ಕೇಂದ್ರ ಸರ್ಕಾರದ ರಾಫೆಲ್ ಜೆಟ್ ಒಪ್ಪಂದವನ್ನು ಹಗರಣವೆಂದ ರಾಹುಲ್ ಗಾಂಧಿ

     

Last Updated : Feb 6, 2018, 07:36 PM IST
ಕೇಂದ್ರ ಸರ್ಕಾರದ ರಾಫೆಲ್ ಜೆಟ್ ಒಪ್ಪಂದವನ್ನು ಹಗರಣವೆಂದ ರಾಹುಲ್ ಗಾಂಧಿ title=

ನವದೆಹಲಿ: ರಾಫೆಲ್ ಫೈಟರ್ ಜೆಟ್ ಒಪ್ಪಂದದ ವಿವರಗಳನ್ನು ಬಹಿರಂಗಪಡಿಸದಿರುವ ಕೇಂದ್ರ ಸರ್ಕಾರದ ನಿರ್ಧಾರವು ಹಗರಣ ನಡೆದ ಸಂಶಯದಂತೆ ತೋರುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಕೇಂದ್ರ ರಕ್ಷಣಾ ಸಚಿವ ನಿರ್ಮಲಾ ಸೀತಾರಾಮನ್ ರವರು ಈ ಒಪ್ಪಂದ ಕುರಿತಾದ ವಿವರಣೆ ನೀಡಲು ನಿರಾಕರಿಸಿದ ಬಳಿಕ ರಾಹುಲ್ ಹೇಳಿಕೆ ಬಂದಿದೆ

ಮಾಧ್ಯಮಗಳಿಗೆ ಮಾತನಾಡಿದ ರಾಹುಲ್ ಗಾಂಧಿ ರಾಫೆಲ್ ವಿಮಾನಗಳ ಖರೀದಿಗೆ ಹಣ ಪಾವತಿಸುವ ಮೊತ್ತವನ್ನು ಬಹಿರಂಗಪಡಿಸುವುದಿಲ್ಲವೆಂದು ರಕ್ಷಣಾ ಸಚಿವರು ಹೇಳಿದ್ದಾರೆ.ಆ ಮೂಲಕ ಇದರಲ್ಲಿ ಹಗರಣ ನಡೆದಿದೆ ಎನ್ನುವುದನ್ನು ಸಾಬೀತುಪಡಿಸಿದ್ದಾರೆ. ಈ ಒಪ್ಪಂದದ ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿ ವೈಯಕ್ತಿಕವಾಗಿ ಪ್ಯಾರಿಸ ಗೆ ತೆರಳಿ ಒಪ್ಪಂದವನ್ನು ಮಾಡಿಕೊಂದಿರುವುದರ ಬಗ್ಗೆ ಇಡೀ ದೇಶಕ್ಕೆ ತಿಳಿದಿದೆ ಎಂದು ರಾಹುಲ್ ತಿಳಿಸಿದರು.

ಈ ಕುರಿತಾಗಿ ಟ್ವೀಟ್ ಸಹಿತ ಮಾಡಿರುವ ಅವರು ಪ್ರಧಾನಿ ಮೋದಿ ಮತ್ತು ಅವರ "ವಿಶ್ವಾಸಾರ್ಹ" ಸ್ನೇಹಿತರ ಮೂಲಕ ರಾಫೆಲ್ ಜೆಟ್ ನ  ಬೆಲೆಯ ಮಾತುಕತೆ ನಡೆಸಲಾಗಿದೆ ಎಂದು ರಾಹುಲ್ ಹೇಳಿದರು. ಈ ರಾಫೆಲ್ ಒಪ್ಪಂದ "ಬೆಲೆ ಬಗ್ಗೆ ಸಂಸತ್ತಿಗೆ ತಿಳಿಸುವುದು ರಾಷ್ಟ್ರೀಯ ಭದ್ರತೆ ಅಪಾಯ ಮತ್ತು ಈ ಬಗ್ಗೆ ಕೇಳಿದವರೆಲ್ಲರನ್ನು 'ರಾಷ್ಟ್ರ-ವಿರೋಧಿಗಳೆನ್ನುವ ಪಟ್ಟವನ್ನು ಕಟ್ಟಲಾಗುತ್ತದೆ  ಎಂದು ರಾಹುಲ್  ತಮ್ಮ ಟ್ವೀಟ್ ನಲ್ಲಿ ವ್ಯಂಗ್ಯವಾಡಿದ್ದಾರೆ.

 

Trending News