ಪಾಕಿಸ್ತಾನದ ಪೇಶಾವರದಲ್ಲಿ ಪ್ರಬಲ ಸ್ಫೋಟ, 7 ಮಂದಿ ಸಾವು, 70ಕ್ಕೂ ಅಧಿಕ ಜನರಿಗೆ ಗಾಯ

ಪಾಕಿಸ್ತಾನದ ಪೇಶಾವರದಲ್ಲಿ ಸಂಭವಿಸಿದ ಪ್ರಬಲ ಸ್ಫೋಟಕ್ಕೆ (massive explosion ) ಕನಿಷ್ಠ 7 ಮಂದಿ ಬಲಿಯಾಗಿದ್ದು, 70ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ. ಗಾಯಗೊಂಡವರಲ್ಲಿ  ಮಕ್ಕಳು ಮತ್ತು ಯುವಕರ  ಸಂಖ್ಯೆಯೇ ಅಧಿಕವಿದೆ ಎಂದು ಹೇಳಲಾಗಿದೆ.  ಪೇಶಾವರದ ಡಿರ್ ಕಾಲೋನಿಯಲ್ಲಿ ಈ ಸ್ಫೋಟ ಸಂಭವಿಸಿದೆ.

Last Updated : Oct 27, 2020, 01:24 PM IST
ಪಾಕಿಸ್ತಾನದ ಪೇಶಾವರದಲ್ಲಿ ಪ್ರಬಲ ಸ್ಫೋಟ, 7 ಮಂದಿ ಸಾವು, 70ಕ್ಕೂ ಅಧಿಕ ಜನರಿಗೆ ಗಾಯ title=

ಇಸ್ಲಾಮಾಬಾದ್ : ಪಾಕಿಸ್ತಾನದ ಪೇಶಾವರದಲ್ಲಿ ಸಂಭವಿಸಿದ ಪ್ರಬಲ ಸ್ಫೋಟಕ್ಕೆ (massive explosion ) ಕನಿಷ್ಠ 7 ಮಂದಿ ಬಲಿಯಾಗಿದ್ದು, 70ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ. ಗಾಯಗೊಂಡವರಲ್ಲಿ  ಮಕ್ಕಳು ಮತ್ತು ಯುವಕರ  ಸಂಖ್ಯೆಯೇ ಅಧಿಕವಿದೆ ಎಂದು ಹೇಳಲಾಗಿದೆ.  ಪೇಶಾವರದ ಡಿರ್ ಕಾಲೋನಿಯಲ್ಲಿ ಈ ಸ್ಫೋಟ ಸಂಭವಿಸಿದೆ.

ಪೆಶಾವರ್ ನಲ್ಲಿ ಸಿಖ್ ಯುವಕನ ಹತ್ಯೆ, ಪಾಕ್ ಗೆ ಖಡಕ್ ಸಂದೇಶ ರವಾನಿಸಿದ ಗೃಹ ಇಲಾಖೆ

ದುರಂತದಲ್ಲಿ  7 ಮಂದಿ ಸಾವನ್ನಪ್ಪಿದ್ದನ್ನು ಖೈಬರ್ ಫಕ್ತುನ್ಖವಾ ಪೊಲೀಸ್ ಮುಖ್ಯಸ್ಥ ಡಾ. ಸನಾವುಲ್ಲಾ ಅಬ್ಬಾಸಿ ದೃಢಪಡಿಸಿದ್ದಾರೆ.  ಡಿರ್ ಕಾಲೋನಿಯ  ಮದರಸಾದಲ್ಲಿ ಈ  ಸ್ಪೋಟ ಸಂಭವಿಸಿದೆ. 

ಸ್ಫೋಟಕ್ಕೆ ಐಇಡಿ (IED) ಬಳಕೆ..?

