ಸೀರಿಯಲ್‌ ಮಾಡುವಾಗ 750 ರೂ. ಸಂಭಾವನೆ ಪಡೆಯುತ್ತಿದ್ದ ಡಿಂಪಲ್‌ ಕ್ವೀನ್‌ ರಚಿತಾ ರಾಮ್‌... ಈಗ ಸಿನಿಮಾವೊಂದಕ್ಕೆ ಪಡೆಯುವ ಹಣ ಎಷ್ಟು?

Rachita Ram remuneration: ಡಿಂಪಲ್‌ ಕ್ವೀನ್‌ ರಚಿತಾ ರಾಮ್ ಕನ್ನಡ ಪ್ರಖ್ಯಾತ ನಟಿ. ಒಂದು ದಕ್ಷಿಣ ಫಿಲ್ಮ್‌ಫೇರ್ ಪ್ರಶಸ್ತಿ ಮತ್ತು ಮೂರು ದಕ್ಷಿಣ ಭಾರತೀಯ ಅಂತರರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ಸೇರಿದಂತೆ ವಿವಿಧ ಪುರಸ್ಕಾರಗಳನ್ನು ಪಡೆದಿರುವ ಈ ಚೆಲುವೆ ಸಿನಿರಂಗಕ್ಕೆ ಪರಿಚಯವಾಗುವ ಮುನ್ನ ಧಾರಾವಾಗಿಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಂಡಿದ್ದರು.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

 

1 /5

ಡಿಂಪಲ್‌ ಕ್ವೀನ್‌ ರಚಿತಾ ರಾಮ್ ಕನ್ನಡ ಪ್ರಖ್ಯಾತ ನಟಿ. ಒಂದು ದಕ್ಷಿಣ ಫಿಲ್ಮ್‌ಫೇರ್ ಪ್ರಶಸ್ತಿ ಮತ್ತು ಮೂರು ದಕ್ಷಿಣ ಭಾರತೀಯ ಅಂತರರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ಸೇರಿದಂತೆ ವಿವಿಧ ಪುರಸ್ಕಾರಗಳನ್ನು ಪಡೆದಿರುವ ಈ ಚೆಲುವೆ ಸಿನಿರಂಗಕ್ಕೆ ಪರಿಚಯವಾಗುವ ಮುನ್ನ ಧಾರಾವಾಗಿಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಂಡಿದ್ದರು.  

2 /5

ವಿವಿಧ ದೂರದರ್ಶನ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡ ನಂತರ, 2013 ರಲ್ಲಿ ತೆರೆಕಂಡ ಬುಲ್‌ ಬುಲ್‌ ಚಿತ್ರದ ಮೂಲಕ ಪಾದಾರ್ಪಣೆ ಮಾಡಿದರು. ಇದೇ ಸಿನಿಮಾದ ಮನೋಜ್ಞ ಅಭಿನಯಕ್ಕೆ ಅವರು ಕನ್ನಡದ ಅತ್ಯುತ್ತಮ ನಟಿ ಎಂದು ಫಿಲ್ಮ್‌ಫೇರ್ ಪ್ರಶಸ್ತಿಯನ್ನು ಪಡೆದರು. ಆ ನಂತರ ರನ್ನ (2015) ಚಿತ್ರದ ಅಭಿನಯಕ್ಕಾಗಿ ಫಿಲ್ಮ್‌ಫೇರ್ ವಿಮರ್ಶಕರ ಪ್ರಶಸ್ತಿಯನ್ನು ಗೆದ್ದರು.  

