ಡಿಟರ್ಜೆಂಟ್ ಅಲ್ಲ ಒಂದು ತುಂಡು ಅಲ್ಯುಮಿನಿಯನ್ ಫಾಯಿಲ್ ಅನ್ನು ವಾಶಿಂಗ್ ಮೆಷಿನ್ ಒಳಗೆ ಹಾಕಿದರೆ ಕಲೆ, ಕೊಳೆ ಎಲ್ಲವೂ ಮಾಯ !

ಅಡುಗೆಮನೆಯಲ್ಲಿ ಆಹಾರವನ್ನು ಕಟ್ಟಲು ಬಳಸುವ ಅಲ್ಯೂಮಿನಿಯಂ ಫಾಯಿಲ್ ಬಟ್ಟೆಯ ಮೇಲಿರುವ ಕೊಳೆ, ಕಲೆಯನ್ನು ಸಹಾ ತೆಗೆದು ಹಾಕುತ್ತದೆ. 

Written by - Ranjitha R K | Last Updated : Jan 21, 2025, 01:26 PM IST
  • ವಾಷಿಂಗ್ ಮೆಷಿನ್‌ನಲ್ಲಿ ಬಟ್ಟೆ ಒಗೆಯುವಾಗ ಬಟ್ಟೆ ಸರಿಯಾಗಿ ಶುಚಿಯಾಗುವುದಿಲ್ಲ
  • ಈ ದೂರು ಸಾಮಾನ್ಯವಾಗಿ ಬಹುತೇಕ ಮನೆಯಲ್ಲಿ ಕೇಳಿ ಬರುತ್ತದೆ.
  • ಕಾಲರ್, ತೋಳಿನ ಕಲೆಗಳು ಸರಿಯಾಗಿ ಹೋಗುವುದಿಲ್ಲ ಎನ್ನುವ ದೂರು ಸಾಮಾನ್ಯ.
ಡಿಟರ್ಜೆಂಟ್ ಅಲ್ಲ ಒಂದು ತುಂಡು ಅಲ್ಯುಮಿನಿಯನ್ ಫಾಯಿಲ್ ಅನ್ನು ವಾಶಿಂಗ್ ಮೆಷಿನ್ ಒಳಗೆ ಹಾಕಿದರೆ ಕಲೆ, ಕೊಳೆ ಎಲ್ಲವೂ ಮಾಯ ! title=

ವಾಷಿಂಗ್ ಮೆಷಿನ್‌ನಲ್ಲಿ ಬಟ್ಟೆ ಒಗೆಯುವಾಗ ಬಟ್ಟೆ ಸರಿಯಾಗಿ ಶುಚಿಯಾಗುವುದಿಲ್ಲ ಎನ್ನುವ ದೂರು ಸಾಮಾನ್ಯವಾಗಿ ಬಹುತೇಕ ಮನೆಯಲ್ಲಿ ಕೇಳಿ ಬರುತ್ತದೆ. ಜಿಡ್ಡು ಹಿಡಿದ ಕಲೆ, ಕಾಲರ್, ತೋಳಿನ ಕಲೆಗಳು ಸರಿಯಾಗಿ ಹೋಗುವುದಿಲ್ಲ ಎನ್ನುವ ದೂರು ಸಾಮಾನ್ಯ. ಇದೇ ಕಾರಣಕ್ಕೆ ಶರ್ಟ್ ಗಳನ್ನು  ಮೆಷಿನ್ ನಲ್ಲಿ ಹಾಕುವ ಮುನ್ನ ಕಾಲರ್ ಮತ್ತು ತೋಳಿನ ಕಲೆಗಳನ್ನು ಕೈಯಿಂದಲೇ ತಿಕ್ಕಿ ನಂತರ ಮೆಷಿನ್ ಒಳಗೆ ಹಾಕಬೇಕಾಗುತ್ತದೆ. ಆದರೆ ಇನ್ನು ಹಾಗೆ ಮಾಡಬೇಕೆಂದಿಲ್ಲ. ಈ ಸಮಸ್ಯೆಗೆ ಶಾಶ್ವತ ಪರಿಹಾರ ಬಂದಿದೆ. 

