Heart Disease: ಹೃದ್ರೋಗಗಳು ಕೆಲವೊಮ್ಮೆ ನಮ್ಮ ಜೀವಕ್ಕೆ ಮಾರಣಾಂತಿಕವಾಗುತ್ತದೆ. ಹೀಗಾಗಿ ಅಪಾಯ ಸಂಭವಿಸುವ ಮೊದಲೇ ಅವುಗಳನ್ನು ಪತ್ತೆಹಚ್ಚುವುದು ತುಂಬಾ ಮುಖ್ಯ. ಇಲ್ಲದಿದ್ದರೆ ಅವು ನಮ್ಮ ಜೀವವನ್ನೇ ಅಪಾಯಕ್ಕೆ ಒಡ್ಡುವ ಸಾಧ್ಯತೆ ಇರುತ್ತದೆ. ಕೇವಲ ಒಂದೇ ಒಂದು ಟೆಸ್ಟ್‌ನಿಂದ ನೀವು ಹೃದ್ರೋಗಗಳನ್ನು ಪತ್ತೆಹಚ್ಚಬಹುದು.
Troponin T Test For Heart: ಭಾರತದಲ್ಲಿ ಹೃದ್ರೋಗದಿಂದ ಬಳಲುತ್ತಿರುವವರ ಸಂಖ್ಯೆ ದಿನನಿಂದ ದಿನಕ್ಕೆ ಹೆಚ್ಚಾಗುತ್ತಲಿದೆ. ಇದಕ್ಕೆ ಬದಲಾದ ಜೀವನಶೈಲಿ ಮತ್ತು ಕೆಟ್ಟ ಆಹಾರ ಪದ್ಧತಿಯೇ ಪ್ರಮುಖ ಕಾರಣ. ಸಾಕಷ್ಟು ಒತ್ತಡದಿಂದ ಕೂಡಿದ ಜೀವನಶೈಲಿಗೆ ಎಣ್ಣೆಯುಕ್ತ ಆಹಾರ ಸೇವನೆಯು ಉರಿಯುತ್ತಿರುವ ಬೆಂಕಿಗೆ ತುಪ್ಪ ಸುರಿದಂತೆ. ಇದು ರಕ್ತದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಮಟ್ಟ ಹೆಚ್ಚಳಕ್ಕೆ ಕಾರಣವಾಗುತ್ತಿದೆ. ಇದರ ಜೊತೆಗೆ ಅಧಿಕ ರಕ್ತದೊತ್ತಡವನ್ನು ಉಂಟು ಮಾಡುತ್ತಿದೆ. ಇವುಗಳಿಂದ ಹೃದಯಾಘಾತ, ಕೊರೋನರಿ ಆರ್ಟರಿ ಡಿಸೀಜ್ ಹಾಗೂ ಟ್ರಿಪಲ್ ವೆಸಲ್ ಡಿಸೀಜ್‌ನಂತಹ ಹೃದ್ರೋಗ ಕಾಯಿಲೆಗಳ ಅಪಾಯ ಎದುರಾಗುತ್ತಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.
ನೀವೂ ಸಹ ಒಂದು ವೇಳೆ ಹೃದಯಾಘಾತದ ಅಪಾಯ ತಪ್ಪಿಸಲು ಬಯಸುತ್ತಿದ್ದರೆ, ಇದಕ್ಕಾಗಿ ಟ್ರೋಪೋನಿನ್ ಟಿ ಪರೀಕ್ಷೆ ಎಂದು ಕರೆಯಲ್ಪಡುವ ವಿಶೇಷ ರೀತಿಯ ರಕ್ತ ಪರೀಕ್ಷೆಗೆ ಒಳಗಾಗುವುದು ತುಂಬಾ ಅವಶ್ಯಕ. ಹೃದಯ ಸಂಬಂಧಿ ಕಾಯಿಲೆಗಳನ್ನು ಪತ್ತೆಹಚ್ಚಲು ಇದು ಅತ್ಯಂತ ಪರಿಣಾಮಕಾರಿ ಪರೀಕ್ಷೆಯಾಗಿದೆ. ಇದು ರಕ್ತದಲ್ಲಿ ಇರುವ ಟ್ರೋಪೋನಿನ್ ಮಟ್ಟವನ್ನು ತೋರಿಸುತ್ತದೆ. ಟ್ರೋಪೋನಿನ್ ವಾಸ್ತವದಲ್ಲಿ ಹೃದಯದ ಸ್ನಾಯುಗಳಲ್ಲಿರುವ ಒಂದು ರೀತಿಯ ಪ್ರೋಟೀನ್ ಆಗಿದೆ, ಇದರ ಮಟ್ಟವು ಹೆಚ್ಚಾಗಿದ್ದರೆ ಹೃದಯ ಸ್ನಾಯುಗಳಿಗೆ ಹಾನಿಯಾಗುತ್ತದೆ.
