ಒಂದು ರೂಪಾಯಿ ನಾಣ್ಯ ನಿಮ್ಮನ್ನು ಲಕ್ಷಾಧಿಪತಿ ಮಾಡಬಹುದು, ಇಲ್ಲಿದೆ ಅದರ ರಹಸ್ಯ

ಹಳೆಯ ನಾಣ್ಯಗಳನ್ನು ಮಾರಾಟ ಮಾಡಲು, ನೀವು ಇಂಡಿಯಮಾರ್ಟ್‌ನ ವೆಬ್‌ಸೈಟ್ indiamart.com ಗೆ ಹೋಗಬೇಕಾಗುತ್ತದೆ.

Written by - Yashaswini V | Last Updated : Oct 14, 2020, 12:25 PM IST
  • ಪ್ರಾಚೀನ ವಸ್ತುಗಳನ್ನು ಇಷ್ಟಪಡುವ ಜನರಿಗೆ ಅಂತಹ ನಾಣ್ಯಗಳು ಬೇಕಾಗುತ್ತವೆ
  • ಕೆಲವೊಮ್ಮೆ ಕೆಲವು ಜನರು ಪುರಾತನ ವಸ್ತುಗಳನ್ನು ಸಾಕಷ್ಟು ಬೆಲೆ ನೀಡಿ ಖರೀದಿಸುತ್ತಾರೆ.
ಒಂದು ರೂಪಾಯಿ ನಾಣ್ಯ ನಿಮ್ಮನ್ನು ಲಕ್ಷಾಧಿಪತಿ ಮಾಡಬಹುದು, ಇಲ್ಲಿದೆ ಅದರ ರಹಸ್ಯ title=

ನವದೆಹಲಿ : ಕರೋನಾ ಯುಗದಲ್ಲಿ ಕಠಿಣ ಪರಿಶ್ರಮದ ನಂತರವೂ ಸಾಮಾನ್ಯ ಮನುಷ್ಯನಿಗೆ ಮನೆಯ ಖರ್ಚುಗಳನ್ನು ನಿರ್ವಹಿಸುವುದು ಕಷ್ಟಕರವಾಗುತ್ತಿದೆ. ಅಂತಹ ಪರಿಸ್ಥಿತಿಯಲ್ಲಿ ನೀವು ಮಿಲಿಯನೇರ್ ಆಗುವ ಬಗ್ಗೆ ಮಾತನಾಡಿದರೆ ಅದು ತಮಾಷೆ ಎನಿಸಬಹುದು. ಏಕೆಂದರೆ ಮಿಲಿಯನೇರ್ ಆಗಲು ಕಠಿಣ ಪರಿಶ್ರಮ, ಬಲವಾದ ಯೋಜನೆ ಮತ್ತು ದೀರ್ಘಾವಧಿಯ ಶ್ರಮ ಅಗತ್ಯವಿದೆ.

ಇವೆಲ್ಲದರ ಹೊರತಾಗಿ ನೀವು ಕೇವಲ ಒಂದು ನಾಣ್ಯದಿಂದ 25 ಲಕ್ಷ ರೂಪಾಯಿಗಳನ್ನು ಗಳಿಸಬಹುದು. ಇದು ತಮಾಷೆ ಅಥವಾ ಕನಸಲ್ಲ. ಆದರೆ ವಾಸ್ತವ ಎಂದು ನಂಬಿರಿ.

ನೀವು 25 ಲಕ್ಷ ರೂಪಾಯಿಗಳನ್ನು ಗಳಿಸಲು ಬಯಸಿದರೆ ನಿಮಗೆ ಉತ್ತಮ ಅವಕಾಶವಿದೆ. ಇದಕ್ಕಾಗಿ ನೀವು ಕೇವಲ ಒಂದು ರೂಪಾಯಿ ನಾಣ್ಯವನ್ನು ಹೊಂದಿರಬೇಕು. ಈ ನಾಣ್ಯವು ಸಾಮಾನ್ಯ ನಾಣ್ಯವಾಗಿರಬಾರದು. ಆದರೆ 100 ವರ್ಷ ಹಳೆಯದಾಗಿರಬೇಕು ಎಂಬುದನ್ನು ನೆನಪಿನಲ್ಲಿಡಿ.

ಈಗ ಇಪಿಎಫ್‌ಒ ದೂರುಗಳನ್ನು WhatsAppನಲ್ಲಿ ಇತ್ಯರ್ಥಪಡಿಸಿ

ವಾಸ್ತವವಾಗಿ ಭಾರತದ ದೊಡ್ಡ ಆನ್‌ಲೈನ್ ಮಾರುಕಟ್ಟೆಯು ಇಂಡಿಯಾಮಾರ್ಟ್‌ನಲ್ಲಿ ಹಳೆಯ ಮತ್ತು ಪುರಾತನ ನಾಣ್ಯಗಳನ್ನು ಹರಾಜು ಹಾಕುತ್ತಿದೆ. ನೀವು ತುಂಬಾ ಹಳೆಯ ಮತ್ತು ಅಪರೂಪದ ನಾಣ್ಯವನ್ನು ಹೊಂದಿದ್ದರೆ ನೀವು ಈ ಹರಾಜಿನಲ್ಲಿ ಭಾಗವಹಿಸಬಹುದು. ಇಲ್ಲಿ ನೀವು ನಿಮ್ಮ ನಾಣ್ಯಗಳನ್ನು ಲಕ್ಷಾಂತರ ರೂಪಾಯಿಗಳಿಗೆ ಮಾರಾಟ ಮಾಡಬಹುದು.

