SRH ಒಡತಿ ಕಾವ್ಯಾ ಮಾರನ್ ಹೆಸರಲ್ಲಿರೋ ಆಸ್ತಿ ಎಷ್ಟು ಕೋಟಿ? ಕೊಹ್ಲಿಗಿಂತಲೂ ದುಪ್ಪಟ್ಟು... ಈಕೆ ಕನ್ನಡದ ಪ್ರಖ್ಯಾತ ಚಾನೆಲ್‌ನ ಮಾಲಕಿಯೂ ಹೌದು

Kavya Maran Net Worth: ಐಪಿಎಲ್‌ ಇನ್ನೇನು ಶುರುವಾಗಲಿದೆ. ಈ ಮೆಗಾ ಟೂರ್ನಿ ಶುರುವಾದ್ರೆ ಸಾಕು ಕ್ರಿಕೆಟ್‌ ಪ್ರಿಯರಿಗೆ ಹಬ್ಬದೂಟವೇ... ಪ್ರತಿಯೊಂದು ತಂಡಕ್ಕೂ ಸಿಕ್ಕಾಪಟ್ಟೆ ಫ್ಯಾನ್ಸ್‌ ಇದ್ದು, ಅದರಲ್ಲೂ ಚೆನ್ನೈ, ಬೆಂಗಳೂರು ಮತ್ತು ಮುಂಬೈಗೆ ಅತಿ ಹೆಚ್ಚು ಅಭಿಮಾನಿ ಬಳಗವಿದೆ. ಅಂದಹಾಗೆ ಸನ್‌ ರೈಸರ್ಸ್‌ ಹೈದರಾಬಾದ್‌ ತಂಡಕ್ಕೂ ಉತ್ತಮ ಫ್ಯಾನ್‌ ಬೇಸ್‌ ಇದೆ. ಇದಕ್ಕೆ ಪ್ರಮುಖ ಕಾರಣ ಆ ತಂಡದ ಒಡತಿ ಕಾವ್ಯಾ ಮಾರನ್.‌

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

1 /7

ಐಪಿಎಲ್‌ ಇನ್ನೇನು ಶುರುವಾಗಲಿದೆ. ಈ ಮೆಗಾ ಟೂರ್ನಿ ಶುರುವಾದ್ರೆ ಸಾಕು ಕ್ರಿಕೆಟ್‌ ಪ್ರಿಯರಿಗೆ ಹಬ್ಬದೂಟವೇ... ಪ್ರತಿಯೊಂದು ತಂಡಕ್ಕೂ ಸಿಕ್ಕಾಪಟ್ಟೆ ಫ್ಯಾನ್ಸ್‌ ಇದ್ದು, ಅದರಲ್ಲೂ ಚೆನ್ನೈ, ಬೆಂಗಳೂರು ಮತ್ತು ಮುಂಬೈಗೆ ಅತಿ ಹೆಚ್ಚು ಅಭಿಮಾನಿ ಬಳಗವಿದೆ. ಅಂದಹಾಗೆ ಸನ್‌ ರೈಸರ್ಸ್‌ ಹೈದರಾಬಾದ್‌ ತಂಡಕ್ಕೂ ಉತ್ತಮ ಫ್ಯಾನ್‌ ಬೇಸ್‌ ಇದೆ. ಇದಕ್ಕೆ ಪ್ರಮುಖ ಕಾರಣ ಆ ತಂಡದ ಒಡತಿ ಕಾವ್ಯಾ ಮಾರನ್.‌

2 /7

ಕಾವ್ಯಾ ಮಾರನ್‌ ಸ್ಟೇಡಿಯಂನಲ್ಲಿ ಇದ್ರೆ ಸಾಕು ಅವರ ಫ್ಯಾನ್ಸ್‌ಗೆ ಖುಷಿಯೋ ಖುಷಿ. ಸಾಮಾನ್ಯ ಅಭಿಮಾನಿಯಂತೆ ತಮ್ಮ ತಂಡವನ್ನು ಹುರಿದುಂಬಿಸುವ ಅವರನ್ನು ಅಭಿಮಾನಿಗಳು ಅಭಿಮಾನದಿಂದ ಕಾವ್ಯಾ ಪಾಪ ಎಂದೇ ಕರೆಯುತ್ತಾರೆ. ಅಂದಹಾಗೆ ಸಿಂಪಲ್‌ ಆಗಿ ಕಾಣುವ ಈ ಸುಂದರಿ ಎಷ್ಟೊಂದು ಸಿರಿವಂತೆ ಎಂದು ನಿಮಗೆ ತಿಳಿದಿದೆಯೇ?  

3 /7

ಕಾವ್ಯಾ ಮಾರನ್, ದೇಶದ ಅತ್ಯಂತ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾದ ಸನ್ ಗ್ರೂಪ್‌ ಮಾಲೀಕ ಕಲಾನಿಧಿ ಮಾರನ್ ಅವರ ಏಕೈಕ ಪುತ್ರಿ. ಫೋರ್ಬ್ಸ್ ಪ್ರಕಾರ, ಕಲಾನಿಧಿ ಅವರ ನಿವ್ವಳ ಮೌಲ್ಯ  ಸರಿಸುಮಾರು 26,000 ಕೋಟಿ ರೂ.  

