1. ನಿಮ್ಮ ಸಾಮಾನುಗಳನ್ನು ಹೊತ್ತುಕೊಂಡು ನೀವು ಕನಿಷ್ಟ 6-8 ಕಿಮೀ ನಡೆಯಬೇಕಾಗುತ್ತದೆ. ರೈಲಿನಲ್ಲಿ ಬಂದರೆ 10 ಕಿ.ಮೀ ನಡೆಯಬೇಕು.
2. ಯಾವುದೇ ಹೆಚ್ಚುವರಿ ಸೌಲಭ್ಯಗಳಿಲ್ಲದೆ 10,000/ದಿನ ದರದಲ್ಲಿ ಟೆಂಟ್ಗಳು ಮಾತ್ರ ಲಭ್ಯವಿವೆ. (1.5 ಲಕ್ಷ ಟೆಂಟ್ಗಳು ಉಚಿತವಾಗಿ ಲಭ್ಯವಿದೆ ಆದರೆ ವಿವಿಧ ಪ್ರದೇಶಗಳಲ್ಲಿ ವಿವಿಧ ಬಾಬಾಗಳಿಗೆ ಹಂಚಲಾಗಿದೆ).
3. ಮುಖ್ಯ ಸ್ನಾನದ ದಿನದಂದು ಬರಬೇಡಿ, ಏಕೆಂದರೆ ಇದು ಅತ್ಯಂತ ಕಷ್ಟಸಾಧ್ಯ ಹಾಗೂ ಮಾನಸಿಕ ಒತ್ತಡದಿಂದ ಕೂಡಿರಬಹುದು. ಯಾವುದೇ ಮಾರ್ಗದಲ್ಲಿ ಹೋದರೂ ಜನಜಂಗುಳಿಯಿಂದ ತುಂಬಿರಬಹುದು.
4. ಸಂಚಾರ ದಟ್ಟಣೆಯಿಂದಾಗಿ ಕುಂಭದ ಸಮಯದಲ್ಲಿ ಯಾವುದೇ ಆಟೋ, ಇ-ರಿಕ್ಷಾ ಅಥವಾ ಓಲಾ-ಮಾದರಿಯ ಸೇವೆ ಇಲ್ಲ.
5. ಒತ್ತಿ ಹೇಳುವುದೇನೆಂದರೆ: ನಿಮ್ಮ ದರ್ಶನದ ಸಂಪೂರ್ಣ ಸಮಯದಲ್ಲಿ ನಿಮ್ಮ ಸ್ವಂತ ನೀವು ಹೊತ್ತುಕೊಂಡು ಸಾಗಿಸಬಹುದಾದಷ್ಟು ಅಥವಾ ದೂಡಿ ಸಾಗಿಸಬಹುದಾದ ಸಾಮಾನುಗಳನ್ನು ಮಾತ್ರ ತನ್ನಿ.
6. ನೀವು ಏನನ್ನಾದರೂ ಕಳೆದುಕೊಂಡರೆ ಅಥವಾ ಬೇರ್ಪಟ್ಟರೆ, ಅದನ್ನು ಸಾರಿಹೇಳಲು 10 ವಿಭಿನ್ನ ಸ್ಥಳಗಳಲ್ಲಿ ಉದ್ಘೋಷಣಾ ಗೋಪುರಗಳಿವೆ. ನೀವು ಅಲ್ಲಿ ಘೋಷಣೆಗಳನ್ನು ಮಾಡಿಸಬಹುದು. ಉದಾಹರಣೆಗೆ, ಮುಖ್ಯ ಸಂಗಮ್ ಪ್ರದೇಶದಲ್ಲಿ ನೀವು ಟವರ್ ಸಂಖ್ಯೆ 1 ರಲ್ಲಿ ಪ್ರಕಟಣೆಯನ್ನು ಮಾಡಬಹುದು. ಆದರೆ ಅದು ಎಷ್ಟು ಜನರ ಗಮನಕ್ಕೆ ಬರಬಹುದು ಎಂಬುದು ಪ್ರಶ್ನಾರ್ಹ.
ಒಳ್ಳೆಯ ಗುಣಮುತ್ತದ GPS Tags ಧರಿಸಿ ಇದ್ದರೆ ತಪ್ಪಿಸಿ ಹೋದರೆ ಕಂಡುಹಿಡಿಯಲು ಸಹಾಯಕಾರಕವಾಗಬಹುದು.
7. ಎಲ್ಲರಿಗೂ ವಿವಿಧ ರುಚಿಕರ ರೆಸಿಪಿಗಳೊಂದಿಗೆ ತಯಾರಿಸಲಾದ ಅನೇಕ ಸಮುದಾಯಗಳ ಉಚಿತ ಅನ್ನ ಸೇವಾಕೇಂದ್ರ (ಭಂಡಾರಗಳು) ಇವೆ. ಅಲ್ಲಿ ಹೋಗಿ ಊಟ ಮಾಡಬಹುದು.
