RCB owner: ಬಹಳಷ್ಟು ಕಾತುರವಾಗಿ ಕಾಯುತ್ತಿರುವ ಈ ವರ್ಷದ ಐಪಿಎಲ್ 2025 ಮಾರ್ಚ್ 21ರಿಂದ ಪ್ರಾರಂಭವಾಗಲಿದೆ. ಈ ಬಗ್ಗೆ ಐಪಿಎಲ್ ಮಂಡಳಿಯ ಮುಖ್ಯಸ್ಥ ಅರುಣ್ ಧುಮಾಲ್ ತಿಳಿಸಿದ್ದಾರೆ. ಇನ್ನು ಈ ಟೂರ್ನಿಯಲ್ಲಿ ಒಟ್ಟು 10 ತಂಡಗಳು ಆಡುತ್ತವೆ
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ಬಹಳಷ್ಟು ಕಾತುರವಾಗಿ ಕಾಯುತ್ತಿರುವ ಈ ವರ್ಷದ ಐಪಿಎಲ್ 2025 ಮಾರ್ಚ್ 21ರಿಂದ ಪ್ರಾರಂಭವಾಗಲಿದೆ. ಈ ಬಗ್ಗೆ ಐಪಿಎಲ್ ಮಂಡಳಿಯ ಮುಖ್ಯಸ್ಥ ಅರುಣ್ ಧುಮಾಲ್ ತಿಳಿಸಿದ್ದಾರೆ. ಇನ್ನು ಈ ಟೂರ್ನಿಯಲ್ಲಿ ಒಟ್ಟು 10 ತಂಡಗಳು ಆಡುತ್ತವೆ. ಗುಜರಾತ್ ಟೈಟಾನ್ಸ್, ಚೆನ್ನೈ ಸೂಪರ್ ಕಿಂಗ್ಸ್, ಲಖನೌ ಸೂಪರ್ ಜಯಂಟ್ಸ್, ಮುಂಬೈ ಇಂಡಿಯನ್ಸ್, ರಾಜಸ್ಥಾನ ರಾಯಲ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು, ಕೋಲ್ಕತಾ ನೈಟ್ ರೈಡರ್ಸ್, ಪಂಜಾಬ್ ಕಿಂಗ್ಸ್, ಡೆಲ್ಲಿ ಕ್ಯಾಪಿಟಲ್ಸ್, ಸನ್ರೈಸರ್ಸ್ ಹೈದರಾಬಾದ್ ತಂಡಗಳು.
ಈ ಪಂದ್ಯಾವಳಿಯಲ್ಲಿ 13 ಕ್ಕೂ ಹೆಚ್ಚು ದೇಶಗಳ ಆಟಗಾರರು ಭಾಗವಹಿಸುತ್ತಾರೆ. ಈ ಮೊದಲು 2008ರಲ್ಲಿ ಆರಂಭವಾದಾಗ ಐಪಿಎಲ್ ಟೂರ್ನಿಯಲ್ಲಿ ಕೇವಲ 8 ತಂಡಗಳಿದ್ದವು. ಆದರೆ 2022ರಲ್ಲಿ ಎರಡು ಹೊಸ ತಂಡಗಳ ಸೇರ್ಪಡೆಯೊಂದಿಗೆ ಒಟ್ಟು ಸಂಖ್ಯೆ 10ಕ್ಕೆ ಏರಿದೆ.
ಐಪಿಎಲ್ನಲ್ಲಿ ಅತಿ ಹೆಚ್ಚು ಫ್ಯಾನ್ ಫಾಲೋವರ್ಸ್ ಹೊಂದಿರುವ ತಂಡಗಳೆಂದರೆ ಚೆನ್ನೈ ಸೂಪರ್ ಕಿಂಗ್ಸ್, ಮುಂಬೈ ಇಂಡಿಯನ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು. ಟಾಪ್ ಮೂರರಲ್ಲಿರುವ ಬೆಂಗಳೂರು ತಂಡದ ಮಾಲೀಕರು ಯಾರೆಂಬುದನ್ನು ಮುಂದೆ ತಿಳಿಯೋಣ.
