ಸಕ್ಕರೆ ಮಾತ್ರವಲ್ಲ, ಈ ಆಹಾರಗಳೂ ಸಹ ಮಧುಮೇಹಿಗಳಿಗೆ ವಿಷಕ್ಕೆ ಸಮಾನ..!

Diabetic Patients: ಮಧುಮೇಹಿಗಳು ಔಷಧಿ ಸೇವನೆಯ ಜೊತೆಗೆ ತಮ್ಮ ಆಹಾರದ ವಿಷಯದಲ್ಲೂ ಕೂಡ ತುಂಬಾ ಜಾಗರೂಕರಾಗಿರಬೇಕು. 

Diabetes Diet: ಮಧುಮೇಹಿಗಳಿಗೆ ಕೆಲವು ಅನಾರೋಗ್ಯಕರ ಆಹಾರಗಳ ಸೇವನೆ ಹಾನಿಕಾರಕ ಎಂದು ಸಾಬೀತುಪಡಿಸಬಹುದು. 

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /8

ಮಧುಮೇಹಿಗಳಿಗೆ ಕೇವಲ ಸಕ್ಕರೆ ಅಥವಾ ಸಿಹಿ ಆಹಾರಗಳು ಮಾತ್ರವಲ್ಲ, ದೈನಂದಿನ ಆಹಾರದಲ್ಲಿ ಬಳಸುವ ಕೆಲವು ಆಹಾರಗಳು ಕೂಡ ವಿಷವಿದ್ದಂತೆ ಎನ್ನಲಾಗುತ್ತದೆ. ಈ ಆಹಾರಗಳ ಸೇವನೆಯಿಂದ ದೇಹದಲ್ಲಿ ರಕ್ತದಲ್ಲಿನ ಸಕ್ಕೆರೆ ಮಟ್ಟ ಇದ್ದಕ್ಕಿದ್ದಂತೆ ಹೆಚ್ಚಾಗಬಹುದು ಎಂದು ಹೇಳಲಾಗುತ್ತದೆ. 

2 /8

ಮಧುಮೇಹ ಎಂದೊಡನೆ ಅವರು ಸಕ್ಕರೆ, ಸಿಹಿ ಪದಾರ್ಥಗಳನ್ನು ಸೇವಿಸಬಾರದು ಎಂದಷ್ಟೇ ಜನ ಯೋಚಿಸುತ್ತಾರೆ. ಆದರೆ, ಮಧುಮೇಹಿಗಳಿಗೆ ಹಾನಿಕಾರಕವಾದ ಇನ್ನೂ ಕೆಲವು ಆಹಾರಗಳಿವೆ. ಅಂತಹ ಆಹಾರಗಳು ಯಾವುವೆಂದರೆ... 

3 /8

ಮಧುಮೇಹಿಗಳಿಗೆ ಬೇಕರಿ ಉತ್ಪನ್ನಗಳು ಅದರಲ್ಲೂ ಹೆಚ್ಚು ಮೈದಾ ಬಳಸುವಂತಹ ಬಿಳಿ ಬ್ರೆಡ್ ಸೇವನೆಯಿಂದ ಬ್ಲಡ್ ಶುಗರ್ ಹಠಾತ್ ಹೆಚ್ಚಾಗಬಹುದು. ಇದು ಇನ್ಸುಲಿನ್ ಪ್ರತಿರೋಧವನ್ನೂ ಕೂಡ ಉಲ್ಬಣಿಸುವ ಸಾಧ್ಯತೆ ಇದೆ. 

4 /8

ಎಣ್ಣೆಯಲ್ಲಿ ಕರಿದ ಆಹಾರ ಪದಾರ್ಥಗಳಲ್ಲಿ ಟ್ರಾನ್ಸ್ ಕೊಬ್ಬು ಹೆಚ್ಚಾಗಿರುತ್ತದೆ. ಇದು ದೇಹದಲ್ಲಿ ಇನ್ಸುಲಿನ್ ಪ್ರತಿರೋಧವನ್ನು ಉತ್ತೇಜಿಸಿ ಶುಗರ್ ಹೆಚ್ಚಾಗುವಂತೆ ಮಾಡಬಹುದು. 

5 /8

ತಂಪು ಪಾನೀಯಗಳಲ್ಲಿ ಯಾವುದೇ ಪೋಷಕಾಂಶ ಇರುವುದಿಲ್ಲ. ಜೊತೆಗೆ ಸಕ್ಕರೆ ಪ್ರಮಾಣ ಹೆಚ್ಚಿರುವುದರಿಂದ ಇದು ತ್ವರಿತವಾಗಿ ಶುಗರ್ ಹೆಚ್ಚಳಕ್ಕೆ ಕಾರಣವಾಗುತ್ತದೆ. 

6 /8

ಸಂಸ್ಕರಿದ ಹಿಟ್ಟಿನಿಂದ ತಯಾರಿಸಿದ ಪಿಜ್ಜಾ, ಪಾಸ್ತಾದಂತಹ ಆಹಾರಗಳು, ಆಲೂಗಡ್ಡೆಯಂತಹ ಆಹಾರ ಪದಾರ್ಥಗಳಲ್ಲಿ ಗ್ಲೈಸೆಮಿಕ್ ಸೂಚಿ (GI) ಅಧಿಕವಾಗಿದ್ದು ಇದು ಬ್ಲಡ್ ಶುಗರ್ ಮಟ್ಟವನ್ನು ತ್ವರಿತವಾಗಿ ಏರಿಸುತ್ತದೆ. 

7 /8

ಸಂಸ್ಕರಿಸಿದ ಮಾಂಸಾಹಾರಗಳಲ್ಲಿ ಉಪ್ಪು ಅಧಿಕವಾಗಿರುತ್ತದೆ. ಇದಲ್ಲದೆ, ಟ್ರಾನ್ಸ್ ಕೊಬ್ಬು ಹೆಚ್ಚಾಗಿರುವುದರಿಂದ ಈ ಆಹಾರಗಳ ಸೇವನೆಯು ಶುಗರ್ ಉಲ್ಬಣಿಸುವಂತೆ ಮಾಡಬಹುದು. ಜೊತೆಗೆ ರಕ್ತದೊತ್ತಡವನ್ನು ಕೂಡ ಹೆಚ್ಚಿಸುತ್ತದೆ. 

8 /8

ನೀವು ಮಧುಮೇಹಿ ಆಗಿದ್ದರೆ ಅಥವಾ ನಿಮ್ಮ ಮನೆಯಲ್ಲಿ ಮಧುಮೇಹಿ ರೋಗಿಗಳಿದ್ದರೆ ಈ ಮೇಲೆ ತಿಳಿಸಿದ ಆಹಾರಗಳ ಸೇವನೆಯನ್ನು ತಪ್ಪಿಸಿದರೆ ಶುಗರ್ ನಿಯಂತ್ರಣದಲ್ಲಿರುತ್ತದೆ.  ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.