Viral News: ಶವಗಾರದಲ್ಲಿ ಸುಡಲು ಬಂದ ವೇಳೆ ಎದ್ದು ಕೂತ ಶವ... ಇನ್ನೆರೆಡು ಸೆಕೆಂಡ್‌ ಬಿಟ್ಟಿದ್ರೆ ಸುಟ್ಟು ಬೂದಿಯಾಗೋತಿದ್ಯಲ್ಲಪ್ಪಾ...

Shocking news: ಹೃದಯ ಮತ್ತು ಶ್ವಾಸಕೋಶಕ್ಕೆ ಸಂಬಂಧಿಸಿದ ವಿವಿಧ ಕಾಯಿಲೆಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದರು. ಹೀಗಾಗಿ ಸಂಬಂಧಿಕರು ಶವವನ್ನು ಶವಾಗಾರದಲ್ಲಿಟ್ಟು ಮರುದಿನ ಶವಸಂಸ್ಕಾರಕ್ಕೆ ವ್ಯವಸ್ಥೆ ಮಾಡಲು ಮುಂದಾದರು. ಆದರೆ ಆಸ್ಪತ್ರೆ ಸಿಬ್ಬಂದಿ ಮೃತದೇಹವನ್ನು ಮಾರ್ಚೂರುಗೆ ಸ್ಥಳಾಂತರಿಸುತ್ತಿದ್ದಂತೆ ದಿಢೀರನೇ ಮೃತದೇಹ ಎದ್ದು ಕೂತಿತ್ತು.  

Written by - Zee Kannada News Desk | Last Updated : Jan 19, 2025, 02:01 PM IST
  • ಹೃದಯ ಮತ್ತು ಶ್ವಾಸಕೋಶಕ್ಕೆ ಸಂಬಂಧಿಸಿದ ವಿವಿಧ ಕಾಯಿಲೆಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದರು.
  • ಆಸ್ಪತ್ರೆ ಸಿಬ್ಬಂದಿ ಮೃತದೇಹವನ್ನು ಮಾರ್ಚೂರುಗೆ ಸ್ಥಳಾಂತರಿಸುತ್ತಿದ್ದಂತೆ ದಿಢೀರನೇ ಮೃತದೇಹ ಎದ್ದು ಕೂತಿತ್ತು.
  • ಕೇರಳದಲ್ಲಿ ನಡೆದಿರುವ ಈ ಘಟನೆ ಇದೀಗ ಚರ್ಚೆಗೆ ಗ್ರಾಸವಾಗಿದೆ.
Viral News: ಶವಗಾರದಲ್ಲಿ ಸುಡಲು ಬಂದ ವೇಳೆ ಎದ್ದು ಕೂತ ಶವ... ಇನ್ನೆರೆಡು ಸೆಕೆಂಡ್‌ ಬಿಟ್ಟಿದ್ರೆ ಸುಟ್ಟು ಬೂದಿಯಾಗೋತಿದ್ಯಲ್ಲಪ್ಪಾ... title=

Shocking news: ಹೃದಯ ಮತ್ತು ಶ್ವಾಸಕೋಶಕ್ಕೆ ಸಂಬಂಧಿಸಿದ ವಿವಿಧ ಕಾಯಿಲೆಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದರು. ಹೀಗಾಗಿ ಸಂಬಂಧಿಕರು ಶವವನ್ನು ಶವಾಗಾರದಲ್ಲಿಟ್ಟು ಮರುದಿನ ಶವಸಂಸ್ಕಾರಕ್ಕೆ ವ್ಯವಸ್ಥೆ ಮಾಡಲು ಮುಂದಾದರು. ಆದರೆ ಆಸ್ಪತ್ರೆ ಸಿಬ್ಬಂದಿ ಮೃತದೇಹವನ್ನು ಮಾರ್ಚೂರುಗೆ ಸ್ಥಳಾಂತರಿಸುತ್ತಿದ್ದಂತೆ ದಿಢೀರನೇ ಮೃತದೇಹ ಎದ್ದು ಕೂತಿತ್ತು.

ತೀವ್ರವಾಗಿ ಅಸ್ವಸ್ಥಗೊಂಡ ವ್ಯಕ್ತಿಯೊಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಕೊನೆಯುಸಿರೆಳೆದಿದ್ದಾರೆ. ಏನೂ ಮಾಡಲಾಗದೆ ಶವವನ್ನು ಶವಾಗಾರಕ್ಕೆ ಸ್ಥಳಾಂತರಿಸಲು ಯತ್ನಿಸಿದರು. ಮತ್ತೊಂದೆಡೆ, ಈ ವಿಷಯ ತಿಳಿದ ಕುಟುಂಬಸ್ಥರು ಶವಸಂಸ್ಕಾರಕ್ಕೆ ವ್ಯವಸ್ಥೆ ಮಾಡುತ್ತಿದ್ದಾರೆ. ಅಷ್ಟರಲ್ಲಿ ಒಂದು ಅನಿರೀಕ್ಷಿತ ಪವಾಡ ಸಂಭವಿಸಿತು. ಏಟಿಗೆ ಎಲ್ಲರ ಫ್ಯೂಸ್ ಹಾರಿ ಹೋಗಿತ್ತು. ಕೇರಳದಲ್ಲಿ ನಡೆದಿರುವ ಈ ಘಟನೆ ಇದೀಗ ಚರ್ಚೆಗೆ ಗ್ರಾಸವಾಗಿದೆ. 

