ನವದೆಹಲಿ: ರಾಷ್ಟ್ರೀಯ ರೈತ ದಿನಾಚರಣೆಯ ಅಂಗವಾಗಿ ಇಂದು ದೇಶದಲ್ಲಿ ಜೈವಿಕ ಕೃಷಿ ಪದ್ಧತಿಗೆ ಹೆಚ್ಚು ಪ್ರಾಧಾನ್ಯತೆ ನೀಡುವಂತೆ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವರು ಡಿ.ವಿ. ಸದಾನಂದಗೌಡ (DV Sadanandagowda) ಅವರನ್ನು ಅವಧೂತ ವಿನಯ್ ಗುರೂಜಿ (Vinay Guruji) ಭೇಟಿಯಾಗಿ ಮನವಿ ಪತ್ರ ಸಲ್ಲಿಸಿದರು.
ಬುಧವಾರ ನವದೆಹಲಿ ಡಿ.ವಿ. ಸದಾನಂದಗೌಡ (DV Sadanandagowda) ಅವರ ದೆಹಲಿ ನಿವಾಸದಲ್ಲಿ ಭೇಟಿಯಾದ ರಾಷ್ಟ್ರೀಯ ರೈತ (Farmers) ದಿನದ ಶುಭಾಶಯ ತಿಳಿಸಿ, ರೈತರ ಹಿತ ಚಿಂತನೆಗಳ ಬಗ್ಗೆ ಚರ್ಚಿಸಿದರು. ದೇಶದಲ್ಲಿ ಜೈವಿಕ ಕೃಷಿ ಪದ್ಧತಿಗೆ ಹೆಚ್ಚು ಪ್ರಾಧಾನ್ಯತೆ ನೀಡುವಂತೆ ಮನವಿ ಮಾಡಿದರು.
ದೇಶದಲ್ಲಿ ಆಧುನಿಕ ಮತ್ತು ಅಧಿಕ ಇಳುವರಿ ಹೆಸರಿನಲ್ಲಿ ರಾಸಾಯನಿಕ ಮತ್ತು ರಸಗೊಬ್ಬರಗಳ ಅಧಿಕ ಬಳಕೆ ಆಗುತ್ತಿದ್ದು ಅದು ಇಂದಿನ ಮಾನವನ ಜೀವನ ಶೈಲಿಯಲ್ಲಿ ವ್ಯತಿರಿಕ್ತ ಪರಿಣಾಮ ಬೀರುತ್ತಿದ್ದು, ಮಾನವನ ಆರೋಗ್ಯದ ಏರುಪೇರಾಗಿ ಕ್ಯಾನ್ಸರ್, ಬಿಪಿ, ಸಕ್ಕರೆ ಕಾಯಿಲೆ ಅಂತಹ ಕಾಯಿಲೆಗಳಿಗೆ ತುತ್ತಾಗುತ್ತಿರುವವರ ಸಂಖ್ಯೆ ಅಧಿಕವಾಗಿದೆ.
ಇದನ್ನೂ ಓದಿ: ಸುಧಾರಿತ ಬೇಸಾಯ ಕ್ರಮದ ಮೂಲಕ ಆಲೂಗಡ್ಡೆ ಬೆಳೆಯನ್ನು ಹೀಗೆ ಬೆಳೆಯಿರಿ..!
ರಾಸಾಯನಿಕ ವಸ್ತುಗಳನ್ನು ಬಳಸಿ ಬೆಳೆಯುವ ಆಹಾರ ಪದ್ಧತಿಯಿಂದ ಮಾನವರಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಆಗುತ್ತಿದೆ. ನಮ್ಮ ಪುರಾತನ ದಿನಗಳಲ್ಲಿ ಸನಾತನ ಧರ್ಮದ ಪದ್ಧತಿಯಂತೆ ಜೈವಿಕ ಕೃಷಿ (Organic farming) ಪದ್ಧತಿ ದೇಶದಲ್ಲಿ ಇಂದು ಅತಿ ಅವಶ್ಯಕವಾಗಿದೆ. ಜೈವಿಕ ಕೃಷಿ ಪದ್ಧತಿಯಿಂದ ನಮ್ಮ ದೇಶ ಗೋವಿನ ಉಳಿವು ಹಾಗೂ ಅದರ ಗೊಬ್ಬರದಿಂದ ಮಾಡುವ ಕೃಷಿ ಪದ್ದತಿಯು ಮಾನವನ ಆರೋಗ್ಯಕ್ಕೆ ತುಂಬಾ ಒಳ್ಳೆಯ ಹಾಗೂ ಹೆಚ್ಚು ರೋಗ ನಿರೋಧಕ ಶಕ್ತಿಯನ್ನು ನೀಡುತ್ತದೆ.
ಇದನ್ನೂ ಓದಿ: ಸಾವಯವ ಕೃಷಿ ಮೂಲಕ ಇಡೀ ರಾಜ್ಯದ ಗಮನ ಸೆಳೆದ ಈ ಗ್ರಾಮ
ದೇಶೀಯ ತಳಿಯ ಗೋವುಗಳ ಸಂರಕ್ಷಣೆಯಾಗಿ ದೇಶ ಹೆಚ್ಚು ಸಮೃದ್ಧಿಯಾಗುತ್ತದೆ. ಗೋವಿನ ಬೆರಣಿಯಿಂದ ಅಗ್ನಿಹೋತ್ರ ಮಾಡುವುದರಿಂದ ವಾತಾವರಣ ಶುದ್ದಿ ಆಗುವುದರ ಜೊತೆಗೆ ವಾತವರಣದಲ್ಲಿ ಇರುವ ಕೆಲವೊಂದು ಮಾರಕ ವೈರಾಣುಗಳು ಕ್ಷೀಣಿಸಿ ಮಾನವನ ಜೀವನಕ್ಕೆ ಒಳ್ಳೆಯ ಆರೋಗ್ಯಕರ ಜೀವನ ನಡೆಸಲು ಸಹಕಾರಿಯಾಗಲಿದೆ ಇದನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi) ಅವರ ಗಮನಕ್ಕೆ ತರವಂತೆ ಮನವಿ ಪತ್ರ ಸಲ್ಲಿಸಿದ್ದಾರೆ ಎಂದು ವಿನಯ್ ಗುರೂಜಿಯವರ ಸಾರ್ವಜನಿಕ ಸಂಪರ್ಕ ನಿರ್ವಾಹಕ ಅನಿರೀತ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಆಪ್ ಡೌನ್ ಲೋಡ್ ಮಾಡಿ
Android Link - https://bit.ly/3hDyh4G
iOS Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಕ್ಕೆ ಸಬ್ ಸ್ಕ್ರೈಬ್ ಮಾಡಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.