4 /7

ಕಾವ್ಯಾ ಮಾರನ್ ಅವರ ನಿವ್ವಳ ಮೌಲ್ಯದ ಬಗ್ಗೆ ಮಾತನಾಡುವುದಾದರೆ, ವರದಿಗಳ ಪ್ರಕಾರ, ಸುಮಾರು 50 ಮಿಲಿಯನ್ ಡಾಲರ್ ಅಂದರೆ ಭಾರತೀಯ ಕರೆನ್ಸಿ ಪ್ರಕಾರ ಸರಿಸುಮಾರು 409 ಕೋಟಿ ರೂ. ಎಂದು ಹೇಳಲಾಗುತ್ತದೆ. ಚೆನ್ನೈನ ಸ್ಟೆಲ್ಲಾ ಮಾರಿಸ್ ಕಾಲೇಜಿನಲ್ಲಿ ಬಿ.ಕಾಂ ಪದವಿ ಮತ್ತು ನ್ಯೂಯಾರ್ಕ್ ವಿಶ್ವವಿದ್ಯಾಲಯದ ಲಿಯೊನಾರ್ಡ್ ಎನ್. ಸ್ಟರ್ನ್ ಸ್ಕೂಲ್ ಆಫ್ ಬ್ಯುಸಿನೆಸ್‌ನಿಂದ ಎಂಬಿಎ ಪದವಿ ಪಡೆದಿದ್ದಾರೆ.  

5 /7

ಕಾವ್ಯಾ ಮಾರನ್ ಸನ್ ಗ್ರೂಪ್‌ ಮಂಡಳಿಯ ಸದಸ್ಯರಾಗಿದ್ದಾರೆ ಮತ್ತು ಸನ್ ಟಿವಿ ನೆಟ್‌ವರ್ಕ್‌ನ OTT ಪ್ಲಾಟ್‌ಫಾರ್ಮ್ ಸನ್ NXT ನ ಮುಖ್ಯಸ್ಥರಾಗಿದ್ದಾರೆ. ಅಂದಹಾಗೆ ಕನ್ನಡದ ಪ್ರಖ್ಯಾತ ವಾಹಿನಿ ಉದಯ ಟಿವಿ ಇದೇ ನೆಟ್‌ವರ್ಕ್‌ ಕೆಳಗೆ ಕಾರ್ಯನಿರ್ವಹಿಸುತ್ತಿದೆ. ಈ ನೆಟ್‌ವರ್ಕ್‌ನ್ನು ಸ್ಥಾಪಿಸಿದ್ದು ಕಾವ್ಯಾ ಅವರ ತಂದೆ ಕಲಾನಿಧಿ ಮಾರನ್‌,.  

6 /7

ಅಂದಹಾಗೆ ಕಾವ್ಯಾಗೆ ಕ್ರಿಕೆಟ್ ಅಷ್ಟೇ ಅಲ್ಲ, ಕಾರುಗಳ ಬಗ್ಗೆಯೂ ಒಲವು ಇದೆ. ಅವರ ಕಾರು ಸಂಗ್ರಹದಲ್ಲಿ ಅನೇಕ ದುಬಾರಿ ಮತ್ತು ಐಷಾರಾಮಿ ಕಾರುಗಳಿವೆ. ಇವುಗಳಲ್ಲಿ ರೋಲ್ಸ್ ರಾಯ್ಸ್ ಫ್ಯಾಂಟಮ್ ಕಾರು (ಸುಮಾರು 10 ಕೋಟಿ ರೂ. ಬೆಲೆ) ಕೂಡ ಸೇರಿದೆ. ಇದಲ್ಲದೆ, ಅವರ ಬಳಿ ಬೆಂಟ್ಲಿ ಬೆಂಟೇಗಾ ಮತ್ತು BMW 760LI ನಂತಹ ದುಬಾರಿ ಕಾರುಗಳಿವೆ.  

7 /7

ಸನ್‌ರೈಸರ್ಸ್ ಹೈದರಾಬಾದ್ ತಂಡದ ಒಡತಿ ಕಾವ್ಯಾ ಮಾರನ್ ಅವರ ಕುಟುಂಬ ರಾಜಕೀಯ ವಲಯದಲ್ಲಿ ಬಹಳ ಸಕ್ರಿಯವಾಗಿದೆ. ಅವರು ಮಾಜಿ ಕೇಂದ್ರ ಸಚಿವ ಮುರಸೋಲಿ ಮಾರನ್ ಅವರ ಮೊಮ್ಮಗಳು ಮತ್ತು ಮಾಜಿ ಕೇಂದ್ರ ಸಚಿವ ದಯಾನಿಧಿ ಮಾರನ್ ಅವರ ಸೋದರ ಸೊಸೆ.