Famous Actress Divorce : ನಟಿ ಅಪರ್ಣಾ ವಿನೋದ್ ಮತ್ತು ರಿನಿಲ್ ರಾಜ್ 2023 ರಲ್ಲಿ ವಿವಾಹವಾದರು. ಹಿಂದೂ ಸಂಪ್ರದಾಯದಂತೆ ಈ ಜೋಡಿ ವಿವಾಹವಾದರು. ಮದುವೆ ಆಗಿ ಎರಡು ವರ್ಷಗಳ ನಂತರ ಮಲಯಾಳಂ ತಾರೆ ಅಪರ್ಣಾ ವಿನೋದ್ ಮತ್ತು ರಿನಿಲ್ ರಾಜ್ ಬೇರ್ಪಡುವ ನಿರ್ಧಾರ ಮಾಡಿದ್ದಾರೆ.
ನಟಿ ಅಪರ್ಣಾ ವಿನೋದ್ ಈ ಬಗ್ಗೆ ತಮ್ಮ ಇನ್ಸ್ಟಾಗ್ರಾಮ್ ಪೋಸ್ಟ್ ಮೂಲಕ ಬಹಿರಂಗ ಪಡಿಸಿದ್ದಾರೆ. ಇದನ್ನು ಕಠಿಣ ನಿರ್ಧಾರ ಎಂದು ನಟಿ ಅಪರ್ಣಾ ವಿನೋದ್ ವಿವರಿಸಿದ್ದಾರೆ. ಮದುವೆಯಾದ ಎರಡು ವರ್ಷಗಳ ನಂತರ ಸಂಬಂಧದಲ್ಲಿನ ಭಾವನಾತ್ಮಕ ಒತ್ತಡದಿಂದಾಗಿ ವಿಚ್ಛೇದನ ಪಡೆಯಲು ನಿರ್ಧರಿಸಿದ್ದೇವೆ ಎಂದು ಹೇಳಿದ್ದಾರೆ. ಇದು ಸುಲಭದ ನಿರ್ಧಾರವಾಗಿರಲಿಲ್ಲ. ನಿರ್ಧಾರವನ್ನು ಹಗುರವಾಗಿ ತೆಗೆದುಕೊಳ್ಳಲಾಗಿಲ್ಲ ಎಂಬುದು ಸ್ಪಷ್ಟ ಪಡಿಸಿದ್ದಾರೆ.
ಇದನ್ನೂ ಓದಿ: Karnataka State Film Awards: 2019 ರ ಚಲನ ಚಿತ್ರ ಪ್ರಶಸ್ತಿ ಪ್ರಕಟ.. ಕಿಚ್ಚ ಸುದೀಪ್ ಅತ್ಯುತ್ತಮ ನಟ
ಈ ನಿರ್ಧಾರವು ತನ್ನದೇ ಆದ ಬೆಳವಣಿಗೆಗೆ ಅತ್ಯಗತ್ಯ. ತಮ್ಮ ಮದುವೆಯನ್ನು ಭಾವನಾತ್ಮಕವಾಗಿ ಕಷ್ಟಕರ ಸಮಯವೆಂದು ಹೇಳಿರಿವ ನಟಿ ಅಪರ್ಣಾ ಎಲ್ಲರ ಬೆಂಬಲಕ್ಕೂ ಕೃತಜ್ಞತೆ ಸಲ್ಲಿಸಿದ್ದಾರೆ.
“ನನ್ನ ಜೀವನದಲ್ಲಿ ಮಹತ್ವದ ಬದಲಾವಣೆ ಒಂದು ಆಗಿದೆ. ಸಾಕಷ್ಟು ಯೋಚಿಸಿದ ಬಳಿಕವೇ ನಾನು ಈ ನಿರ್ಧಾರ ಪಡೆದುಕೊಂಡೆ. ನನ್ನ ಪತಿಯಿಂದ ದೂರವಾಗುವ ನಿರ್ಧಾರ ಮಾಡಿದ್ದೇನೆ. ಇದು ಸುಲಭದ ನಿರ್ಧಾರವಾಗಿರಲಿಲ್ಲ. ಆದರೆ ಇದು ನನಗೆ ಸರಿಯಾದ ಆಯ್ಕೆ ಆಗಿದೆ. ನನ್ನ ವೈಯಕ್ತಿಕ ಬೆಳವಣಿಗೆಗೆ ಈ ನಿರ್ಧಾರ ಅಗತ್ಯವಾಗಿತ್ತು. ಜೀವನದ ಒಂದು ಅಧ್ಯಾಯವನ್ನು ಮುಚ್ಚಿ ಮುಂದೆ ಹೋಗಲು ನಿರ್ಧರಿಸಿದ್ದೇನೆ. ಈ ಸಮಯದಲ್ಲಿ ಬೆಂಬಲಕ್ಕಾಗಿ ಕೃತಜ್ಞಳಾಗಿದ್ದೇನೆ” ಎಂದು ಅವರು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ಭಾರತೀಯ ಚಿತ್ರರಂಗದ ಹಿಸ್ಟರಿಯಲ್ಲೇ ಮೊಟ್ಟ ಮೊದಲ ಬಾರಿಗೆ BRAIN SCAMMING ಪ್ರಯತ್ನ
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.