ಹೊಸ ನಾಯಕನನ್ನು ಹುಡುಕಿಕೊಳ್ಳಿ : BCCIಗೆ ಸೆಡ್ಡು ಹೊಡೆದ ರೋಹಿತ್ ಶರ್ಮಾ!ಯಾರ ಹೆಗಲಿಗೆ ಟೀಂ ಇಂಡಿಯಾ ಮುಂದಿನ ಸಾರಥ್ಯ?

ಭಾರತದ ಮುಂದಿನ ಟೆಸ್ಟ್ ಸರಣಿಯು ಜೂನ್‌ನಲ್ಲಿ ಇಂಗ್ಲೆಂಡ್ ವಿರುದ್ಧ ನಡೆಯಲಿದೆ. ಇದು ಐದು ಪಂದ್ಯಗಳ ಸರಣಿಯಾಗಿದೆ. ಈ ಟೆಸ್ಟ್ ಸರಣಿಗೆ  ರೋಹಿತ್ ಶರ್ಮಾ ಕ್ಯಾಪ್ಟನ್ ಆಗಿ ಮುಂದುವರಿಯುವುದು ಕಷ್ಟ.   

Written by - Ranjitha R K | Last Updated : Jan 13, 2025, 11:19 AM IST
  • ನಾಯಕತ್ವ ಬಿಟ್ಟು ಕೊಡುವ ಬಗ್ಗೆ ಬೇಸರ
  • ರೋಹಿತ್ ಶರ್ಮಾ ಸ್ಥಾನವನ್ನು ತುಂಬುವವರು ಯಾರು
  • ಭಾರತದ ಮುಂದಿನ ಟೆಸ್ಟ್ ಸರಣಿಯು ಜೂನ್‌ನಲ್ಲಿ
ಹೊಸ ನಾಯಕನನ್ನು ಹುಡುಕಿಕೊಳ್ಳಿ : BCCIಗೆ ಸೆಡ್ಡು ಹೊಡೆದ ರೋಹಿತ್ ಶರ್ಮಾ!ಯಾರ ಹೆಗಲಿಗೆ ಟೀಂ ಇಂಡಿಯಾ ಮುಂದಿನ ಸಾರಥ್ಯ?  title=

ಆಸ್ಟ್ರೇಲಿಯ ವಿರುದ್ಧದ ಟೆಸ್ಟ್ ಸರಣಿಯನ್ನು 1-3 ಅಂತರದಿಂದ ಸೋತ ಬಳಿಕ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಕಳೆದ ವರ್ಷ, ರೋಹಿತ್ ಶರ್ಮಾ ನೇತೃತ್ವದಲ್ಲಿ, ಭಾರತವು ಬಾಂಗ್ಲಾದೇಶದ ವಿರುದ್ಧ ಟೆಸ್ಟ್ ಕ್ರಿಕೆಟ್‌ನಲ್ಲಿ 2-0 ಸರಣಿ ಜಯವನ್ನು ದಾಖಲಿಸಿತು. ಆದರೆ ನ್ಯೂಜಿಲೆಂಡ್‌ ವಿರುದ್ದ ಟೆಸ್ಟ್ ಪಂದ್ಯದಲ್ಲಿ 0-3ರ ಸೋಲು ಮತ್ತು ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ 1-3ರ ಅಂತರದಲ್ಲಿ ಸೋಲನ್ನು ಅನುಭವಿಸಿದೆ. 

ನಾಯಕತ್ವ ಬಿಟ್ಟು ಕೊಡುವ ಬಗ್ಗೆ ಬೇಸರ : 
ಭಾರತದ ಮುಂದಿನ ಟೆಸ್ಟ್ ಸರಣಿಯು ಜೂನ್‌ನಲ್ಲಿ ಇಂಗ್ಲೆಂಡ್ ವಿರುದ್ಧ ನಡೆಯಲಿದೆ. ಇದು ಐದು ಪಂದ್ಯಗಳ ಸರಣಿಯಾಗಿದೆ. ಈ ಟೆಸ್ಟ್ ಸರಣಿಗೆ  ರೋಹಿತ್ ಶರ್ಮಾ ಕ್ಯಾಪ್ಟನ್ ಆಗಿ ಮುಂದುವರಿಯುವುದು ಕಷ್ಟ. ಆಸ್ಟ್ರೇಲಿಯಾ ವಿರುದದ್ದ ಟೆಸ್ ಸರಣಿಯಲ್ಲಿ ರೋಹಿತ್ ಶರ್ಮಾ ಐದು ಇನ್ನಿಂಗ್ಸ್‌ಗಳಲ್ಲಿ ಕೇವಲ 31 ರನ್ ಗಳಿಸಿದ್ದಾರೆ. ಈ ಮಧ್ಯೆ, ಬಿಸಿಸಿಐ ಜೊತೆಗಿನ ಇತ್ತೀಚಿನ ಸಭೆಯಲ್ಲಿ ರೋಹಿತ್ ಶರ್ಮಾ ಮುಂದಿನ ಕೆಲವು ತಿಂಗಳು ಭಾರತ ತಂಡದ ನಾಯಕತ್ವದಲ್ಲಿ ಮುಂದುವರಿಯುವ ಬಯಕೆಯನ್ನು ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಈ ಸಭೆಯಲ್ಲಿ ಬಿಸಿಸಿಐನ ಉನ್ನತ ಅಧಿಕಾರಿಗಳು, ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್ ಮತ್ತು ಹೆಡ್  ಕೋಚ್ ಗೌತಮ್ ಗಂಭೀರ್ ಹಾಜರಿದ್ದರು. 

