Shani Asta 2025: ಕರ್ಮಫಲ ದಾತ ಶನಿದೇವರು ಫೆಬ್ರವರಿ 28ರ ಸಂಜೆ 7 ಗಂಟೆಗೆ ಕುಂಭ ರಾಶಿಯಲ್ಲಿ ಸ್ಥಾನ ಬದಲಾಯಿಸಲಿದ್ದಾನೆ. ಈ ಸ್ಥಿತಿಯಲ್ಲಿಯೇ 37 ದಿನಗಳ ಕಾಲ ಇರುತ್ತಾನೆ. ಶನಿಯ ಈ ಸಂಚಾರದಿಂದ ಕೆಲವು ರಾಶಿಗಳಿಗೆ ಶುಭವಾಗಲಿದೆ. ಆ ಅದೃಷ್ಟದ ರಾಶಿಗಳು ಯಾವುದು ಎಂಬುದರ ಮಾಹಿತಿ ಇಲ್ಲಿದೆ ನೋಡಿ...
Shani Asta 2025 On 28th Feb: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ೯ ಗ್ರಹಗಳಲ್ಲಿ ಶನಿದೇವರು ಅತ್ಯಂತ ಶಕ್ತಿಶಾಲಿ ಗ್ರಹವೆಂದು ಪರಿಗಣಿಸಲಾಗಿದೆ. ಏಕೆಂದರೆ ಶನಿಯು ಜನರಿಗೆ ಅವರವರ ಕರ್ಮಗಳಿಗೆ ಅನುಸಾರವಾಗಿ ಒಳ್ಳೆಯ ಅಥವಾ ಕೆಟ್ಟ ಫಲಿತಾಂಶಗಳನ್ನು ನೀಡುತ್ತಾನೆ. ಶನಿಯು ಜನರಿಗೆ ಧರ್ಮ ಮತ್ತು ಆಧ್ಯಾತ್ಮಿಕತೆಯ ಕಡೆಗೆ ಸಾಗಲು ಮಾರ್ಗ ತೋರಿಸುತ್ತಾನೆ. ಶನಿಗ್ರಹವನ್ನು ಅತ್ಯಂತ ನಿಧಾನವಾಗಿ ಚಲಿಸುವ ಗ್ರಹವೆಂದು ಪರಿಗಣಿಸಲಾಗುತ್ತದೆ. ಇದು ಒಂದು ರಾಶಿಯಲ್ಲಿ ಸುಮಾರು ಎರಡೂವರೆ ವರ್ಷಗಳ ಕಾಲ ಇರುತ್ತದೆ ಮತ್ತು ಹಿಂತಿರುಗಲು 30 ವರ್ಷಗಳನ್ನು ತೆಗೆದುಕೊಳ್ಳುತ್ತದೆ. ಈ ಅವಧಿಯಲ್ಲಿ ಶನಿಯು ಉದಯಿಸುತ್ತಾನೆ ಮತ್ತು ಅಸ್ತಮಿಸುತ್ತಾನೆ. ಇದು 12 ರಾಶಿಗಳ ಜೀವನದ ಮೇಲೂ ಒಂದಲ್ಲ ಒಂದು ರೀತಿಯಲ್ಲಿ ಪರಿಣಾಮ ಬೀರುತ್ತದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.
ಫೆಬ್ರವರಿ 28ರಂದು ಶನಿಯು ಕುಂಭ ರಾಶಿಯಲ್ಲಿ ಅಸ್ತಮಿಸಲಿದ್ದು, ಈ ಸ್ಥಿತಿಯಲ್ಲಿಯೇ ಮೀನ ರಾಶಿಯನ್ನು ಪ್ರವೇಶಿಸುತ್ತಾನೆ. ಕುಂಭ ಮತ್ತು ಮೀನ ರಾಶಿಯಲ್ಲಿ ಶನಿ ಗ್ರಹವು ನೆಲೆಗೊಳ್ಳುವುದರಿಂದ ಕೆಲವು ರಾಶಿಯ ಜನರಿಗೆ ಭರ್ಜರಿ ಲಾಭವಾಗುತ್ತದೆ. ಆದರೆ ಕೆಲವು ರಾಶಿಯ ಜನರು ಜಾಗರೂಕರಾಗಿರಬೇಕು. ಕರ್ಮದ ದೇವರು ಶನಿಯ ಅಸ್ಥಿತ್ವದಿಂದ ಯಾವ ರಾಶಿಯ ಜನರಿಗೆ ಲಾಭವಾಗಬಹುದು ಎಂಬುದರ ಬಗ್ಗೆ ತಿಳಿಯಿರಿ...
