Toll Tax: ಇನ್ಮುಂದೆ ಟೋಲ್ ಪ್ಲಾಜಾಗಳಲ್ಲಿ ವಾಹನ ನಿಲ್ಲಿಸಿ ಟೋಲ್ ಕಟ್ಟುವಂತಿಲ್ಲ, ಬರಲಿದೆ ಹೊಸ ವ್ಯವಸ್ಥೆ!

Toll Tax News: ಇತ್ತೀಚಿಗೆ ಎಲ್ಲಾ ಕಡೆ ಟೋಲ್ ಟ್ಯಾಕ್ಸ್ ಸಿಕ್ಕಾಪಟ್ಟೆ ಜಾಸ್ತಿಯಾಗಿದೆ. ಜೊತೆಗೆ ಟೋಲ್ ಗಳಲ್ಲಿ ಸ್ವಲ್ಪಹೊತ್ತು ನಿಂತು ಆಮೇಲೆ ಮುಂದಕ್ಕೆ ಹೋಗಬೇಕಾದ ಪರಿಸ್ಥಿತಿ ಇದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಟೋಲ್ ಕಟ್ಟದೆ ಪ್ರಯಾಣಿಸುವ ಹೊಸ ವ್ಯವಸ್ಥೆ ಪರಿಚಯಿಸಲು ಮುಂದಾಗಿದೆ.

Written by - Yashaswini V | Last Updated : Jan 28, 2025, 09:02 AM IST
  • ರಾಷ್ಟ್ರೀಯ ಹೆದ್ದಾರಿಗಳಲ್ಲಿ ಫಾಸ್ಟ್ಯಾಗ್ ಜೊತೆಗೆ ತಡೆರಹಿತ ಗ್ಲೋಬಲ್ ನ್ಯಾವಿಗೇಷನ್ ಸ್ಯಾಟಲೈಟ್ ಸಿಸ್ಟಮ್ (ಜಿಎನ್ಎಸ್ಎಸ್) ಆಧಾರಿತ ಟೋಲ್ ಸಂಗ್ರಹ ವ್ಯವಸ್ಥೆ ಜಾರಿಗೊಳಿಸಲಾಗುತ್ತಿದೆ.
  • ಗ್ಲೋಬಲ್ ನ್ಯಾವಿಗೇಷನ್ ಸ್ಯಾಟಲೈಟ್ ಸಿಸ್ಟಮ್ ಈಗಿರುವ ಟೋಲ್ ಸಂಗ್ರಹ ವ್ಯವಸ್ಥೆಗಿಂತ ಉತ್ತಮವಾದುದಾಗಿರುತ್ತದೆ ಎಂದು ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ.
  • ಕಳೆದ ವರ್ಷ ಕರ್ನಾಟಕದ ರಾಷ್ಟ್ರೀಯ ಹೆದ್ದಾರಿ NH 275 ಬೆಂಗಳೂರು ಮೈಸೂರು ವಿಭಾಗದಲ್ಲಿ ಪ್ರಾಯೋಗಿಕವಾಗಿ ಜಿಎನ್ಎಸ್ಎಸ್ ಬಗ್ಗೆ ಅಧ್ಯಯನ ನಡೆಸಲಾಗಿದೆ.
Toll Tax: ಇನ್ಮುಂದೆ ಟೋಲ್ ಪ್ಲಾಜಾಗಳಲ್ಲಿ ವಾಹನ ನಿಲ್ಲಿಸಿ ಟೋಲ್ ಕಟ್ಟುವಂತಿಲ್ಲ, ಬರಲಿದೆ ಹೊಸ ವ್ಯವಸ್ಥೆ! title=

Toll Tax Rule: ಬೇಗ ಹೋಗಬೇಕು, ಸುಗಮವಾಗಿ ಸಂಚರಿಸಬೇಕು ಎನ್ನುವ ಕಾರಣಕ್ಕಾಗಿಯೇ ಜನ ಟೋಲ್ ಇರುವ ರಸ್ತೆಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಆದರೆ ಟೋಲ್ ಗಳಲ್ಲಿ ಕೆಲಹೊತ್ತು ಕಾದು ಆಮೇಲೆ ಟೋಲ್ ಕಟ್ಟಿ ಮುಂದಕ್ಕೆ ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಈಗ ಟೋಲ್ ಕಟ್ಟದೆ ಪ್ರಯಾಣಿಸುವ ಹೊಸ ವ್ಯವಸ್ಥೆಯನ್ನು ಪರಿಚಯಿಸಲು ಮುಂದಾಗಿದೆ.