100 ವರ್ಷ ಹಳೆಯ ನಾಣ್ಯದ ಬೆಲೆ 25 ಲಕ್ಷ ರೂಪಾಯಿ:
ನೀವು 1913ರಲ್ಲಿ ಮಾಡಿದ 'ಒಂದು ರೂಪಾಯಿ ನಾಣ್ಯ' (One Rupee Coin) ನಾಣ್ಯವನ್ನು ಹೊಂದಿದ್ದರೆ ಅದನ್ನು ಮಾರಾಟ ಮಾಡುವ ಮೂಲಕ ನೀವು 25 ಲಕ್ಷ ರೂಪಾಯಿಗಳನ್ನು ಗಳಿಸಬಹುದು. ಇಲ್ಲಿ 1913ರಲ್ಲಿ ತಯಾರಿಸಿದ 'ಒಂದು ರೂಪಾಯಿ' ನಾಣ್ಯದ ಮೌಲ್ಯವನ್ನು 25 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ. ಇದು ಬೆಳ್ಳಿ ನಾಣ್ಯ ಮತ್ತು ಇದನ್ನು ವಿಕ್ಟೋರಿಯನ್ ವಿಭಾಗದಲ್ಲಿ ಸೇರಿಸಲಾಗಿದೆ.

ಪಿಪಿಎಫ್ ಖಾತೆ ಮೆಚ್ಯೂರ್ ಆದ ಬಳಿಕ ಏನು ಮಾಡಬೇಕು? ತಜ್ಞರು ಏನ್ ಹೇಳ್ತಾರೆ?

ಈಸ್ಟ್ ಇಂಡಿಯಾ ನಾಣ್ಯ:
ಇಂಡಿಯಾ ಮಾರ್ಟ್‌ನಲ್ಲಿ 18ನೇ ಶತಮಾನದ ಒಂದು ನಾಣ್ಯದ ಬೆಲೆಯನ್ನು 10 ಲಕ್ಷ ರೂ.  ಇಡಲಾಗಿದೆ. 1818ರಲ್ಲಿ ರೂಪುಗೊಂಡ ಈಸ್ಟ್ ಇಂಡಿಯಾ ಕಂಪನಿಯ (East India Company) ಒಂದು ನಾಣ್ಯದ ಮೌಲ್ಯವನ್ನು 10 ಲಕ್ಷ ರೂ. ಈ ತಾಮ್ರದ ನಾಣ್ಯದಲ್ಲಿ ಹನುಮಂತನ ಚಿತ್ರವನ್ನು ಕೆತ್ತಲಾಗಿದೆ.

ನೀವು ಹೇಗೆ ಮಾರಾಟ ಮಾಡಬಹುದು?
ಹಳೆಯ ನಾಣ್ಯಗಳನ್ನು ಮಾರಾಟ ಮಾಡಲು ನೀವು ಇಂಡಿಯಮಾರ್ಟ್‌ನ ವೆಬ್‌ಸೈಟ್ indiamart.com ಗೆ ಹೋಗಬೇಕಾಗುತ್ತದೆ. ಈ ವೆಬ್‌ಸೈಟ್‌ನಲ್ಲಿ ನೀವು ನಿಮ್ಮ ಖಾತೆಯನ್ನು ರಚಿಸಬೇಕು. ಖಾತೆಯನ್ನು ರಚಿಸಿದ ನಂತರ ನೀವು ನಿಮ್ಮನ್ನು ಇಲ್ಲಿ ಮಾರಾಟಗಾರರಾಗಿ ನೋಂದಾಯಿಸಿಕೊಳ್ಳಬೇಕು. ನೋಂದಣಿ ನಂತರ ನೀವು ನಿಮ್ಮ ನಾಣ್ಯಗಳ ಚಿತ್ರವನ್ನು ಅಪ್‌ಲೋಡ್ ಮಾಡಿ ಮಾರಾಟಕ್ಕೆ ಇರಿಸಿ.

ಎಸ್‌ಬಿಐನ ಬಂಪರ್ ಫೆಸ್ಟಿವಲ್ ಆಫರ್: ಕಡಿಮೆ ಬಡ್ಡಿ ದರದಲ್ಲಿ ಸಿಗುತ್ತಿದೆ Car Loan

ಪ್ರಾಚೀನ ವಸ್ತುಗಳನ್ನು ಇಷ್ಟಪಡುವ ಜನರಿಗೆ ಅಂತಹ ನಾಣ್ಯಗಳು ಬೇಕಾಗುತ್ತವೆ ಮತ್ತು ಕೆಲವೊಮ್ಮೆ ಕೆಲವು ಜನರು ಪುರಾತನ ವಸ್ತುಗಳನ್ನು ಸಾಕಷ್ಟು ಬೆಲೆ ನೀಡಿ ಖರೀದಿಸುತ್ತಾರೆ.
 

Trending News