15ನೇ ಏರ್‌ ಶೋ ಹಿನ್ನೆಲೆ ಸಂಚಾರ ದಟ್ಟಣೆ : ಏರ್ಪೊರ್ಟ್ ಕಡೆಗೆ ಹೋಗುವ ಪ್ರಯಾಣಿಕರಿಗೆ ಪರ್ಯಾಯ ಮಾರ್ಗ ಸೂಚಿ

Bengaluru Aero Show : 15ನೇ ಏರ್‌ ಶೋಗೆ ಆರಂಭವಾಗಿದೆ. ವಾಯು ಪ್ರದರ್ಶನ ಹಿನ್ನೆಲೆ ಏರ್ಪೋರ್ಟ್‌ಗೆ ಹೋಗುವ ರಸ್ತೆ ಬಹುತೇಕ ಸಂಚಾರಿ ದಟ್ಟಣೆ ಅನುಭವಿಸುತ್ತಿದೆ.. ಇದರಿಂದಾಗಿ ಪ್ರಯಾಣಿಕರು ಗಂಟೆ ಗಟ್ಟಲೇ ಟ್ರಾಫಿಕ್‌ನಲ್ಲಿ ಕಾಯಬೇಕಾಗಿದ್ದು.. ಪರ್ಯಾಯವಾಗಿ ಈ ಕೆಳಗಿನ ಮಾರ್ಗಗಳನ್ನು ಬಳಸಬಹುದು..

Written by - Krishna N K | Last Updated : Feb 10, 2025, 11:29 AM IST
    • 15ನೇ ಬೆಂಗಳೂರು ಏರ್‌ ಶೋಗೆ ಆರಂಭವಾಗಿದೆ.
    • ಏರ್ಪೋರ್ಟ್‌ಗೆ ಹೋಗುವ ರಸ್ತೆ ಬಹುತೇಕ ಸಂಚಾರಿ ದಟ್ಟಣೆ
    • ಪರ್ಯಾಯವಾಗಿ ಈ ಕೆಳಗಿನ ಮಾರ್ಗಗಳನ್ನು ಬಳಸಬಹುದು..
15ನೇ ಏರ್‌ ಶೋ ಹಿನ್ನೆಲೆ ಸಂಚಾರ ದಟ್ಟಣೆ : ಏರ್ಪೊರ್ಟ್ ಕಡೆಗೆ ಹೋಗುವ ಪ್ರಯಾಣಿಕರಿಗೆ ಪರ್ಯಾಯ ಮಾರ್ಗ ಸೂಚಿ title=

Bengaluru Aero Show Updates : ಬೆಂಗಳೂರಿನ ಯಲಹಂಕದಲ್ಲಿ ಇಂದಿನಿಂದ ಏಷ್ಯಾದ ಅತಿದೊಡ್ಡ ವಾಯು ಪ್ರದರ್ಶನ ಏರ್‌ ಶೋ ಪ್ರಾರಂಭವಾಗಿದೆ. ನವ ಭಾರತದ ಮಿಲಿಟರಿ ಶಕ್ತಿ ಮತ್ತು ಸ್ವಾವಲಂಬನೆಯ ಒಂದು ನೋಟವನ್ನು ಜಗತ್ತು ವೀಕ್ಷಿಸಲಿದೆ. 15ನೇ ಏರ್‌ ಶೋಗೆ ಎಲ್ಲಾ ಸಿದ್ಧತೆಗಳು ಪೂರ್ಣಗೊಂಡಿದೆ. ಇದರ ನಡುವೆ ಏರ್ಪೋಟ್‌ ಕಡೆಗೆ ತೆರಳುತ್ತಿರುವ ಪ್ರಯಾಣಿಕರಿಗೆ ಕೆಲವೊಂದಿಷ್ಟು ಪರ್ಯಾಯ ಮಾರ್ಗಗಳು ಇಲ್ಲಿವೆ.. 