ಇತ್ತೀಚಿಗೆ ಎಲ್ಲಾ ಕಡೆ ಟೋಲ್ ಟ್ಯಾಕ್ಸ್ ಸಿಕ್ಕಾಪಟ್ಟೆ ಜಾಸ್ತಿಯಾಗಿದೆ. ಅದರ ನಡುವೆ ತಾಂತ್ರಿಕ ದೋಷ ಮತ್ತಿತರ ಕಾರಣಗಳಿಂದಾಗಿ ಟೋಲ್ ಗಳಲ್ಲಿ ಸ್ವಲ್ಪಹೊತ್ತು ನಿಂತು ಆಮೇಲೆ ಮುಂದಕ್ಕೆ ಹೋಗಬೇಕಾದ ಪರಿಸ್ಥಿತಿ ಇದೆ. ಅದಕ್ಕಾಗಿ ಈಗ ಕೇಂದ್ರ ಸರ್ಕಾರ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಓಡಾಡುವ ಖಾಸಗಿ ವಾಹನಗಳಿಗೆ ಟೋಲ್ ಸಂಗ್ರಹದ ಬದಲಿಗೆ ಮಾಸಿಕ ಮತ್ತು ವಾರ್ಷಿಕ ಪಾಸ್ ಗಳನ್ನೂ ಪರಿಚಿಯಿಸಲು ಚಿಂತನೆ ನಡೆಸುತ್ತಿದೆಯಂತೆ. 

ಕೇಂದ್ರ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಇಂಥದೊಂದು ಸುಳಿವು ನೀಡಿದ್ದಾರೆ. ಹೆದ್ದಾರಿಗಳಲ್ಲಿ ಬರುವ ಗ್ರಾಮಗಳ ಹೊರಗೆ ಟೋಲ್ ಸಂಗ್ರಹಣಾ ಬೂತ್ ಗಳನ್ನು ಸ್ಥಾಪಿಸಲಾಗುವುದು. ಸದ್ಯ ಶೇಕಡಾ 74ರಷ್ಟು ಟೋಲ್ ಸಂಗ್ರಹ ವಾಣಿಜ್ಯ ವಾಹನಗಳಿಂದ ಬರುತ್ತಿದೆ. ಖಾಸಗಿ ವಾಹನಗಳಿಗೆ ಮಾಸಿಕ ಮತ್ತು ವಾರ್ಷಿಕ ಪಾಸ್ ಗಳನ್ನು ಪರಿಚಯಿಸಲು ಯೋಚಿಸಲಾಗುತ್ತಿದೆ ಎಂದು ಗಡ್ಕರಿ ಹೇಳಿದ್ದಾರೆ.

ಇದನ್ನೂ ಓದಿ- ಟ್ಯಾಕ್ಸ್ ಉಳಿಸಬೇಕೆಂದು ನಕಲಿ ಬಾಡಿಗೆ ರಸೀದಿ ಕೊಟ್ಟರೆ ಅಪಾಯ ಗ್ಯಾರಂಟಿ; ನಕಲಿ ಬಿಲ್‌ಗಳ ಮೇಲೆ ಐಟಿ ಹದ್ದಿನ ಕಣ್ಣು..! 