ಇದನ್ನೂ ಓದಿ : ಚಾಂಪಿಯನ್ಸ್ ಟ್ರೋಫಿಗೂ ಮುನ್ನ ರೋಹಿತ್ ಮಹತ್ವದ ನಿರ್ಧಾರ! ಏನದು?

ರೋಹಿತ್ ಶರ್ಮಾ ಮುಂದಿನ ಕೆಲವು ತಿಂಗಳುಗಳ ಕಾಲ ಭಾರತದ ನಾಯಕತ್ವದಲ್ಲಿ ಮುಂದುವರಿಯುವ ಬಯಕೆಯನ್ನು ಬಿಸಿಸಿಐ ಮುಂದೆ  ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ಹೊಸ ನಾಯಕನ ಹುಡುಕಾಟವನ್ನು ಮುಂದುವರಿಸುವಂತೆಯೂ ಬಿಸಿಸಿಐಯನ್ನು ಕೇಳಿಕೊಂಡಿದ್ದಾರೆ ಎನ್ನಲಾಗಿದೆ. ಮಾಧ್ಯಮ ವರದಿಗಳ ಪ್ರಕಾರ, ಬಿಸಿಸಿಐ ಜೊತೆಗಿನ ಸಭೆಯಲ್ಲಿ, ರೋಹಿತ್ ಶರ್ಮಾ ಸ್ಥಾನವನ್ನು ಬುಮ್ರಾ ಅವರಿಗೆ ನೀಡುವ ಬಗ್ಗೆ ಪ್ರಸ್ತಾಪಿಸಲಾಗಿದೆಯಂತೆ. 

ಭಾರತದ ಟೆಸ್ಟ್ ನಾಯಕರಾಗಿ ರೋಹಿತ್ ಶರ್ಮಾ ಬದಲಿಗೆ ಯಾರು ಎಂದು ಕೇಳಿದರೆ ಆ ಸಾಲಿನಲ್ಲಿ ಜಸ್ಪ್ರೀತ್ ಬುಮ್ರಾ ಮುಂಚೂಣಿಯಲ್ಲಿದ್ದಾರೆ. ಆದರೆ ಅವರ ಫಿಟ್ನೆಸ್ ಕಾಳಜಿಯನ್ನು ಪರಿಗಣಿಸಿ, ಅವರು ದೀರ್ಘಾವಧಿಯ ಆಯ್ಕೆಯಾಗಿ ಕಂಡುಬರುವುದಿಲ್ಲ. ಇತ್ತೀಚಿನ ಬೆನ್ನು ನೋವಿನ ಸಮಸ್ಯೆಯಿಂದಾಗಿ, ಅವರು ಮುಂದೆ ತಂಡದಿಂದ ಹೊರಗುಳಿಯುವ ಸಾಧ್ಯತೆಯಿದೆ. ಮುಂಬರುವ ಚಾಂಪಿಯನ್ಸ್ ಟ್ರೋಫಿಯಲ್ಲಿ ಆಡುವುದು ಅನುಮಾನ. ಹಾಗಾಗಿ ಟೆಸ್ಟ್ ಪಂದ್ಯಗಳಲ್ಲಿ ಅವರನ್ನು ಖಾಯಂ ನಾಯಕ ಎಂದು ಪರಿಗಣಿಸಬಹುದೇ ಎನ್ನುವ ಪ್ರಶ್ನೆ ಬಿಸಿಸಿಐ ಮುಂದಿದೆ. 

ಇದನ್ನೂ ಓದಿ : ಚಾಂಪಿಯನ್ಸ್ ಟ್ರೋಫಿಗೂ ಮುನ್ನ ಭಾರತಕ್ಕೆ ಬ್ಯಾಡ್ ನ್ಯೂಸ್ !

ಬಿಸಿಸಿಐ ಮಹತ್ವದ ನಿರ್ಧಾರ  :
ರೋಹಿತ್ ಶರ್ಮಾ ಮುಂಬರುವ ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ ಭಾರತದ ನಾಯಕನಾಗಿ ಮುಂದುವರಿಯಬೇಕು ಎನ್ನುವ ಬಯಕೆ ಹೊಂದಿದ್ದಾರೆ. ಆದರೆ   ಈ ಬಗ್ಗೆ ಬಿಸಿಸಿಐ ಯಾವ ತೀರ್ಮಾನ ತೆಗೆದುಕೊಳ್ಳಲಿದೆ ಎನ್ನುವುದು ಬಹಳ ಮುಖ್ಯ. ಭಾರತದ ಟೆಸ್ಟ್ ನಾಯಕನ ಬಗ್ಗೆ ಬಿಸಿಸಿಐ ಮಹತ್ವದ ನಿರ್ಧಾರ ತೆಗೆದುಕೊಳ್ಳಲಿದೆ ಎನ್ನುವುದು ಮಾತ್ರ ಸುಳ್ಳಲ್ಲ. 

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ 

Trending News