ಕಠಿಣ ಕಲೆ, ಕೊಳೆಗೆ ಪರಿಹಾರ ಎಂದು ಇಲ್ಲಿ ನಾವು ಹೇಳುತ್ತಿರುವುದು ಸರಳವಾದ ಅಲ್ಯೂಮಿನಿಯಂ ಫಾಯಿಲ್‌ ಅನ್ನು. ಅಡುಗೆಮನೆಯಲ್ಲಿ ಆಹಾರವನ್ನು ಕಟ್ಟಲು ಬಳಸುವ ಅಲ್ಯೂಮಿನಿಯಂ ಫಾಯಿಲ್ ಬಟ್ಟೆಯ ಮೇಲಿರುವ ಕೊಳೆ, ಕಲೆಯನ್ನು ಸಹಾ ತೆಗೆದು ಹಾಕುತ್ತದೆ. 

ಇದನ್ನೂ ಓದಿ :  Recharge ಚಿಂತೆಯೇ ಇಲ್ಲ: ಬರೀ 10ರೂ.ಗೆ ಸಿಗುತ್ತೆ 365ದಿನಗಳ ವ್ಯಾಲಿಡಿಟಿ: ನಿಮಗೂ ತಿಳಿದಿರಲಿ TRAI ಹೊಸ ನಿಯಮ

ಅಲ್ಯೂಮಿನಿಯಂ ಫಾಯಿಲ್ ಅನ್ನು ಸಾಮಾನ್ಯವಾಗಿ ಆಹಾರವನ್ನು ಸಂಗ್ರಹಿಸಲು ಬಳಸಲಾಗುತ್ತದೆ. ಆದರೆ ಅದನ್ನು ವಾಶಿಂಗ್ ಮೆಷಿನ್ ಒಳಗೆ  ಹಾಕುವುದರಿಂದ ಅನೇಕ ರೀತಿಯಲ್ಲಿ ಪ್ರಯೋಜನವಾಗುವುದು. ಅಲ್ಯೂಮಿನಿಯಂ ಫಾಯಿಲ್ ಬಟ್ಟೆಯ ಮೇಲಿನ ಸ್ಟ್ಯಾಟಿಕ್  ಚಾರ್ಜ್ ಕಡಿಮೆ ಮಾಡುತ್ತದೆ. ಸ್ಟ್ಯಾಟಿಕ್  ಚಾರ್ಜ್ ಬಟ್ಟೆಗಳನ್ನು ಪರಸ್ಪರ ಅಂಟಿಕೊಳ್ಳುವಂತೆ ಮಾಡುತ್ತದೆ. ಇದರಿಂದ ಅವುಗಳ ಗುಣಮಟ್ಟವನ್ನು ಹಾನಿಯಾಗುತ್ತದೆ. ಒಂದು ಸಣ್ಣ ತುಂಡು ಅಲ್ಯುಮಿನಿಯನ್ ಫಾಯಿಲ್ ಬಟ್ಟೆಗಳನ್ನು ಮೃದುವಾಗಿರಿಸುತ್ತದೆ ಮತ್ತು ಅವುಗಳ ಹೊಳಪನ್ನು ಕಾಪಾಡಿಕೊಳ್ಳುತ್ತದೆ.

ಅಲ್ಯೂಮಿನಿಯಂ ಫಾಯಿಲ್ ಬಳಸುವುದು ಹೇಗೆ?
೧. ಅಲ್ಯೂಮಿನಿಯಂ ಫಾಯಿಲ್ ತುಂಡನ್ನು ತೆಗೆದುಕೊಂಡು ಅದನ್ನು ದುಂಡಗಿನ ಚೆಂಡಿಗೆ ಸುತ್ತಿಕೊಳ್ಳಿ.
೨.ಈ ಚೆಂಡು ಸ್ವಲ್ಪ ದೊಡ್ಡದಾಗಿಯೇ ಇರಲಿ. 
೩. ಈ ಚೆಂಡನ್ನು ಬಟ್ಟೆಯ ಜೊತೆಗೆ ವಾಷಿಂಗ್ ಮೆಷಿನ್ ನ ಡ್ರಮ್ ನಲ್ಲಿ ಹಾಕಿ.
೪. ಈಗ ಮೆಷಿನ್ ಅನ್ನು ಸಾಮಾನ್ಯವಾಗಿ ರನ್ ಮಾಡಿದರೆ ಪರಿಣಾಮ ತಿಳಿಯುತ್ತದೆ. 

