White hair treatment tips : ನಿಮ್ಮ ತಲೆಯಲ್ಲಿ ಹೆಚ್ಚಿನ ಕೂದಲು ಬಿಳಿಯಾಗಲು ಪ್ರಾರಂಭಿಸಿದರೆ ಚಿಂತೆ ಮಾಡಬೇಡಿ.. ಅವು ಇವು ಅಂತ ರಾಸಾಯನಿಕ ಪ್ರಾಡಕ್ಟ್ ಬಿಟ್ಟು ಬಿಡಿ.. ಜಸ್ಟ್ ಈ ವಸ್ತುಗಳನ್ನು ಸಾಸಿವೆ ಎಣ್ಣೆಯೊಂದಿಗೆ ಬೆರೆಸಿ ಕೂದಲಿಗೆ ಹಚ್ಚಲು ಪ್ರಾರಂಭಿಸಿ. ಬಿಳಿ ಕೂದಲು ಬೇರುಗಳಿಂದ ಕಪ್ಪಾಗುತ್ತದೆ..
ಚಿಕ್ಕ ವಯಸ್ಸಿನಲ್ಲಿಯೇ ತಲೆ ಕೂದಲು ಬಿಳಿಯಾಗಲು ಪ್ರಾರಂಭಿಸಿದರೆ, ಅಂದ ಕೆಡುವುದರ ಜೊತೆಗೆ ಚಿಂತೆಗೆ ಕಾರಣವಾಗುತ್ತದೆ. ಕೂದಲು ಬಿಳಿಯಾಗಲು ಹಲವು ಕಾರಣಗಳಿವೆ. ರಾಸಾಯನಿಕಯುಕ್ತ ಉತ್ಪನ್ನಗಳ ಬಳಕೆ, ಕಳಪೆ ಜೀವನಶೈಲಿ ಮತ್ತು ಒತ್ತಡದಿಂದಾಗಿ ಕೂದಲು ಬಿಳಿಯಾಗಬಹುದು.
ಇಂದು ನೀವು ಮನೆಯಲ್ಲಿ ಸುಲಭವಾಗಿ ತಯಾರಿಸಬಹುದಾದ ಒಂದು ವಿಶೇಷ ಎಣ್ಣೆಯ ಬಗ್ಗೆ ಇಂದು ತಿಳಿಯೋಣ.. ಈ ಎಣ್ಣೆಯನ್ನು ನಿಯಮಿತವಾಗಿ ಬಳಸುವುದರಿಂದ ನಿಮ್ಮ ಬಿಳಿ ಕೂದಲು ಬುಡದಿಂದ ಕಪ್ಪಾಗಲು ಪ್ರಾರಂಭಿಸುತ್ತವೆ. ಜೊತೆಗೆ ಪೋಷಣೆ ದೊರೆಯುತ್ತದೆ ಮತ್ತು ಕೂದಲಿನ ಬೆಳವಣಿಗೆಯೂ ಹೆಚ್ಚಾಗುತ್ತದೆ.
ನಿಮ್ಮ ಕೂದಲು ಬಿಳಿಯಾಗಲು ಪ್ರಾರಂಭಿಸಿದರೆ.. ಅವು ಮತ್ತೆ ಕಪ್ಪಾಗಲು ಸಾಸಿವೆ ಎಣ್ಣೆ ಉತ್ತಮ ಔಷಧಿ. ಸಾಸಿವೆ ಎಣ್ಣೆಯಲ್ಲಿ 3 ವಸ್ತುಗಳನ್ನು ಬೆರೆಸಿ ನಿಮ್ಮ ನೆತ್ತಿಗೆ ನಿಯಮಿತವಾಗಿ ಹಚ್ಚಿದರೆ ಕೂದಲು ನೈಸರ್ಗಿಕವಾಗಿ ಕಪ್ಪಾಗುವುದರ ಜೊತೆಗೆ ದೃಢವಾಗಿ ಬೆಳೆಯುತ್ತವೆ..
ಕೂದಲು ಕಪ್ಪಾಗಿಸುವ ಎಣ್ಣೆಯನ್ನು ತಯಾರಿಸಲು ಬೇಕಾಗುವ ಪದಾರ್ಥಗಳು : ಒಂದು ಬಟ್ಟಲು ಸಾಸಿವೆ ಎಣ್ಣೆ, ಒಂದು ಚಮಚ ಮೆಂತ್ಯ ಬೀಜ, ಒಂದು ಚಮಚ ಕಲೋಂಜಿ, ಒಂದು ಚಮಚ ಆಮ್ಲಾ ಪುಡಿ,
ತಯಾರಿಸುವ ವಿಧಾನ : ಮೊದಲಿಗೆ, ಸಾಸಿವೆ ಎಣ್ಣೆಯನ್ನು ಪಾತ್ರೆಯಲ್ಲಿ ಬಿಸಿ ಮಾಡಿ. ಎಣ್ಣೆ ಬಿಸಿಯಾದ ನಂತರ, ಆಮ್ಲಾ ಪುಡಿ, ಮೆಂತ್ಯ ಬೀಜಗಳು ಮತ್ತು ಕಲೋಂಜಿ ಸೇರಿಸಿ 10 ರಿಂದ 15 ನಿಮಿಷ ಬೇಯಿಸಿ. ಎಣ್ಣೆ ಕಪ್ಪು ಬಣ್ಣಕ್ಕೆ ತಿರುಗಿದಾಗ, ಗ್ಯಾಸ್ ಆಫ್ ಮಾಡಿ. ಈ ಮಿಶ್ರಣವನ್ನು ಪಾತ್ರೆಯಲ್ಲಿ 24 ಗಂಟೆಗಳ ಕಾಲ ಇರಿಸಿ. ಈ ಮಿಶ್ರಣವನ್ನು 24 ಗಂಟೆಗಳ ನಂತರ ಸೋಸಿಕೊಂಡು.. ನಂತರ ಆ ಎಣ್ಣೆಯನ್ನು ನೆತ್ತಿಗೆ ಚೆನ್ನಾಗಿ ಹಚ್ಚಿ.
ಎಣ್ಣೆ ಹಚ್ಚಿದ ನಂತರ, 10 ನಿಮಿಷಗಳ ಕಾಲ ನಿಧಾನವಾಗಿ ಮಸಾಜ್ ಮಾಡಿ. ಈ ಎಣ್ಣೆಯನ್ನು ನಿಮ್ಮ ತಲೆಯ ಮೇಲೆ ಕನಿಷ್ಠ ಎರಡು ಗಂಟೆಗಳ ಕಾಲ ಅಥವಾ ರಾತ್ರಿಯಿಡೀ ಇರಿಸಿ. ಮರುದಿನ, ನಿಮ್ಮ ಕೂದಲನ್ನು ಸೌಮ್ಯವಾದ ಶಾಂಪೂ ಬಳಸಿ ತೊಳೆಯಿರಿ. ಈ ಎಣ್ಣೆಯನ್ನು ವಾರಕ್ಕೆ 3 ಬಾರಿ ಹಚ್ಚಿದರೆ ನಿಮ್ಮ ಬಿಳಿ ಕೂದಲು ಕ್ರಮೇಣ ಕಪ್ಪಾಗುತ್ತದೆ. (ಸೂಚನೆ: ಇಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. Zee Kannada News ಇದನ್ನು ದೃಢೀಕರಿಸುವುದಿಲ್ಲ.)