ಸೋಮಾರಿತನ ದೂರವಾಗುವುದು. ಮಾತ್ರವಲ್ಲ, ದೇಹದಲ್ಲಿ ಶಕ್ತಿ ವೃದ್ಧಿಯಾಗಿ, ಒತ್ತಡ ನಿವಾರಣೆಗೂ ಸಹಾಯ ಮಾಡುತ್ತದೆ.
ಬೆಂಗಳೂರು : ನಿತ್ಯ ಸ್ನಾನ ಮಾಡುವುದರಿಂದ ಮೈ ಕೈ ಶುಚಿಯಾಗಿರುವುದರ ಜೊತೆಗೆ ಸೋಮಾರಿತನ ದೂರವಾಗುವುದು. ಮಾತ್ರವಲ್ಲ, ದೇಹದಲ್ಲಿ ಶಕ್ತಿ ವೃದ್ಧಿಯಾಗಿ, ಒತ್ತಡ ನಿವಾರಣೆಗೂ ಸಹಾಯ ಮಾಡುತ್ತದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ
ಸ್ನಾನ ಎನ್ನುವುದು ನಿತ್ಯದ ದಿನಚರಿ. ಕೆಲವರು ದಿನಕ್ಕೆ ಒಮ್ಮೆ ಸ್ನಾನ ಮಾಡಿದರೆ, ಇನ್ನು ಕೆಲವರು ದಿನಕ್ಕೆರಡು ಬಾರಿ ಸ್ನಾನ ಮಾಡುತ್ತಾರೆ.
ನಿತ್ಯ ಸ್ನಾನ ಮಾಡುವುದರಿಂದ ಮೈ ಕೈ ಶುಚಿಯಾಗಿರುವುದರ ಜೊತೆಗೆ ಸೋಮಾರಿತನ ದೂರವಾಗುವುದು. ಮಾತ್ರವಲ್ಲ, ದೇಹದಲ್ಲಿ ಶಕ್ತಿ ವೃದ್ಧಿಯಾಗಿ, ಒತ್ತಡ ನಿವಾರಣೆಗೂ ಸಹಾಯ ಮಾಡುತ್ತದೆ.
ಆದರೆ ಸ್ನಾನ ಮಾಡುವಾಗ ಮೊದಲು ನೇರವಾಗಿ ತಲೆಗೆ ನೀರು ಹಾಕಬಾರದು. ಒಮ್ಮೆಲೇ ಬಿಸಿ ನೀರು ತಲೆಗೆ ಸುರಿದು ಕೊಂಡರೆ ದೇಹ ತಾಪಕ್ಕೆ ಇದು ಹೊಂದಿಕೆಯಾಗದೆ ಸಮಸ್ಯೆ ಎದುರಾಗಬಹುದು.
ಸ್ನಾನ ಮಾಡುವಾಗ, ನೇರವಾಗಿ ತಲೆ ಮೇಲೆ ನೀರು ಸುರಿಯುವ ಯಾವ ಭಾಗಕ್ಕೆ ನೀರು ಹಾಕಿಕೊಂಡರೆ ಹೆಚ್ಚು ಪರಿಣಾಮಕಾರಿ ಎನ್ನುವುದನ್ನು ಆಯುರ್ವೇದದಲ್ಲಿ ಹೇಳಲಾಗಿದೆ.
ಈ ವಿಧಾನವು ಧಾರ್ಮಿಕ ನಂಬಿಕೆ ಮಾತ್ರವಲ್ಲ, ವೈಜ್ಞಾನಿಕ ಆಧಾರವನ್ನು ಸಹ ಹೊಂದಿದೆ. ಈ ರೀತಿಯಾಗಿ ಸ್ನಾನ ಮಾಡುವುದರಿಂದ ಅನೇಕ ಪ್ರಯೋಜನಗಳಿವೆ.
ಸ್ನಾನ ಮಾಡುವಾಗ ಮೊದಲು ಹೊಟ್ಟೆಯ ಭಾಗಕ್ಕೆ ನೀರು ಹಾಕುವುದರಿಂದ ದೇಹದಲ್ಲಿನ ಶಕ್ತಿಯನ್ನು ಸಮತೋಲನಗೊಳಿಸುತ್ತದೆ.ಇದು ಅದೇ ರೀತಿಯಲ್ಲಿ ಸಕಾರಾತ್ಮಕ ಪರಿಣಾಮ ಬೀರುತ್ತದೆ.
ಭುಜದ ಭಾಗಕ್ಕೆ ಮೊದಲು ನೀರು ಹಾಕುವುದರಿಂದ ನೀರಿನ ತಾಪ ದೇಹಕ್ಕೆ ಸರಿ ಹೊಂದುತ್ತದೆಯೋ ಇಲ್ಲವೋ ಎನ್ನುವುದು ತಿಳಿಯುತ್ತದೆ. ಮಾತ್ರವಲ್ಲ ಇದು ದೇಹದ ಆಯಾಸ ಕಡಿಮೆ ಮಾಡಿ, ಮೈ-ಕೈ ನೋವಿನಿಂದಲೂ ಪರಿಹಾರ ನೀಡುತ್ತದೆ.
ಇನ್ನು ಚಳಿಗಾಲದಲ್ಲಿ ಸ್ನಾನ ಮಾಡುವಾಗ ಮೊದಲು ಪಾದಗಳಿಗೆ ಸ್ವಲ್ಪ ನೀರು ಹಾಕಿ ನೋಡಬೇಕು. ನಂತರ, ಹೊಟ್ಟೆ, ಎದೆ, ಭುಜದ ಮೇಲೆ ನೀರು ಹಾಕಿ ಕೊನೆಗೆ ತಲೆಯ ಮೇಲೆ ನೀರನ್ನು ಸುರಿಯಬೇಕು.
ಸೂಚನೆ :ಈ ಲೇಖನವು ಸಾಮಾನ್ಯ ಮಾಹಿತಿ ಮತ್ತು ಅಭಿಪ್ರಾಯವನ್ನು ಆಧರಿಸಿದೆ. ಜೀ ನ್ಯೂಸ್ ಈ ಮಾಹಿತಿಯನ್ನು ಅನುಮೋದಿಸುವುದಿಲ್ಲ.