ಮನೆಗೆ ಈ ಬಣ್ಣದ ಪೇಯಿಂಟ್ ಹಚ್ಚಿದರೆ ಒಂದರ ಹಿಂದೆ ಒಂದರಂತೆ ವಕ್ಕರಿಸುವುದು ಸಮಸ್ಯೆಗಳು!ಬೆಟ್ಟದಷ್ಟಿದ್ದ ಖಜಾನೆ ಕೂಡಾ ಕರಗಿ ಹೋಗುವುದು !

ಮನೆಗೆ ಯಾವ ಬಣ್ಣ ಬಳಿದರೆ ಶ್ರೇಷ್ಠ, ಯಾವ ಬಣ್ಣ ಬಳಿದರೆ ಅಶುಭ ಎಲ್ಲವನ್ನೂ ವಾಸ್ತು ಶಾಸ್ತ್ರದಲ್ಲಿ ವಿವರವಾಗಿ ಹೇಳಲಾಗಿದೆ.   

Written by - Ranjitha R K | Last Updated : Feb 10, 2025, 12:53 PM IST
  • ವಾಸ್ತುವಿನಲ್ಲಿ ಅನೇಕ ನೀತಿ ನಿಯಮಗಳನ್ನು ಹೇಳಲಾಗಿದೆ.
  • ಈ ನಿಯಮಗಳನ್ನು ಪಾಲಿಸದಿದ್ದರೆ, ಸಮಸ್ಯೆಗಳು ಉದ್ಭವಿಸುತ್ತವೆ.
  • ಮನೆಗೆ ಬಳಿಯುವ ಬಣ್ಣದ ಬಗ್ಗೆಯೂ ವಾಸ್ತು ಶಾಸ್ತ್ರದಲ್ಲಿ ನಿಯಮವಿದೆ.
ಮನೆಗೆ ಈ ಬಣ್ಣದ ಪೇಯಿಂಟ್ ಹಚ್ಚಿದರೆ ಒಂದರ ಹಿಂದೆ ಒಂದರಂತೆ ವಕ್ಕರಿಸುವುದು ಸಮಸ್ಯೆಗಳು!ಬೆಟ್ಟದಷ್ಟಿದ್ದ ಖಜಾನೆ ಕೂಡಾ ಕರಗಿ ಹೋಗುವುದು !  title=

ಬೆಂಗಳೂರು : ವಾಸ್ತು ಶಾಸ್ತ್ರದಲ್ಲಿ ಮನೆಯಿಂದ ಕಚೇರಿಯವರೆಗೆ ಪ್ರತಿಯೊಂದು ಸ್ಥಳಕ್ಕೂ ನಿಯಮಗಳನ್ನು ಹೇಳಲಾಗಿದೆ. ಈ ನಿಯಮಗಳನ್ನು ಪಾಲಿಸದಿದ್ದರೆ, ಸಮಸ್ಯೆಗಳು ಉದ್ಭವಿಸುತ್ತವೆ. ವಾಸ್ತುವಿನ ಪ್ರಕಾರ ಮನೆಯಲ್ಲಿ ಕೆಲವು ವಸ್ತುಗಳನ್ನು ಇಡುವಂತಿಲ್ಲ. ಅಲ್ಲದೆ, ಮನೆಗೆ ಬಳಿಯುವ ಬಣ್ಣದ ಬಗ್ಗೆಯೂ ವಾಸ್ತು ಶಾಸ್ತ್ರದಲ್ಲಿ ನಿಯಮವಿದೆ. ಮನೆಗೆ ಯಾವ ಬಣ್ಣ ಬಳಿದರೆ ಶ್ರೇಷ್ಠ, ಯಾವ ಬಣ್ಣ ಬಳಿದರೆ ಅಶುಭ ಎಲ್ಲವನ್ನೂ ವಾಸ್ತು ಶಾಸ್ತ್ರದಲ್ಲಿ ವಿವರವಾಗಿ ಹೇಳಲಾಗಿದೆ. 

