ಚೈತ್ರಾ ಕುಂದಾಪುರಗೆ ಕಾಡುತ್ತಿದೆ ಈ ಗಂಭೀರ ಆರೋಗ್ಯ ಸಮಸ್ಯೆ! ಇದೇ ಕಾರಣಕ್ಕೆ ಪದೇ ಪದೇ ಡಾಕ್ಟರ್ ಬಳಿ ಹೋಗ್ತಾರಂತೆ!

Bigg Boss Kannada Season 11 Updates: ಬಿಗ್ ಬಾಸ್ ಮನೆಯಲ್ಲಿ ಚೈತ್ರಾ ಕುಂದಾಪುರ ಎದುರಿಸಿದ ಆರೋಗ್ಯ ಸಮಸ್ಯೆಗಳು ಏನು? ಯಾಕೆ ಅವರು ಪದೇ ಪದೇ ಡಾಕ್ಟರ್ ಬಳಿ ಹೋಗುತ್ತಿದ್ದರು. ಅವರ ಆರೋಗ್ಯ ಸಮಸ್ಯೆ ಬಗ್ಗೆ ಮತ್ತಷ್ಟು ಮಾಹಿತಿ ಇಲ್ಲಿದೆ ನೋಡಿ...

Bigg Boss Kannada 11: ಬಿಗ್ ಬಾಸ್ ಕನ್ನಡ ಸೀಸನ್ 11ರಲ್ಲಿ ಅತಿ ಹೆಚ್ಚು ಕಳಪೆ ಪಡೆದ ಸ್ಪರ್ಧಿ ಚೈತ್ರಾ ಕುಂದಾಪುರ. ದೊಡ್ಮನೆಯ ಜೈಲು ನನಗೆ ತವರು ಮನೆ ಇದ್ದಂತೆ ಎಂದು ಅವರು ಹಾಸ್ಯ ಕೂಡ ಮಾಡಿದ್ದರು. ಇದೆಲ್ಲರ ನಡುವೆ ಚೈತ್ರಾರ ಆರೋಗ್ಯದ ಬಗ್ಗೆ ಸಾಕಷ್ಟು ಗಾಸಿಪ್ ಹಬ್ಬಿತ್ತು. ಅವರು ಸುಮ್ಮನೆ ಹುಷಾರಿಲ್ಲದಂತೆ ವರ್ತಿಸುತ್ತಾರೆ, ಡಾಕ್ಟರ್ ಜೊತೆ ಹೋಗುತ್ತಾರೆ ಹಾಗೆ ಹೀಗೆ ಎಂದು. ಚೈತ್ರಾರ ಆರೋಗ್ಯ ಪದೇ ಪದೇ ಯಾಕೆ ಕೈ ಕೊಡುತ್ತಿತ್ತು ಎಂಬುದರ ಬಗ್ಗೆ ಅವರೇ ಸ್ಪಷ್ಟನೆ ನೀಡಿದ್ದಾರೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

1 /5

ದೊಡ್ಮನೆಯಿಂದ ಹೊರಬಂದಿರುವ ಚೈತ್ರಾ ಕುಂದಾಪುರ ಅವರು ತಮಗಾದ ಅನುಭವಗಳ ಬಗ್ಗೆ ಮಾತನಾಡಿದ್ದಾರೆ. ಬಿಗ್‌ ಬಾಸ್‌ ಮನೆಯಲ್ಲಿ ತಾನು ಯಾವ ರೀತಿ ಆರೋಗ್ಯ ಸಮಸ್ಯೆಗಳನ್ನ ಎದುರಿಸಿದೆ ಅಂತಾ ತಿಳಿಸಿದ್ದಾರೆ. 'ನಾನು ಡಾಕ್ಟರ್ ಎದುರಿಗೆ ವಾಂತಿ ಮಾಡಿದ್ದೀನಿ, ಡಾಕ್ಟರ್ ಎದುರಿಗೇ ನನಗೆ ಆರೋಗ್ಯ ಸಮಸ್ಯೆ ಬಂದಿತ್ತು. ನನ್ನ UTI ರಿಪೋರ್ಟ್‌ಗಳೇ ಇದಕ್ಕೆ ಸಾಕ್ಷಿಯಾಗಿ ಬಂದಿತ್ತು. ನನಗೆ PCOD ಸಮಸ್ಯೆ ಇತ್ತುʼ ಎಂದು ಅವರು ಹೇಳಿದ್ದಾರೆ.  

