ಮಹಾಕುಂಭದ ವೈರಲ್‌ ಬ್ಯೂಟಿ ಮೊನಾಲಿಸಾಗೆ ಬಂತು ಬಾಲಿವುಡ್‌ನ ಬಿಗ್‌ ಆಫರ್‌.. ಸ್ಟಾರ್‌ ಡೈರೆಕ್ಟರ್‌ ಸಿನಿಮಾದಲ್ಲಿ ರುದ್ರಾಕ್ಷಿ ಮಾರುತ್ತಿದ್ದ ಚೆಲುವೆ !!

Maha kumbh viral girl monalisa: ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾ ಕುಂಭ ಮೇಳವು ತನ್ನ ಭವ್ಯತೆಯಿಂದ ಇಡೀ ಪ್ರಪಂಚದ ಗಮನ ಸೆಳೆಯುತ್ತಿದೆ.

Written by - Chetana Devarmani | Last Updated : Jan 21, 2025, 02:34 PM IST
  • ಉತ್ತರ ಪ್ರದೇಶದ ಪ್ರಯಾಗ್‌ರಾಜ್‌
  • ಮಹಾಕುಂಭದ ವೈರಲ್‌ ಬ್ಯೂಟಿ ಮೊನಾಲಿಸಾ
  • ಮೊನಾಲಿಸಾಗೆ ಬಂತು ಬಾಲಿವುಡ್‌ನ ಬಿಗ್‌ ಆಫರ್‌
ಮಹಾಕುಂಭದ ವೈರಲ್‌ ಬ್ಯೂಟಿ ಮೊನಾಲಿಸಾಗೆ ಬಂತು ಬಾಲಿವುಡ್‌ನ ಬಿಗ್‌ ಆಫರ್‌.. ಸ್ಟಾರ್‌ ಡೈರೆಕ್ಟರ್‌ ಸಿನಿಮಾದಲ್ಲಿ ರುದ್ರಾಕ್ಷಿ ಮಾರುತ್ತಿದ್ದ ಚೆಲುವೆ !! title=
maha kumbha monalisa

Maha kumbh viral girl monalisa: ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾ ಕುಂಭ ಮೇಳವು ತನ್ನ ಭವ್ಯತೆಯಿಂದ ಇಡೀ ಪ್ರಪಂಚದ ಗಮನ ಸೆಳೆಯುತ್ತಿದೆ. ಮಹಾ ಕುಂಭ ಮೇಳಕ್ಕೆ ಪ್ರಪಂಚದಾದ್ಯಂತದ ಕೋಟ್ಯಂತರ ಜನರು ಬರುತ್ತಿದ್ದಾರೆ. ಮಹಾಕುಂಭದ ಅನೇಕ ವೀಡಿಯೊಗಳು ಪ್ರತಿದಿನ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿವೆ. 

ಇತ್ತೀಚೆಗೆ ರುದ್ರಾಕ್ಷಿ ಮಾಲೆ ಮಾರುವ ಹುಡುಗಿ ನೀಲಿ ಕಂಗಳ ಚೆಲುವೆ ಮನೋಲಿಸಾ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ವೈರಲ್ ಆಗಿತ್ತು. ಈಗ ಮೊನಾಲಿಸಾ ಮಹಾ ಕುಂಭ ಮೇಳವನ್ನು ತೊರೆದು ಇಂದೋರ್‌ನಲ್ಲಿರುವ ತನ್ನ ಮನೆಗೆ ಮರಳಿದ್ದಾರೆ ಎಂಬ ಸುದ್ದಿ ಬರುತ್ತಿದೆ. ಮಾಹಿತಿಯ ಪ್ರಕಾರ, ಜನರಿಂದ ಬೇಸತ್ತ ಮೊನಾಲಿಸಾಳ ತಂದೆ ತನ್ನ ಮಗಳನ್ನು ಇಂದೋರ್‌ಗೆ ವಾಪಸ್ ಕಳುಹಿಸಿದ್ದಾರೆ.

ಕೆಲವು ದಿನಗಳ ಹಿಂದೆ ಪ್ರಯಾಗ್‌ರಾಜ್ ಮಹಾಕುಂಭದ ವಿಡಿಯೋವೊಂದು ವೈರಲ್ ಆಗಿತ್ತು. ರುದ್ರಾಕ್ಷಿ ಮಾಲೆಗಳನ್ನು ಮಾರಾಟ ಮಾಡಲು ಬಂದ ಹುಡುಗಿಯ ಸುಂದರ ಕಣ್ಣುಗಳು ನೆಟ್ಟಿಗರನು ಆಕರ್ಷಿಸಿದವು. ಈ ಹುಡುಗಿಯ ನಿಜವಾದ ಹೆಸರು ಮೊನಾಲಿಸಾ. ಅವಳು ರುದ್ರಾಕ್ಷಿ ಮಾಲೆಗಳನ್ನು ಮಾರಲು ಮಹಾ ಕುಂಭ ಮೇಳಕ್ಕೆ ಬಂದಿದ್ದಳು. 

ಇದನ್ನೂ ಓದಿ: Viral Video: ಅಯ್ಯೋ ಈ ಸುಂದರಿಗೆ ಮೇಕಪ್‌ ಯಾಕೆ ಬೇಕಿತ್ತು ಗುರು.. ನ್ಯಾಚುರಲ್‌ ಆಗೇ ಚೆನ್ನಾಗಿದ್ಲು! ಈಗ ನಿಜಕ್ಕೂ ನೋಡೋಕಾಗ್ತಿಲ್ಲ.. 

