ಭೀಮಾತೀರದಲ್ಲಿ ಮತ್ತೆ ಹರಿದ ನೆತ್ತರು! ಬಾಗಪ್ಪ ಹರಿಜನ್‌ ಬರ್ಬರ ಹತ್ಯೆ... ಗುಪ್ತಾಂಗವನ್ನೇ ಕಟ್‌ ಮಾಡಿದ ಹಂತಕರು

ಇನ್ನು ಕಳೆದ ಕೆಲ ತಿಂಗಳ ಹಿಂದೆ ನಡೆದಿದ್ದ ವಕೀಲ ರವಿ ಅಗರಖೇಡ್ ಹತ್ಯೆಗೆ ಹಂತಕರು ಸೇಡು ತೀರಿಸಿಕೊಂಡರೇ? ಅಥವಾ ಹಣದ ವ್ಯವಹಾರಕ್ಕೆ ಬಾಗಪ್ಪನ ಹತ್ಯೆ ಮಾಡಲು ಹೊಸ ಗ್ಯಾಂಗ್‌ ಸ್ಕೆಚ್‌ ಹಾಕಿತ್ತಾ? ಇತ್ತ ಬಾಗಪ್ಪ ಹರಿಜನ್ ವಿರೋಧಿ ಗ್ಯಾಂಗ್ ಚಂದಪ್ಪನ ಅಣ್ಣ ಯಲ್ಲಪ್ಪನ ಮಕ್ಕಳಿಂದ ಈ ಕೃತ್ಯ ನಡೆಯಿತಾ? ಎಂಬೆಲ್ಲಾ ಆಯಾಮಗಳಲ್ಲಿ ತನಿಖೆ ನಡೆಯುತ್ತಿದೆ.

Written by - Bhavishya Shetty | Last Updated : Feb 12, 2025, 08:05 AM IST
    • ಮದೀನಾ ನಗರದಲ್ಲಿ ಬಾಗಪ್ಪ ಹರಿಜನ ಭೀಕರ ಹತ್ಯೆಯಾಗಿದೆ
    • ಕೊಡಲಿ ಸೇರಿ ಮಾರಕಾಸ್ತ್ರಗಳಿಂದ ಬರ್ಬರವಾಗಿ ಹತ್ಯೆಗೈಯಲಾಗಿದೆ
    • ನಗರದ ಹೊರ ವಲಯದ ರೇಡಿಯೋ ಕೇಂದ್ರದ ಬಳಿ ಬಾಗಪ್ಪ ವಾಸವಿದ್ದ
ಭೀಮಾತೀರದಲ್ಲಿ ಮತ್ತೆ ಹರಿದ ನೆತ್ತರು! ಬಾಗಪ್ಪ ಹರಿಜನ್‌ ಬರ್ಬರ ಹತ್ಯೆ... ಗುಪ್ತಾಂಗವನ್ನೇ ಕಟ್‌ ಮಾಡಿದ ಹಂತಕರು title=
Bagappa Harijan Murder

ಭೀಮಾ ತೀರದಲ್ಲಿ ಮತ್ತೆ ನೆತ್ತರಕೋಡಿ ಹರಿದಿದ್ದು, ಇಲ್ಲಿನ ಮದೀನಾ ನಗರದಲ್ಲಿ ಬಾಗಪ್ಪ ಹರಿಜನ ಭೀಕರ ಹತ್ಯೆಯಾಗಿದೆ. ಕಳೆದ ರಾತ್ರಿ 9.25ರ ವೇಳೆಗೆ ಈ ಘಟನೆ ನಡೆದಿದ್ದು, ಕೊಡಲಿ ಸೇರಿ ಮಾರಕಾಸ್ತ್ರಗಳಿಂದ ಬರ್ಬರವಾಗಿ ಹತ್ಯೆಗೈಯಲಾಗಿದೆ.

ಇದನ್ನೂ ಓದಿ:  ತಿನ್ನಬೇಕೆಂದು ಎಷ್ಟೇ ಆಸೆಯಾಗಿದ್ದರೂ ಸಹ... ಈ ಆರೋಗ್ಯ ಸಮಸ್ಯೆ ಇದ್ದವರು ಕಲ್ಲಂಗಡಿ ಹಣ್ಣು ತಿನ್ನಬಾರದು!

ಇನ್ನು ಕಳೆದ ಕೆಲ ತಿಂಗಳ ಹಿಂದೆ ನಡೆದಿದ್ದ ವಕೀಲ ರವಿ ಅಗರಖೇಡ್ ಹತ್ಯೆಗೆ ಹಂತಕರು ಸೇಡು ತೀರಿಸಿಕೊಂಡರೇ? ಅಥವಾ ಹಣದ ವ್ಯವಹಾರಕ್ಕೆ ಬಾಗಪ್ಪನ ಹತ್ಯೆ ಮಾಡಲು ಹೊಸ ಗ್ಯಾಂಗ್‌ ಸ್ಕೆಚ್‌ ಹಾಕಿತ್ತಾ? ಇತ್ತ ಬಾಗಪ್ಪ ಹರಿಜನ್ ವಿರೋಧಿ ಗ್ಯಾಂಗ್ ಚಂದಪ್ಪನ ಅಣ್ಣ ಯಲ್ಲಪ್ಪನ ಮಕ್ಕಳಿಂದ ಈ ಕೃತ್ಯ ನಡೆಯಿತಾ? ಎಂಬೆಲ್ಲಾ ಆಯಾಮಗಳಲ್ಲಿ ತನಿಖೆ ನಡೆಯುತ್ತಿದೆ.