ಇದನ್ನೂ ಓದಿ :  ಹೊಸ POCO X7 5G ಸ್ಮಾರ್ಟ್‌ಫೋನ್‌ ಬಿಡುಗಡೆ; ಖರೀದಿಯ ಮೇಲೆ ಭರ್ಜರಿ ಡಿಸ್ಕೌಂಟ್‌ ಲಭ್ಯ!!

ಅಲ್ಯೂಮಿನಿಯಂ ಫಾಯಿಲ್‌ನ ಪ್ರಯೋಜನಗಳು : 
೧. ಸ್ಟ್ಯಾಟಿಕ್  ಚಾರ್ಜ್  ಅನ್ನು ನಿವಾರಿಸುತ್ತದೆ: ವಾಷಿಂಗ್ ಮೆಷಿನ್‌ನಲ್ಲಿ ಬಟ್ಟೆಗಳ ಮೇಲೆ ಸ್ಟ್ಯಾಟಿಕ್  ಚಾರ್ಜ್ ನಿರ್ಮಾಣವಾಗುತ್ತದೆ. ಈ ಸ್ಟ್ಯಾಟಿಕ್  ಚಾರ್ಜ್ ಬಟ್ಟೆಯ ಮೇಲಿನ ಜಿಗುಟನ್ನು ಗಟ್ಟಿಯಾಗಿಸುತ್ತದೆ. ಅಲ್ಯೂಮಿನಿಯಂ ಫಾಯಿಲ್ ಇದನ್ನು ನಿವಾರಿಸುತ್ತದೆ.
೨. ಬಟ್ಟೆಗಳನ್ನು ಮೃದುವಾಗಿಸುತ್ತದೆ: ಇದು ಬಟ್ಟೆಗಳನ್ನು ಮೃದುವಾಗಿಸುವ ಮೂಲಕ ಅವುಗಳ ಗುಣಮಟ್ಟವನ್ನು ಕಾಪಾಡುತ್ತದೆ.
೩.  ಹೆಚ್ಚು ಶುಭ್ರವಾಗುವುದು : ಅಲ್ಯುಮಿನಿಯಂ ಬಟ್ಟೆಯನ್ನು ಹೆಚ್ಚು ಪರಿಣಾಮಕಾರಿಯಾಗಿ ಸ್ವಚ್ಚಗೊಳಿಸುತ್ತದೆ. 
೪. ದೀರ್ಘಾವಧಿಯ ಬಳಕೆ: ಅಲ್ಯೂಮಿನಿಯಂ ಫಾಯಿಲ್ ಬಾಲ್ ಅನ್ನು ಒಮ್ಮೆ ತಯಾರಿಸಿದರೆ ತಿಂಗಳುಗಟ್ಟಲೆ ಬಳಸಬಹುದು.

ಮುನ್ನೆಚ್ಚರಿಕೆಗಳು:
ತುಂಬಾ ಚಿಕ್ಕದಾದ ಫಾಯಿಲ್ ಬಾಲ್ ಅನ್ನು ಮಾಡಬೇಡಿ. ಚಿಕ್ಕ ಬಾಲ್ ವಾಶಿಂಗ್ ಮೆಷಿನ್ ನಲ್ಲಿ ಸಿಲುಕಿಕೊಳ್ಳಬಹುದು.
ಡ್ರಮ್ ಮತ್ತು ಬಟ್ಟೆಗಳ ನಡುವೆ ಸಾಕಷ್ಟು ಸ್ಥಳಾವಕಾಶವಿರುವ ಯಂತ್ರದಲ್ಲಿ ಅದನ್ನು ಬಳಸಿ.

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News