ತ್ರಿವೇಣಿ ಸಂಗಮದಲ್ಲಿ ಮೋದಿ ಪವಿತ್ರ ಸ್ನಾನ..! ವಿಶೇಷ ಪೂಜೆ ಸಲ್ಲಿಸಿದ ಪ್ರಧಾನಿ.. ಚಿತ್ರಗಳು ಇಲ್ಲಿವೆ..

PM Modi: ಪ್ರಯಾಗ್‌ರಾಜ್‌ನಲ್ಲಿ ಮಹಾಕುಂಭಮೇಳ ಅದ್ಧೂರಿಯಾಗಿ ಜರುಗುತ್ತಿದೆ. ಇಂದು ಪ್ರಧಾನಿ ನರೇಂದ್ರ ಮೋದಿ ತ್ರಿವೇಣಿ ಸಂಗಮಕ್ಕೆ ಭೇಟಿ ನೀಡಿ ಪವಿತ್ರ ಸ್ನಾನ ಮಾಡಿದರು. ಯುಪಿ ಸಿಎಂ ಯೋಗಿ ಆದಿತ್ಯನಾಥ್ ಅವರೊಂದಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿದರು.. ಈ ಕುರಿತು ಫೋಟೋಸ್‌ ಇಲ್ಲಿವೆ ನೋಡಿ..
 

1 /7

ಪ್ರಧಾನಿ ನರೇಂದ್ರ ಮೋದಿ ಅವರು ಮಹಾಕುಂಭಮೇಳ ನಡೆಯುತ್ತಿರುವ ತ್ರಿವೇಣಿ ಸಂಗಮಕ್ಕೆ ಭೇಟಿ ನೀಡಿದರು.   

2 /7

ಬುಧವಾರ ಬೆಳಿಗ್ಗೆ 11 ಗಂಟೆಗೆ ಪ್ರಯಾಗ್‌ರಾಜ್‌ಗೆ ಆಗಮಿಸಿದ ಪ್ರಧಾನಿಯವರನ್ನು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಭವ್ಯವಾಗಿ ಸ್ವಾಗತಿಸಿದರು.   

3 /7

ಪ್ರಧಾನಿ ಮೋದಿ ಮತ್ತು ಸಿಎಂ ಯೋಗಿ ಪವಿತ್ರ ತ್ರಿವೇಣಿ ಸಂಗಮದಲ್ಲಿ ದೋಣಿಯಲ್ಲಿ ಒಟ್ಟಿಗೆ ಪ್ರಯಾಣ ಬೆಳೆಸಿದರು. ನಂತರ ಪವಿತ್ರ ಸ್ನಾನ ಮಾಡಿದರು.   

4 /7

ಬೆಳಿಗ್ಗೆ ಪ್ರಯಾಗ್‌ರಾಜ್‌ಗೆ ಆಗಮಿಸಿದ ಪ್ರಧಾನಿ, ಯುಪಿ ಸಿಎಂ ಯೋಗಿ ಆದಿತ್ಯನಾಥ್ ಅವರೊಂದಿಗೆ ತ್ರಿವೇಣಿ ಸಂಗಮಕ್ಕೆ ತೆರಳಿದರು. ಅರೈಲ್ ಘಾಟ್ ನಿಂದ ದೋಣಿಯ ಮೂಲಕ ಸಂಗಮ್ ಘಾಟ್ ತಲುಪಿದರು.   

5 /7

ಈ ಸಮಯದಲ್ಲಿ ಪ್ರಧಾನಿಯವರು ಮಹಾಕುಂಭಮೇಳ ಪ್ರದೇಶದ ಬಗ್ಗೆ ಸಿಎಂ ಯೋಗಿ ಅವರಿಂದ ಮಾಹಿತಿಯನ್ನು ತಿಳಿದುಕೊಂಡರು. ಅದಾದ ನಂತರ ಸಂಗಮ್ ಘಾಟ್‌ನಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು..   

6 /7

ಪ್ರಧಾನಿ ಮೋದಿ ಕೈಯಲ್ಲಿ ರುದ್ರಾಕ್ಷಿ ಜಪಮಾಲೆ ಹಿಡಿದು ಮಂತ್ರಗಳನ್ನು ಪಠಿಸುತ್ತಾ ಸಂಗಮದಲ್ಲಿ ಮಿಂದೆದ್ದ ಫೋಟೋಸ್‌ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿವೆ.  

7 /7

ಪ್ರಯಾಗ್‌ರಾಜ್‌ನಲ್ಲಿ ಜನವರಿ 13 ರಂದು ಪುಷ್ ಪೂರ್ಣಿಮೆಯ ದಿನದಂದು ಮಹಾಕುಂಭಮೇಳ ಪ್ರಾರಂಭವಾಯಿತು. ಫೆಬ್ರವರಿ 26 ರಂದು ಮಹಾಶಿವರಾತ್ರಿಯವರೆಗೆ ಮುಂದುವರೆಯಲಿದೆ.