ಮದರಸಾದೊಳಗೆ ಪಾಠ ನಡೆಯುತ್ತಿದ್ದಾಗ ಸ್ಫೋಟ (Blast) ಸಂಭವಿಸಿದೆ. ಸ್ಪೋಟಕ್ಕೆ  ಸುಧಾರಿತ ಸ್ಪೋಟಕ (IED) ಬಳಸಲಾಗಿದೆ ಎಂದು ಹೇಳಲಾಗಿದೆ. ಈ ಸ್ಫೋಟದಲ್ಲಿ ಸಾವುನೋವಿಗೆ ಒಳಗಾಗಿರುವವರಲ್ಲಿ ವಿದ್ಯಾರ್ಥಿಗಳೇ ಹೆಚ್ಚಾಗಿದ್ದಾರೆ. ಗಾಯಾಳುಗಳನ್ನು ಲೇಡಿ ರೀಡಿಂಗ್ ಆಸ್ಪತ್ರೆ ಮತ್ತು ಸಮೀಪದ ಇತರ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಗಾಯಾಳುಗಳಲ್ಲಿ ಹಲವರ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗಿದೆ. ಹಾಗಾಗಿ ಸಾವು ನೋವಿನ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಗಳಿವೆ.

ಪಾಕಿಸ್ತಾನದ ಪೇಶಾವರ್ ನಿಂದ ಸ್ಪರ್ಧಿಸಲಿದ್ದಾರೆ ಶಾರುಖ್ ಖಾನ್ ಸೋದರ ಸಂಬಂಧಿ!

ಸ್ಪೋಟದ ಸ್ವರೂಪದ ಬಗ್ಗೆ ತಿಳಿಸಲು ಪೊಲೀಸರ ನಕಾರ

ಈಗಾಗಲೇ ಸ್ಥಳದಲ್ಲಿ ರಕ್ಷಣೆ ಮತ್ತು ಪರಿಹಾರ ಕಾರ್ಯಾಚರಣೆ ನಡೆಯುತ್ತಿದ್ದು, ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆಯ ವ್ಯವಸ್ಥೆ ಮಾಡಲಾಗುತ್ತಿದೆ. ಸ್ಫೋಟದ ಸ್ವರೂಪದ ಬಗ್ಗೆ ಈಗಲೇ ಯಾವುದನ್ನೂ ಹೇಳಲಾಗದು ಎಂದು ಪೊಲೀಸರು ಹೇಳಿದ್ದಾರೆ.ಸ್ಫೋಟದ ಸ್ವರೂಪ ಪತ್ತೆ ಹಚ್ಚಲು ತನಿಖೆ ತೀವ್ರಗೊಳಿಸಲಾಗಿದ್ದು, ಇದುವರೆಗೆ ಯಾವ ಸಂಘಟನೆಯೂ ಘಟನೆಯ ಹೊಣೆ ಹೊತ್ತುಕೊಂಡಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ. 

ಪ್ರಧಾನಿ ಇಮ್ರಾನ್ ಖಾನ್ ಖಂಡನೆ

ಪಾಕಿಸ್ತಾನ ಪ್ರಧಾನಮಂತ್ರಿ ಇಮ್ರಾನ್ ಖಾನ್ (Prime Minister Imran Khan ) ಘಟನೆಯನ್ನು ತೀವ್ರವಾಗಿ ಖಂಡಿಸಿದ್ದರು,  ಗಾಯಾಳುಗಳ ಶೀಘ್ರ ಚೇತರಿಕೆಗೆ ಪ್ರಾರ್ಥಿಸಿದ್ದಾರೆ.   ಪೇಶಾವರ ಸ್ಫೋಟವು ಹೃದಯ ವಿದ್ರಾವಕ ಎಂದು ಹೇಳಿರುವ ಪಾಕಿಸ್ತಾನ ಮುಸ್ಲಿಂ ಲೀಗ್ ನವಾಜ್ ಪಕ್ಷದ (PML-N) ಉಪಾಧ್ಯಕ್ಷೆ ಮರಿಯಾಮ್ ನವಾಜ್, ನೊಂದವರಿಗೆ ಸಾಂತ್ವನ ಹೇಳಿದ್ದಾರೆ.

ಘಟನೆಯ ಹಿನ್ನೆಲೆಯಲ್ಲಿ ಕ್ವೆಟ್ಟಾ ಮತ್ತು ಪೇಶಾವರದಲ್ಲಿ ಭದ್ರತಾ ವ್ಯವಸ್ಥೆಯನ್ನು ಬಿಗಿಗೊಳಿಸಲಾಗಿದೆ.

Trending News