ಮೋದಿ ಸರ್ಕಾರದಿಂದ ರೈತರಿಗೆ ಪ್ರತಿ ತಿಂಗಳು ಸಿಗುತ್ತೆ 3 ಸಾವಿರ ರೂ.: ಈ ಯೋಜನೆಗೆ ಈಗಲೇ ಅಪ್ಲೇ ಮಾಡಿ

Modi Govt Scheme: ರೈತ ಸಮೂಹಕ್ಕೆ ನೆರವಾಗಲು ಪ್ರಧಾನ ಮಂತ್ರಿ ಕಿಸಾನ್ ಮಂದನ್ ಯೋಜನೆ (PM-KMY) ಘೋಷಿಸಲಾಗಿದೆ. ಸಣ್ಣ ಮತ್ತು ಅತಿಸಣ್ಣ ರೈತರ ಜೀವನಕ್ಕೆ ಆರ್ಥಿಕ ಭದ್ರತೆ ನೀಡಬೇಕೆಂದು ಘೋಷಿಸಿರುವ ಈ ಯೋಜನೆಯಡಿ ಪ್ರತಿ ರೈತನಿಗೆ ಪ್ರತಿ ತಿಂಗಳು ಮೂರು ಸಾವಿರ ರೂಪಾಯಿ ನೀಡಲಾಗುತ್ತದೆ.

Written by - Yashaswini V | Last Updated : Jan 23, 2025, 07:48 AM IST
  • ಸರ್ಕಾರವು ರೈತರಿಗಾಗಿ ಪಿಂಚಣಿ ಯೋಜನೆಯನ್ನು ಆರಂಭಿಸಿದೆ.
  • ಈ ಯೋಜನೆಗೆ ಪ್ರಧಾನ ಮಂತ್ರಿ ಕಿಸಾನ್ ಮಾಂಧನ್ ಯೋಜನೆ ಎಂದು ಹೆಸರಿಡಲಾಗಿದೆ.
  • ಇದರಲ್ಲಿ 60 ವರ್ಷ ದಾಟಿದ ರೈತರಿಗೆ ಪ್ರತಿ ತಿಂಗಳು 3,000 ರೂ. ಪಿಂಚಣಿ ನೀಡಲಾಗುತ್ತಿದೆ.
ಮೋದಿ ಸರ್ಕಾರದಿಂದ ರೈತರಿಗೆ ಪ್ರತಿ ತಿಂಗಳು ಸಿಗುತ್ತೆ 3 ಸಾವಿರ ರೂ.: ಈ ಯೋಜನೆಗೆ ಈಗಲೇ ಅಪ್ಲೇ ಮಾಡಿ title=

Pension For Farmers: ನೆರೆ, ಬರ, ಬೆಳೆಗಳಿಗೆ ರೋಗ, ಉತ್ಪಾದನಾ ಖರ್ಚು ಹೆಚ್ಚಳ, ಬೆಲೆ ಏರಿಕೆ ಮತ್ತಿತರ ಕಷ್ಟಗಳಿಂದ ಕುಂದುಹೋಗಿರುವ ದೇಶದ ರೈತ ಸಮೂಹಕ್ಕೆ ನೆರವಾಗಲು ಪ್ರಧಾನ ಮಂತ್ರಿ ಕಿಸಾನ್ ಮಂದನ್ ಯೋಜನೆ (PMKMY) ಘೋಷಿಸಲಾಗಿದೆ. ಸಣ್ಣ ಮತ್ತು ಅತಿಸಣ್ಣ ರೈತರ ಜೀವನಕ್ಕೆ ಆರ್ಥಿಕ ಭದ್ರತೆ ನೀಡಬೇಕೆಂದು ಘೋಷಿಸಿರುವ ಈ ಯೋಜನೆಯಡಿ ಪ್ರತಿ ರೈತನಿಗೆ ಪ್ರತಿ ತಿಂಗಳು ಮೂರು ಸಾವಿರ ರೂಪಾಯಿ ನೀಡಲಾಗುತ್ತದೆ.

