8th Pay commission News: ಕೇಂದ್ರ ಸರ್ಕಾರ 8ನೇ ವೇತನ ಆಯೋಗವನ್ನು ರಚಿಸಿದೆ. ಆಯೋಗವು ಈ ವರ್ಷದ ಕೊನೆಗೆ ವರದಿಯನ್ನು ನೀಡಲಿದೆ. ಆಯೋಗದ ಶಿಫಾರಸುಗಳ ಆಧಾರದ ಮೇಲೆ ಮುಂದಿನ ವರ್ಷ ಕೇಂದ್ರ ಸರ್ಕಾರಿ ನೌಕರರಿಗೆ ವೇತನ ಪರಿಷ್ಕರಣೆಯಾಗಿ ಸಂಬಳ ಹೆಚ್ಚಾಗಲಿದೆ. ಸದ್ಯದ ಮಾಹಿತಿಗಳ ಪ್ರಕಾರ ಶೇಕಡಾ 10ರಿಂದ 30ರಷ್ಟು ಹೆಚ್ಚಳ ಆಗಬಹುದು ಎಂದು ಹೇಳಲಾಗುತ್ತಿದೆ.
ಕೇಂದ್ರ ಸರ್ಕಾರದ ಮಾಜಿ ಹಣಕಾಸು ಕಾರ್ಯದರ್ಶಿ ಸುಭಾಷ್ ಚಂದ್ರ ಗಾರ್ಗ್ ಅವರು ಸಂದರ್ಶನವೊಂದರಲ್ಲಿ ಮಾತನಾಡುತ್ತಾ, 2026ರ ಜನವರಿ 1ರಿಂದ ಮೂಲ ವೇತನ ಮತ್ತು ತುಟ್ಟಿ ಭತ್ಯೆ (ಡಿಎ) ಆಧಾರದ ಮೇಲೆ ಫಿಟ್ಮೆಂಟ್ ಅಂಶವನ್ನು ತೀರ್ಮಾನಿಸಲಾಗುತ್ತದೆ. 2024ರ ಜನವರಿ 1ರಲ್ಲಿ ಇದ್ದ ಶೇಕಡಾ 53ರಷ್ಟು ತುಟ್ಟಿ ಭತ್ಯೆ (ಜನವರಿ 2025 ಮತ್ತು ಜುಲೈ 2025 ಸೇರಿಸಿ) ಜನವರಿ 2026ರ ವೇಳೆಗೆ ಶೇಕಡಾ 60 ಆಗಬಹುದು ಎಂದಿದ್ದಾರೆ.
ಇದನ್ನೂ ಓದಿ- ಉಳಿತಾಯ ಖಾತೆಯಲ್ಲಿ ಹೆಚ್ಚು ಹಣ ಇಟ್ಟರೂ ಕಟ್ಟಬೇಕಾಗುತ್ತೆ ತೆರಿಗೆ! ಎಷ್ಟು ಹಣ ಇದ್ರೆ TAX ಇರಲ್ಲ ಗೊತ್ತಾ..!
ತುಟ್ಟಿ ಭತ್ಯೆಯಲ್ಲದೆ ಮೂಲ ವೇತನ ಶೇಕಡಾ 10ರಿಂದ 30ರಷ್ಟು ಹೆಚ್ಚಳವಾಗಬಹುದು ಎನ್ನುವುದು ಸುಭಾಷ್ ಚಂದ್ರ ಗಾರ್ಗ್ ಅವರ ಅಭಿಪ್ರಾಯ. ಇವುಗಳೊಂದಿಗೆ ಫಿಟ್ಮೆಂಟ್ ಅಂಶವಿಟ್ಟು ಲೆಕ್ಕಹಾಕಿದರೆ ಕೇಂದ್ರ ಸರ್ಕಾರದ ನೌಕರರಿಗೆ 8ನೇ ವೇತನ ಆಯೋಗ ಜಾರಿಯಾದ ನಂತರ ಅವರ ಮೂಲ ವೇತನದಲ್ಲಿ ಕನಿಷ್ಠ 7ರಿಂದ 18 ಸಾವಿರ ರೂಪಾಯಿ ಹೆಚ್ಚಳವಾಗಲಿದೆ.
ಇದನ್ನೂ ಓದಿ- Budget 2025: ಇಷ್ಟು ಆದಾಯ ತೆರಿಗೆ ಮುಕ್ತ..! ನಿರ್ಮಲಾ ಸೀತಾರಾಮನ್'ರಿಂದ ತೆರಿಗೆದಾರರು, ಮಧ್ಯಮ ವರ್ಗದವರಿಗೆ ಬಿಗ್ ರಿಲೀಫ್ ..!
8ನೇ ವೇತನ ಆಯೋಗ 2026ರ ಜನವರಿ 1ರಿಂದ ಶುರುವಾಗುತ್ತದೆ. ಏಕೆಂದರೆ 7ನೇ ವೇತನ ಆಯೋಗದ ಅವಧಿ 2025ರ ಡಿಸಂಬರ್ 31ಕ್ಕೆ ಮುಕ್ತಾಯವಾಗಲಿದೆ. ಹೊಸ ವೇತನ ಆಯೋಗವು 10 ವರ್ಷಗಳಿಗೆ ಒಮ್ಮೆ ರಚನೆಯಾಗಿ ನೌಕರರ ವೇತನವನ್ನು ಪರಿಷ್ಕರಣೆ ಮಾಡುತ್ತದೆ. ಈ ಪ್ರಯೋಜನ ಕೇಂದ್ರ ಸರ್ಕಾರದ ಪಿಂಚಣಿದಾರರಿಗೂ ಲಭ್ಯವಾಗಲಿದೆ. ಪಿಂಚಣಿದಾರರಿಗೂ 2026ರ ಜನವರಿ 1ರಿಂದ ಪಿಂಚಣಿ ಹೆಚ್ಚಳವಾಗಲಿದೆ.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.