ಅದ್ಭುತ..! ಒಂದೇ ಸಮಯದಲ್ಲಿ 7 ಸೂರ್ಯರ ಉದಯ.. ಇದು ಹೇಗೆ ಸಾಧ್ಯ..? ವಿಡಿಯೋ ವೈರಲ್‌ 

7 Suns rise : ಒಂದೇ ಸಮಯದಲ್ಲಿ 6 ಸೂರ್ಯರು ಆಕಾಶದಲ್ಲಿ ಕಾಣಿಸಿಕೊಳ್ಳುವ ವಿಡಿಯೋ ವೈರಲ್ ಆಗಿದೆ. ಇದು ವಿಜ್ಞಾನಕ್ಕೂ ತಿಳಿಯದಂತ ವಿಷಯವಾಗಿದೆ. ಅಲ್ಲದೆ, ಇದು ಹೇಗೆ ಸಾಧ್ಯ ಅಂತ ಜನರು ತಲೆಕೆಡಿಸಿಕೊಂಡಿದ್ದಾರೆ.. ಹೆಚ್ಚಿನ ಮಾಹಿತಿ ಇಲ್ಲಿದೆ..

Written by - Krishna N K | Last Updated : Feb 12, 2025, 03:18 PM IST
    • ಒಂದೇ ಸಮಯದಲ್ಲಿ 6 ಸೂರ್ಯರು ಆಕಾಶದಲ್ಲಿ
    • ಇದು ವಿಜ್ಞಾನಕ್ಕೂ ತಿಳಿಯದಂತ ವಿಷಯವಾಗಿದೆ.
    • ಇದು ಹೇಗೆ ಸಾಧ್ಯ ಅಂತ ಜನರು ತಲೆಕೆಡಿಸಿಕೊಂಡಿದ್ದಾರೆ..
ಅದ್ಭುತ..! ಒಂದೇ ಸಮಯದಲ್ಲಿ 7 ಸೂರ್ಯರ ಉದಯ.. ಇದು ಹೇಗೆ ಸಾಧ್ಯ..? ವಿಡಿಯೋ ವೈರಲ್‌  title=

Viral Video : ಆಕಾಶದಲ್ಲಿ ನಡೆಯುವ ಅನೇಕ ನೈಸರ್ಗಿಕ ವಿದ್ಯಮಾನಗಳು ಅಚ್ಚರಿಕೆ ಸಾಕ್ಷಿಯಾಗುತ್ತವೆ.. ಸೂರ್ಯನ ಉದಯ, ಚಂದ್ರ ನಕ್ಷತ್ರಗಳ ಪ್ರಕಾಶ, ಹಗಲು ರಾತ್ರಿ ಮುಂತಾದ ಘಟನೆಗಳು ನಿರಂತರವಾಗಿರುವುದರಿಂದ ಅವುಗಳಲ್ಲಿ ಹೆಚ್ಚಿನ ಬದಲಾವಣೆಗಳಿಲ್ಲ. ಆದರೆ ಕೆಲವೊಮ್ಮೆ, ಏನಾದರೂ ವಿಭಿನ್ನವಾಗಿ ಸಂಭವಿಸಿದರೆ, ಅದು ಖಂಡಿತವಾಗಿಯೂ ಆಶ್ಚರ್ಯಗೊಳಿಸುತ್ತದೆ. ಅಂತಹ ಒಂದು ಅದ್ಭುತ ಘಟನೆ ಬೆಳಕಿಗೆ ಬಂದಿದೆ. 

6 ಸೂರ್ಯರು ಆಕಾಶದಲ್ಲಿ ಬೆಳಗುತ್ತಿರುವ ವಿಡಿಯೋವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಈ ಘಟನೆ 2024 ರಲ್ಲಿ ಚೀನಾದಲ್ಲಿ ನಡೆದಿದೆ ಎಂದು ಹೇಳಲಾಗುತ್ತದೆ. ವಿಡಿಯೋದಲ್ಲಿ ಒಂದು ಸೂರ್ಯ ಅತ್ಯಂತ ಪ್ರಕಾಶಮಾನವಾಗಿ ಬೆಳಗುತ್ತಿದ್ದರೆ, ಇನ್ನೊಂದು ಸ್ವಲ್ಪ ಮಂದವಾಗಿತ್ತು. ಈ ವಿಡಿಯೋವನ್ನು ಚೆಂಗ್ಡು ಆಸ್ಪತ್ರೆಯ ಕಿಟಕಿಯಿಂದ ವಾಂಗ್ ಎಂಬ ವ್ಯಕ್ತಿ ಸೆರೆಹಿಡಿದಿದ್ದಾರೆ. 

ಇದನ್ನೂ ಓದಿ:ಬಟ್ಟೆ ಬಿಚ್ಚಿಕೊಂಡು, ಪ್ರತಿಮೆ ಎದೆ ಮುಟ್ಟಿ ಯವತಿ ಹಸ್ತಮೈಥುನ ..! ಅಸಹ್ಯಕರ ವಿಡಿಯೋ ವೈರಲ್‌..

