Mahakumbh mela Monalisa : ಮಹಾ ಕುಂಭಮೇಳದಲ್ಲಿ ಕಾಣಿಸಿಕೊಂಡು ಸೋಷಿಯಲ್ ಮೀಡಿಯಾ ಸೆನ್ಸೇಷನ್ ಆಗಿದ್ದ ಮೊನಾಲಿಸಾ ಮಾರುವೇಷ ಧರಿಸಿ ಬಂದಿದ್ದ ಐಎಎಸ್ ಅಧಿಕಾರಿ ಎಂದು ಹೇಳಲಾಗುತ್ತಿದೆ.. ಅಸಲಿಗೆ ಇದು ನಿಜವೇ..? ಈ ಕುರಿತ ಸುದ್ದಿ ಫೋಟೋ ಸಮೇತ ಇಂಟರ್ನೆಟ್ನಲ್ಲಿ ವೈರಲ್ ಆಗುತ್ತಿದೆ..
ಜೇನು ಕಣ್ಣಿನ ಹುಡುಗಿಯೊಬ್ಬಳು 2025 ರ ಮಹಾ ಕುಂಭಮೇಳದಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಸಂಚಲನವನ್ನು ಸೃಷ್ಟಿಸಿದಳು.. ಈ ಕುರಿತು ಹೆಚ್ಚಾಗಿ ಹೇಳುವ ಅವಶ್ಯಕತೆ ಇಲ್ಲ.. ಈಕೆಯ ಬಗ್ಗೆ ಎಲ್ಲರಿಗೂ ಗೊತ್ತು..
ಆಕೆಯ ಫೋಟೋಗಳು ಮತ್ತು ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹರಡುತ್ತಿವೆ.. ಮಹಾ ಕುಂಭಮೇಳದಲ್ಲಿ ರುದ್ರಾಕ್ಷಿ ಮಣಿ ಮಾರಲು ಬಂದಿದ್ದ ಈಕೆ ಸೋಷಿಯಲ್ ಮೀಡಿಯಾ ಸೆನ್ಸೆಷನ್ ಆಗಿದ್ದಾಳೆ.
ಇದಲ್ಲದೇ ಆಕೆಗೆ ಬಾಲಿವುಡ್ ಸಿನಿಮಾದ ಜೊತೆಗೆ ರಾಮ್ ಚರಣ್ ನಟನೆಯ ಮುಂಬರುವ ಆರ್ ಸಿ 16 ಚಿತ್ರದಲ್ಲೂ ನಟಿಸಲು ಅವಕಾಶ ಸಿಕ್ಕಿದೆ ಎಂಬ ವರದಿಗಳಿವೆ.
ಇದೆಲ್ಲವನ್ನು ಬದಿಗಿಟ್ಟು ಕೆಲವರು ಮಹಾ ಕುಂಭಮೇಳಕ್ಕೆ ಮಾರುವೇಷದಲ್ಲಿ ಬಂದು ಮೊನಾಲಿಸಾ ಮಣಿ ಮಾರುತ್ತಿದ್ದರು ಅಂತ ನಕಲಿ ವಿಡಿಯೋಗಳನ್ನು ಸೃಷ್ಟಿಸಿದ್ದಾರೆ. ಇದನ್ನು ನೋಡಿದ ಕೆಲವರು ಬಿದ್ದು ಬಿದ್ದು ನಗುತ್ತಿದ್ದಾರೆ.
ವಿಚಿತ್ರ ಅಂದ್ರೆ AI ಮೂಲಕ ಮೊನಾಲಿಸಾ ಐಎಎಸ್ ಅಧಿಕಾರಿಯ ರೂಪದಲ್ಲಿರುವ ಫೊಟೋಗಳನ್ನು ರಚಿಸಿ ವೈರಲ್ ಮಾಡಲಾಗುತ್ತಿದೆ.. 16 ವರ್ಷದ ಮೊನಾಲಿಸಾ IAS ಅಧಿಕಾರಿ ಎನ್ನುವುದು ಶುದ್ಧ ಸುಳ್ಳು.. ಇದೇಲ್ಲ ಕಿಡಿಗೇಡಿಗಳ ಕೈವಾಡ..