ಶನಿಯ ಅಸ್ತಮವು ಕಟಕ ರಾಶಿಯ ಜನರಿಗೆ ಸಾಕಷ್ಟು ಪ್ರಯೋಜನಕಾರಿಯಾಗಲಿದೆ. ಈ ರಾಶಿಯಲ್ಲಿ ಶನಿಯು 8ನೇ ಮನೆಯಲ್ಲಿ ನೆಲೆಗೊಳ್ಳಲಿದ್ದಾನೆ. ಪರಿಣಾಮ ಈ ರಾಶಿಯವರು ಪ್ರತಿಯೊಂದು ಕ್ಷೇತ್ರದಲ್ಲೂ ಅಪಾರ ಯಶಸ್ಸನ್ನು ಸಾಧಿಸಬಹುದು. ನೀವು ಅತ್ಯುತ್ತಮ ಉದ್ಯೋಗಾವಕಾಶ ಪಡೆಯಬಹುದು. ಪೂರ್ವಜರ ಆಸ್ತಿಯ ಮೂಲಕ ನೀವು ಸಾಕಷ್ಟು ಪ್ರಯೋಜನ ಪಡೆಯಬಹುದು. ವ್ಯಾಪಾರ ವಲಯದಲ್ಲೂ ನಿಮಗೆ ಅಪಾರ ಲಾಭ ಸಿಗಲಿದೆ. ನೀವು ಯಾವುದೇ ರೀತಿಯ ನಿರ್ಧಾರಗಳನ್ನು ಎಚ್ಚರಿಕೆಯಿಂದ ತೆಗೆದುಕೊಂಡರೆ ಲಾಭವಾಗುತ್ತದೆ. ಶೀಘ್ರವೇ ನಿಮಗೆ ಒಳ್ಳೆಯ ಸುದ್ದಿ ಸಿಗಲಿದೆ. ಆರ್ಥಿಕ ಪರಿಸ್ಥಿತಿ ಮತ್ತಷ್ಟು ಉತ್ತಮವಾಗಲಿದೆ.
ಶನಿಯು ಧನು ರಾಶಿಯ 3ನೇ ಮನೆಯಲ್ಲಿ ಸ್ಥಾನ ಪಡೆಯುತ್ತಾನೆ. ಹೀಗಾಗಿ ಈ ರಾಶಿಯ ಜನರು ಪ್ರತಿಯೊಂದು ಕ್ಷೇತ್ರದಲ್ಲೂ ಅಪಾರ ಯಶಸ್ಸನ್ನು ಸಾಧಿಸುತ್ತಾರೆ. ನಿಮ್ಮ ಕೆಲಸದಲ್ಲಿ ನೀವು ತೃಪ್ತರಾಗುತ್ತೀರಿ. ನಿಮ್ಮ ಬಂಧುಗಳಿಂದ ನಿಮಗೆ ಸಂಪೂರ್ಣ ಬೆಂಬಲ ಸಿಗಬಹುದು. ನೀವು ವೃತ್ತಿ ಕ್ಷೇತ್ರದಲ್ಲಿ ಸಾಕಷ್ಟು ಪ್ರಯೋಜನ ಪಡೆಯಬಹುದು. ನಿಮ್ಮ ಕೆಲಸಕ್ಕೆ ಅಪಾರ ಮೆಚ್ಚುಗೆ ಸಿಗಬಹುದು. ವ್ಯವಹಾರ ಕ್ಷೇತ್ರದಲ್ಲಿ ನಿರೀಕ್ಷಿತ ಪ್ರಗತಿಯಾಗಲಿದೆ. ನಿಮ್ಮ ಆರ್ಥಿಕ ಸ್ಥಿತಿ ಉತ್ತಮವಾಗಿರಲಿದ್ದು, ವೃತ್ತಿಜೀವನದಲ್ಲಿ ಪ್ರಗತಿಯಾಗಲಿದೆ. ನೀವು ಅದೃಷ್ಟದ ಬೆಂಬಲದಿಂದ ಅಪಾರ ಲಾಭವನ್ನು ಗಳಿಸುತ್ತೀರಿ.
ಶನಿಯ ಅಸ್ತವು ಕುಂಭ ರಾಶಿಯ ಜನರಿಗೆ ಮಿಶ್ರ ಫಲಿತಾಂಶಗಳನ್ನು ನೀಡಲಿದೆ. ಈ ರಾಶಿಯ ಜನರ ಉದ್ಯೋಗದಲ್ಲಿ ಬದಲಾವಣೆಯಾಗಬಹುದು. ಬಹಳ ದಿನಗಳಿಂದ ಬಾಕಿ ಉಳಿದ ಕೆಲಸಗಳು ಪೂರ್ಣಗೊಳ್ಳಬಹುದು. ಸಮಾಜದಲ್ಲಿ ನಿಮ್ಮ ಗೌರವ ಮತ್ತು ಪ್ರತಿಷ್ಠೆ ಹೆಚ್ಚಾಗಬಹುದು. ವ್ಯವಹಾರದಲ್ಲಿಯೂ ಸಹ ನೀವು ಭಾರೀ ಲಾಭ ಗಳಿಸುವ ಸಾಧ್ಯತೆಗಳಿವೆ. ಹೂಡಿಕೆಯಿಂದಲೂ ನೀವು ಹೆಚ್ಚಿನ ಲಾಭ ಪಡೆಯಬಹುದು. ನಿಮ್ಮ ಆರ್ಥಿಕ ಪರಿಸ್ಥಿತಿ ಉತ್ತಮವಾಗಿರುತ್ತದೆ. ನಿಮ್ಮ ಅಗತ್ಯಗಳಿಗೆ ಅನುಗುಣವಾಗಿ ಖರ್ಚು ಮಾಡಲು ಸಾಧ್ಯವಾಗುತ್ತದೆ. ನೀವು ಅದೃಷ್ಟದ ಬೆಂಬಲದಿಂದ ಜೀವನದಲ್ಲಿ ಅಪಾರ ಸುಖ-ಸಂಪತ್ತು ಗಳಿಸುತ್ತೀರಿ.
(ಗಮನಿಸಿರಿ: ಈ ಮಾಹಿತಿಯನ್ನು ಜ್ಯೋತಿಷಿಗಳು, ಪಂಚಾಂಗಗಳು, ನಂಬಿಕೆಗಳು ಅಥವಾ ಧಾರ್ಮಿಕ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿದೆ. Zee Kannada News ಇದನ್ನು ದೃಢಪಡಿಸುವುದಿಲ್ಲ.)