ತೆರಿಗೆ ಸ್ಲ್ಯಾಬ್‌ಗಳಿಗೆ ತಿದ್ದುಪಡಿ: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 'ಹೊಸ ಆದಾಯ ತೆರಿಗೆ ಮಸೂದೆ' ಪ್ರಮುಖ ಅಂಶಗಳು..!

New Income Tax Bill 2025: ಮೋದಿ ಸರ್ಕಾರದ ಬಜೆಟ್ ಮಂಡನೆ ವೇಳೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ 'ಹೊಸ ಆದಾಯ ತೆರಿಗೆ ಮಸೂದೆ'ಯನ್ನು ಜಾರಿಗೆ ತರುವ ಬಗ್ಗೆ ಉಲ್ಲೇಖಿಸಿದ್ದರು. ಆ ನಂತರದಲ್ಲಿ ತೆರಿಗೆ ಸ್ಲ್ಯಾಬ್‌ಗಳಿಗೆ ತಿದ್ದುಪಡಿಗೆ ಸಂಬಂಧಿಸಿದಂತೆ ತೆರಿಗೆದಾರರಿಗೆ ಬೆಟ್ಟದಷ್ಟು ನಿರೀಕ್ಷೆಗಳಿವೆ. 

Written by - Yashaswini V | Last Updated : Feb 12, 2025, 01:31 PM IST
  • ಹೊಸ ಆದಾಯ ತೆರಿಗೆ ಮಸೂದೆ 2025 ಭಾರತದ ತೆರಿಗೆ ವ್ಯವಸ್ಥೆಯನ್ನು ಸುಧಾರಿಸುವ ಮಹತ್ವದ ಗುರಿ ಹೊಂದಿದೆ.
  • ಮಾತ್ರವಲ್ಲ, ಅಸ್ತಿತ್ವದಲ್ಲಿರುವ ತೆರಿಗೆ ರಚನೆಯನ್ನು ಹೆಚ್ಚು ಸುವ್ಯವಸ್ಥಿತ ಮತ್ತು ಪಾರದರ್ಶಕವಾಗಿಸುವ ಉದ್ದೇಶ ಹೊಂದಿದೆ ಎನ್ನಲಾಗಿದೆ.
ತೆರಿಗೆ ಸ್ಲ್ಯಾಬ್‌ಗಳಿಗೆ ತಿದ್ದುಪಡಿ: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 'ಹೊಸ ಆದಾಯ ತೆರಿಗೆ ಮಸೂದೆ' ಪ್ರಮುಖ ಅಂಶಗಳು..!  title=

New Income Tax Bill 2025: ಬಜೆಟ್ 2025ರ ಮಂಡನೆ ವೇಳೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 'ಹೊಸ ಆದಾಯ ತೆರಿಗೆ ಮಸೂದೆ'ಯನ್ನು ಜಾರಿಗೆ ತರುವ ಬಗ್ಗೆ ಪ್ರಸ್ತಾಪಿಸಿದ್ದರು. ಇದೀಗ, ನೂತನ ಐಟಿ ಮಸೂದೆಯನ್ನು ಗುರುವಾರ (ಫೆ. 13) ಮಂಡನೆಯಾಗುವ ಸಾಧ್ಯತೆ ಇದೆ ಎಂದು ವರದಿಗಳು ತಿಳಿಸಿದ್ದು,  ತೆರಿಗೆ ಸ್ಲ್ಯಾಬ್‌ಗಳಿಗೆ ತಿದ್ದುಪಡಿಗೆ ಸಂಬಂಧಿಸಿದಂತೆ ತೆರಿಗೆದಾರರು ಸಾಕಷ್ಟು ನಿರೀಕ್ಷೆಗಳನ್ನು ಹೊಂದಿದ್ದಾರೆ. 

ಲಭ್ಯವಿರುವ ಮಾಹಿತಿಗಳ ಪ್ರಕಾರ, 1961ರ 60 ವರ್ಷಗಳಷ್ಟು ಹಳೆಯದಾದ ಆದಾಯ ತೆರಿಗೆ ಕಾಯ್ದೆ ಬದಲಿಸುವ ಗುರಿ ಹೊಂದಿರುವ 'ಹೊಸ ಆದಾಯ ತೆರಿಗೆ ಮಸೂದೆ'ಯು 622 ಪುಟಗಳಿಗೂ ಹೆಚ್ಚು ವಿಸ್ತಾರವಾಗಿದೆ ಎನ್ನಲಾಗಿದೆ. ಈಗಾಗಲೇ ಫೆಬ್ರವರಿ 07, 2025ರಂದು ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಈ ಮಸೂದೆಗೆ ಅನುಮೋದನೆಯೂ ದೊರೆತಿದೆ. ಹೊಸ ಆದಾಯ ತೆರಿಗೆ ಮಸೂದೆಯ ಪ್ರಮುಖ ಅಂಶಗಳೆಂದರೆ... 

ಇದನ್ನೂ ಓದಿ- ಸರ್ಕಾರಿ ನೌಕರರಿಗೆ ಜಾಕ್ ಪಾಟ್ ! ಮೂಲ ವೇತನದಲ್ಲಿಯೇ 20-30% ಹೆಚ್ಚಳ !

ಹೊಸ ಆದಾಯ ತೆರಿಗೆ ಮಸೂದೆ 2025 ಭಾರತದ ತೆರಿಗೆ ವ್ಯವಸ್ಥೆಯನ್ನು ಸುಧಾರಿಸುವ ಮಹತ್ವದ ಗುರಿ ಹೊಂದಿದೆ. ಮಾತ್ರವಲ್ಲ, ಅಸ್ತಿತ್ವದಲ್ಲಿರುವ ತೆರಿಗೆ ರಚನೆಯನ್ನು ಹೆಚ್ಚು ಸುವ್ಯವಸ್ಥಿತ ಮತ್ತು ಪಾರದರ್ಶಕವಾಗಿಸುವ ಉದ್ದೇಶ ಹೊಂದಿದೆ ಎನ್ನಲಾಗಿದೆ. 