ಹೌದು.. 15ನೇ ಏರ್‌ ಶೋ ಈಗಾಗಲೇ ಆರಂಭವಾಗಿದೆ. ಭಾರತವು ತನ್ನ ಅತ್ಯಾಧುನಿಕ ಮಿಲಿಟರಿ ಉಪಕರಣಗಳನ್ನು ಪ್ರದರ್ಶಿಸುವ ಮೂಲಕ ಇಡೀ ಜಗತ್ತಿಗೆ ತನ್ನ ಶಕ್ತಿಯನ್ನು ತೋರಿಸಲು ಸನ್ನದ್ಧವಾಗಿದೆ. ಈ ವೈಮಾನಿಕ ಪ್ರದರ್ಶನವನ್ನು ವೀಕ್ಷಿಸಲು ಜನರು ಕುಟುಂಬ ಸಮೇತ ಏರ್ಪೋಟ್‌ಗೆ ಆಗಮಿಸುತ್ತಿದ್ದಾರೆ.. ಇದರಿಂದಾಗಿ ಏರ್ಪೋರ್ಟ್‌ ರಸ್ತೆ ಸಂಪೂರ್ಣ ಜಾಮ್‌ ಆಗಿದೆ.. ಅದಕ್ಕಾಗಿ ಕೆಲವೊಂದಿಷ್ಟು ಪರ್ಯಾಯ ಮಾರ್ಗಗಳು ಇಲ್ಲಿವೆ.

ಏರ್ಪೊರ್ಟ್ ಕಡೆಗೆ ಪರ್ಯಾಯ ಮಾರ್ಗ
1. ಕೆ.ಆರ್‌.ಪುರ ಕಡೆಯಿಂದ ಹೆಣ್ಣೂರು ಕ್ರಾಸ್‌- ಕೊತ್ತನೂರು- ಗುಬ್ಬಿ ಕ್ರಾಸ್‌- ಕಣ್ಣೂರು- ಬಾಗಲೂರು-ಮೈಲನಹಳ್ಳಿ- ಬೇಗೂರು-ನೈರುತ್ಯ ಪ್ರವೇಶ ದ್ವಾರದ ಮೂಲಕ ಏರ್ಪೋರ್ಟ್ ತಲುಪಬಹುದು

2. ಗೊರಗುಂಟೆಪಾಳ್ಯ‌ ಕಡೆಯಿಂದ ಬಿಇಎಲ್‌ ವೃತ್ತ, ಗಂಗಮ್ಮ ವೃತ್ತ, ಎಂ.ಎಸ್‌.ಪಾಳ್ಯ ಸರ್ಕಲ್‌, ಮದರ್‌ ಡೇರಿ, ಉಣ್ಣಿಕೃಷ್ಣನ್‌ ಜಂಕ್ಷನ್‌ ಎಡ ತಿರುವು, ದೊಡ್ಡಬಳ್ಳಾಪುರ ರಸ್ತೆ, ರಾಜಾನುಕುಂಟೆ, ಅದ್ದಿಗಾನಹಳ್ಳಿ, ತಿಮ್ಮಸಂದ್ರ, ಎಂವಿಐಟಿ ಕ್ರಾಸ್‌, ವಿದ್ಯಾನಗರ ಕ್ರಾಸ್‌ ಮೂಲಕ ಕೆಐಎಎಲ್

3. ಮೈಸೂರು ರಸ್ತೆ ಕಡೆಯಿಂದ ನಾಯಂಡಹಳ್ಳಿ, ಚಂದ್ರಾ ಲೇಔಟ್‌, ಗೊರಗುಂಟೆಪಾಳ್ಯ, ಬಿಇಎಲ್‌ ವೃತ್ತ, ಗಂಗಮ್ಮ ವೃತ್ತ, ಎಂ.ಎಸ್‌.ಪಾಳ್ಯ ಸರ್ಕಲ್, ಮದರ್‌ ಡೇರಿ ಜಂಕ್ಷನ್‌, ಉಣ್ಣಿಕೃಷ್ಣನ್‌ ಜಂಕ್ಷನ್‌ನಲ್ಲಿಎಡ ತಿರುವು, ದೊಡ್ಡಬಳ್ಳಾಪುರ ರಸ್ತೆ, ರಾಜಾನುಕುಂಟೆ, ಅದ್ದಿಗಾನಹಳ್ಳಿ, ಎಂವಿಐಟಿ ಕ್ರಾಸ್‌, ವಿದ್ಯಾನಗರ ಕ್ರಾಸ್‌ ಮೂಲಕ ಕೆಐಎಎಲ್‌ ತಲುಪಬಹುದು.

