Camphor for Hair: ಸಾಮಾನ್ಯವಾಗಿ ಕರ್ಪೂರವನ್ನು ಪೂಜೆಗಳಲ್ಲಿ ಬಳಸಲಾಗುತ್ತದೆ. ಇದರ ಜೊತೆಗೆ ಮನೆಯಲ್ಲಿರುವ ವಾಸ್ತು ದೋಷಗಳನ್ನು ತೆಗೆದುಹಾಕಲು ಕೂಡ ಕರ್ಪೂರವನ್ನು ಸಹ ಬಳಸಬಹುದು. ಇನ್ನುಳಿದಂತೆ ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳನ್ನು ನಿವಾರಿಸಲು ಸಹ ಇದನ್ನು ಬಳಸಲಾಗುತ್ತದೆ. ಆದರೆ ಕರ್ಪೂರವು ಆರೋಗ್ಯ ಮತ್ತು ಸೌಂದರ್ಯವನ್ನು ಹೆಚ್ಚಿಸುತ್ತದೆ. ಅದರಲ್ಲೂ ಕೂದಲಿಗೆ ಇದು ಒಳ್ಳೆಯದು ಎಂದು ನಿಮಗೆ ತಿಳಿದಿದೆಯೇ?
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ಸಾಮಾನ್ಯವಾಗಿ ಕರ್ಪೂರವನ್ನು ಪೂಜೆಗಳಲ್ಲಿ ಬಳಸಲಾಗುತ್ತದೆ. ಇದರ ಜೊತೆಗೆ ಮನೆಯಲ್ಲಿರುವ ವಾಸ್ತು ದೋಷಗಳನ್ನು ತೆಗೆದುಹಾಕಲು ಕೂಡ ಕರ್ಪೂರವನ್ನು ಸಹ ಬಳಸಬಹುದು. ಇನ್ನುಳಿದಂತೆ ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳನ್ನು ನಿವಾರಿಸಲು ಸಹ ಇದನ್ನು ಬಳಸಲಾಗುತ್ತದೆ. ಆದರೆ ಕರ್ಪೂರವು ಆರೋಗ್ಯ ಮತ್ತು ಸೌಂದರ್ಯವನ್ನು ಹೆಚ್ಚಿಸುತ್ತದೆ. ಅದರಲ್ಲೂ ಕೂದಲಿಗೆ ಇದು ಒಳ್ಳೆಯದು ಎಂದು ನಿಮಗೆ ತಿಳಿದಿದೆಯೇ?
ಕರ್ಪೂರವನ್ನು ಬಳಸುವುದರಿಂದ ಕೂದಲಿಗೆ ಸಂಬಂಧಿಸಿದ ಎಲ್ಲಾ ಸಮಸ್ಯೆಗಳು ಕಡಿಮೆಯಾಗುತ್ತವೆ. ಕೂದಲು ಉದುರುವುದು, ತಲೆಹೊಟ್ಟು, ಸೀಳಿದ ತುದಿಗಳು, ಬಿಳಿ ಕೂದಲನ್ನು ಕಪ್ಪು ಬಣ್ಣಕ್ಕೆ ತಿರುಗಿಸುವುದು ಮತ್ತು ಕೂದಲು ಉದ್ದ ಮತ್ತು ದಪ್ಪವಾಗಿ ಬೆಳೆಯುವಂತೆ ಮಾಡುವಲ್ಲಿ ಕರ್ಪೂರವು ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ. ಕರ್ಪೂರ ಬಳಸುವುದರಿಂದ ಕೂದಲಿನ ಸಮಸ್ಯೆಗಳು ಹೇಗೆ ಕಡಿಮೆಯಾಗುತ್ತವೆ ಎಂಬುದನ್ನು ತಿಳಿದುಕೊಳ್ಳೋಣ.
ಕರ್ಪೂರವನ್ನು ಪುಡಿಯನ್ನಾಗಿ ಮಾಡಬೇಕು. ಇದನ್ನು ತೆಂಗಿನ ಎಣ್ಣೆಗೆ ಸೇರಿಸಿ, ಡಬಲ್ ಬಾಯಿಲಿಂಗ್ ವಿಧಾನವನ್ನು ಬಳಸಿಕೊಂಡು ಬಿಸಿ ಮಾಡಬೇಕು. ಇದನ್ನು ನೆತ್ತಿಗೆ ಹಚ್ಚಿ ಉಗುರು ಬೆಚ್ಚಗಿರುವಾಗ ಮಸಾಜ್ ಮಾಡಬೇಕು. ಈ ರೀತಿ ಮಸಾಜ್ ಮಾಡುವುದರಿಂದ ತಲೆಗೆ ರಕ್ತ ಪರಿಚಲನೆ ಹೆಚ್ಚಾಗುತ್ತದೆ.