ಆರು ದಶಕಗಳಷ್ಟು ಹಳೆಯದಾದ 1961ರ ಆದಾಯ ತೆರಿಗೆ ಕಾಯ್ದೆಯನ್ನು ಬದಲಿಸಲು ಪರಿಚಯಿಸಲಾಗುತ್ತಿರುವ ಹೊಸ ಆದಾಯ ತೆರಿಗೆ ಮಸೂದೆಯು "ತೆರಿಗೆದಾರರಿಗೆ ಅನುಕೂಲವಾಗುವಂತೆ ಸರಳೀಕೃತ ಭಾಷೆಯನ್ನು ಒಳಗೊಂಡಿರುತ್ತದೆ". ತೆರಿಗೆ ನಿಯಮಗಳು ಮತ್ತು ಷರತ್ತುಗಳು ಎಲ್ಲರಿಗೂ ಸರಳವಾಗಿ ಅರ್ಥವಾಗುವಂತೆ ಇರಲಿದ್ದು ಈ ಪ್ರಯತ್ನದಲ್ಲಿ ವಿಭಾಗಗಳ ಸಂಖ್ಯೆಯನ್ನು 25-30% ಕಡಿಮೆ ಮಾಡಬಹುದು ಎಂದು ನಿರೀಕ್ಷಿಸಲಾಗಿದೆ. 

ಇದನ್ನೂ ಓದಿ- ಪಿಎಫ್ ಸದಸ್ಯರೇ ಗಮನಿಸಿ !ಫೆಬ್ರವರಿ 15ರೊಳಗೆ ಈ ಕೆಲಸ ಮಾಡದೇ ಹೋದರೆ ನಿಮ್ಮದೇ PF ಹಣ ನಿಮಗೆ ಸಿಗದೇ ಹೋಗಬಹುದು !

ಹೊಸ ಆದಾಯ ತೆರಿಗೆ ಮಸೂದೆ ಏಕೆ ಅಗತ್ಯ? 
ಹೊಸ ಆದಾಯ ತೆರಿಗೆ ಮಸೂದೆಯನ್ನು ಜಾರಿಗೆ ತರಲು ನಾಲ್ಕು ಮೂಲಭೂತ ಉದ್ದೇಶಗಳಿವೆ ಎನ್ನಲಾಗಿದೆ. ಅವುಗಳೆಂದರೆ... 
* ತೆರಿಗೆದಾರರು ಮತ್ತು ಆದಾಯ ತೆರಿಗೆ ಇಲಾಖೆಯ ನಡುವಿನ ಮೊಕದ್ದಮೆಗಳನ್ನು ಕಡಿಮೆ ಮಾಡುವುದು. 
* ಆದಾಯ ತೆರಿಗೆ ಕಾಯ್ದೆ ನಿಬಂಧನೆಗಳಲ್ಲಿ ಪಠ್ಯವನ್ನು ಸರಳೀಕರಣಗೊಳಿಸುವುದು. 
* ಉಪಯುಕ್ತವಲ್ಲದ ನಿಬಂಧನೆಗಳನ್ನು ತೆಗೆದುಹಾಕುವುದು. 
* ತಪ್ಪಿಸಬಹುದಾದ ಕಾರ್ಯವಿಧಾನದ ಔಪಚಾರಿಕತೆಯನ್ನು ಕಡಿಮೆ ಮಾಡುವ ನಿರೀಕ್ಷೆ ಇದೆ ಎಂದು ನಿರೀಕ್ಷಿಸಲಾಗಿದೆ. 

ಬಜೆಟ್ 2025ರ ವೇಳೆ ವಿತ್ತ ಸಚಿವೆ ಹಣಕಾಸು ಸಚಿವೆ ಘೋಷಿಸಿರುವ ಹೊಸ ತೆರಿಗೆ ಸ್ಲ್ಯಾಬ್‌ಗಳು ಕೆಳಕಂಡಂತಿದೆ:- 
₹ 4 ಲಕ್ಷದವರೆಗಿನ ಆದಾಯ - ಶೂನ್ಯ ತೆರಿಗೆ 
₹ 4 ಲಕ್ಷದಿಂದ ₹ 8 ಲಕ್ಷ – 5% ತೆರಿಗೆ 
₹ 8 ಲಕ್ಷದಿಂದ ₹ 12 ಲಕ್ಷ – 10% ತೆರಿಗೆ 
₹ 12 ಲಕ್ಷದಿಂದ ₹ 16 ಲಕ್ಷ – 15% ತೆರಿಗೆ 
₹ 16 ಲಕ್ಷದಿಂದ ₹ 20 ಲಕ್ಷ – 20% ತೆರಿಗೆ 
₹ 20 ಲಕ್ಷದಿಂದ ₹ 24 ಲಕ್ಷ- 25% ತೆರಿಗೆ 
₹ 24 ಲಕ್ಷಕ್ಕಿಂತ ಹೆಚ್ಚು - 30% ತೆರಿಗೆ 

ಹೊಸ ಹಣಕಾಸು ಮಸೂದೆ 2025ರ ವೇಳೆ ಮೋದಿ ಸರ್ಕಾರವು ತೆರಿಗೆದಾರರಿಗೆ ಇನ್ನಷ್ಟು ಪರಿಹಾರವನ್ನು ಘೋಷಿಸಬಹುದು ಎಂದು ನಿರೀಕ್ಷಿಸಲಾಗಿದೆ. 

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News