Rahul Dravid Aditi Dravid relationship: ಟೀಂ ಇಂಡಿಯಾದ ಮಾಜಿ ಕೋಚ್ ರಾಹುಲ್ ದ್ರಾವಿಡ್ ಸಾಧು ಸ್ವಭಾವದ ಆಟಗಾರ. ತನ್ನ ಶಿಸ್ತುಬದ್ಧ ಜೀವನಶೈಲಿಯಿಂದಲೇ ಹೆಸರುಗಳಿಸಿರುವ ದ್ರಾವಿಡ್ ಟೀಂ ಇಂಡಿಯಾಗೆ ಟಿ20 ವಿಶ್ವಕಪ್ ಗೆದ್ದುಕೊಟ್ಟ ಕೋಚ್ ಕೂಡ ಹೌದು. ಅಂದಹಾಗೆ ರಾಹುಲ್ ದ್ರಾವಿಡ್ ಅವರ ಮಗಳು ಅಂದರೆ ಅಣ್ಣನ ಮಗಳ ಬಗ್ಗೆ ನಿಮಗೆ ತಿಳಿದಿದೆಯೇ?
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ
ಟೀಂ ಇಂಡಿಯಾದ ಮಾಜಿ ಕೋಚ್ ರಾಹುಲ್ ದ್ರಾವಿಡ್ ಸಾಧು ಸ್ವಭಾವದ ಆಟಗಾರ. ತನ್ನ ಶಿಸ್ತುಬದ್ಧ ಜೀವನಶೈಲಿಯಿಂದಲೇ ಹೆಸರುಗಳಿಸಿರುವ ದ್ರಾವಿಡ್ ಟೀಂ ಇಂಡಿಯಾಗೆ ಟಿ20 ವಿಶ್ವಕಪ್ ಗೆದ್ದುಕೊಟ್ಟ ಕೋಚ್ ಕೂಡ ಹೌದು. ಅಂದಹಾಗೆ ರಾಹುಲ್ ದ್ರಾವಿಡ್ ಅವರ ಮಗಳು ಅಂದರೆ ಅಣ್ಣನ ಮಗಳ ಬಗ್ಗೆ ನಿಮಗೆ ತಿಳಿದಿದೆಯೇ?
ರಾಹುಲ್ ಶರದ್ ದ್ರಾವಿಡ್ ಇವರು ಪೂರ್ಣ ಹೆಸರು. ಮಾಜಿ ಕೋಚ್ ಮತ್ತು ಭಾರತೀಯ ರಾಷ್ಟ್ರೀಯ ತಂಡದ ಮಾಜಿ ನಾಯಕನಾಗಿದ್ದ ದ್ರಾವಿಡ್, ಹಿರಿಯ ಪುರುಷರ ರಾಷ್ಟ್ರೀಯ ತಂಡಕ್ಕೆ ನೇಮಕಗೊಳ್ಳುವ ಮೊದಲು, ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ (NCA)ಕ್ರಿಕೆಟ್ ಮುಖ್ಯಸ್ಥರಾಗಿ ಕೆಲಸ ನಿರ್ವಹಿಸಿದ್ದರು.
ಮರಾಠಿ ಕುಟುಂಬದಲ್ಲಿ ಜನಿಸಿದ್ದ ರಾಹುಲ್, ಬೆಳೆದಿದ್ದು ಬೆಂಗಳೂರಿನಲ್ಲಿ. 12 ನೇ ವಯಸ್ಸಿನಲ್ಲಿ ಕ್ರಿಕೆಟ್ ಆಡಲು ಪ್ರಾರಂಭಿಸಿದ ದ್ರಾವಿಡ್, ನಂತರ ಕರ್ನಾಟಕವನ್ನು ಅಂಡರ್-15, ಅಂಡರ್-17 ಮತ್ತು ಅಂಡರ್-19 ಹಂತಗಳಲ್ಲಿ ಪ್ರತಿನಿಧಿಸಿದರು. 2000ನೇ ಇಸವಿಯಲ್ಲಿ ವಿಸ್ಡನ್ ಕ್ರಿಕೆಟರ್ಸ್ ಅಲ್ಮಾನಾಕ್‌ನಿಂದ ವರ್ಷದ ಅತ್ಯುತ್ತಮ ಐದು ಕ್ರಿಕೆಟಿಗರಲ್ಲಿ ಒಬ್ಬರೆಂದು ಹೆಸರಿಸಲ್ಪಟ್ಟಿದ್ದರು ದ್ರಾವಿಡ್.
ರಾಹುಲ್ ದ್ರಾವಿಡ್ ಅವರ ಅಣ್ಣನ ಮಗಳು ಅದಿತಿ ದ್ರಾವಿಡ್. ಇವರು ಮರಾಠಿ ಮನರಂಜನಾ ಕ್ಷೇತ್ರದಲ್ಲಿ ಜನಪ್ರಿಯ ನಟಿ. ಇಲ್ಲಿಯವರೆಗೆ ಹಲವು ಧಾರವಾಹಿ, ಸಿನಿಮಾಗಳಲ್ಲಿ ಬಣ್ಣಹಚ್ಚುವ ಮೂಲಕ ಪ್ರೇಕ್ಷಕರ ಮನಗೆದ್ದಿದ್ದಾರೆ. 'ಸುಂದರ ಮನನ ಭಾರ್ಲಿ', ‘ಮಾಜ್ಯಾ ನವ್ರ್ಯಾಚಿ ಬಾಯ್ಕೊ’ ಮುಂತಾದ ಜನಪ್ರಿಯ ಧಾರಾವಾಹಿಗಳಲ್ಲಿ ನಟಿಸಿದ್ದಾರೆ.
ಅಷ್ಟೇ ಅಲ್ಲದೆ ರಾಷ್ಟ್ರಪ್ರಶಸ್ತಿ ವಿಜೇತ ಸಿನಿಮಾ ‘ಗೋಷ್ಟಾ ಏಕ ಪೈತ್ನಿಚಿ’ಯಲ್ಲೂ ಪ್ರಮುಖ ಪಾತ್ರ ನಿರ್ವಹಿಸಿರುವ ಅದಿತಿ, ಡ್ಯಾನ್ಸರ್ ಮತ್ತು ಗೀತರಚನೆಗಾರ್ತಿ.
ಒಂದೊಮ್ಮೆ ರಾಹುಲ್ ದ್ರಾವಿಡ್ ಜೊತೆಗಿನ ಸಂಬಂಧದ ಬಗ್ಗೆ ಮಾತನಾಡಿದ ಅದಿತಿ ದ್ರಾವಿಡ್, "ರಾಹುಲ್ ದ್ರಾವಿಡ್ ನನ್ನ ಅಂಕಲ್ (ಚಿಕ್ಕಪ್ಪ). ಕಳೆದ 30-35 ವರ್ಷಗಳಿಂದ ಅವರು ಕ್ರಿಕೆಟ್ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. ಹಾಗೆಯೇ ನನ್ನ ತಂದೆ ವಿನಾಯಕ್ ದ್ರಾವಿಡ್ ರಣಜಿ ಟ್ರೋಫಿ ಆಟಗಾರ. ಕ್ರಿಕೆಟ್‌ನಿಂದ ನಮ್ಮ ಸಂಬಂಧ ಮತ್ತಷ್ಟು ಬಿಗಿಯಾಯಿತು” ಎಂದಿದ್ದರು.