ಮೊದಲು ರಾಷ್ಟ್ರೀಯ ಹೆದ್ದಾರಿಗಳಲ್ಲಿ ಫಾಸ್ಟ್ಯಾಗ್ ಜೊತೆಗೆ ತಡೆರಹಿತ ಗ್ಲೋಬಲ್ ನ್ಯಾವಿಗೇಷನ್ ಸ್ಯಾಟಲೈಟ್ ಸಿಸ್ಟಮ್ (ಜಿಎನ್ಎಸ್ಎಸ್) ಆಧಾರಿತ ಟೋಲ್ ಸಂಗ್ರಹ ವ್ಯವಸ್ಥೆಯನ್ನು ಅನುಷ್ಠಾನಕ್ಕೆ ತರಲು ತೀರ್ಮಾನಿಸಲಾಗಿದೆ. ಗ್ಲೋಬಲ್ ನ್ಯಾವಿಗೇಷನ್ ಸ್ಯಾಟಲೈಟ್ ಸಿಸ್ಟಮ್ ಈಗಿರುವ ಟೋಲ್ ಸಂಗ್ರಹ ವ್ಯವಸ್ಥೆಗಿಂತ ಉತ್ತಮವಾದುದಾಗಿರುತ್ತದೆ ಎಂದು ಕೇಂದ್ರ ಸಚಿವ ಗಡ್ಕರಿ ತಿಳಿಸಿದ್ದಾರೆ.

ಕಳೆದ ವರ್ಷ ಕರ್ನಾಟಕದ ರಾಷ್ಟ್ರೀಯ ಹೆದ್ದಾರಿ NH 275 ಬೆಂಗಳೂರು ಮೈಸೂರು ವಿಭಾಗ ಹಾಗು ಹರಿಯಾಣದ NH 709 ಪಾಣಿಪತ್ ಹಿಸಾರ್ ವಿಭಾಗದಲ್ಲಿ ಪ್ರಾಯೋಗಿಕವಾಗಿ ಗ್ಲೋಬಲ್ ನ್ಯಾವಿಗೇಷನ್ ಸ್ಯಾಟಲೈಟ್ ಸಿಸ್ಟಮ್ ಆಧಾರಿತ ಬಳಕೆದಾರರ ಶುಲ್ಕ ಸಂಗ್ರಹ ವ್ಯವಸ್ಥೆ ಕುರಿತು ಪ್ರಾಯೋಗಿಕ ಅಧ್ಯಯನ ನಡೆಸಲಾಗಿದೆ. ಇದರಿಂದಾಗಿ ಸಂಚಾರ ದಟ್ಟಣೆಯನ್ನು ಕಮ್ಮಿ ಮಾಡಲು ಮತ್ತು ಹೆದ್ದಾರಿಗಳಲ್ಲಿ ಪ್ರಯಾಣಿಸುವ ನಿಖರವಾದ ದೂರವನ್ನು ಆಧರಿಸಿ ಶುಲ್ಕ ವಿಧಿಸಲು ಸಾಧ್ಯವಾಗುತ್ತದೆ ಎಂದು ಗಡ್ಕರಿ ತಿಳಿಸಿದ್ದಾರೆ. 

ಇದನ್ನೂ ಓದಿ- Income Tax ಕಟ್ಟುವ ಪದ್ದತಿಯೇ ಇಲ್ಲದ ದೇಶಗಳು ಯಾವುವು ಗೊತ್ತಾ?

2018-19ರ ಆರ್ಥಿಕ ವರ್ಷದಲ್ಲಿ ಟೋಲ್ ಗೇಟ್ ಗಳಲ್ಲಿ ವಾಹನಗಳು ಸರಾಸರಿ ಕಾಯುವ ಸಮಯ ಎಂಟು ನಿಮಿಷವಾಗಿತ್ತು. ನಂತರ ಫಾಸ್ಟ್ಯಾಗ್ ಪರಿಚಯಿಸಲಾಗಿ 2020-21 ಹಾಗು 2021-2022ರ ಆರ್ಥಿಕ ವರ್ಷಗಳಲ್ಲಿ ವಾಹನಗಳ ಕಾಯುವ ಸಮಯ ಸರಾಸರಿ 47 ಸೆಕೆಂಡುಗಳಾಗಿದೆ. ಕೆಲವು ಸ್ಥಳಗಳಲ್ಲಿ,  ನಗರಗಳ ಸಮೀಪ ಕಾಯುವ ಸಮಯ ಗಣನೀಯವಾಗಿ ಸುಧಾರಣೆಗೆ ಬಂದಿದೆ. ಅದರಲ್ಲೂ ಪೀಕ್ ಸಮಯದಲ್ಲಿ ಸುಧಾರಣೆಗೆ ಬಂದಿದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ.

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News