2 /5

ʼಜೈಲಿಗೆ ಹೋದಾಗ ಹೆಣ್ಣು ಮಕ್ಕಳಿಗೆ ಹೆಚ್ಚಿನ ಸಮಸ್ಯೆ ಆಗುತ್ತದೆ. ಏಕೆಂದರೆ ಅಲ್ಲಿನ ಹೀಟ್‌, ಲೈಟ್ ಮತ್ತು ಎಸಿಗಳಿಂದ ನಮ್ಮ ತಿಂಗಳ ಸೈಕಲ್‌ಗಳಲ್ಲಿ ತುಂಬಾ ಬದಲಾವಣೆ ಆಗುತ್ತಿತ್ತು. ಶೋಭಾ ಶೆಟ್ಟಿ ಕಳೆಪೆ ಪಡೆದು ಜೈಲಿಗೆ ಹೋದ ಮೇಲೆ ಸ್ವ-ಇಚ್ಛೆಯಿಂದಲೇ ಮನೆಗೆ ಹೋದರು. ಏಕೆಂದರೆ ಅವರ ಆರೋಗ್ಯ ಸುಧಾರಿಸಲಿಲ್ಲ. ಪಿಸಿಓಡಿ ಇದ್ದಾಗ ಮಾನಸಿಕವಾಗಿ ಎಷ್ಟು ಮೂಡ್ ಸ್ವಿಂಗ್‌ಗಳನ್ನು ಎದುರಿಸುತ್ತೀವಿ ಅನ್ನೋದು ಬಹುತೇಕರಿಗೆ ಗೊತ್ತಿರುತ್ತದೆʼ ಚೈತ್ರಾ ಹೇಳಿದ್ದಾರೆ.  

3 /5

'ನಾನು ಮೊದಲೇ ಕರಾವಳಿಯವಳು.. ನನಗೆ ಬೆಂಗಳೂರಿನ ವಾತಾವರಣಕ್ಕೆ ಹೊಂದಿಕೊಳ್ಳಲು ಕಷ್ಟ ಆಯ್ತು. ಒಂದು ವಾರ ಪೂರ್ತಿ ಎಪಿ ಮತ್ತು ಲೈಟ್‌ಗಳ ನಡುವೆ ಇರುತ್ತೀವಿ. ಆದರೆ ಕಳಪೆಗೆ ಬಂದಾಗ ಏನೂ ಅಂದ್ರೆ ಏನೂ ಇರುವುದಿಲ್ಲʼವೆಂದು ಚೈತ್ರಾ ತಿಳಿಸಿದ್ದಾರೆ. 

4 /5

ʼನಾರ್ಮಲ್ ವಾತಾವರಣಕ್ಕೆ ನಮ್ಮ ಬಾಡಿ ಸೆಟ್ ಆಗಬೇಕು, ರಾತ್ರಿ ಒಮ್ಮೆ ಸಿಕ್ಕಾಪಟ್ಟೆ ಕೋಲ್ಡ್ ಆಗುತ್ತಿತ್ತು. ಇದರ ನಡುವೆ ರಾಗಿ ಗಂಜಿ ಮಾತ್ರ ಕಡಿಯಬೇಕು. ಬೇರೆ ಹೆಣ್ಣು ಮಕ್ಕಳು ಹೋಗದಿರದ ಕಾರಣ ಅವರಿಗೆ ಸಮಸ್ಯೆಗಳು ಏನು ಅನ್ನೋದು ಅರ್ಥವಾಗುತ್ತಿರಲಿಲ್ಲ. ಇಡೀ ದಿನ ಒಬ್ಬರನ್ನು ಕೂಡಿ ಹಾಕಿದರೆ ಮಾನಸಿಕವಾಗಿ ಕುಗ್ಗುತ್ತೀವಿʼ ಅಂತಾ ಚೈತ್ರಾ ಹೇಳಿಕೊಂಡಿದ್ದಾರೆ.

5 /5

ʼಕಳಪೆ ಪಡೆದು ಕಷ್ಟ ಅನುಭವಿಸಿದಾಗ ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಒಂದು ಸಲ ಕಳಪೆ ಪಡೆದ ಭವ್ಯಾ ಗೌಡ ತುಂಬಾ ಬೇಸರಲ್ಲಿದ್ದಳು. ಆಕೆಗೆ ಇಡೀ ಮನೆ ಸಪೋರ್ಟ್ ಇದ್ದರೂ ಸಹ ಚೇತರಿಸಿಕೊಳ್ಳಲು ಸಮಯ ತೆಗೆದುಕೊಂಡಳು' ಅಂತಾ ಚೈತ್ರಾ ಕುಂದಾಪುರ ತಿಳಿಸಿದ್ದಾರೆ.