Virat Kohli Statement on Leaving India: ಟೀಂ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ವಿಶ್ವದ ಅತ್ಯುತ್ತಮ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರು ಟೆಸ್ಟ್, ODI ಅಥವಾ T20 ಫಾರ್ಮ್ಯಾಟ್ ಯಾವುದೇ ಆಗಿರಲಿ, ಆಟದ ಪ್ರತಿಯೊಂದು ಸ್ವರೂಪದಲ್ಲೂ ವಿರಾಟ್ ಕೊಹ್ಲಿಯದ್ದು ಒಂದು ಕೈ ಮೇಲೆಯೇ ಇರುತ್ತದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ
ಟೀಂ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ವಿಶ್ವದ ಅತ್ಯುತ್ತಮ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರು ಟೆಸ್ಟ್, ODI ಅಥವಾ T20 ಫಾರ್ಮ್ಯಾಟ್ ಯಾವುದೇ ಆಗಿರಲಿ, ಆಟದ ಪ್ರತಿಯೊಂದು ಸ್ವರೂಪದಲ್ಲೂ ವಿರಾಟ್ ಕೊಹ್ಲಿಯದ್ದು ಒಂದು ಕೈ ಮೇಲೆಯೇ ಇರುತ್ತದೆ.
ಇದೀಗ ಟಿ20 ಆವೃತ್ತಿಗೆ ನಿವೃತ್ತಿ ಘೋಷಿಸಿರುವ ಕೊಹ್ಲಿ, ಟೆಸ್ಟ್ ಮತ್ತು ಏಕದಿನಕ್ಕೂ ವಿದಾಯ ಹೇಳಲಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ಇದರ ಬಗ್ಗೆ ಸ್ಪಷ್ಟನೆ ಇಲ್ಲದಿದ್ದರೂ ಅವರ ಕೆಲವೊಂದು ಹೇಳಿಕೆಗಳು ಅದಕ್ಕೆ ಪೂರಕ ಎಂಬಂತಿದೆ.
ಎಲ್ಲಾ ಮೂರು ಸ್ವರೂಪಗಳಲ್ಲಿ 50 ಕ್ಕಿಂತ ಹೆಚ್ಚು ಬ್ಯಾಟಿಂಗ್ ಸರಾಸರಿ ಹೊಂದಿದ್ದ ಏಕೈಕ ಆಟಗಾರ ಅಂದರೆ ಅದು ವಿರಾಟ್ ಕೊಹ್ಲಿ. ಇದೀಗ ಅಲಿಭಾಗ್‌ನಲ್ಲಿ ತಮ್ಮ ಕನಸಿನ ಮನೆಯನ್ನು ನಿರ್ಮಿಸಿರುವ ವಿರಾಟ್ ಅದರ ಸಂಭ್ರಮದಲ್ಲಿದ್ದಾರೆ. ಆದರೆ ವಿರುಷ್ಕಾ ಜೋಡಿ ಭಾರತದಲ್ಲಿ ನೆಲೆಸದೆ ಲಂಡನ್‌ನಲ್ಲಿ ಸೆಟಲ್ ಆಗಲಿದ್ದಾರೆ ಎಂಬ ವರದಿಯೂ ಹರಿದಾಡುತ್ತಿದೆ. ಇದಕ್ಕೆ ಸಂಬಂಧಿಸಿದಂತೆ ಅವರ ಹೇಳಿಕೆ ಕೂಡ ಪ್ರಸ್ತುತ ವೈರಲ್ ಆಗುತ್ತಿದೆ.
ಟಿ20 ವಿಶ್ವಕಪ್ ಗೆದ್ದ ಖುಷಿಯಲ್ಲಿದ್ದ ಭಾರತಕ್ಕೆ ವಿದಾಯ ಹೇಳುವ ಮೂಲಕ ಶಾಕ್ ನೀಡಿದ್ದರು ವಿರಾಟ್. ಈ ವಿದಾಯ ಘೋಷಣೆಗೆ ಕೆಲವು ದಿನಗಳ ಮುಂಚೆ ವಿರಾಟ್ ಹೇಳಿಕೆಯೊಂದನ್ನು ನೀಡಿದ್ದು, ಅಭಿಮಾನಿಗಳಿಗೆ ಟೆನ್ಶನ್ ನೀಡಿದೆ.
"ನನ್ನ ಮನಸ್ಸಿಗೆ ಒಂದು ಬಾರಿ ಮುಗಿಯಿತು ಎಂದು ಅನಿಸಿದರೆ, ನಾನು ಹೋರಡುತ್ತೇನೆ. ಆ ಬಳಿಕ ನೀವು ನನ್ನನ್ನು ನೋಡಲೂ ಸಾಧ್ಯವಾಗುವುದಿಲ್ಲ. ಆದ್ದರಿಂದ, ನಾನು ಆಡುವಷ್ಟು ಕಾಲ, ನನ್ನಿಂದ ಎಷ್ಟು ಸಾಧ್ಯವೋ ಅಷ್ಟು ಪ್ರಯತ್ನಿಸುತ್ತೇನೆ" ಎಂದು ಹೇಳಿದ್ದರು.
ಈ ಹೇಳಿಕೆ ಸದ್ಯ ಮುನ್ನೆಲೆ ಬಂದಿದ್ದು, ವಿರಾಟ್ ನಿವೃತ್ತಿ ಸುಳಿವು ನೀಡಿದ್ದಾರಾ? ಅಥವಾ ವಿರುಷ್ಕಾ ಜೋಡಿ ಶಾಶ್ವತವಾಗಿ ಭಾರತ ತೊರೆದು ಲಂಡನ್‌ನಲ್ಲಿಯೇ ವಾಸವಾಗುವ ಹಿಂಟ್ ನೀಡಿದ್ದಾರಾ? ಎಂಬುದು ಸ್ಪಷ್ಟವಾಗದ ಸಂಗತಿ.