ಮೊನಾಲಿಸಾ ಮಧ್ಯಪ್ರದೇಶದ ಇಂದೋರ್ ನಿವಾಸಿ. ಮೊನಾಲಿಸಾಳ ಫೋಟೊಗಳು ಮತ್ತು ವೀಡಿಯೊಗಳು ವೈರಲ್ ಆದ ತಕ್ಷಣ, ಜನರು ಕುಂಭ ಮೇಳದಲ್ಲಿ ಮೊನಾಲಿಸಾಳನ್ನು ಹುಡುಕಲು ಪ್ರಾರಂಭಿಸಿದರು. ಅವಳ ಸುತ್ತಲೂ ಯಾವಾಗಲೂ ಜನಸಂದಣಿ ಇರುತ್ತಿತ್ತು. 

ಸ್ವಲ್ಪ ಸಮಯದಲ್ಲೇ ಅವಳು ಮಹಾ ಕುಂಭಮೇಳದ ಕೇಂದ್ರ ಬಿಂದುವಾದಳು. ಜನರು ಅವಳೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಮುಗಿ ಬೀಳುತ್ತಿರುವುದು ಕಂಡುಬಂತು. ಯೂಟ್ಯೂಬರ್‌ಗಳು ಅವಳೊಂದಿಗೆ ವೀಡಿಯೊಗಳನ್ನು ಮಾಡಲು ಬರಲು ಪ್ರಾರಂಭಿಸಿದರು. ಇದೆಲ್ಲದರಿಂದ ತೊಂದರೆಗೀಡಾದ ಮೊನಾಲಿಸಾಳ ತಂದೆ ಅವಳನ್ನು ಇಂದೋರ್‌ಗೆ ವಾಪಸ್ ಕಳುಹಿಸಲು ನಿರ್ಧರಿಸಿದರು

ಇದೀಗ ಮಹಾ ಕುಂಭ ಮೇಳದಲ್ಲಿ ರುದ್ರಾಕ್ಷಿ ಮಾಲೆ ಮಾರುತ್ತಿದ್ದ ಹುಡುಗಿಯ ಅದೃಷ್ಟ ಖುಲಾಯಿಸಿದೆ. ಸೌಂದರ್ಯವೇ ಆಕೆಗೆ ವರವಾಗಿದೆ. ಇದೇ ಸಾಮಾಜಿಕ ಜಾಲತಾಣದಿಂದ ಬಹುದೊಡ್ಡ ಆಫರ್‌ ಒಂದು ಆಕೆಗೆ ಒಲಿದು ಬಂದಿದೆ ಎನ್ನಲಾಗ್ತಿದೆ.  

ಮಹಾ ಕುಂಭ ಮೇಳದಲ್ಲಿ ರುದ್ರಾಕ್ಷಿ ಮಾರುತ್ತಿದ್ದ ಮೊನಾಲಿಸಾಗೆ ಬಾಲಿವುಡ್‌ನಿಂದ ಬಿಗ್‌ ಆಫರ್‌ ಬಂದಿದೆ ಎನ್ನಲಾಗ್ತಿದೆ. ಬಾಲಿವುಡ್ ಸ್ಟಾರ್‌ ನಿರ್ದೇಶಕ ಸನೋಜ್ ಮಿಶ್ರ, ಈ ವೈರಲ್ ಬ್ಯೂಟಿ ಮೊನಾಲಿಸಾಗೆ ತಮ್ಮ ಸಿನಿಮಾದಲ್ಲಿ ನಟಿಸಲು ಅವಕಾಶ ನೀಡಿದ್ದಾರೆ ಎನ್ನಲಾಗ್ತಿದೆ. 

‘ಡೈರಿ ಆಫ್ ಮಣಿಪುರ್’ ಹೆಸರಿನ ಸಿನಿಮಾ ಒಂದನ್ನು ಸನೋಜ್ ಮಿಶ್ರ ನಿರ್ದೇಶನ ಮಾಡುತ್ತಿದ್ದಾರೆ. ಇದೇ ಸಿನಿಮಾದಲ್ಲಿ ಮೊನಾಲಿಸಾಗೆ ಹೀರೋಯಿನ್‌ ಪಾತ್ರ ನೀಡಲು ಸನೋಜ್ ಮಿಶ್ರ ಯೋಚಿಸಿದ್ದಾರಂತೆ. ಇದಕ್ಕಾಗಿ ಮೊನಾಲಿಸಾ ಲುಕ್ ಟೆಸ್ಟ್ ಸಹ ನಡೆಸಲಾಗಿದೆ ಎನ್ನಲಾಗ್ತಿದೆ. ವೈರಲ್ ಯುವತಿಗೆ ಮೇಕೋವರ್ ಮಾಡಲಾಗಿದ್ದು, ಮೇಕೊವರ್ ವಿಡಿಯೋ ಸಹ ಸೋಷಿಯಲ್‌ ಮೀಡಯಾದಲ್ಲಿ ವೈರಲ್ ಆಗಿದೆ. ಮೊನಾಲಿಸಾಗೆ ಈ ಸಿನಿಮಾಗಾಗಿ ನಟನಾ ತರಬೇತಿಯನ್ನು ಸಹ ಕೊಡಿಸಲಾಗುತ್ತಿದೆ ಎನ್ನಲಾಗ್ತಿದೆ.

ಇದನ್ನೂ ಓದಿ: ಯುಟ್ಯೂಬರ್ ಗಳ ಕಾಟ ತಾಳಲಾರದೇ ತನ್ನದೇ Youtube ಖಾತೆ ತೆರೆದ ಮಹಾಕುಂಭ ಮೋನಾಲಿಸಾ..!

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News