ಬಾಡಿಗೆ ಮನೆ ಮಾಡಿ ನಗರದ ಹೊರ ವಲಯದ ರೇಡಿಯೋ ಕೇಂದ್ರದ ಬಳಿ ಬಾಗಪ್ಪ ವಾಸವಿದ್ದ. ಫೆಬ್ರವರಿ 19 ರಂದು ವಿಜಯಪುರ ಕೋರ್ಟ್‌ಗೆ ಹಾಜರಾಗಿ, ಪ್ರಮುಖ ಸಾಕ್ಷಿ ಹೇಳಲಿದ್ದ ಬಾಗಪ್ಪ. ಆದರೆ ಇದೀಗ ಈ ದುರ್ಘಟನೆ ನಡೆದಿದೆ.

2017 ಆಗಸ್ಟ್‌ 8 ರಂದು ಕೋರ್ಟ್ ಆವರಣದಲ್ಲಿ ತನ್ನ ಮೇಲೆ ನಡೆದಿದ್ದ ಫೈರಿಂಗ್ ಕೇಸ್ ನಲ್ಲಿ ಸಾಕ್ಷಿ ನುಡಿಯಲು ಬಂದಿದ್ದ ಬಾಗಪ್ಪನನ್ನೇ ಹತ್ಯೆಗೈಯಲಾಗಿದೆ. ಇನ್ನು ತಾನು ಸಾಕ್ಷಿ ನುಡಿಯಲು ಬರುತ್ತಿದ್ದೇನೆ ಎಂಬುದು ವಿರೋಧಿ ಗ್ಯಾಂಗ್‌ಗಳಿಗೆ ಗೊತ್ತಾಗದಿರಲಿ ಎಂದು ನಗರದ ಹೊರ ವಲಯದಲ್ಲಿ ಬಾಡಿಗೆ ಮನೆ ಮಾಡಿ ವಾಸವಿದ್ದ. ಅಷ್ಟೇ ಅಲ್ಲದೆ, ಮನೆಯಲ್ಲಿ ಅಡುಗೆ ಮಾಡುವುದಕ್ಕೆ ಸಂಜನಾ ಎಂಬ ಸಂಬಂಧಿ ಮಹಿಳೆಯನ್ನು ಬಾಗಪ್ಪ ನೇಮಿಸಿಕೊಂಡಿದ್ದನೆಂದು ತಿಳಿದುಬಂದಿದೆ.

ಇದನ್ನೂ ಓದಿ:  ಈ ಪುಟ್ಟ ಕಾಳನ್ನು ಬಾಯಲ್ಲಿಟ್ಟುಕೊಂಡರೆ, ತಕ್ಷಣ ಕಂಟ್ರೋಲ್‌ಗೆ ಬರುತ್ತೆ ಶುಗರ್‌! ಮತ್ತೆಂದೂ ಹೆಚ್ಚಾಗೋದೇ ಇಲ್ಲ

ಇನ್ನು  ರಾತ್ರಿ ಬಾಗಪ್ಪ ಊಟ ಮಾಡಿ ವಾಕಿಂಗ್‌ಗೆ ಹೊರಬಂದಿದ್ದ ವೇಳೆ ಕರೆಂಟ್ ಕಟ್ ಮಾಡಿ, ಟಂಟಂನಲ್ಲಿ ಬಂದು ಅಟ್ಯಾಕ್ ಮಾಡಿದ್ದಾರೆ ಎನ್ನುವ ಮಾಹಿತಿ ಸದ್ಯ ಲಭ್ಯವಾಗಿದೆ. ಅಷ್ಟೇ ಅಲ್ಲದೆ, ಸ್ಥಳದಲ್ಲಿ ಮೂರು ಸುತ್ತು ಗುಂಡಿನ ಸದ್ದು ಕೂಡ ಕೇಳಿಬಂದಿದ್ದು, ಕೊಡಲಿಯಿಂದ ಕೊಚ್ಚಿ ಬಾಗಪ್ಪ‌ನ ಹತ್ಯೆ ಮಾಡಲಾಗಿದೆ. ಈ ಸಂದರ್ಭದಲ್ಲಿ ಎಡಗೈ ಕೂಡ ಕಟ್‌ ಆಗಿದ್ದು, ಗುಪ್ತಾಂಗವನ್ನೂ ಕತ್ತರಿಸಲಾಗಿದೆ ಎಂದು ಹೇಳಲಾಗಿದೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News