ಬೆಂಗಳೂರು : ಅಗ್ನಿಸಾಕ್ಷಿ ಮತ್ತು ಸೀತಾರಾಮ ಧಾರಾವಾಹಿ ಮೂಲಕ ಮನೆ ಮಗಳಾಗಿ ಮಿಚುತ್ತಿರುವ ನಟಿ ವೈಷ್ಣವಿ ಗೌಡ. ಇದರ ಜೊತೆಗೆ ಬಿಗ್ ಬಾಸ್ ಸೇರಿದಂತೆ ಅನೇಕ ರಿಯಾಲಿಟಿ ಷೋಗಳಲ್ಲಿ ಕೂಡಾ ಮಿಂಚಿ ಹೆಸರು ಗಳಿಸಿದ್ದಾರೆ. ವೈಷ್ಣವಿ ಗೌಡಗೆ ದೊಡ್ಡ ಮಟ್ಟದ ಅಭಿಮಾನಿ ಬಳಗವಿದೆ. ಸಾಮಾಜಿಕ ಮಾಧ್ಯಮಗಳಲ್ಲಿಯೂ ಇವರನ್ನು ಫಾಲೋ ಮಾಡುವವರ ಸಂಖ್ಯೆ ದೊಡ್ಡದಿದೆ. ಇನ್ಸ್ಟಾಗ್ರಾಮ್ನಲ್ಲಿ ಒಂದು ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ. ಹಾಗಾಗಿ ಇವರು ಯಾವುದೇ ಫೋಟೋ ಅಥವಾ ವಿಡಿಯೋ ಶೇರ್ ಮಾಡಿದರೂ ಅದಕ್ಕೆ ಲೈಕ್, ಕಾಮೆಂಟ್ ಗಳ ಸುರಿಮಳೆಯಾಗುತ್ತದೆ.
ಇದರ ಮಧ್ಯೆ ಇದೀಗ ವೈಷ್ಣವಿ ಶೇರ್ ಮಾಡಿರುವ ವಿಡಿಯೋ ವಿವಾದಕ್ಕೆ ಕಾರಣವಾಗಿದೆ. ವೈಷ್ಣವಿ ಯಾವ ಕಾರಣಕ್ಕೆ ಈ ವಿಡಿಯೋ ಹಂಚಿಕೊಂಡಿದ್ದಾರೆ ಎನ್ನುವುದೇ ಅವರ ಅಭಿಮಾನಿಗಳ ಪ್ರಶ್ನೆ. ಅಲ್ಲದೆ ಇದು ವಿವಾದಾತ್ಮಕ ಎನ್ನುವ ಅರಿವಿರುವ ಕಾರಣದಿಂದಲೇ ನಟಿ ತನ್ನ ಸಾಮಾಜಿಕ ಮಾಧ್ಯಮ ಖಾತೆಯ ಕಾಮೆಂಟ್ ಸೆಕ್ಷನ್ ಅನ್ನು ಕೂಡಾ ಆಫ್ ಮಾಡಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ : ತನಗಿಂತ 8 ವರ್ಷ ಕಿರಿಯ ನಟನ ಜೊತೆ ಮದುವೆಯಾದ 52 ವರ್ಷದ ಸ್ಟಾರ್ ಹಿರೋಯಿನ್!
ಜಂಗ್ಲಿ ರಮ್ಮಿ ಗೇಮ್ ಆಡುವ ವಿಚಾರದ ಬಗ್ಗೆ ವೈಷ್ಣವಿ ಗೌಡ ಅವರು ವಿಡಿಯೋ ಶೇರ್ ಮಾಡಿದ್ದಾರೆ. ಇದು ಜಂಗ್ಲಿ ರಮ್ಮಿ ಪ್ರಚಾರ ಮಾಡುವ ವಿಡಿಯೋ. ಇದಕ್ಕೂ ಹಿಂದೆ ಕೂಡಾ ಸಾಕಷ್ಟು ನಟ ನಟಿಯರು ಈ ಆಪ್ ಅನ್ನು ಪ್ರಚಾರ ಮಾಡಿದ್ದಾರೆ. ಜನರ ಆಕ್ರೋಶಕ್ಕೆ ಗುರಿಯಾಗಿದ್ದಾರೆ, ನಟರ ಕ್ಷಮೆ ಕೂಡಾ ಕೇಳಿದ್ದಾರೆ. ಇದೆಲ್ಲದರ ಮಧ್ಯೆ, ವೈಷ್ಣವಿ ಗೌಡ ಕೂಡಾ ಈ ಆಪ್ ಪ್ರಚಾರದ ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ. ಅಲ್ಲದೆ, ನೆಗೆಟಿವ್ ಕಾಮೆಂಟ್ ಬರುತ್ತದೆ ಎನ್ನುವ ಕಾರಣಕ್ಕೆ ಕಾಮೆಂಟ್ ಸೆಕ್ಷನ್ ಆಫ್ ಮಾಡಿದ್ದಾರೆ.
ರಮ್ಮಿ ಆಪ್ಗಳಿಂದ ಹಣ ಕಳೆದುಕೊಂಡವರು ಕಡಿಮೆ ಜನ ಅಲ್ಲ. ಈ ರೀತಿ ಆಟಗಳಿಂದ ಆರ್ಥಿಕ ನಷ್ಟ ಉಂಟಾಗಿ ಮನೆ ಮಠ ಕಳೆದುಕೊಂಡು ಆತ್ಮಹತ್ಯೆ ಹಾದಿ ಹಿಡಿದವರೂ ಇದ್ದಾರೆ. ಇನ್ನು ಈ ಆಟದ ಚಟಕ್ಕೆ ಬಿದ್ದು ಕಳ್ಳತನಕ್ಕೆ ಇಳಿದವರಿಗೂ ಕೊರತೆಯಿಲ್ಲ. ಹಾಗಾಗಿ ಈ ರಮ್ಮಿ ಆಪ್ಗಳಿಗೆ ನಿಷೇಧ ಹೇರಬೇಕು ಎಂದು ಮುಂಬೈ ಹೈಕೋರ್ಟ್ಗೆ ಅರ್ಜಿ ಕೂಡಾ ಸಲ್ಲಿಸಲಾಗಿದೆ.
ಇದನ್ನೂ ಓದಿ : 54ರಲ್ಲೂ ಯುವ ನಟಿಯರ ಲೆವೆಲ್ಗೆ ಗಳಿಕೆ ಮಾಡ್ತಿದಾರೆ ಹಿರಿಯ ನಾಯಕಿ ರಮ್ಯಾ ಕೃಷ್ಣ..! ತಿಂಗಳ ಗಳಿಕೆ ಕೇಳಿದ್ದೇನೆ ನೀವು ಶಾಕ್ ಆಗ್ತಿರಿ
ಹೀಗಿರುವಾಗ ತನ್ನ ನಟನೆಯ ಜೊತೆಗೆ ಸ್ವಭಾವ, ಮಾತು, ನಡತೆಯಿಂದಲೇ ಎಲ್ಲರ ಮೆಚ್ಚುಗೆ ಗಳಿಸಿರುವ ವೈಷ್ಣವಿ ಈ ವಿಡಿಯೋ ಶೇರ್ ಮಾಡಿರುವ ಅವಶ್ಯಕತೆ ಏನಿತ್ತು ಎನ್ನುವುದೇ ಅವರ ಅಭಿಮಾನಿಗಳ ಪ್ರಶ್ನೆ ಕೂಡಾ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.