ನಕಲಿ ಷೇರು ಮಾರುಕಟ್ಟೆ ತಜ್ಞರಿಗೆ ಕಡಿವಾಣ ಹಾಕಲು ಮುಂದಾದ ಸೆಬಿ 

ಈ ನಕಲಿ ತಜ್ಞರು ತಮ್ಮ ಸಲಹೆಗಳು ಶೈಕ್ಷಣಿಕ ಉದ್ದೇಶಗಳಿಗೆ ಮಾತ್ರ ಎಂದು ಹೇಳುತ್ತಿದ್ದರೂ ಸಹ ಅವು ಹೂಡಿಕೆದಾರರಿಗೆ ಪ್ರತ್ಯಕ್ಷ ವಾಗಿ ಅಥವಾ ಪರೋಕ್ಷವಾಗಿ ನೀಡುವ ಸಲಹೆಗಳಾಗಿವೆ.ಇದರಿಂದಾಗಿ ಹೂಡಿಕೆದಾರರು ದಾರಿ ತಪ್ಪುವ ಸಾಧ್ಯತೆ ಇದೆ.ಆದ್ದರಿಂದ ಇದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಮುಂದಾಗಿರುವ ಸೆಬಿ ಹೊಸ ಮಾರ್ಗಸೂಚಿಗಳನ್ನು ಹೊರಡಿಸಿದೆ.

Written by - Manjunath N | Last Updated : Jan 30, 2025, 09:55 PM IST
  • ಇತ್ತೀಚಿನ ದಿನಗಳಲ್ಲಿ ಫೈನಫ್ಲುಯೆನ್ಸರ್‌ಗಳು ಹೂಡಿಕೆದಾರರನ್ನು ದಾರಿ ತಪ್ಪಿಸಿದ್ದರಿಂದಾಗಿ ಷೇರು ಮಾರುಕಟ್ಟೆಯಲ್ಲಿ ಕೋಟ್ಯಾಂತರ ಹಣವನ್ನು ಕಳೆದುಕೊಳ್ಳಬೇಕಾಗಿದೆ.
  • ಇಂತಹ ವಂಚನೆ ಪ್ರಕರಣಗಳಿಂದಾಗಿ ಅನೇಕ ಹೂಡಿಕೆದಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ.
  • ಸೆಬಿ ಸಂಸ್ಥೆಯು ಮಾರುಕಟ್ಟೆಯಲ್ಲಿ ಪಾರದರ್ಶಕತೆಯನ್ನು ತರಲು ಮುಂದಾಗಿದೆ.
ನಕಲಿ ಷೇರು ಮಾರುಕಟ್ಟೆ ತಜ್ಞರಿಗೆ ಕಡಿವಾಣ ಹಾಕಲು ಮುಂದಾದ ಸೆಬಿ  title=

ನವದೆಹಲಿ:  ಸಾಮಾಜಿಕ ಮಾಧ್ಯಮಗಳ ವೇದಿಕೆಯ ಮೂಲಕ ಷೇರು ಮಾರುಕಟ್ಟೆಯ ತಜ್ಞರು ಎಂದು ಪರಿಚಯಿಸಿಕೊಳ್ಳುವ ನಕಲಿ ಶೇರು ಮಾರುಕಟ್ಟೆ ತಜ್ಞರಿಗೆ ಕಡಿವಾಣ ಹಾಕಲು ಮಾರುಕಟ್ಟೆ ನಿಯಂತ್ರಕ ಸಂಸ್ಥೆ ಸೆಬಿ ಮುಂದಾಗಿದೆ.

ಈ ನಕಲಿ ತಜ್ಞರು ತಮ್ಮ ಸಲಹೆಗಳು ಶೈಕ್ಷಣಿಕ ಉದ್ದೇಶಗಳಿಗೆ ಮಾತ್ರ ಎಂದು ಹೇಳುತ್ತಿದ್ದರೂ ಸಹ ಅವು ಹೂಡಿಕೆದಾರರಿಗೆ ಪ್ರತ್ಯಕ್ಷ ವಾಗಿ ಅಥವಾ ಪರೋಕ್ಷವಾಗಿ ನೀಡುವ ಸಲಹೆಗಳಾಗಿವೆ.ಇದರಿಂದಾಗಿ ಹೂಡಿಕೆದಾರರು ದಾರಿ ತಪ್ಪುವ ಸಾಧ್ಯತೆ ಇದೆ.ಆದ್ದರಿಂದ ಇದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಮುಂದಾಗಿರುವ ಸೆಬಿ ಹೊಸ ಮಾರ್ಗಸೂಚಿಗಳನ್ನು ಹೊರಡಿಸಿದೆ.