ಆ ದೃಶ್ಯ ಸುಮಾರು ಒಂದು ನಿಮಿಷ ನಡೆಯಿತು ಎಂದು ಅವರು ಹೇಳಿದರು. @TheFigen_ ಎಂಬ ಟ್ವಿಟರ್ ಹ್ಯಾಂಡಲ್ ಹಂಚಿಕೊಂಡಿರುವ ಈ ವೀಡಿಯೊವನ್ನು  8.6 ಮಿಲಿಯನ್‌ಗಿಂತಲೂ ಹೆಚ್ಚು ಜನರು ವೀಕ್ಷಿಸಿದ್ದಾರೆ. ಸದ್ಯ ನೆಟ್ಟಿಗರ ಗಮನಸೆಳೆಯುತ್ತಿದೆ.

ನಮ್ಮ ಸೌರವ್ಯೂಹದಲ್ಲಿ ಒಂದೇ ಸೂರ್ಯ ಇದ್ದರೆ, ಭೂಮಿಯ ಮೇಲೆ ಆರು ಸೂರ್ಯರನ್ನು ಹೇಗೆ ಕಾಣಬಹುದು..? ನಿಜವಾಗಿಯೂ ಆರು ಸೂರ್ಯರು ಇದ್ದಿದ್ದರೆ, ಅವುಗಳ ತೀವ್ರವಾದ ಶಾಖದಿಂದಾಗಿ ಭೂಮಿಯ ಮೇಲಿನ ಜೀವಸಂಕುಲ ಹೇಗೆ ಉಳಿಯುತ್ತಿತ್ತು..? ಆರು ಸೂರ್ಯರು ಕಾಣಿಸಿಕೊಳ್ಳಲು ಕಾರಣ ಯಾವುದೋ ಖಗೋಳ ಪವಾಡವಲ್ಲ, ಬದಲಾಗಿ ಬೆಳಕಿನ ವಕ್ರೀಭವನದಿಂದ ಸೃಷ್ಟಿಯಾದ ಒಂದು ಆಪ್ಟಿಕಲ್ ಭ್ರಮೆ.

ಇದನ್ನೂ ಓದಿ:ಅಂಬಾನಿಗಾಗಿಯೇ ತಯಾರಿಸಲಾಗಿದ್ಯಂತೆ ಈ ಕಾರು..ಯಾವುದು? ಬೆಲೆ ಎಷ್ಟು?

7 Suns rise : ಒಂದೇ ಸಮಯದಲ್ಲಿ 6 ಸೂರ್ಯರು ಆಕಾಶದಲ್ಲಿ ಕಾಣಿಸಿಕೊಳ್ಳುವ ವಿಡಿಯೋ ವೈರಲ್ ಆಗಿದೆ. ಇದು ವಿಜ್ಞಾನಕ್ಕೂ ತಿಳಿಯದಂತ ವಿಷಯವಾಗಿದೆ. ಅಲ್ಲದೆ, ಇದು ಹೇಗೆ ಸಾಧ್ಯ ಅಂತ ಜನರು ತಲೆಕೆಡಿಸಿಕೊಂಡಿದ್ದಾರೆ.. ಹೆಚ್ಚಿನ ಮಾಹಿತಿ ಇಲ್ಲಿದೆ..

ಹೌದು.. ಇದು "ಸನ್ ಡಾಗ್" ಅಥವಾ "ಪರ್ಹೆಲಿಯನ್" ಎಂಬ ವಿಶೇಷ ಆಪ್ಟಿಕಲ್ ಭ್ರಮೆ. ಸೂರ್ಯನ ಬೆಳಕು ಭೂಮಿಯ ವಾತಾವರಣದಲ್ಲಿ 22 ಡಿಗ್ರಿ ಕೋನದಲ್ಲಿ ಮಂಜುಗಡ್ಡೆಯ ಮೇಲೆ ಬಿದ್ದಾಗ ಬೆಳಕು ವಕ್ರೀಭವನಗೊಳ್ಳುತ್ತದೆ. ಆಗ ಒಂದೇ ಸೂರ್ಯನ ಬಹು ಪ್ರತಿಫಲನಗಳು ಕಾಣಿಸಿಕೊಳ್ಳುತ್ತವೆ  .

ಚೀನಾದಲ್ಲಿನ ಈ ದೃಶ್ಯವು ವಿಚಿತ್ರವಾಗಿ ಕಂಡರೂ, ವೈಜ್ಞಾನಿಕ ದೃಷ್ಟಿಕೋನದಿಂದ ಇದು ಸ್ಪಷ್ಟವಾದ ವೈಜ್ಞಾನಿಕ ಆಧಾರವನ್ನು ಹೊಂದಿದೆ. ಈ ಘಟನೆ ನಿಜಕ್ಕೂ ಪವಾಡದಂತೆ ಕಂಡರೂ, ಅದರ ಹಿಂದೆ ಯಾವುದೇ ಆಕಾಶ ಬದಲಾವಣೆಗಳು ಅಥವಾ ದೈವಿಕ ಪವಾಡಗಳು ಇಲ್ಲ. ಇದು ವಾತಾವರಣದಲ್ಲಿ ಸೂರ್ಯನ ಬೆಳಕು ಮತ್ತು ಮಂಜುಗಡ್ಡೆಯ ನಡುವಿನ ಪರಸ್ಪರ ಕ್ರಿಯೆಯಿಂದ ಸೃಷ್ಟಿಯಾದ ಒಂದು ಆಪ್ಟಿಕಲ್ ಭ್ರಮೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News