ಪ್ರತಿದಿನ ಒಂದೇ ಒಂದು ಚಮಚ ʼಅಗಸೆಬೀಜʼ ಸೇವಿಸಿದ್ರೆ ದೇಹಕ್ಕೆ ಇಷ್ಟೊಂದು ಲಾಭಗಳಿವೆ!!

Health Benefits of flaxseeds: ಪ್ರತಿದಿನ ನಿಯಮಿತವಾಗಿ ಅಗಸೆ ಬೀಜಗಳನ್ನ ತಿನ್ನುವುದರಿಂದ ನಿಮ್ಮ ದೇಹದ ಅನೇಕ ಗಂಭೀರ ಕಾಯಿಲೆಗಳನ್ನು ತಪ್ಪಿಸಬಹುದು. ಪ್ರತಿದಿನ ಒಂದು ಚಮಚ ಅಗಸೆಬೀಜ ಸೇವಿಸಿದರೆ ಯಾವೆಲ್ಲಾ ಆರೋಗ್ಯ ಪ್ರಯೋಜನಗಳಿವೆ ಅನ್ನೋದರ ಮಾಹಿತಿ ಇಲ್ಲಿದೆ ನೋಡಿ...

Flax seeds benefits: ಪ್ರತಿದಿನ ನಿಯಮಿತವಾಗಿ ಅಗಸೆ ಬೀಜಗಳನ್ನ ಸೇವಿಸುವುದರಿಂದ ನಿಮ್ಮ ದೇಹದ ಅನೇಕ ಗಂಭೀರ ಕಾಯಿಲೆಗಳನ್ನು ತಪ್ಪಿಸಬಹುದು. ಸ್ಥೂಲಕಾಯದಿಂದ ಬಳಲುತ್ತಿರುವವರಿಗೆ ಅಗಸೆ ತುಂಬಾ ಪ್ರಯೋಜನಕಾರಿ. ಏಕೆಂದರೆ ತೂಕ ಇಳಿಸುವಲ್ಲಿ ಅಗಸೆ ಬೀಜವು ಪ್ರಮುಖ ಪಾತ್ರ ವಹಿಸುತ್ತದೆ. ಅಗಸೆ ಬೀಜಗಳಲ್ಲಿ ಆರೋಗ್ಯದ ನಿಧಿಯೇ ಇದೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಇದನ್ನು ಸೇವಿಸುವುದರಿಂದ ಆರೋಗ್ಯಕ್ಕೆ ಸಂಬಂಧಿಸಿದ ಅನೇಕ ಸಮಸ್ಯೆಗಳಿಂದ ನೀವು ದೂರವಿರಬಹುದು. ಅಗಸೆ ಬೀಜ ಹೃದಯ ಸಂಬಂಧಿ ಸಮಸ್ಯೆಗಳನ್ನು ದೂರ ಮಾಡಲು ತುಂಬಾ ಪ್ರಯೋಜನಕಾರಿ. ಆದರೆ ನೀವು ಯಾವುದೇ ರೀತಿಯ ದೈಹಿಕ ಸಮಸ್ಯೆ ಎದುರಿಸುತ್ತಿದ್ದರೆ, ಅಗಸೆ ಬೀಜ ಸೇವಿಸುವ ಮೊದಲು ವೈದ್ಯರ ಸಲಹೆ ಪಡೆಯುವುದು ಬಹಳ ಉತ್ತಮ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

1 /7

ಒಂದು ಟೀ ಚಮಚ ಅಗಸೆಬೀಜ ಅಂದರೆ 7 ಗ್ರಾಂ. ಇದರಲ್ಲಿ 1.28 ಗ್ರಾಂ ಪ್ರೋಟೀನ್(Proteins), 2.95 ಗ್ರಾಂ ಕೊಬ್ಬು, 2.02 ಗ್ರಾಂ ಕಾರ್ಬೋಹೈಡ್ರೇಟ್, 1.91 ಗ್ರಾಂ ಫೈಬರ್, 17.8 ಮಿಲಿ ಗ್ರಾಂ ಕ್ಯಾಲ್ಸಿಯಂ, 27.4 ಮಿಲಿ ಗ್ರಾಂ ಮೆಗ್ನೀಸಿಯಮ್, 44.9 ಮಿಲಿ ಗ್ರಾಂ ರಂಜಕ, 56.9 ಮಿಲಿ ಗ್ರಾಂ ಪೊಟ್ಯಾಸಿಯಮ್, 6.09 ಮೈಕ್ರೊಗ್ರಾಂ ಫೋಲೇಟ್ ಮತ್ತು 45.6 ಮೈಕ್ರೊಗ್ರಾಂ ಲುಟೀನ್ ಮತ್ತು ಗ್ಯಾಕ್ಸಾಂಟಿನ್ ಸಹ ಇದೆ. 

2 /7

ಅಗಸೆ ಬೀಜದಲ್ಲಿ ಒಮೆಗಾ -3 ಕೊಬ್ಬಿನಾಮ್ಲಗಳು, ಪ್ರೋಟೀನ್, ಫೈಬರ್, ಜೀವಸತ್ವಗಳು ಮತ್ತು ಖನಿಜಗಳು ಕಂಡುಬರುತ್ತವೆ. ಅಗಸೆ ಬೀಜಗಳು ಜೀರ್ಣಕ್ರಿಯೆಯನ್ನು ಉತ್ತಮಗೊಳಿಸಲು ಬಹಳ ಸಹಾಯಕಾರಿಯಾಗಿದೆ. ಟೈಪ್ 2 ಡಯಾಬಿಟಿಸ್ (Diabetes), ಕ್ಯಾನ್ಸರ್ ಕಡಿಮೆ ಮಾಡಲು ಈ ಬೀಜಗಳು ಸಹಾಯ ಮಾಡುತ್ತವೆ.

