54ನೇ ವಯಸ್ಸಿಗೆ ಮದುವೆಗೆ ಸಜ್ಜಾದ ವಿಷ್ಣುವರ್ಧನ್ ಜೊತೆ ಅಭಿನಯಿಸಿದ್ದ ಖ್ಯಾತ ಕನ್ನಡ ನಟಿ!? ಬಹಿರಂಗವಾಗಿ ಉತ್ತರ ನೀಡಿದ ಹಿರಿಯ ತಾರೆ..

Star Kannada Actress: ರಜನಿಕಾಂತ್ ಅಭಿನಯದ ದಳಪತಿ ಚಿತ್ರದ ನಟಿ ಶೋಭನಾ ಅವರು 54 ನೇ ವಯಸ್ಸಿನಲ್ಲಿಯೂ ಇನ್ನೂ ಒಂಟಿಯಾಗಿರುವುದು ಏಕೆ ಎನ್ನುವುದನ್ನು ಬಹಿರಂಗವಾಗಿ ಹೇಳಿಕೊಂಡಿದ್ದಾರೆ.   

Written by - Savita M B | Last Updated : Jan 31, 2025, 09:49 AM IST
  • ಬಾಲನಟಿಯಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದವರಲ್ಲಿ ನಟಿ ಶೋಬನಾ ಕೂಡ ಒಬ್ಬರು
  • ಶೋಭನಾ ತಮಿಳು ಚಿತ್ರರಂಗದಲ್ಲಿ ಕಮಲ್ ಹಾಸನ್, ವಿಜಯಕಾಂತ್, ರಜನಿಕಾಂತ್ ಅವರೊಂದಿಗೆ ಅನೇಕ ಚಿತ್ರಗಳಲ್ಲಿ ನಟಿಸಿದ್ದಾರೆ
54ನೇ ವಯಸ್ಸಿಗೆ ಮದುವೆಗೆ ಸಜ್ಜಾದ ವಿಷ್ಣುವರ್ಧನ್ ಜೊತೆ ಅಭಿನಯಿಸಿದ್ದ ಖ್ಯಾತ ಕನ್ನಡ ನಟಿ!? ಬಹಿರಂಗವಾಗಿ ಉತ್ತರ ನೀಡಿದ ಹಿರಿಯ ತಾರೆ..  title=

Actress Shobana: ಬಾಲನಟಿಯಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದವರಲ್ಲಿ ನಟಿ ಶೋಬನಾ ಕೂಡ ಒಬ್ಬರು. ಮಂಗಳಾ ನಾಯಕಿ ಬಾಲನಟಿಯಾಗಿ ಅವರ ಚೊಚ್ಚಲ ಚಿತ್ರ. ಬಳಿಕ ನಟಿ ಕಮಲ್ ಹಾಸನ್ ಅಭಿನಯದ ಒರುವನ್ ಚಿತ್ರದ ಮೂಲಕ ನಾಯಕಿಯಾಗಿ ಪಾದಾರ್ಪಣೆ ಮಾಡಿದರು. ಅವರು ಪಟುಕ್ಕು ಒರು ತಲೈವನ್, ಶಿವ, ಪೊನ್ನಿಯಿನ್‌ ಸೆಲ್ವನ್, ವಥಿಯಾರ್ ವಿಧಿ ಪಿಳ್ಳೈ, ಮಲ್ಲು ವೆಡ್ತಿ ಮೈನರ್, ದಳಪತಿ, ಕೊಚ್ಚಡೈಯಾನ್ ಮುಂತಾದ ಅನೇಕ ಚಿತ್ರಗಳಲ್ಲಿ ನಟಿಸಿದ್ದಾರೆ.

ನಟಿ ಶೋಭನಾ ತಮಿಳು ಚಿತ್ರರಂಗದಲ್ಲಿ ಕಮಲ್ ಹಾಸನ್, ವಿಜಯಕಾಂತ್, ರಜನಿಕಾಂತ್ ಅವರೊಂದಿಗೆ ಅನೇಕ ಚಿತ್ರಗಳಲ್ಲಿ ನಟಿಸಿದ್ದಾರೆ. ಇವುಗಳಲ್ಲಿ ಪಟುಕ್ಕು ಒರು ತಲೈವನ್, ಪೊನ್ನಿಯಿನ್‌ ಸೆಲ್ವನ್, ಮತ್ತು ದಳಪತಿಯಂತಹ ಚಿತ್ರಗಳು ಶೋಬನಾಗೆ ನಾಯಕ ನಟಿ ಸ್ಥಾನಮಾನವನ್ನು ತಂದುಕೊಟ್ಟವು. 2006ರಲ್ಲಿ ಮಾಜಿ ರಾಷ್ಟ್ರಪತಿ ದಿವಂಗತ ಎಪಿಜೆ ಅಬ್ದುಲ್ ಕಲಾಲ್ ಅವರ ಕೈಯಿಂದ ಪದ್ಮಶ್ರೀ ಪ್ರಶಸ್ತಿ ಪಡೆದ ಶೋಬನಾ ಅವರಿಗೆ ಕೇಂದ್ರ ಸರ್ಕಾರ ಪದ್ಮಭೂಷಣ ಪ್ರಶಸ್ತಿ ಘೋಷಿಸಿದ್ದು ಎಲ್ಲರಿಗೂ ಗೊತ್ತೇ ಇದೆ. ಇದಕ್ಕಾಗಿ ದಕ್ಷಿಣ ಭಾರತದ ಚಿತ್ರರಂಗದ ಅನೇಕರು ಅವರನ್ನು ಅಭಿನಂದಿಸಿದ್ದರು..

