ ಮೋಟಾರು ಸೈಕಲ್ ಸವಾರಿ ಮಾಡುವಾಗ ಆಯತಪ್ಪಿ ಗಂಭಿರವಾಗಿ ಗಾಯಗೊಂಡಿದ್ದ ಕಾರಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು, ಆದರೆ ಆರಂಭದಲ್ಲಿ ವೈದ್ಯರು ಅವರನ್ನು ಪರಿಶೀಲನೆ ನಡೆಸಿ ಮೃತಪಟ್ಟಿದ್ದಾರೆ ಎಂದು ಘೋಷಣೆ ಹೊರಡಿಸಿದ್ದರು. ಬಳಿಕ ಆತನನ್ನು ಮರಣೋತ್ತರ ಚಿಕಿತ್ಸೆಗಾಗಿ ಚಿಂದ್ವಾರಾ ಜಿಲ್ಲಾ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು.
ಗಾಯಗೊಂಡಿದ್ದ ವ್ಯಕ್ತಿಯನ್ನು ಚಿಂದ್ವಾರಾದ ಆನಂದ್ ಹಾಸ್ಪಿಟಲ್ ನಿಂದ ನಾಗಪುರ ಚಿಕಿತ್ಸೆ ನೀಡಿಲು ಸಲಹೆ ನೀಡಿದ್ದರು. ಆದರೆ ಅಲ್ಲಿ ಅವರು ಚಿಕಿತ್ಸೆಯನ್ನು ಸ್ವೀಕರಿಸಿದ ನಂತರ ಮೃತಪಟ್ಟಿದ್ದಾನೆ ಎಂದು ಹೇಳಿ ಅವರ ದೇಹವನ್ನು ಚಿಂದ್ವಾರಾಗೆ ವಾಪಸ್ಸು ಕಳುಹಿಸಲಾಯಿತು.
ಆ ಸಂದರ್ಭದಲ್ಲಿ ವ್ಯಕ್ತಿಗೆ ದಾರಿಯುದ್ದಕ್ಕೂ ಯಾವುದೇ ಉಸಿರಾಟವು ಇಲ್ಲವೆಂದು ತಿಳಿದುಬಂದಿದೆ. ನಂತರ ರೋಗಿಯನ್ನು ಆಸ್ಪತ್ರೆಗೆ ಕರೆ ತಂದು ಆಗ ಡಾ.ಠಾಕೂರ್ ಸಲಹೆ ಮೇರೆಗೆ ರೋಗಿಯ ಬಗ್ಗೆ ವಿಚಾರಿಸಲು ಬೇರೆ ವೈದ್ಯರನ್ನು ಕೋರಿದ್ದಾರೆ. ಆಗ ರೋಗಿಯನ್ನು ಪರೀಕ್ಷಿಸಿ ಮೃತಪಟ್ಟಿದ್ದಾರೆ ಎಂದು ಧೃಡಿಕರಿಸಿ ದೇಹವನ್ನು ಶವಾಗಾರದಲ್ಲಿರಿಸಿದ್ದಾರೆ. ಬೆಳಗ್ಗೆ ಪೋಸ್ಟ್ ಮಾರ್ಟಮ್ ಮಾಡುವ ಸಂದರ್ಭದಲ್ಲಿ ವ್ಯಕ್ತಿ ಉಸಿರಾಡುತ್ತಿರುವುದು ಕಂಡುಬಂದಿದೆ. ಆಗ ತಕ್ಷಣ ಮತ್ತೆ ಕಾರ್ಯ ಪ್ರವರತ್ತರಾದ ವೈಧ್ಯರು ಚಿಕಿತ್ಸೆ ನೀಡಿದ್ದಾರೆ. ಸದ್ಯ ಭರದ್ವಾಜ್ ರವರ ಆರೋಗ್ಯ ಸ್ಥಿರವಾಗಿದ್ದು ಉತ್ತಮ ಚಿಕಿತ್ಸೆಗಾಗಿ ನಾಗ್ಪುರಕ್ಕೆ ಕಳುಹಿಸಲಾಗಿದೆ ಎಂದು ವರದಿಯಾಗಿದೆ.