ಹಿಂದೂ ಧರ್ಮದಲ್ಲಿ, ಕಪ್ಪು ಬಣ್ಣವನ್ನು ಅಶುಭದ ಸಂಕೇತವೆಂದು ಪರಿಗಣಿಸಲಾಗುತ್ತದೆ. ಆದ್ದರಿಂದ, ಯಾವುದೇ ಶುಭ ಕಾರ್ಯಗಳಲ್ಲಿ ಕಪ್ಪು ಬಣ್ಣವನ್ನು ಬಳಸುವುದಿಲ್ಲ. ಪೂಜೆ, ಮದುವೆ, ಯಾಗ ಇತ್ಯಾದಿಗಳ ಸಮಯದಲ್ಲಿ ಕಪ್ಪು ಬಣ್ಣವನ್ನು ಧರಿಸುವುದು ಅಥವಾ ಅಲಂಕಾರಕ್ಕಾಗಿ ಬಳಸುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಅದೇ ರೀತಿ, ಮನೆಯ ಗೋಡೆಗಳ ಮೇಲೆ ಕಪ್ಪು ಬಣ್ಣವನ್ನು ಬಳಸಬಾರದು. ಮನೆಯ ಹೊರಗಿರಲಿ, ಒಳಗಾಗಲಿ, ಸಂಧುಗಳಲ್ಲಿ ಅಗಲಿ ಎಲ್ಲೇ ಆಗಲಿ ಕಪ್ಪು ಬಣ್ಣ ಇರಲೇಬಾರದು. 

ಇದನ್ನೂ ಓದಿ: ಈ ರಾಶಿಯವರಿಗೆ ಲಕ್ಕಿ ಈ ವರ್ಷದ ಪ್ರೇಮಿಗಳ ದಿನ! ಸಿಂಗಲ್ ಇದ್ದವರಿಗೆ ಜೋಡಿ ಸಿಗುವುದು ಫಿಕ್ಸ್ !ನಿವೇದನೆಯಾಗುತ್ತಿದ್ದಂತೆ ಪ್ರೀತಿಗೆ ಸಿಗುತ್ತದೆ ಗ್ರೀನ್ ಸಿಗ್ನಲ್

ಕಪ್ಪು ಬಣ್ಣಕ್ಕೂ ರಾಹುವಿಗೂ ಇದೆ ಸಂಬಂಧ :
ವಾಸ್ತು ಮಾತ್ರವಲ್ಲ, ಜ್ಯೋತಿಷ್ಯ ಶಾಸ್ತ್ರದಲ್ಲೂ ಕಪ್ಪು ಬಣ್ಣವನ್ನು ಎಚ್ಚರಿಕೆಯಿಂದ ಬಳಸಲು ಸೂಚಿಸಲಾಗಿದೆ. ವಾಸ್ತವವಾಗಿ, ಕಪ್ಪು ಬಣ್ಣವು ಶನಿ ಮತ್ತು ರಾಹುವಿಗೆ ಸಂಬಂಧಿಸಿದೆ. ಮನೆಯಲ್ಲಿ ರಾಹುವಿನ ಉಪಸ್ಥಿತಿಯು ಬಡತನ, ಅಶಾಂತಿ ಮತ್ತು ರೋಗಗಳಿಗೆ ಕಾರಣವಾಗುತ್ತದೆ. ಅಂಥಹ ಮನೆಗಳ ಜನರು ಎಂದಿಗೂ ಸಂತೋಷವಾಗಿರುವುದಿಲ್ಲ. ಮಾತ್ರವಲ್ಲ ಯಾವುದೇ ಕೆಲಸಕ್ಕೆ ಕೈ ಹಾಕಿದರೂ ಕೈ ಸುಟ್ಟುಕೊಳ್ಳುವುದೇ ವಿನಃ ಯಶಸ್ಸು ಇರುವುದಿಲ್ಲ.  

ಈ ಸ್ಥಳಗಳಲ್ಲಿ ಕಪ್ಪು ಬಣ್ಣವನ್ನು ಬಳಸುವುದು ಅತ್ಯಂತ ಅಶುಭ :
ವಾಸ್ತವವಾಗಿ, ಮನೆಯಲ್ಲಿ ಎಲ್ಲಿಯೂ ಕಪ್ಪು ಬಣ್ಣವನ್ನು ಬಳಸಬಾರದು.ಅದರಲ್ಲಿಯೂ ಕೆಲವು ಸ್ಥಳಗಳಲ್ಲಿ, ಕಪ್ಪು ಬಣ್ಣ ಬಳಿಯುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಇನ್ನು ಕಪ್ಪು ಬಣ್ಣ ಮಾತ್ರವಲ್ಲ ಗಾಢ ನೀಲಿ, ಗಾಢ ನೇರಳೆ ಇತ್ಯಾದಿ ಗಾಢ ಬಣ್ಣಗಳನ್ನು ಕೂಡಾ ಬಳಸಬಾರದು. 