ಭಾರತ ಕೃಷಿಯನ್ನೇ ಅವಲಂಭಿಸಿರುವ ದೇಶ. ಇಷ್ಟೆಲ್ಲಾ ಕೈಗಾರಿಕಾ ಮತ್ತು ಔದ್ಯೋಗಿಕ ಅಭಿವೃದ್ಧಿಯ ಬಳಿಕವೂ ಭಾರತದಲ್ಲಿ ಈಗಲೂ ಸುಮಾರು ಶೇಕಡಾ 40ರಷ್ಟು ಜನ ಪ್ರತ್ಯಕ್ಷವಾಗಿ ಪರೋಕ್ಷವಾಗಿ ಕೃಷಿಯನ್ನೇ ನಂಬಿಕೊಂಡಿದ್ದಾರೆ. ಹಾಗಾಗಿ ರೈತರ ಸಮಸ್ಯೆಗೆ ಸ್ಪಂದಿಸಬೇಕಾದುದು ಸರ್ಕಾರಗಳ ಆದ್ಯ ಕರ್ತವ್ಯವಾಗಿದೆ. ಈ ಹಿನ್ನೆಲೆಯಲ್ಲಿಯೇ ಪ್ರಧಾನ ಮಂತ್ರಿ ಕಿಸಾನ್ ಮಂದನ್ ಯೋಜನೆಯನ್ನು  (PMKMY) ಆರಂಭಿಸಲಾಗಿದೆ. 

ಇದನ್ನೂ ಓದಿ- ತೆರಿಗೆ ಮಿತಿ ಹೆಚ್ಚಳ: ಆದಾಯ ತೆರಿಗೆ ಕಟ್ಟುವವರಿಗೆ ಗುಡ್ ನ್ಯೂಸ್, ಮಧ್ಯಮ ವರ್ಗದವರಿಗೆ ಜಾಕ್ ಪಾಟ್

ರೈತರು ಪ್ರಧಾನ ಮಂತ್ರಿ ಕಿಸಾನ್ ಮಂದನ್ ಯೋಜನೆಯಲ್ಲಿ ಹೂಡಿಕೆ ಮಾಡಿದರೆ ಅವರಿಗೆ 60 ವರ್ಷ ದಾಟಿದ ಬಳಿಕ ಪ್ರತಿ ತಿಂಗಳು ಮೂರು ಸಾವಿರ ರೂಪಾಯಿ ಪಿಂಚಣಿ ಸಿಗುತ್ತದೆ. ಎರಡು ಎಕರೆ ಜಮೀನಿಗಿಂತ ಕಡಿಮೆ ಭೂಮಿ ಇರುವ ಯಾವುದೇ ರೈತರು ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದು. ಅವರ ವಯಸ್ಸು 18ರಿಂದ 40 ವರ್ಷದೊಳಗೆ ಇರಬೇಕು. 

ಇದನ್ನೂ ಓದಿ- ಹೊಸ ಮಾರ್ಗಸೂಚಿ: ಬ್ಯಾಂಕಿಂಗ್ ಹೆಸರಿನಲ್ಲಿ ಕರೆ ವಂಚನೆ ತಪ್ಪಿಸಲು ಬಹುದೊಡ್ಡ ಕ್ರಮ ಕೈಗೊಂಡ ಆರ್‌ಬಿ‌ಐ

ರೈತರು ಅವರವರ ವಯಸ್ಸಿಗೆ ಅನುಗುಣವಾಗಿ ಹೂಡಿಕೆ ಮಾಡಬೇಕಾಗುತ್ತದೆ. ಉದಾಹರಣೆಗೆ 30 ವರ್ಷದ ರೈತ ತಿಂಗಳಿಗೆ 55 ರೂಪಾಯಿಗಳಂತೆ 60 ವರ್ಷ ಆಗುವವರೆಗೆ ಕಟ್ಟಬೇಕು. 60 ವರ್ಷದ ನಂತರ ಆತ ಮತ್ತೆ ಹಣ ಕಟ್ಟಬೇಕಾದ ಅಗತ್ಯ ಇಲ್ಲ. ಬದಲಿಗೆ ಅವರಿಗೆ ಪ್ರತಿ ತಿಂಗಳು ಮೂರು ಸಾವಿರ ರೂಪಾಯಿ ಪಿಂಚಣಿ ಬರುತ್ತದೆ. maandan.in ವೆಬ್ ಸೈಟ್ ನಲ್ಲಿ ಸುಲಭವಾಗಿ ಅರ್ಜಿ ಸಲ್ಲಿಸಬಹುದು. ರಿಜಿಸ್ಟರ್ ಆದ ಬಳಿಕ ಒಟಿಪಿ ಬರುತ್ತದೆ. ಒಟಿಪಿ ನೀಡುತ್ತಿದ್ದಂತೆ ಅರ್ಜಿ ತೆರೆದುಕೊಳ್ಳುತ್ತದೆ. ಅದರಲ್ಲಿ ರೈತರ ವಿವರ ತುಂಬಿ ಸಬ್ ಮಿಟ್ ಕೊಡಬೇಕು.

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

  

Trending News