Sleepless man Thai nok : ಒಬ್ಬ ಮನುಷ್ಯ ಎಷ್ಟು ದಿನ ನಿದ್ದೆ ಮಾಡದೆ ಇರಬಹುದು..? ಬಹುಶಃ ಎರಡು ದಿನಗಳು, ಅಬ್ಬಬ್ಬಾ ಅಂದ್ರೆ ಮೂರು ದಿನ.. ಅದಕ್ಕಿಂತ ಹೆಚ್ಚು ಕಾಲ ನಿದ್ರೆ ಮಾಡದೇ ಇರಲು ಆಗಲ್ಲ.. ಆದರೆ ಈ ವರದಿಯಲ್ಲಿ ನಾವು ಎರಡು.. ಮೂರು ದಿನಗಳು ಅಲ್ಲ, ಒಂದು ವಾರವೂ ಅಲ್ಲ.. ತಿಂಗಳಂತು ಅಲ್ಲವೇ ಅಲ್ಲ.. ಸದ್ಯ ನಾವು 63 ವರ್ಷಗಳಿಂದ ನಿದ್ದೆ ಮಾಡದೇ ಇರುವ ವ್ಯಕ್ತಿಯ ಬಗ್ಗೆ ನೋಡೋಣ...
ಹೌದು, ನೀವು ಸರಿಯಾಗಿ ಕೇಳಿದ್ದೀರಿ, ಈ ಮನುಷ್ಯ 63 ವರ್ಷಗಳಿಂದ ನಿದ್ದೆ ಮಾಡಿಲ್ಲ. ಈತ ಪ್ರತಿದಿನ ನಿದ್ದೆ ಮಾಡದೆ ಕೆಲಸ ಮಾಡುತ್ತಿದ್ದಾನೆ.. ಅಚ್ಚರಿ ವಿಷಯ ಅಂದ್ರೆ ಇನ್ನೂ ಆರೋಗ್ಯವಾಗಿದ್ದಾನೆ. ಸುಮಾರು 81 ವರ್ಷ ವಯಸ್ಸಿನ ಈ ವ್ಯಕ್ತಿ ವೃತ್ತಿಯಲ್ಲಿ ರೈತ. ಇವರು ಕೊನೆಯ ಬಾರಿಗೆ ನಿದ್ರಿಸಿದಾಗ ಇವರಿಗೆ 17 ವರ್ಷ ವಯಸ್ಸಾಗಿತ್ತು.. ಅಂದಿನಿಂದ ಇಂದಿನ ವರೆಗೆ ನಿದ್ದೆ ಮಾಡಿಲ್ಲ.
ಇದನ್ನೂ ಓದಿ:ವಿದ್ಯಾರ್ಥಿಗಳೇ ಗುಡ್ ನ್ಯೂಸ್... ಫೆಬ್ರವರಿ 14 ರಂದು ಈ ಎಲ್ಲಾ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ: ಕಾರಣವೇನು?
ಈ ಹಿಂದೆ ಈ ರೈತ ಮಲೇರಿಯಾ ಸೋಂಕಿಗೆ ಒಳಗಾಗಿದ್ದನಂತೆ.. ಆಗ ಅವನಿಗೆ ನಿದ್ರಾಹೀನತೆ ಎದುರಾಯಿತಂತೆ... ಅನೇಕ ವೈದ್ಯರ ಬಳಿ ಹೋದರೂ, ಔಷಧಿ ತೆಗೆದುಕೊಂಡರೂ, ಯಾವುದೇ ಪ್ರಯೋಜನವಾಗಲಿಲ್ಲ. ಈ ವ್ಯಕ್ತಿ ವಿಯೆಟ್ನಾಂನ ಎಂಬತ್ತರ ಹರೆಯದ ಥಾಯ್ ನೋಕ್.
ಈ ವಯಸ್ಸಿನಲ್ಲೂ ಸಹ ಇವರಿಗೆ ಇನ್ನೂ ನಿದ್ದೆ ಬರುತ್ತಿಲ್ಲ. ಆದರೂ ಅವರು ಸಂಪೂರ್ಣವಾಗಿ ಆರೋಗ್ಯವಾಗಿದ್ದಾರೆ. ನೋಕ್ ಇನ್ನೂ 50 ಕೆಜಿ ತೂಕದ ಚೀಲವನ್ನು ಬೆನ್ನಿನ ಮೇಲೆ ಹೊತ್ತುಕೊಂಡು ಸುಮಾರು 4 ಕಿ.ಮೀ ನಡೆಯಬಲ್ಲರು. ಅವರು ದಣಿದಿದ್ದನ್ನು ನಾನು ಇನ್ನೂ ನೋಡಿಲ್ಲ ಅಂತಾರೆ.. ಕುಟುಂಬಸ್ಥರು..
ಇದನ್ನೂ ಓದಿ:ಗಡ್ಡ ಬಿಟ್ಟ ಪುರುಷರನ್ನೇ ಹುಡುಗಿಯರು ಏಕೆ ಇಷ್ಟಪಡ್ತಾರೆ ಗೊತ್ತೆ..? ಶಾಕಿಂಗ್ ವರದಿ ಬಹಿರಂಗ..
1962 ರ ವಿಯೆಟ್ನಾಂ ಯುದ್ಧದ ನಂತರ ಥಾಯ್ ನೋಕ್ ನಂತರದ ಆಘಾತಕಾರಿ ಒತ್ತಡದ ಅಸ್ವಸ್ಥತೆಯಿಂದ ಬಳಲುತ್ತಿದ್ದರು ಎಂದು ಹಲವರು ಹೇಳುತ್ತಾರೆ. ಆದರೂ, ಇನ್ನೂ ಯಾವುದೇ ಸ್ಪಷ್ಟ ಮಾಹಿತಿ ಲಭ್ಯಸಿಲ್ಲ. ಆದರೆ ಒಬ್ಬ ವ್ಯಕ್ತಿಯು 63 ವರ್ಷಗಳ ಕಾಲ ನಿದ್ದೆ ಮಾಡದೆ ಹೇಗೆ ಆರೋಗ್ಯವಾಗಿರಲು ಸಾಧ್ಯ ಎಂದು ವೈದ್ಯರು ಕೂಡ ಆಶ್ಚರ್ಯ ಪಡುತ್ತಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