ಇದನ್ನೂ ಓದಿ: Weekly Horoscope: ಫೆಬ್ರವರಿ ಎರಡನೇ ವಾರ ಮಾಲವ್ಯ ರಾಜಯೋಗ.. ಈ ರಾಶಿಯ ಅದೃಷ್ಟ ಬಾಗಿಲು ಓಪನ್‌, ಸಂಪತ್ತಿನ ಸುಧೆಯೇ ಹರಿಯಲಿದೆ!

ಮಕ್ಕಳ ಅಥವಾ ವಯಸ್ಕರ ಮಲಗುವ ಕೋಣೆಗಳಿಗೆ ಕಪ್ಪು ಬಣ್ಣ ಬಳಿಯಬೇಡಿ. ಇದು ಮಾನಸಿಕ ಸ್ಥಿತಿಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.

- ಅಧ್ಯಯನ ಕೊಠಡಿ ಅಥವಾ ಸ್ಟಡಿ ರೂಂಗೆ ಕಪ್ಪು ಬಣ್ಣ ಬಳಿಯುವುದರಿಂದ ಮಕ್ಕಳು ತಮ್ಮ ಅಧ್ಯಯನದತ್ತ ಗಮನಹರಿಸುವುದಿಲ್ಲ. ಅವನ ಮನಸ್ಸಿನಲ್ಲಿ ನಕಾರಾತ್ಮಕ ಆಲೋಚನೆಗಳು ಬರುತ್ತವೆ. ಇದು ಮಕ್ಕಳ ಮಾನಸಿಕ ಬೆಳವಣಿಗೆಯ ಮೇಲೂ ಪರಿಣಾಮ ಬೀರುತ್ತದೆ.

- ಅಡುಗೆಮನೆಯಲ್ಲಿಯೂ ಕಪ್ಪು ಬಣ್ಣವನ್ನು ಬಳಸಬಾರದು. ಹೆಚ್ಚಿನ ಮನೆಯಲ್ಲಿ ಅಡುಗೆ ಮನೆಯ ಸ್ಲಾಬ್ ನಲ್ಲಿ ಕಪ್ಪು ಬಣ್ವನ್ನು ಬಳಸುತ್ತಾರೆ.ಒಂದು ವೇಳೆ ಅಡುಗೆ ಮನೆಯ ಸ್ಲಾಬ್ ಕಪ್ಪು ಬಣ್ಣದ್ದಾಗಿದ್ದರೆ ಅದರ ದುಷ್ಪರಿಣಾಮಗಳನ್ನು ಕಡಿಮೆ ಮಾಡಲು ಗ್ಯಾಸ್ ಸ್ಟೌವ್ ಅಡಿಯಲ್ಲಿ ತಿಳಿ ಬಣ್ಣದ ಟೈಲ್ ಅನ್ನು ಇರಿಸಿ.

- ಪೂಜಾ ಕೋಣೆಗೆ ಕಪ್ಪು ಬಣ್ಣ ಬಳಿಯುವುದರಿಂದ ದೇವರು-ದೇವತೆಗಳು ಕೋಪಗೊಳ್ಳುತ್ತಾರೆ. ಪೂಜೆಯ ಫಲ ಯಾರಿಗೂ ಸಿಗುವುದಿಲ್ಲ.

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 

 

(ಸೂಚನೆ : ಇಲ್ಲಿ ಒದಗಿಸಲಾದ ಮಾಹಿತಿಯು ಜ್ಯೋತಿಷ್ಯ ನಂಬಿಕೆಗಳು, ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ಇದನ್ನು ZEE KANNADA ದೃಢೀಕರಿಸುವುದಿಲ್ಲ. )

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News