Diabetes Tips: ಮಧುಮೇಹವನ್ನು ಶಾಶ್ವತವಾಗಿ ಗುಣಪಡಿಸಬಲ್ಲ ಚಿಕಿತ್ಸೆ ಇನ್ನೂ ಕೂಡ ಬಂದಿಲ್ಲ. ಹಾಗಾಗಿ ಮಧುಮೇಹವನ್ನು ಆಹಾರದ ಮೂಲಕವೇ ನಿಯಂತ್ರಿಸಬೇಕು, ಎಂತಹ ಆಹಾರ ಸೇವಿಸಿದರೂ ಶುಗರ್ ಕಂಟ್ರೋಲ್ ಆಗದಿದ್ದರೆ, ಈ ಬೀಜಗಳನ್ನು ಸೇವಿಸುವುದರಿಂದ ಉತ್ತಮ ಫಲಿತಾಂಶ ಸಿಗುತ್ತದೆ. ಯಾವುದು ಆ ಬೀಜ? ತಿಳಿಯಲು ಮುಂದೆ ಓದಿ...
Diabetes Tips: ಮಧುಮೇಹವನ್ನು ಶಾಶ್ವತವಾಗಿ ಗುಣಪಡಿಸಬಲ್ಲ ಚಿಕಿತ್ಸೆ ಇನ್ನೂ ಕೂಡ ಬಂದಿಲ್ಲ. ಹಾಗಾಗಿ ಮಧುಮೇಹವನ್ನು ಆಹಾರದ ಮೂಲಕವೇ ನಿಯಂತ್ರಿಸಬೇಕು, ಎಂತಹ ಆಹಾರ ಸೇವಿಸಿದರೂ ಶುಗರ್ ಕಂಟ್ರೋಲ್ ಆಗದಿದ್ದರೆ, ಈ ಬೀಜಗಳನ್ನು ಸೇವಿಸುವುದರಿಂದ ಉತ್ತಮ ಫಲಿತಾಂಶ ಸಿಗುತ್ತದೆ. ಯಾವುದು ಆ ಬೀಜ? ತಿಳಿಯಲು ಮುಂದೆ ಓದಿ...
ಇತ್ತೀಚಿನ ದಿನಗಳಲ್ಲಿ ಮಧುಮೇಹದಿಂದ ಬಳಲುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ. ವಯಸ್ಸನ್ನು ಲೆಕ್ಕಿಸದೆ ಮಧುಮೇಹ ಜನರ ಮೇಲೆ ದಾಳಿ ಮಾಡುತ್ತಿದೆ. ಇದಕ್ಕೆ ಮುಖ್ಯ ಕಾರಣ ಆಹಾರ ಪದ್ಧತಿ.
ಮಧುಮೇಹವನ್ನು ಗುಣಪಡಿಸಲು ಇನ್ನೂ ಯಾವುದೇ ಔಷಧಿಯನ್ನು ಕಂಡು ಹಿಡಿದಿಲ್ಲ, ಆದರೆ ಅದನ್ನು ಕೆಲವು ವಿಚಾರಗಳನ್ನು ಪಾಲಿಸುವುದರೊಂದಿಗೆ ಕಂಟ್ರೋಲ್‌ನಲ್ಲಿಟ್ಟುಕೊಳ್ಳಬಹುದು.
ಮಧುಮೇಹಕ್ಕೆ ಔಷಧಿ ಇಲ್ಲವಾದರೂ.. ಅದನ್ನು ನಿಯಂತ್ರಿಸುವ ಸಾಮರ್ಥ್ಯ ನಮ್ಮ ಕೈಯಲ್ಲಿದೆ. ಸಕ್ಕರೆಯನ್ನು ನಿಯಂತ್ರಿಸುವಲ್ಲಿ ಚಿಯಾ ಬೀಜಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತವೆ.
ಚಿಯಾ ಬೀಜಗಳು ದೇಹಕ್ಕೆ ಅಗತ್ಯವಿರುವ ಪ್ರಮುಖ ಆರೋಗ್ಯಕರ ಪೋಷಕಾಂಶಗಳನ್ನು ಒದಗಿಸುತ್ತದೆ. ಒಮೆಗಾ 3 ಮತ್ತು 6 ಕೊಬ್ಬಿನಾಮ್ಲಗಳು, ಫೈಬರ್, ಪ್ರೋಟೀನ್, ಜೀವಸತ್ವಗಳು, ಖನಿಜಗಳು, ಉತ್ಕರ್ಷಣ ನಿರೋಧಕಗಳು ಮತ್ತು ಆರೋಗ್ಯಕರ ಕೊಬ್ಬುಗಳಿಂದ ಚಿಹಾ ಬೀಜಗಳು ಹೇರಳವಾಗಿದೆ.
ಚಿಯಾ ಬೀಜಗಳನ್ನು ನೀರಿನಲ್ಲಿ ಬೆರೆಸಿ ಸೇವಿಸುವುದು ತುಂಬಾ ಒಳ್ಳೆಯದು.
ಸಲಾಡ್‌ಗಳಲ್ಲಿ, ತಿಂಡಿಗಳು, ಜ್ಯೂಸ್, ತೆಂಗಿನ ಹಾಲು, ಒಣ ಹಣ್ಣುಗಳು ಇತ್ಯಾದಿಗಳ ಮೂಲಕ ಉತ್ತಮ ಫಲಿತಾಂಶವನ್ನು ಕಾಣಬಹುದು.
ಹಾಲಿನೊಂದಿಗೆ ಚಿಯಾ ಬೀಜಗಳನ್ನು ಸೇವಿಸುವುದರಿಂದ, ನಿಮ್ಮ ಶುಗರ್ ಅನ್ನು ಕಂಟ್ರೋಲ್‌ನಲ್ಲಿಡಬಹುದು.
ಚಿಯಾ ಬೀಜಗಳು ಆಲ್ಫಾ ಲಿನೋಲೆನಿಕ್ ಆಮ್ಲಗಳನ್ನು ಹೊಂದಿರುತ್ತವೆ. ಚಿಯಾ ಬೀಜಗಳನ್ನು ಸೇವಿಸುವುದರಿಂದ ಇದು ದೇಹದಲ್ಲಿ ಇನ್ಸುಲಿನ್ ಅನ್ನು ಕಂಟ್ರೋಲ್‌ನಲ್ಲಿಡುತ್ತದೆ, ಶುಗರ್ ಹೆಚ್ಚಾಗದಂತೆ ಕಾಪಾಡುತ್ತದೆ.
ಚಿಯಾ ಬೀಜಗಳನ್ನು ತಕ್ಷಣವೇ ತೆಗೆದುಕೊಳ್ಳುವ ಬದಲು, ನೀವು ಅವುಗಳನ್ನು ನೀರಿನಲ್ಲಿ ಅಥವಾ ಮಜ್ಜಿಗೆ ಅಥವಾ ಹಾಲಿನಲ್ಲಿ ಐದರಿಂದ ಹತ್ತು ನಿಮಿಷಗಳ ಕಾಲ ನೆನೆಸಿ ಸೇವಿಸುವುರಿಂದ ಉತ್ತಮ ಫಲಿತಾಂಶವನ್ನು ಪಡೆಯಬಹುದು.
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯೂ ಸಾಮಾನ್ಯ ಜ್ನಾನ ಹಾಗೂ ಮೂಲಗಳ ಮಾಹಿತಿಯನ್ನು ಆಧರಿಸಿದೆ, ZEE KANNADA NEWS ಇದನ್ನು ಖಚಿತ ಪಡಿಸುವುದಿಲ್ಲ.