3 /5

ಚಕ್ರವ್ಯೂಹ (2016), ಪುಷ್ಪಕ ವಿಮಾನ (2017), ಭರ್ಜರಿ (2017), ಅಯೋಗ್ಯ (2018), ಸೀತಾರಾಮ ಕಲ್ಯಾಣ (2019), ನಟಸಾರ್ವಭೌಮ (2019), ಆಯುಷ್ಮಾನ್ ಭವ (2019)ನಂತಹ ಯಶಸ್ವಿ ಚಿತ್ರಗಳ ಮೂಲಕ ರಚಿತಾ ಕನ್ನಡದ ಪ್ರಮುಖ ನಟಿಯಾಗಿ ಗುರುತಿಸಿಕೊಂಡರು. ರನ್ನ, ಅಯೋಗ್ಯ ಮತ್ತು ಆಯುಷ್ಮಾನ್ ಭವ ಸಿನಿಮಾಗಾಗಿ ಮೂರು SIIMA ಪ್ರಶಸ್ತಿಯನ್ನು ಗೆದ್ದಿದ್ದಾರೆ.  

4 /5

ಅಂದಹಾಗೆ ರಚಿತಾ ಅವರು ತರಬೇತಿ ಪಡೆದ ಶಾಸ್ತ್ರೀಯ ಭರತ ನಾಟ್ಯ ನೃತ್ಯಗಾರ್ತಿಯಾಗಿದ್ದು, 50 ಕ್ಕೂ ಹೆಚ್ಚು ಪ್ರದರ್ಶನಗಳನ್ನು ನೀಡಿದ್ದಾರೆ. ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿದ್ದ ರಚಿತಾ ರಾಮ್‌, ತಮ್ಮ 12 ವರ್ಷಗಳ ಸಿನಿಜರ್ನಿಯ ಬಗ್ಗೆ ಮಾತನಾಡಿದ್ದರು. ಅಷ್ಟೇ ಅಲ್ಲದೆ, ಸಿನಿಮಾ ಸಂಭಾವನೆ ಬಗ್ಗೆಯೂ ಮಾತನಾಡಿದ್ದಾರೆ.  

5 /5

ಆರಂಭದ ಸಿನಿಮಾ ಸಂಭಾವನೆಯಿಂದ ಒಂದು ಕೋಟಿ ಸಂಭಾವನೆ ಪಡೆಯುವವರೆಗಿನ ಜರ್ನಿಯ ಬಗ್ಗೆ ಮಾತನಾಡುವಂತೆ ಪತ್ರಕರ್ತ ಕೇಳಿಕೊಂಡಾಗ ಪ್ರತಿಕ್ರಿಯಿಸಿದ ನಟಿ, "ನಾನು ಸಿನಿಮಾ ರಂಗಕ್ಕೆ ಬರುವ ಮೊದಲು ಸೀರಿಯಲ್‌ನಲ್ಲಿ ಅಭಿನಯಿಸುತ್ತಿದ್ದೆ. ಆಗ ನನ್ನ ದಿನದ ಸಂಭಾವನೆ 750 ರೂ. ಈ ಕ್ಷೇತ್ರದಲ್ಲಿ ನನ್ನ ಜರ್ನಿ ಅದ್ಭುತವಾಗಿತ್ತು. ಪ್ರತಿಯೊಬ್ಬರ ಜೀವನದಂತೆ ಏರಿಳಿತಗಳಿತ್ತು. ಸಿನಿಮಾಗಳು ಯಶಸ್ವಿಯಾಗಿದ್ದನ್ನೂ ನೋಡಿದ್ದೇನೆ, ಸೋತಿದ್ದನ್ನೂ ನೋಡಿದ್ದೇನೆ. ದೇವರ ದಯೆಯಿಂದ ಎಲ್ಲವೂ ಚೆನ್ನಾಗಿದೆ. ಒಳ್ಳೆದಾದರೂ ಸರಿ, ಕೆಟ್ಟದಾದರೂ ಸರಿ ಭಗವಂತ ಎಲ್ಲವನ್ನೂ ಸ್ವೀಕರಿಸುವ ಶಕ್ತಿ ಕೊಟ್ಟಿದ್ದಾನೆ" ಎಂದು ಹೇಳಿದ್ದಾರೆ.