"ಸ್ವಲ್ಪ ತಿಂದು ದೊಡ್ಡದಾಗಿಸಮ್ಮ... ಈ ಸೈಜ್‌ ಸಾಕಾಗಲ್ಲ"- ಸ್ಟಾರ್‌ ನಟಿ ಬಗ್ಗೆ ಹೆಸರಾಂತ ನಿರ್ದೇಶಕನ ಅಶ್ಲೀಲ ಕಾಮೆಂಟ್‌ ವೈರಲ್

Director Trinath Rao Nakkina apologize: 'ಇತ್ತೀಚೆಗೆ 'ಮಝಾಕ' ಚಿತ್ರದ ಟೀಸರ್ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅಂಶು ಬಗ್ಗೆ ಚಿತ್ರದ ನಿರ್ದೇಶಕ ತ್ರಿನಾಥರಾವ್ ನಕ್ಕಿನಾ ಮಾಡಿರುವ ತೀರ ಕೆಳಮಟ್ಟದ ಕಾಮೆಂಟ್‌ ಇಡೀ ಟಾಲಿವುಡ್‌ನಲ್ಲಿ ಬಿಸಿಬಿಸಿ ಚರ್ಷೆಯ ವಿಷಯವಾಗಿತ್ತು.

Written by - Bhavishya Shetty | Last Updated : Jan 22, 2025, 08:29 PM IST
    • ಪ್ರಭಾಸ್ ಅವರ 'ರಾಘವೇಂದ್ರ' ಚಿತ್ರದಲ್ಲಿ ನಟಿಸಿದ ಅಂಶು
    • 21 ವರ್ಷಗಳ ನಂತರ ಅಂಶು ಮತ್ತೆ ಸಿನಿಮಾಗಳಿಗೆ ಎಂಟ್ರಿ
    • 'ಮಝಾಕ' ಚಿತ್ರದ ಟೀಸರ್ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅಂಶು
"ಸ್ವಲ್ಪ ತಿಂದು ದೊಡ್ಡದಾಗಿಸಮ್ಮ... ಈ ಸೈಜ್‌ ಸಾಕಾಗಲ್ಲ"- ಸ್ಟಾರ್‌ ನಟಿ ಬಗ್ಗೆ ಹೆಸರಾಂತ ನಿರ್ದೇಶಕನ ಅಶ್ಲೀಲ ಕಾಮೆಂಟ್‌ ವೈರಲ್ title=

Director Trinath Rao Nakkina apologize: 'ಮನ್ಮಧುಡು' ಚಿತ್ರದ ನಂತರ ಪ್ರಭಾಸ್ ಅವರ 'ರಾಘವೇಂದ್ರ' ಚಿತ್ರದಲ್ಲಿ ನಟಿಸಿದ ಅಂಶು, ಆ ನಂತರ ಸಿನಿಮಾಗಳಿಗೆ ಪೂರ್ಣವಿರಾಮ ಹಾಕಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಅಷ್ಟೇ ಅಲ್ಲದೆ, ಆ ಬಳಿಕ ವಿದೇಶಿ ಚಿತ್ರಗಳಲ್ಲಿ ಕೆಲಸ ಮಾಡಿದರು. 21 ವರ್ಷಗಳ ನಂತರ ಅಂಶು ಮತ್ತೆ ಸಿನಿಮಾಗಳಿಗೆ ಎಂಟ್ರಿ ಕೊಟ್ಟಿದ್ದಾರೆ.

ಇತ್ತೀಚೆಗೆ 'ಮಝಾಕ' ಚಿತ್ರದ ಟೀಸರ್ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅಂಶು ಬಗ್ಗೆ ಚಿತ್ರದ ನಿರ್ದೇಶಕ ತ್ರಿನಾಥರಾವ್ ನಕ್ಕಿನಾ ಮಾಡಿರುವ ತೀರ ಕೆಳಮಟ್ಟದ ಕಾಮೆಂಟ್‌ ಇಡೀ ಟಾಲಿವುಡ್‌ನಲ್ಲಿ ಬಿಸಿಬಿಸಿ ಚರ್ಷೆಯ ವಿಷಯವಾಗಿತ್ತು.

ಇದನ್ನೂ ಓದಿ: ಎರಡೆರಡು ರಾಜಯೋಗದೊಂದಿಗೆ ಈ ರಾಶಿಯವರ ಬದುಕು ಬಂಗಾರ! ಇನ್ನು ಮುಂದೆ ಸುಖದ ಸುಪ್ಪತ್ತಿಗೆಯಲ್ಲಿಯೇ ಜೀವನ !ಕಂಡ ಪ್ರತಿ ಕನಸು ನನಸಾಗುವ ಕಾಲ

"ನಾವು ಆ ಹುಡುಗಿಯನ್ನು ನೋಡಲೆಂದೇ ಮನ್ಮಥುಡು ಚಿತ್ರಕ್ಕೆ ಮತ್ತೆ ಮತ್ತೆ ಹೋಗುತ್ತಿದ್ದೆವು. ಆದರೆ ಆ ಹುಡುಗಿ ಈಗ ಮತ್ತೆ ಕಣ್ಣಮುಂದೆ ಬಂದಾಗ ಒಂದು ಕ್ಷಣ ನಂಬಲು ಸಾಧ್ಯವಾಗಲಿಲ್ಲ. ಅವಳು ಇನ್ನೂ ಹಾಗೆಯೇ ಇದ್ದಾಳಾ? ತೆಳ್ಳಗೆ..."