8. ವಿಐಪಿ (VIP Services) ಸೇವೆಗಳು ₹45,000-50,000/ದಿನಕ್ಕೆ ಲಭ್ಯವಿದ್ದು, ಇದು ಮಾರ್ಗದರ್ಶನದೊಂದಿಗಿನ ಪ್ರವಾಸಗಳನ್ನು (guided tours) ಒದಗಿಸುತ್ತದೆ.
9. ಹತ್ತಿರದ ರೈಲು ನಿಲ್ದಾಣವೆಂದರೆ ಪ್ರಯಾಗ್ರಾಜ್ ಸಂಗಮ್, ಆದರೆ ಜನಸಂದಣಿಯಿಂದಾಗಿ ಮುಖ್ಯ ಸ್ನಾನಕ್ಕೆ 1-2 ದಿನಗಳ ಮೊದಲು ಮತ್ತು ನಂತರ ಅದನ್ನು ಮುಚ್ಚಲಾಗುತ್ತದೆ. ಅದರ ವೃತಿರಿಕ್ತವಾಗಿ , ಹತ್ತಿರದ ನಿಲ್ದಾಣಗಳೆಂದರೆ ಜುಸಿ ಮತ್ತು ಪ್ರಯಾಗ್ ಜಂಕ್ಷನ್ (ಪ್ರಯಾಗ್ ರಾಜ್ ಚಿಯೋಕಿ ಮತ್ತು ಪ್ರಯಾಗ್ ರಾಜ್ ಜಂಕ್ಷನ್ ಗಳು ಅಲ್ಲ).
10. ನೀವು ಹೊದಿಕೆಗಳು ಮತ್ತು ಆಹಾರದ ವಸ್ತುಗಳನ್ನು ಮಾರಾಟಕ್ಕೆ ಇಟ್ಟದ್ದು ಕಾಣಬಹುದು, ಆದರೆ ಬೆಲೆಗಳು ದುಪ್ಪಟ್ಟಾಗಿದೆ.
11. ನೀವು ವಾರಣಾಸಿಯಿಂದ ರಸ್ತೆಯ ಮೂಲಕ ಬರುತ್ತಿದ್ದರೆ, ನಿಮ್ಮನ್ನು 6 ಕಿಮೀ ನಡಿಗೆಯ ದೂರದಲ್ಲಿರುವ ಜುಸಿಯಲ್ಲಿ ಇಳಿಸಲಾಗುತ್ತದೆ. (ಆದಾಗ್ಯೂ, ಕೆಲವು ಆಟೋಗಳು ಹೆಚ್ಚುವರಿ ಶುಲ್ಕ ವಿಧಿಸುತ್ತವೆ ಮತ್ತು ಅವರು ಪೊಲೀಸರನ್ನು ತಪ್ಪಿಸಿ ಒಳಗಿನ ಮಾರ್ಗಗಳಿಂದ ತೆಗೆದುಕೊಂಡು ಹೋಗುತ್ತಾರೆ).
12. ನೀವು ಮೇಳಕ್ಕೆ ಆಗಮಿಸುವ ಮೊದಲು, ನಿಮ್ಮ ಗುಂಪಿಗೆ ಯಾವುದೇ ಒಂದು ವಿಶಿಷ್ಠ ಬಣ್ಣದ ವಸ್ತುಗಳು, ಕ್ಯಾಪ್ಗಳು, ಧ್ವಜ ಅಥವಾ ದೂರದಿಂದ ಸುಲಭವಾಗಿ ಗೋಚರಿಸಬಹುದಾದಂತಹ ಕೆಲವು ಮಾರ್ಕರ್ಗಳನ್ನು ತೆಗೆದುಕೊಳ್ಳಲು ಮರೆಯಬೇಡಿ.
13. ಮುಖ್ಯ ಸ್ನಾನದ ದಿನದಂದು (ಅಮೃತ ಸ್ನಾನ), ಬಾಬಾಗಳು ಮತ್ತು ನಾಗಾ ಸಾಧುಗಳು ಸುಮಾರು 5:30-7 ಗಂಟೆ ಮುಂಜಾನೆ ಆಗಮಿಸಲು ಪ್ರಾರಂಭಿಸುತ್ತಾರೆ. ಅವರಿಗೆ ಮೊದಲ ಪ್ರಾಮುಖ್ಯತೆ ನೀಡಲಾಗುತ್ತದೆ. ಅದರ ನಂತರವೇ ನೀವು ಸ್ನಾನ ಮಾಡಬಹುದು, ಆದರೆ ನಂತರ ಜನಸಂದಣಿ ಅತಿ ಅಪಾಯಕಾರಿಯಾಗಿ ಹೆಚ್ಚುತ್ತದೆ.