ಕೇರಳದ ಕಣ್ಣೂರು ಜಿಲ್ಲೆಯ ಪಚ್ಪೊಯಿಕಾ ಮೂಲದ ಪವಿತ್ರನ್ (67) ಎಂಬ ವ್ಯಕ್ತಿ ಹೃದಯ ಮತ್ತು ಶ್ವಾಸಕೋಶಕ್ಕೆ ಸಂಬಂಧಿಸಿದ ವಿವಿಧ ಕಾಯಿಲೆಗಳಿಂದ ಬಳಲುತ್ತಿದ್ರು. ಇತ್ತೀಚೆಗೆ, ಅವರ ಆರೋಗ್ಯ ಹದಗೆಟ್ಟಿತು, ಅವರ ಸಂಬಂಧಿಕರು ಅವರನ್ನು ಕರ್ನಾಟಕದ ಮಂಗಳೂರು ಆಸ್ಪತ್ರೆಗೆ ಸಾಗಿಸಿದ್ದರು. ಕೆಲ ದಿನಗಳಿಂದ ಅಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು, ಚಿಕಿತ್ಸಾ ವೆಚ್ಚ ಭಾರವಾಗುತ್ತಿದ್ದಂತೆ ವೆಂಟಿಲೇಟರ್‌ನಲ್ಲಿದ್ದ ಈತನನ್ನು ಮನೆಗೆ ಕರೆದುಕೊಂಡು ಹೋಗಲು ಕುಟುಂಬಸ್ಥರು ನಿರ್ಧರಿಸಿದ್ದರು. ಆದರೆ ದಾರಿಯಲ್ಲಿ ಪವಿತ್ರನ್ ಕಣ್ಣು ತೆರೆಯದೆ ನಿಶ್ಚಲನಾಗಿಯೇ ಇದ್ದ. ಇದರಿಂದ ಪವಿತ್ರನ್ ಸಾವನ್ನಪ್ಪಿದ್ದಾನೆ ಎಂದು ಎಲ್ಲರೂ ಭಾವಿಸಿದ್ದರು. ಕಳೆದ ಸೋಮವಾರ ರಾತ್ರಿ ಕಣ್ಣೂರು ತಲುಪಿದ ಕುಟುಂಬಸ್ಥರ ಮನವಿಯಂತೆ ಎಕೆಜಿ ಆಸ್ಪತ್ರೆ ಸಿಬ್ಬಂದಿ ಫ್ರೀಜರ್ ಸಿದ್ಧಪಡಿಸಿದ್ದಾರೆ. ರಾತ್ರಿ ಶವಾಗಾರದಲ್ಲಿ ಇಡುವಂತೆ ಸಿಬ್ಬಂದಿಗೆ ತಿಳಿಸಿ ನಾಳೆ ಅಂತ್ಯಕ್ರಿಯೆಗೆ ವ್ಯವಸ್ಥೆ ಮಾಡಲು ಕುಟುಂಬಸ್ಥರು ಹೇಳಿ ಹೋಗಿದ್ದರಂತೆ.

ಆದರೆ ಪವಿತ್ರನ್ ಅವರನ್ನು ಶವಾಗಾರಕ್ಕೆ ಕರೆದೊಯ್ಯುವಾಗ, ಅವರ ಬೆರಳುಗಳು ಚಲಿಸುತ್ತಿರುವುದನ್ನು ಆಸ್ಪತ್ರೆ ಸಿಬ್ಬಂದಿ ಗಮನಿಸಿ, ವೈದ್ಯರು ಕೂಡಲೇ ಎಚ್ಚೆತ್ತು ಅವರನ್ನು ಐಸಿಯುಗೆ ಸಾಗಿಸಿದ್ದಾರೆ. ಆದರೆ, ಈ ವಿಷಯ ತಿಳಿಯದ ಕುಟುಂಬಸ್ಥರು ಮಂಗಳವಾರ ಬೆಳಗ್ಗೆ ಪತ್ರಿಕೆಗಳಲ್ಲಿ ಪವಿತನ ಚಿತ್ರ ಸಹಿತ ‘ಸಂಸ್ಮರಣ’ ಜಾಹೀರಾತು ನೀಡಿದ್ದಾರೆ.  ಸದ್ಯ ಪವಿತಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News