ದೇಹದಲ್ಲಿ ಕೆಲವು ಅಪಾಯಕಾರಿ ರೋಗಲಕ್ಷಣಗಳನ್ನು ಕಂಡುಬರಲು ಆರಂಭಿಸಿದರೆ ಈ ಪರೀಕ್ಷೆ ಮಾಡಿಸಬೇಕು. ಎದೆ ನೋವು, ತಲೆತಿರುಗುವಿಕೆ, ನೋಯುತ್ತಿರುವ ಗಂಟಲು, ದವಡೆ ನೋವು, ಚಡಪಡಿಕೆ, ಅತಿಯಾದ ಬೆವರುವಿಕೆ, ವಾಂತಿ ಮತ್ತು ಅತಿಯಾದ ಆಯಾಸ ಕಾಣಿಸಿಕೊಳ್ಳಲು ಆರಂಭಿಸಿದರೆ ನೀವು ಟ್ರೋಪೋನಿನ್ ಟಿ ಪರೀಕ್ಷೆ ಮಾಡಿಸಬೇಕು. ಈ ರೋಗ ಲಕ್ಷಣಗಳನ್ನು ನಿರ್ಲಕ್ಷಿಸುವುದು ಅಪಾಯವನ್ನು ಮೈಮೇಲೆ ಎಳೆದುಕೊಂಡಂತೆ. ಇಂತಹ ಪರಿಸ್ಥಿತಿಯಲ್ಲಿ ಪರೀಕ್ಷೆಗೆ ಒಳಗಾಗುವ ಮೂಲಕ ನೀವು ಭವಿಷ್ಯದ ಸಮಸ್ಯೆಗಳಿಂದ ನಿಮ್ಮನ್ನು ರಕ್ಷಿಸಿಕೊಳ್ಳಬಹುದು.
ಟ್ರೋಪೋನಿನ್ ಟಿ ಪರೀಕ್ಷೆಯು ಒಂದು ರೀತಿಯ ರಕ್ತ ಪರೀಕ್ಷೆಯಾಗಿದ್ದು, ಇದರ ಮೂಲಕ ದೇಹದಲ್ಲಿ ಸೋಡಿಯಂ, ಕ್ರಿಯೇಟಿನೈನ್ ಮತ್ತು ಪೊಟ್ಯಾಸಿಯಂಅನ್ನು ಕಂಡುಹಿಡಿಯಲಾಗುತ್ತದೆ. ಇವುಗಳಲ್ಲಿ ಯಾವುದಾದರೂ ಪ್ರಮಾಣ ಹೆಚ್ಚಾದರೆ ಅದು ಹೃದಯಾಘಾತಕ್ಕೆ ಕಾರಣವಾಗಬಹುದು. ಇದರಲ್ಲಿ ಕೈಯ ಅಭಿಧಮನಿಯೊಳಗೆ ಸೂಜಿಯನ್ನು ಸೇರಿಸುವ ಮೂಲಕ ರಕ್ತದ ಮಾದರಿಯನ್ನು ತೆಗೆದುಕೊಳ್ಳಲಾಗುತ್ತದೆ. ಈ ಪರೀಕ್ಷೆಯ ಮೂಲಕ ವಿಶ್ವದಾದ್ಯಂತ ರೋಗಿಗಳು ಸಾಕಷ್ಟು ಪ್ರಯೋಜನ ಪಡೆಯುತ್ತಿದ್ದಾರೆ. ನೀವೂ ಸಹ ಟ್ರೋಪೋನಿನ್ ಟಿ ಪರೀಕ್ಷೆಯನ್ನು ಸಮಯಕ್ಕೆ ಸರಿಯಾಗಿ ಮಾಡಿದರೆ ಸಂಭವನೀಯ ಅಪಾಯ ತಪ್ಪಿಸಬಹುದು.
(ಗಮನಿಸಿರಿ: ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಇವುಗಳನ್ನು ಅನುಸರಿಸುವ ಮುನ್ನ ವೈದ್ಯಕೀಯ ಸಲಹೆ ಪಡೆದುಕೊಳ್ಳಿ. Zee Kannada News ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)