ಈ ಮಾರ್ಗಸೂಚಿಗಳ ಪ್ರಕಾರ, ಶೈಕ್ಷಣಿಕ ಉದ್ದೇಶಗಳಿಗಾಗಿ ಮಾಹಿತಿ ನೀಡುವ ಒದಗಿಸುವ ವ್ಯಕ್ತಿಗಳು ಕಳೆದ ಮೂರು ತಿಂಗಳ ಮಾರುಕಟ್ಟೆ ಬೆಲೆ ಡೇಟಾವನ್ನು ಬಳಸಿಕೊಂಡು ಯಾವುದೇ ಸ್ಟಾಕ್ ಹೆಸರು ಅಥವಾ ಕೋಡ್ ಅನ್ನು ನಮೂದಿಸುವಂತಿಲ್ಲ. ಅಷ್ಟೇ ಅಲ್ಲದೆ ಭವಿಷ್ಯದ ಬೆಲೆಗಳ ಬಗ್ಗೆ ಸಲಹೆಗಳನ್ನು ನೀಡುವಂತಿಲ್ಲ ಎಂದು ಸೆಬಿ ಹೇಳಿದೆ.ಸೆಬಿಯಲ್ಲಿ ನೋಂದಾಯಿಸದ ಫೈನ್‌ಫ್ಲುಯೆನ್ಸರ್‌ಗಳು, ಹೂಡಿಕೆಗಳ ಮೇಲಿನ ಆದಾಯದ ಬಗ್ಗೆ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಯಾವುದೇ ಗ್ಯಾರಂಟಿಗಳನ್ನು ನೀಡಲು ಸಾಧ್ಯವಿಲ್ಲ.ಹಾಗಾಗಿ ಈಗ ಈ ಮಾರ್ಗಸೂಚಿಗಳನ್ನು ಉಲ್ಲಂಘಿಸುವವರ ವಿರುದ್ಧ ದಂಡ, ನೋಂದಣಿ ರದ್ದು ಅಥವಾ ನಿಷೇಧದಂತಹ ಕಠಿಣ ಶಿಕ್ಷೆಗಳನ್ನು ನೀಡಲು ಸೆಬಿ ಮುಂದಾಗಿದೆ.ಇತ್ತೀಚಿನ ದಿನಗಳಲ್ಲಿ ಫೈನಫ್ಲುಯೆನ್ಸರ್‌ಗಳು ಹೂಡಿಕೆದಾರರನ್ನು ದಾರಿ ತಪ್ಪಿಸಿದ್ದರಿಂದಾಗಿ ಷೇರು ಮಾರುಕಟ್ಟೆಯಲ್ಲಿ ಕೋಟ್ಯಾಂತರ ಹಣವನ್ನು ಕಳೆದುಕೊಳ್ಳಬೇಕಾಗಿದೆ.ಇಂತಹ ವಂಚನೆ ಪ್ರಕರಣಗಳಿಂದಾಗಿ ಅನೇಕ ಹೂಡಿಕೆದಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಇದನ್ನೂ ಓದಿ: ಹತ್ಯೆಯಾಗುವ ಮುನ್ನ ಗದುಗಿನ ಯುವಕನಿಗೆ ಪತ್ರ ಬರೆದಿದ್ದ ಗಾಂಧೀಜಿ..!

ಆಗಸ್ಟ್ 2024 ರಲ್ಲಿ, ಸೆಬಿ 15,000 ವೆಬ್‌ಸೈಟ್‌ಗಳು, ಯೂಟ್ಯೂಬ್ ಚಾನೆಲ್‌ಗಳು ಮತ್ತು ನಕಲಿ ಹೂಡಿಕೆ ಸಲಹೆಯನ್ನು ನೀಡುತ್ತಿರುವ ಸಾಮಾಜಿಕ ಮಾಧ್ಯಮ ಖಾತೆಗಳನ್ನು ಗುರುತಿಸಿದ್ದು. ಕೋರ್ಸ್‌ಗಳ ಹೆಸರಿನಲ್ಲಿ ಸಾವಿರಕ್ಕೂ ಹೆಚ್ಚು ಫೇಸ್‌ಬುಕ್ ಗುಂಪುಗಳು ಮತ್ತು ಟೆಲಿಗ್ರಾಂ ಚಾನೆಲ್‌ಗಳು ಜನರಿಂದ ಕೋಟ್ಯಾಂತರ ಹಣವನ್ನು ಸಂಗ್ರಹಿಸಿವೆ.ಈ ವೆಬ್‌ಸೈಟ್‌ಗಳಲ್ಲಿ ಹೂಡಿಕೆ ಮಾಡಿದವರು ತಮ್ಮ ಹಣವನ್ನು ಹಿಂಪಡೆಯಲು ಸಾಧ್ಯವಾಗುತ್ತಿಲ್ಲ.ಇದರಿಂದಾಗಿ ಸಾವಿರಾರು ಹೂಡಿಕೆದಾರರು ಹಣವನ್ನು ಕಳೆದುಕೊಂಡಿದ್ದಾರೆ.ಕೆಲವು ಫೈನ್‌ಫ್ಲುಯೆನ್ಸರ್‌ಗಳು ದೊಡ್ಡ ಮೊತ್ತದ ಹಣವನ್ನು ವಿಧಿಸಿ  ಬೋಗಸ್ ಹೂಡಿಕೆ ಸಲಹೆಯನ್ನು ನೀಡುತ್ತಾರೆ.ಸಾಮಾಜಿಕ ಮಾಧ್ಯಮಗಳ ಮೂಲಕ ಸುಳ್ಳು ಪ್ರಚಾರವನ್ನು ಹರಡುವ ಮತ್ತು ಹೂಡಿಕೆದಾರರನ್ನು ವಂಚಿಸುವ ಫಿನ್‌ಫ್ಲುಯೆನ್ಸರ್‌ಗಳ ವಿರುದ್ಧ ಸೆಬಿ ಈಗ ಕಠಿಣ ಕ್ರಮ ತೆಗೆದುಕೊಳ್ಳುತ್ತಿದೆ.ಈಗ ಈ ಎಲ್ಲಾ ನಕಲಿ ಶೇರು ಮಾರುಕಟ್ಟೆ ತಜ್ಞರ ಅಕ್ರಮಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಸೆಬಿ ಸಂಸ್ಥೆಯು ಧಿಟ್ಟ ಹೆಜ್ಜೆಯನ್ನು ಇಟ್ಟಿದೆ.ಆ ಮೂಲಕ ಮಾರುಕಟ್ಟೆಯಲ್ಲಿ ಪಾರದರ್ಶಕತೆಯನ್ನು ತರಲು ಮುಂದಾಗಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News