14. ಯಾವುದೇ ಸಮಸ್ಯೆಗಳು ಉದ್ಭವಿಸಿದರೆ ಮಾರ್ಗದರ್ಶನ ನಿರ್ದೇಶನಗಳಿಗಾಗಿ ಪೊಲೀಸರನ್ನು ಸಹಾಯ ಪಡೆಯಿರಿ. ನೀವು ತಪ್ಪು ತಿರುವು ತೆಗೆದುಕೊಂಡರೆ, ಅದು ನಿಮ್ಮ ಹೋಗಲಿರುವ ಜಾಗೆಗೆ 1-2 ಕಿ.ಮೀ ಹೆಚ್ಚು ನಡೆಯಬೇಕಾಗಬಹುದು. ಆದ್ದರಿಂದ ಹಂತಹಂತದಲ್ಲೂ ಖಚಿತಪಡಿಸಿ ಕೊಳ್ಳಿ.
15. ಸಂಗಮ್ನಲ್ಲಿನ ನೀರು ತುಂಬಾ ತಣ್ಣಗಿರುತ್ತದೆ ಮತ್ತು ಹವಾಮಾನವು ತೀಕ್ಷ್ಣ ತಂಪಾಗಿರುತ್ತದೆ. ರಾತ್ರಿ ಚಳಿ ಬಹಳ ಜೋರಿರುತ್ತದೆ. ಆದ್ದರಿಂದ ರಾತ್ರಿ ಬೇಕಾಗುವ ಬೆಚ್ಚಗಿನ ಬಟ್ಟೆಗಳನ್ನು ತರಲು ಮರೆಯಬೇಡಿ.
16. ಫೆಬ್ರವರಿ 3 ಮತ್ತು 11 ರ ನಡುವೆ ಭೇಟಿ ನೀಡಲು ಉತ್ತಮ ಸಮಯ, ಏಕೆಂದರೆ ಜನಸಂದಣಿಯು ಕಡಿಮೆ ಇರಬಹುದು.
17. 7 PM ರಿಂದ 3 AM ವರೆಗೆ, ಜನಸಂದಣ ಯ ಸಾಂದ್ರತೆ ಕಡಿಮೆ ಇದ್ದು ಹೆಚ್ಚು ಅಲೆದಾಡುವುದು ಆರಾಮದಾಯಕವಾಗಿರಬಹುದು. ಆದರೆ ಆಗ ಚಳಿಯೂ ಹೆಚ್ಚಿರುತ್ತದೆ.
18. ಲಾಕರ್ಗಳು ಮತ್ತು ಕ್ಲೋಕ್ರೂಮ್ಗಳು ಲಭ್ಯವಿಲ್ಲ. ಆದ್ದರಿಂದ ಬೆಲೆ ಬಾಳುವ ವಸ್ತು ಒಡವೆ ವಜ್ರ ಬೆಂಡೋಲೆಗಳನ್ನು ಧರಿಸದೇ ಹೋದರೇ ಒಳ್ಳೆಯದು.
ಯಾರಾದರೂ ನಿಮ್ಮನ್ನು ಸಂಗಮ್ ಪ್ರದೇಶಕ್ಕೆ ಬಿಡುತ್ತಾರೆ ಮತ್ತು ನೀವು ನಡೆಯಬೇಕಾಗಿಲ್ಲ ಎಂದು ಹೇಳಿದರೆ ನಂಬಬೇಡಿ, ಅವರು ಸುಳ್ಳು ಹೇಳುತ್ತಾರೆ. ಮೇಳವನ್ನು ಪ್ರವೇಶಿಸಿದ ನಂತರ, ನೀವು ವೇಳದೊಳಗೆ ಕಡಿಮೆಯಿಂದಲೂ 5-6 ಕಿಮೀ ನಡೆಯಬೇಕು.
19. ಆರಾಮದಾಯಕ ಪಾದರಕ್ಷೆ (canvas shoes) ಗಳು ಮತ್ತು ಬಟ್ಟೆಗಳನ್ನು ಧರಿಸಿ. ಅದು ನಿಮಗೆ ದೂರದವರೆಗೆ ನಡೆಯಲು ಅನುವು ಮಾಡಿಕೊಡುತ್ತದೆ.
20. ಸಂಗಮದಲ್ಲಿ ವೃತ್ತಾಕಾರದ ನಿಯೋಜಿತ ಪ್ರದೇಶದಲ್ಲಿ ಮಾತ್ರ ನೀವು ಸ್ನಾನ ಮಾಡ ಬಹುದು; ಅಲ್ಲಿ ಎಡಕ್ಕೆ ಗಂಗಾ ನದಿ, ಬಲಕ್ಕೆ ಯಮುನಾ ನದಿ ಇದೆ.