ಇದನ್ನೂ ಓದಿ-ಹೊಟೇಲ್‌ನಲ್ಲಿ ಸಿಕ್ಕಿಬಿದ್ದು ಜೈಲುವಾಸ, ಬಂಗಾರದಂತ ಕೆರಿಯರ್ ಹಾಳು ಮಾಡಿಕೊಂಡ ಸ್ಟಾರ್‌ ನಟಿ..!

ತಮಿಳು ಮಾತ್ರವಲ್ಲದೆ ತೆಲುಗು, ಮಲಯಾಳಂ, ಹಿಂದಿ, ಇಂಗ್ಲಿಷ್ ಮತ್ತು ಕನ್ನಡ ಭಾಷೆಗಳಲ್ಲಿ 200ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಕಳೆದ ವರ್ಷ, ಪ್ರಭಾಸ್ ಅಭಿನಯದ ಕಲ್ಕಿ 2898 AD ಚಿತ್ರದಲ್ಲಿ ಶೋಬನಾ ಪ್ರಮುಖ ಪಾತ್ರವನ್ನು ನಿರ್ವಹಿಸಿದ್ದರು. ಈ ನಟಿ ಭರತನಾಟ್ಯ ಶಾಲೆಯೊಂದನ್ನು ನಡೆಸುತ್ತಿದ್ದು, ಅಲ್ಲಿ ಉಚಿತವಾಗಿ ಭರತನಾಟ್ಯ ಕಲಿಸುತ್ತಿದ್ದಾರೆ.

ಇದನ್ನೂ ಓದಿ-ಹೊಟೇಲ್‌ನಲ್ಲಿ ಸಿಕ್ಕಿಬಿದ್ದು ಜೈಲುವಾಸ, ಬಂಗಾರದಂತ ಕೆರಿಯರ್ ಹಾಳು ಮಾಡಿಕೊಂಡ ಸ್ಟಾರ್‌ ನಟಿ..!

ಇನ್ನೂ ಮದುವೆಯಾಗದೆ ಬದುಕುತ್ತಿರುವ 54ರ ಹರೆಯದ ಅವರು, ತಾವು ಇನ್ನೂ ಏಕೆ ಮದುವೆಯಾಗಿಲ್ಲ ಎಂದು ಸಂದರ್ಶನವೊಂದರಲ್ಲಿ ಮೊದಲ ಬಾರಿಗೆ ಹೇಳಿದ್ದಾರೆ. ಆ ಸಂದರ್ಶನದಲ್ಲಿ ಮದುವೆಯಾಗುವ ಆಸೆಯೇ ಇರಲಿಲ್ಲ. ಮದುವೆಯಲ್ಲಿ ನಂಬಿಕೆ ಇಲ್ಲ. ಈ ರೀತಿಯ ನನ್ನ ಜೀವನ ನನಗೆ ತುಂಬಾ ಸಂತೋಷವಾಗಿದೆ ಎಂದಿದ್ದಾರೆ.. 

ಆಗಾಗ ಚಿತ್ರಗಳಲ್ಲಿ ಕಾಣಿಸಿಕೊಳ್ಳುವ ಶೋಬನಾ ತಮ್ಮ ಭರತ ಕಲೆಯಲ್ಲಿ ಮಿಂಚುತ್ತಿದ್ದಾರೆ. ಕೆಲ ವರ್ಷಗಳ ಹಿಂದೆ ಇವರ ಮದುವೆಯ ವರದಿ ಪ್ರಕಟವಾಗಿದ್ದರೂ, ನಂತರ ಆ ಮದುವೆಯನ್ನೂ ತಿರಸ್ಕರಿಸಿದ್ದರು ಎನ್ನಲಾಗಿದೆ. ಶೋಬನಾ ಸದ್ಯ ಹೆಣ್ಣು ಮಗುವನ್ನು ದತ್ತು ತೆಗೆದುಕೊಂಡು ಸಾಕುತ್ತಿದ್ದಾರೆ.. 

 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News