ರಾತ್ರಿ ಉಗುರು ಬೆಚ್ಚಗಿರುವಾಗಲೇ ತೆಂಗಿನ ಎಣ್ಣೆಯನ್ನು ಕರ್ಪೂರದೊಂದಿಗೆ ಬೆರೆಸಿ ಕೂದಲಿಗೆ ಹಚ್ಚಬೇಕು. ಬೆಳಿಗ್ಗೆ ಎದ್ದ ತಕ್ಷಣ ಸ್ನಾನ ಮಾಡಬೇಕು. ಇದನ್ನು ವಾರದಲ್ಲಿ ಎರಡು ಅಥವಾ ಮೂರು ಬಾರಿ ಮಾಡಿ. ಎರಡು ತಿಂಗಳು ಹೀಗೆ ಮಾಡಿದ ನಂತರ, ಕೂದಲಿನಲ್ಲಿ ಬದಲಾವಣೆಯನ್ನು ನೀವು ಖಂಡಿತ ಗಮನಿಸುವಿರಿ.
ಕರ್ಪೂರ ಬೆರೆಸಿದ ಎಣ್ಣೆಯನ್ನು ನೆತ್ತಿಗೆ ಹಚ್ಚುವುದರಿಂದ ಕೂದಲು ಉದುರುವುದು ಕಡಿಮೆಯಾಗುತ್ತದೆ ಮತ್ತು ಕೂದಲು ಬೆಳವಣಿಗೆ ವೇಗವಾಗಿ ಆಗುತ್ತದೆ. ಕೂದಲು ಎರಡು ಪಟ್ಟು ವೇಗವಾಗಿ ಬೆಳೆಯುತ್ತದೆ ಎಂದು ಆಯುರ್ವೇದ ತಜ್ಞರು ಹೇಳುತ್ತಾರೆ. ಇದು ಕೂದಲು ಉದ್ದವಾಗಿ ಮತ್ತು ದಪ್ಪವಾಗಿ ಬೆಳೆಯುವಂತೆ ಮಾಡುತ್ತದೆ.
ಅನೇಕ ಜನರ ಕೂದಲು ನಿರ್ಜೀವವಾಗಿ ಕಾಣುತ್ತದೆ. ಅಂತಹವರಿಗೂ ಸಹ, ಕರ್ಪೂರ ಬೆರೆಸಿದ ಎಣ್ಣೆಯನ್ನು ಕೂದಲಿಗೆ ಹಚ್ಚುವುದು ಪ್ರಯೋಜನಕಾರಿಯಾಗಿದೆ. ಇದು ನೆತ್ತಿಯಿಂದ ಧೂಳು ಮತ್ತು ಕೊಳೆಯನ್ನು ತೆಗೆದುಹಾಕಿ ಕೂದಲಿಗೆ ಹೊಸ ಹೊಳಪನ್ನು ತರುತ್ತದೆ. ಕೂದಲು ಕೂಡ ಮೃದುವಾಗಿರುತ್ತದೆ.
ಅನೇಕ ಜನರಿಗೆ ಸಣ್ಣ ವಯಸ್ಸಿನಿಂದಲೇ ಬಿಳಿ ಕೂದಲು ಬರುತ್ತದೆ. ಇದಕ್ಕಾಗಿಯೇ ಮಾರುಕಟ್ಟೆಯಲ್ಲಿ ಸಿಗುವ ರಾಸಾಯನಿಕ ಮಿಶ್ರಿತ ಉತ್ಪನ್ನಗಳನ್ನು ಬಳಸುತ್ತಾರೆ. ಆದರೆ ಇದು ಶಾಶ್ವತ ಪರಿಹಾರ ನೀಡುವುದಿಲ್ಲ, ಜೊತೆಗೆ ಕೂದಲಿನ ಆರೋಗ್ಯಕ್ಕೂ ಒಳ್ಳೆಯದಲ್ಲ, ಹೀಗಿರುವಾಗ ಈ ಎಣ್ಣೆಯನ್ನು ಬಳಸಿದರೆ ತಕ್ಷಣದಿಂದಲೇ ರಿಸಲ್ಟ್ ಗೋಚರಿಸುತ್ತದೆ. ಕೆಲವೇ ದಿನಗಳಲ್ಲಿ ಕೂದಲು ಶಾಶ್ವತವಾಗಿ ಕಪ್ಪಾಗುತ್ತದೆ.
ಸೂಚನೆ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಿದ ಮಾಹಿತಿಯ ಆಧಾರದ ಮೇಲೆ ನಿಮಗೆ ಒದಗಿಸಲಾಗಿದೆ. ವಿಷಯಗಳು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ. ನಂತರದ ಯಾವುದೇ ಬೆಳವಣಿಗೆಗಳಿಗೆ ಜೀ ಕನ್ನಡ ನ್ಯೂಸ್ ಜವಾಬ್ದಾರನಾಗಿರುವುದಿಲ್ಲ.