3 /7

ಅಗಸೆ ಬೀಜಗಳು ನಮ್ಮ ದೇಹದ ಕೊಲೆಸ್ಟ್ರಾಲ್ (Cholesterol) ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಅಧ್ಯಯನದ ಪ್ರಕಾರ, ಪ್ರತಿದಿನವೂ ಅಗಸೆ ಬೀಜಗಳನ್ನು ತಿನ್ನುವುದರಿಂದ ನಿಮ್ಮ ಕೊಲೆಸ್ಟ್ರಾಲ್ ಮಟ್ಟವನ್ನು 6-11ರಷ್ಟು ಕಡಿಮೆ ಮಾಡಬಹುದು. ಇದು ಹೆಚ್ಚಿನ ಫೈಬರ್ ಮತ್ತು ಲಿಗ್ನಿನ್ ಅಂಶವನ್ನು ಹೊಂದಿರುವುದರಿಂದ ಇದು ಸಾಧ್ಯವಿದೆ.

4 /7

ಅಗಸೆಬೀಜವನ್ನು ನಿಯಮಿತವಾಗಿ ಸೇವಿಸುವ ಮೂಲಕ ನೀವು ನಿಮ್ಮ ಜೀರ್ಣಕ್ರಿಯೆ (Digestion) ಶಕ್ತಿಯನ್ನು ಹೆಚ್ಚಿಸಬಹುದು. ಇದರಲ್ಲಿ ಸಾಕಷ್ಟು ಪ್ರಮಾಣದ ಫೈಬರ್ ಇದ್ದು, ಇದು ಜೀರ್ಣಕ್ರಿಯೆಯ ಶಕ್ತಿಯನ್ನು ಹೆಚ್ಚಿಸುವ ಮೂಲಕ ಮಲಬದ್ಧತೆಯ ಸಮಸ್ಯೆಗಳಿಂದ ನಿಮ್ಮನ್ನು ದೂರುವಿಡುತ್ತದೆ.

5 /7

ಅಗಸೆಬೀಜದಲ್ಲಿ ಆಂಟಿ-ಆಕ್ಸಿಡೆಂಟ್‌ಗಳು ಮತ್ತು ಫೈಟೊಕೆಮಿಕಲ್ಸ್ ಗುಣಗಳಿವೆ, ಇದು ಮುಖದ ಚರ್ಮ (Skin) ವನ್ನು ವೃದ್ಧಾಪ್ಯದಲ್ಲಿ ಯಂಗ್ ಆಗಿ ಕಾಣಲು ಸಹಕಾರಿಯಾಗಿದೆ. ಇದರಿಂದ ಮುಖ ಸುಕ್ಕುಗಟ್ಟುವ ಸಮಸ್ಯೆಗಳು ಇರುವುದಿಲ್ಲ ಮತ್ತು ನಿಮ್ಮ ಮುಖದ ಚರ್ಮವನ್ನ ಹೊಳೆಯುವಂತೆ ಮಾಡುತ್ತದೆ.

6 /7

ನೀವು ಖಾಲಿ ಹೊಟ್ಟೆಯಲ್ಲಿ ಅಗಸೆಬೀಜವನ್ನು ತಿನ್ನಬಹುದು. ಇದಲ್ಲದೆ ರಾತ್ರಿ ಮಲಗುವ ಮೊದಲೇ ಅಗಸೆ ಬೀಜವನ್ನು ಸೇವಿಸಬಹುದು, ಏಕೆಂದರೆ ಇದು ಉತ್ತಮ ನಿದ್ರೆ ಮಾಡಲು ತುಂಬಾ ಸಹಾಯ ಮಾಡುತ್ತದೆ.

7 /7

ಆರೋಗ್ಯ ತಜ್ಞರ ಪ್ರಕಾರ, ಮಾರುಕಟ್ಟೆಯಲ್ಲಿ ಸಿಗುವ ಎಲ್ಲಾ ಅಗಸೆ ಬೀಜಗಳು ಜಮೀನಿನಲ್ಲಿ ಬೆಳೆದವು ಎಂದು ಹೇಳಲು ಸಾಧ್ಯವಿಲ್ಲ. ಹೀಗಾಗಿ ಆದಷ್ಟು ರೈತರ ಹೊಲಗಳಲ್ಲಿ ಬೆಳೆದ ಅಗಸೆ ಬೀಜವನ್ನು ಸೇವಿಸುವುದು ಹೆಚ್ಚು ಪ್ರಯೋಜನಕಾರಿ. ವಾಸ್ತವವಾಗಿ ಅಗಸೆ ಬೀಜವು ಮೇಲ್ಭಾಗದಲ್ಲಿ ಕಂದು ಮಿಶ್ರಣವನ್ನು ಹೊಂದಿರುತ್ತವೆ, ಇದು ಕರುಳಿಗೆ ಜೀರ್ಣಿಸಿಕೊಳ್ಳಲು ತುಂಬಾ ಕಷ್ಟ ಮತ್ತು ಈ ಕಾರಣದಿಂದ ದೇಹವು ಅಗಸೆಬೀಜದ ಪೋಷಕಾಂಶಗಳನ್ನು ಹೀರಿಕೊಳ್ಳಲು ಸಾಧ್ಯವಿಲ್ಲ. ಹೀಗಾಗಿ ಅವುಗಳನ್ನ ನೀರಿನಲ್ಲಿ ನೆನೆಸಿ ಅಥವಾ ಪುಡಿ ಮಾಡಿ ಸೇವಿಸುವುದು ಬಹಳ ಉತ್ತಮ.