ಭಾರೀ ವಾಹನ ಸಂಚಾರಕ್ಕೆ ನಿರ್ಬಂಧ
1. ಬೆಂಗಳೂರು-ಬಳ್ಳಾರಿ ರಸ್ತೆಯಲ್ಲಿ ಮೇಖ್ರಿ ವೃತ್ತದಿಂದ ಎಂವಿಐಟಿ ಕ್ರಾಸ್‌ವರೆಗೆ 
2. ಗೊರಗುಂಟೆ ಪಾಳ್ಯದಿಂದ ಹೆಬ್ಬಾಳ ಮಾರ್ಗವಾಗಿ ಹೆಣ್ಣೂರು ಕ್ರಾಸ್‌ವರೆಗೆ 
3. ನಾಗವಾರ ಜಂಕ್ಷನ್‌ನಿಂದ ಥಣಿಸಂದ್ರ ಮುಖ್ಯ ರಸ್ತೆ ಮಾರ್ಗವಾಗಿ ಬಾಗಲೂರು ಮುಖ್ಯ ರಸ್ತೆ, ರೇವಾ ಕಾಲೇಜು ಜಂಕ್ಷನ್‌ವರೆಗೆ
4. ಹೆಸರಘಟ್ಟ ಮತ್ತು ಚಿಕ್ಕಬಾಣಾವರ ಕಡೆಯಿಂದ ಬೆಂಗಳೂರು ನಗರದ ಕಡೆಗೆ

ಪಾರ್ಕಿಂಗ್‌ಗೆ ನಿರ್ಬಂಧ
1. ನಾಗೇನಹಳ್ಳಿ ಗೇಟ್‌ನಿಂದ ಗಂಟಿಗಾನಹಳ್ಳಿ ಮಾರ್ಗ ಬಳ್ಳಾರಿ ರಸ್ತೆ ಸೇರುವ ಫೋರ್ಡ್‌ ಷೋ ರೂಂ ಕ್ರಾಸ್‌ವರೆಗೆ
2. ಬೆಂಗಳೂರು-ಬಳ್ಳಾರಿ ರಸ್ತೆಯ ಮೇಖ್ರಿ ಸರ್ಕಲ್‌ನಿಂದ ದೇವನಹಳ್ಳಿವರೆಗೆ
3. ಬಾಗಲೂರು ಕ್ರಾಸ್‌ ಜಂಕ್ಷನ್‌ನಿಂದ ಬಾಗಲೂರು ಮುಖ್ಯ ರಸ್ತೆ ಮಾರ್ಗವಾಗಿ ಸಾತನೂರುವರೆಗೆ
4. ನಾಗವಾರ ಜಂಕ್ಷನ್‌ನಿಂದ ಥಣಿಸಂದ್ರ ಮುಖ್ಯ ರಸ್ತೆ ಮಾರ್ಗವಾಗಿ ರೇವಾ ಕಾಲೇಜು ಜಂಕ್ಷನ್‌ವರೆಗೆ
5. ಎಫ್‌ಟಿಐ ಜಂಕ್ಷನ್‌ನಿಂದ ಹೆಣ್ಣೂರು ಕ್ರಾಸ್‌ ಜಂಕ್ಷನ್‌ವರೆಗೆ
6. ಹೆಣ್ಣೂರು ಕ್ರಾಸ್‌ನಿಂದ ಬೇಗೂರು ಬ್ಯಾಕ್‌ ಗೇಟ್‌ವರೆಗೆ
7. ನಾಗೇನಹಳ್ಳಿ ಗೇಟ್‌ ಜಂಕ್ಷನ್‌ನಿಂದ ಯಲಹಂಕ ಸರ್ಕಲ್‌ವರೆಗೆ
8. ಎಂವಿಐಟಿ ಕ್ರಾಸ್‌ನಿಂದ ನಾರಾಯಣಪುರ ರೈಲ್ವೆ ಕ್ರಾಸ್‌ವರೆಗೆ
9. ಕೋಗಿಲು ಕ್ರಾಸ್‌ ಜಂಕ್ಷನ್‌ನಿಂದ ಕಣ್ಣೂರು ಜಂಕ್ಷನ್‌ವರೆಗೆ
10. ಮತ್ತಿಕೆರೆ ಕ್ರಾಸ್‌ನಿಂದ ದೊಡ್ಡಬಳ್ಳಾಪುರ ಮುಖ್ಯ ರಸ್ತೆಯ ಉನ್ನಿ ಕೃಷ್ಣನ್‌ ಜಂಕ್ಷನ್‌ವರೆಗೆ
11. ಜಾಲಹಳ್ಳಿ ಕ್ರಾಸ್‌ ಜಂಕ್ಷನ್‌ನಿಂದ ಗಂಗಮ್ಮ ಸರ್ಕಲ್‌ ಜಂಕ್ಷನ್‌ವರೆಗೆ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News