RCB ಐಪಿಎಲ್ನ ಆರಂಭಿಕ ಮತ್ತು ಮೂಲ ಫ್ರಾಂಚೈಸಿಗಳಲ್ಲಿ ಒಂದಾಗಿದೆ. ಮೊದಲ ಸೀಸನ್ನಿಂದಲೂ ಅಸ್ತಿತ್ವದಲ್ಲಿರುವ ಈ ತಂಡಕ್ಕೆ ಭಾರೀ ಫ್ಯಾನ್ಸ್ ಇದ್ದಾರೆ. ಇನ್ನೊಂದೆ ಈ ತಂಡಕ್ಕೆ ಮತ್ತಷ್ಟು ಕಳೆ ತಂದುಕೊಟ್ಟಿದ್ದು ವಿರಾಟ್ ಕೊಹ್ಲಿ.
ಆರ್ಸಿಬಿ 2009, 2011 ಮತ್ತು 2016ರ ಫೈನಲ್ ತಲುಪಿತ್ತು. 2020, 2021 ಮತ್ತು 2020ರ ಐಪಿಎಲ್ ಸೀಸನ್ಗಳಲ್ಲಿ ಪ್ಲೇಆಫ್ಗೆ ಅರ್ಹತೆ ಗಳಿಸಿತ್ತು. ಆದರೆ ಇದುವರೆಗೂ ಟ್ರೋಫಿ ಗೆಲ್ಲುವ ಕನಸು ಮಾತ್ರ ನನಸಾಗಲೇ ಇಲ್ಲ.
2008 ರಲ್ಲಿ, ರಾಯಲ್ ಚಾಲೆಂಜರ್ಸ್ ಬೆಂಗಳೂರು ಅನ್ನು ಕಿಂಗ್ ಫಿಶರ್ ಏರ್ಲೈನ್ಸ್ ಮತ್ತು ಯುನೈಟೆಡ್ ಸ್ಪಿರಿಟ್ಸ್ನ ಮಾಜಿ ಅಧ್ಯಕ್ಷ ವಿಜಯ್ ಮಲ್ಯ ಖರೀದಿಸಿದ್ದರು. ತಂಡದ ಹರಾಜಿನ ಸಮಯದಲ್ಲಿ RCB ಪರ ಎರಡನೇ ಅತಿ ಹೆಚ್ಚು ಬಿಡ್ $111.6 ಮಿಲಿಯನ್ ಆಗಿತ್ತು. ಆದರೆ, ವಿಜಯ್ ಮಲ್ಯ ಮತ್ತು ಆರ್ಸಿಬಿಯ ಪ್ರಯಾಣವು 2016ರಲ್ಲಿ ಕೊನೆಯಾಯಿತು.
ಭಾರಿ ಮೊತ್ತದ ಸಾಲವನ್ನು ಪಾವತಿಸಲು ಸಾಧ್ಯವಾಗದೆ ಜೈಲು ಶಿಕ್ಷೆ ತಪ್ಪಿಸಲು ದೇಶ ಬಿಟ್ಟು ಪಲಾಯನ ಮಾಡಿದ್ದರು ಮಲ್ಯ. ಈಗ ವಾಂಟೆಡ್ ಕ್ರಿಮಿನಲ್ ಎಂದು ಹೇಳಲಾಗುತ್ತಿದೆ. ಈಗ, ಕಿಂಗ್ಫಿಶರ್ ಏರ್ಲೈನ್ಸ್ ಅಸ್ತಿತ್ವದಲ್ಲಿಲ್ಲ ಮತ್ತು RCB ಯ ಏಕೈಕ ಮಾಲೀಕ ಯುನೈಟೆಡ್ ಸ್ಪಿರಿಟ್ಸ್ ಆಗಿದೆ. ಪ್ರಸ್ತುತ ಇದು ಯಾವುದೇ ವೈಯಕ್ತಿಕ ಮಾಲೀಕರನ್ನು ಹೊಂದಿಲ್ಲ.
ಪ್ರಸ್ತುತ ರಾಯಲ್ ಚಾಲೆಂಜರ್ಸ್ ಬೆಂಗಳೂರು ಐಪಿಎಲ್ನ ಆರನೇ ಅತ್ಯಮೂಲ್ಯ ಫ್ರಾಂಚೈಸಿ ಮತ್ತು 1.25 ಮಿಲಿಯನ್ ಮೌಲ್ಯದ್ದಾಗಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ಪ್ರಸ್ತುತ ಮಾಲೀಕ ಯುನೈಟೆಡ್ ಸ್ಪಿರಿಟ್ಸ್ ಲಿಮಿಟೆಡ್, ಮದ್ಯ ಕಂಪನಿಯಾಗಿದ್ದು, ಇದರ ಹಿಂದಿನ ಹೆಸರು ಯುನೈಟೆಡ್ ಬ್ರೂವರೀಸ್.