"ಸ್ವಲ್ಪ ತಿಂದು ದೊಡ್ಡದಾಗಿಸಮ್ಮ... ತೆಲುಗಿಗೆ ಈ ಸೈಜ್‌ ಸಾಕಾಗಲ್ಲ ಅಂತ ನಾನೇ ಹೇಳಿದೆ. ಎಲ್ಲವೂ ಸ್ವಲ್ಪ ಹೆಚ್ಚೇ ಸೈಜ್‌ ಇರಬೇಕು ಅಂತ ಹೇಳಿದೆ. ಪರ್ವಾಗಿಲ್ಲ ಸ್ವಲ್ಪ ಸೈಜ್‌ ಹೆಚ್ಚಿಸಿದ್ದಾಳೆ. ಆ ನಂತರ ಸಿನಿಮಾಗೆ ಇನ್ನೂ ಹೆಚ್ಚು ಇಂಪ್ರೂವ್‌ ಆಗುತ್ತಾಳೆ" ಎಂದು ತ್ರಿನಾಥ್‌ ಅಸಭ್ಯಕರ ಕಾಮೆಂಟ್‌ ಮಾಡಿದ್ದರು.

ನಿರ್ದೇಶಕಿ ತ್ರಿನಾಥ ರಾವ್ ಎಲ್ಲರ ಮುಂದೆ ಇಂತಹ ಹೇಳಿಕೆಗಳನ್ನು ನೀಡಿದಾಗ ಅಂಶು ಮುಜುಗರಕ್ಕೊಳಗಾಗುತ್ತಿರುವುದು ಕ್ಯಾಮೆರಾದಲ್ಲಿ ಕಂಡುಬಂದಿತು. ನಾಯಕಿಯ ಗಾತ್ರದ ಬಗ್ಗೆ ತ್ರಿನಾಥ ರಾವ್ ಅವರು ಸಾರ್ವಜನಿಕವಾಗಿ ಮಾಡಿದ ಕಾಮೆಂಟ್‌ಗಳ ಬಗ್ಗೆ ನೆಟಿಜನ್‌ಗಳು ಕೋಪಗೊಂಡಿದ್ದರು. ಚಿತ್ರಕ್ಕೆ ಫ್ರೀ ಪಬ್ಲಿಸಿಟಿರ ಪಡೆಯಲು ನಿರ್ದೇಶಕರು ಇಂತಹ ಅಗ್ಗದ ಹೇಳಿಕೆಗಳನ್ನು ನೀಡಿದ್ದಾರೆ ಎಂಬ ಕಾಮೆಂಟ್‌ಗಳು ಬರುತ್ತಿತ್ತು.

ಇದನ್ನೂ ಓದಿ: ಪ್ರತಿಯೊಬ್ಬ ಸಸ್ಯಹಾರಿಯೂ ಇಷ್ಟಪಟ್ಟು ತಿನ್ನುವ ಏಕೈಕ ಮಾಂಸಾಹಾರಿ ಹಣ್ಣಿದು...!

ಇದೀಗ ಈ ಹೇಳಿಕೆಗೆ ತೀವ್ರ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ತ್ರಿನಾಥ್‌ ಕ್ಷಮೆ ಕೋರಿದ್ದಾರೆ. ವೀಡಿಯೊವನ್ನು ಬಿಡುಗಡೆ ಮಾಡಿದ ಅವರು, "ಈ ಹೇಳಿಕೆಗಳನ್ನು ಯಾವುದೇ ದುರುದ್ದೇಶದಿಂದ ಮಾಡಿಲ್ಲ. ಮಝಾಕಾ ಟೀಸರ್ ಬಿಡುಗಡೆ ಕಾರ್ಯಕ್ರಮದಲ್ಲಿ ನಾನು ಮಾಡಿದ ಕಾಮೆಂಟ್‌ಗಳು ಉದ್ದೇಶಪೂರ್ವಕವಾಗಿರಲಿಲ್ಲ,  ಎಲ್ಲರನ್ನೂ ನಗಿಸಲೆಂದು ಹಾಗೆ ಹೇಳಿದ್ದೆ. ಆದರೆ ಹಲವಾರು ಮಹಿಳೆಯರಿಗೆ ನೋವಾಗಿರುವುದರಿಂದ, ಆ ಕಾಮೆಂಟ್‌ಗಳಿಗೆ ನಾನು ಬೇಷರತ್ತಾಗಿ ಕ್ಷಮೆಯಾಚಿಸುತ್ತೇನೆ" ಎಂದು ಹೇಳಿದ್ದಾರೆ.

 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

 

Trending News