ಬೆಂಗಳೂರು: 2013 ರಲ್ಲಿ ತಮಿಳುನಾಡಿಗೆ ನಿಗಧಿತ ಪ್ರಮಾಣದಲ್ಲಿ ನೀರು ಹರಿಸಿಲ್ಲ ಎಂದು ಆರೋಪಿಸಿ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿರುದ್ದ ತಮಿಳುನಾಡು ನ್ಯಾಯಾಂಗ ನಿಂದನೆ ಅರ್ಜಿಯನ್ನು ಸಲ್ಲಿಸಿತ್ತು. ಈಗ ಆ ಅರ್ಜಿಯನ್ನು ಸರ್ವೋಚ್ಚ ನ್ಯಾಯಾಲಯ ವಜಾಗೊಳಿಸಿದೆ.
ಕಾವೇರಿ ನದಿ ನೀರು ಹಂಚಿಕೆಯ ಕುರಿತ ಅಂತಿಮ ತೀರ್ಪಿನ ಸಂದರ್ಭದಲ್ಲಿ ತಮಿಳುನಾಡಿನ ಮನವಿಯನ್ನು ತಿರಸ್ಕರಿಸಿದ ದೀಪಕ್ ಮಿಶ್ರಾ ನೇತೃತ್ವದ ತ್ರೀಸದಸ್ಯ ಪೀಠ, ಈ ನ್ಯಾಯಾಂಗ ನಿಂದನೆಯ ಅರ್ಜಿಯನ್ನು ಮುಂದುವರೆಸುವುದಿಲ್ಲ, ಈ ವಿಷಯವನ್ನು ಇಲ್ಲಿಗೆ ಅಂತ್ಯಗೊಳಿಸಲಾಗಿದೆ ಎಂದು ತಿಳಿಸಿದೆ. ಆ ಮೂಲಕ ಇಂದು ಕೋರ್ಟ್ ಸಿದ್ದರಾಮಯ್ಯನವರಿಗೆ ಡಬಲ್ ಖುಷಿ ನೀಡಿದೆ. ಒಂದು ಕಡೆ ಕಾವೇರಿ ತೀರ್ಪಿನ ಬಗ್ಗೆ ತೃಪ್ತಿ ತಂದಿದ್ದರೆ, ಇನ್ನೊಂದೆಡೆ ತಮ್ಮ ಮೇಲಿನ ನ್ಯಾಯಾಂಗ ನಿಂದನೆ ಕೇಸ್ ನ್ನು ಕೋರ್ಟ್ ವಜಾಗೊಳಿಸಿದೆ.ಇದರಿಂದ ಸಿದ್ದರಾಮಯ್ಯ ನವರಿಗೆ ಬಜೆಟ್ ಮಂಡಿಸಿದ ಸಂದರ್ಭದಲ್ಲಿ ಈ ಸಿಹಿ ಸುದ್ದಿ ಬಂದಿರುವುದು ನಿಜಕ್ಕೂ ಸಂತಸ ತಂದಿದೆ.