21. ಶೌಚಾಲಯ ಸೌಲಭ್ಯ: ನಗರದಾದ್ಯಂತ 2 ಲಕ್ಷ ಶೌಚಾಲಯಗಳಿವೆ. ಮುಖ್ಯ ಸಂಗಮ್ ಪ್ರದೇಶದಲ್ಲಿ, ನೀವು 50 ಸ್ವಚ್ಛ ಶೌಚಾಲಯಗಳು ಮಾಧ್ಯಮದವರ ವಾಹನ(Media Parking) ನಿಲುಗಡೆ ಪ್ರದೇಶದ ಹಿಂದೆ ಕಾಣಬಹುದು. ಪುರುಷರ ಶೌಚಾಲಯಗಳು ನೀಲಿ, ಮಹಿಳೆಯರ ಶೌಚಾಲಯಗಳು ಗುಲಾಬಿ ಬಣ್ಣದ್ದಾಗಿದೆ.
22. ಮೊಬೈಲ್ ನೆಟ್ವರ್ಕ್: 5G ಕಾರ್ಯನಿರ್ವಹಿಸುವುದರಿಂದ ಉತ್ತಮ ಸಿಗ್ನಲ್ಗಾಗಿ Jio ಅನ್ನು ಬಳಸಿ. ಅಲ್ಲದೆ, ಎರಡನೇ ಸಿಮ್ ಕಾರ್ಡ್ ಅನ್ನು ಟಾಪ್ ಅಪ್ ಮಾಡಲು ನೆನಪಿಡಿ. ದಟ್ಟ ಜನಸಂದಣಿ ಇರುವುದರಿಂದ ಮೊಬೈಲ್ ಸಿಗ್ನಲ್ ಕ್ಷೀಣವಾಗಿರಲೂ ಬಹುದು.
23. ಕಾಲ್ತುಳಿತದ ಅಪಾಯಗಳು: ಜನಸಂದಣಿಯಲ್ಲಿ ಯಾವಾಗಲೂ ಕಾಲ್ತುಳಿತದ (Stampede) ಸಾಧ್ಯತೆವಿರುತ್ತದೆ, ಆದರೆ ನಿಮ್ಮ ಕುಟುಂಬದವರೊಂದಿಗೆ ಇರಲು, ನೀವು ಒಂದೇ ಬಣ್ಣದ ಕ್ಯಾಪ್, ಧ್ವಜ ಅಥವಾ ದೂರದಿಂದ ಸುಲಭವಾಗಿ ಗೋಚರಿಸುವ ವಿಶಿಷ್ಟ ವರ್ಣದ ಉದ್ದದ ವಸ್ತುವನ್ನು ಜತೆಗಿಡಲು ಮರೆಯಬೇಡಿ.
24. ಮೊಬೈಲ್ ಚಾರ್ಜಿಂಗ್ ಪಾಯಿಂಟ್ಗಳು ಲಭ್ಯವಿಲ್ಲ, ಆದ್ದರಿಂದ ಪವರ್ ಬ್ಯಾಂಕ್ ಅನ್ನು ತರಲು ಮರೆಯಬೇಡಿ. ಅಲ್ಲದೆ, ಟ್ರಾಲಿ ಬ್ಯಾಗ್ ಗಳನ್ನೇ ಬಳಸಿ ಏಕೆಂದರೆ ನಿಮ್ಮ ಎಲ್ಲಾ ವಸ್ತುಗಳನ್ನು ನೀವು ಎಳೆದು ಅಥವಾ ಹೊತ್ತುಕೊಂಡೇ ಸಾಗಿಸಬೇಕಾಗುತ್ತದೆ.
25. ನಿಮ್ಮ ಪ್ರದೇಶದ ಬಾಬಾ ಅವರೊಂದಿಗೆ ಸಂಪರ್ಕ ಸಾಧಿಸಿ ಅಥವಾ ಸಂಪರ್ಕ ವಿವರಗಳನ್ನು ಪಡೆಯಲು ಅವರ ವೆಬ್ಸೈಟ್ಗೆ ಭೇಟಿ ನೀಡಿ. ನೀವು ಅವರ ಶಿಬಿರದಲ್ಲಿ ಉಳಿಯಲು ಸಾಧ್ಯವಾದರೆ, ಇದು ನಿಮ್ಮ ಕುಂಭ ಅನುಭವವನ್ನು ಹೆಚ್ಚಿಸಲು ಸುಲಭಸಾಧ್ಯವಾಗುತ್ತದೆ. ಮತ್ತು ನೀವು ಉಚಿತವಾಗಿ ಟೆಂಟ್ ಅನ್ನು ಸಹ ಪಡೆಯುವ ಸಾಧ್ಯತೆ ಇದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.