Income Tax News: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 2025ನೇ ಸಾಲಿನ ಬಜೆಟ್ ಮಂಡಿಸಲು ದಿನಗಣನೆ ಶುರುವಾಗಿದೆ. ಹಾಗೆಯೇ ದಿನದಿಂದ ದಿನಕ್ಕೆ ನಿರೀಕ್ಷೆಗಳೂ ಹೆಚ್ಚಾಗತೊಡಗಿವೆ. ಆದಾಯ ತೆರಿಗೆ ಕಟ್ಟುವವರು ಅದರಲ್ಲೂ ನೌಕರರ ವರ್ಗ ಈ ಬಜೆಟ್ ಮೇಲೆ ತೆರಿಗೆ ಮಿತಿ ಹೆಚ್ಚಿಸಬಹುದೆಂಬ ಬಹುದೊಡ್ಡ ನಿರೀಕ್ಷೆ ಇಟ್ಟುಕೊಂಡಿದೆ. ಇವರ ನಿರೀಕ್ಷೆಯಂತೆ ತೆರಿಗೆ ಮಿತಿ ಹೆಚ್ಚಳ ಮಾಡಬಹುದು ಎಂಬ ಸಾಧ್ಯತೆಯೂ ಕಂಡುಬರುತ್ತಿದೆ. ಅದು ಹೇಗೆ ಅಂತಾ ತಿಳಿಯಿರಿ.
ಬೆಲೆ ಏರಿಕೆ ಮಧ್ಯಮ ವರ್ಗವನ್ನು ಅದರಲ್ಲೂ ತಿಂಗಳ ಸಂಬಳವನ್ನೇ ನಂಬಿ ಕೂತಿರುವ ನೌಕರರ ವರ್ಗವನ್ನು ತೀವ್ರವಾಗಿ ಬಾಧಿಸುತ್ತಿದೆ. ಅವರಿಗೆ ಅನುಕೂಲ ಆಗಬೇಕೆಂದರೆ ತೆರಿಗೆ ಮಿತಿಯನ್ನು 18 ಲಕ್ಷ ರೂಪಾಯಿವರೆಗೆ ಹೆಚ್ಚಿಸಬೇಕು ಎಂದು ಹಲವು ತಜ್ಞರು ಕೇಂದ್ರ ಹಣಕಾಸು ಸಚಿವೆ ನಿರ್ಮಾಲಾ ಸೀತಾರಾಮನ್ ಅವರಿಗೆ ಮನವಿ ಮಾಡಿದ್ದಾರೆ. ಆ ಪೈಕಿ ಬ್ಯಾಂಕ್ ಬಜಾರ್ ಕಾರ್ಯನಿರ್ವಹಣಾ ಅಧಿಕಾರಿ ಆದಿಲ್ ಶೆಟ್ಟಿ ಕೂಡ ಒಬ್ಬರು.
ಇದನ್ನೂ ಓದಿ- Income Tax Notice: ಎಚ್ಚರ! ಈ ಮಿತಿಗಿಂತ ಹೆಚ್ಚು ಖರ್ಚು ಮಾಡಿದ್ರೂ ಬರುತ್ತೆ 'ಐಟಿ ನೋಟಿಸ್'
ಆದಿಲ್ ಶೆಟ್ಟಿ ಅವರು 2025ರ ಬಜೆಟ್ ನಲ್ಲಿ ಮೂರು ಪ್ರಮುಖ ಬದಲಾವಣೆಗಳನ್ನು ಮಾಡಬೇಕು ಎಂದು ನಿರ್ಮಲಾ ಸೀತಾರಾಮನ್ ಅವರಲ್ಲಿ ಮನವಿ ಮಾಡಿದ್ದಾರೆ. ಒಂದು ತೆರಿಗೆ ಮಿತಿಯನ್ನು 18 ಲಕ್ಷ ರೂಪಾಯಿವರೆಗೆ ಹೆಚ್ಚಿಸುವುದು. ಎರಡನೆಯದು ತೆರಿಗೆ ಬ್ರಾಕೆಟ್ ಗಳನ್ನು ಪುನರ್ ರಚಿಸುವುದು ಮತ್ತು ಮೂರನೆಯದು ಆದಾಯದ ಮೇಲೆ ಶೇಕಡಾ 30ರಷ್ಟು ಪ್ರಮಾಣಿತ ಕಡಿತಗೊಳಿಸುವುದು ಹೀಗೆ ಮಧ್ಯಮ ವರ್ಗದವರಿಗೆ ಅನುಕೂಲವಾಗುವಂತೆ ಹಲವು ಸಲಹೆಗಳನ್ನು ನೀಡಿದ್ದಾರೆ.
ದೇಶದಲ್ಲಿ ಹಣದುಬ್ಬರ ಶೇಕಡಾ 21ರಷ್ಟು ಹೆಚ್ಚಾಗಿದೆ. ಆದರೆ 2020ರಿಂದಲೂ ತೆರಿಗೆ ಮಿತಿ ಸಡಿಲಿಸಬೇಕೆಂಬ ಬೇಡಿಕೆ ಹಾಗೆಯೇ ಉಳಿದಿದೆ. ಹಣದುಬ್ಬರ ಸೃಷ್ಟಿಸುತ್ತಿರುವ ಒತ್ತಡಗಳನ್ನು ತಡೆದುಕೊಳ್ಳಲು ನಗರ ವೇತನದಾರರ ಆರ್ಥಿಕ ಒತ್ತಡವನ್ನು ಕಡಿಮೆ ಮಾಡಲು ತೆರಿಗೆ ಮಿತಿಯನ್ನು 18 ಲಕ್ಷ ರೂಪಾಯಿವರೆಗೆ ಏರಿಸುವುದೊಂದೇ ಉಪಾಯ ಎಂದು ಆದಿಲ್ ಶೆಟ್ಟಿ ಅಭಿಪ್ರಾಯಪಟ್ಟಿದ್ದಾರೆ.
ಆದಿಲ್ ಶೆಟ್ಟಿ ಅವರೂ ಸೇರಿದಂತೆ ಹಲವರು ತೆರಿಗೆ ಮತಿಯನ್ನು ಹೆಚ್ಚಿಸಬೇಕೆಂಬ ಆಗ್ರಹ ಮಾಡುತ್ತಿರುವುದರಿಂದ ಜೊತೆಗೆ ತೆರಿಗೆ ಮಿತಿ ಹೆಚ್ಚಳ ಮಾಡಿದರೆ ಅದೇ ಹಣ ನೌಕರರ ಬಳಿ ಉಳಿಯಲಿದ್ದು ಅವರು ಬೇರೊಂದು ರೂಪದಲ್ಲಿ ವ್ಯಯ ಮಾಡುತ್ತಾರೆ. ಆಗ ಮಾರುಕಟ್ಟೆಗೆ ಹಣದ ಹರಿವು ಜಾಸ್ತಿಯಾಗುತ್ತದೆ. ಪರೋಕ್ಷ ತೆರಿಗೆಗಳು ಹೆಚ್ಚಾಗುತ್ತವೆ ಎನ್ನುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಕೂಡ ತೆರಿಗೆ ಮಿತಿಯನ್ನು 18 ಲಕ್ಷ ರೂಪಾಯಿವರೆಗೆ ಏರಿಸಬಹುದು ಎಂದು ಹೇಳಲಾಗುತ್ತಿದೆ.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.