Viral Video: "ನೋಡ.. ನೋಡ ಎಷ್ಟು ಚೆಂದ.." ಕರುವಿಗೆ ತೊಟ್ಟಿಲು ಕಟ್ಟಿ ನಾಮಕರಣ ಮಾಡಿದ ಮನೆಮಂದಿ!

Calf Viral Video: ಅನೇಕ ಜನರು ತಮ್ಮ ಮನೆಯಲ್ಲಿ ನಾಯಿ ಮತ್ತು ಬೆಕ್ಕುಗಳಂತಹ ಪ್ರಾಣಿಗಳನ್ನು ಸಾಕುತ್ತಾರೆ. ತಮ್ಮ ಕುಟುಂಬದ ಸದಸ್ಯರಂತೆ ಪ್ರಾಣಿಗಳನ್ನು ಜನರು ಪ್ರೀತಿಸುತ್ತಾರೆ. ಅಲ್ಲದೆ, ಸಾಕು ನಾಯಿಗಳು ಮತ್ತು ಬೆಕ್ಕುಗಳಿಗೆ ಜನ್ಮದಿನವನ್ನು ಸಹ ಜನ ಆಚರಿಸುತ್ತಾರೆ. ಇಂತಹ ಆಚರಣೆಗಳ ವೀಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ ವೈರಲ್ ಆಗುತ್ತಿರುತ್ತವೆ.

Written by - Zee Kannada News Desk | Last Updated : Jan 12, 2025, 12:26 PM IST
  • ತಮ್ಮ ಕುಟುಂಬದ ಸದಸ್ಯರಂತೆ ಪ್ರಾಣಿಗಳನ್ನು ಜನರು ಪ್ರೀತಿಸುತ್ತಾರೆ.
  • ಸಾಕು ನಾಯಿಗಳು ಮತ್ತು ಬೆಕ್ಕುಗಳಿಗೆ ಜನ್ಮದಿನವನ್ನು ಸಹ ಜನ ಆಚರಿಸುತ್ತಾರೆ.
  • ಇತ್ತೀಚಿಗೆ ಹಸುವಿನ ಕರುವಿನ ತೊಟ್ಟಿಲು ಶಾಸ್ತ್ರ ಸಮಾರಂಭ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Viral Video: "ನೋಡ.. ನೋಡ ಎಷ್ಟು ಚೆಂದ.." ಕರುವಿಗೆ ತೊಟ್ಟಿಲು ಕಟ್ಟಿ ನಾಮಕರಣ ಮಾಡಿದ ಮನೆಮಂದಿ! title=

Calf Viral Video: ಅನೇಕ ಜನರು ತಮ್ಮ ಮನೆಯಲ್ಲಿ ನಾಯಿ ಮತ್ತು ಬೆಕ್ಕುಗಳಂತಹ ಪ್ರಾಣಿಗಳನ್ನು ಸಾಕುತ್ತಾರೆ. ತಮ್ಮ ಕುಟುಂಬದ ಸದಸ್ಯರಂತೆ ಪ್ರಾಣಿಗಳನ್ನು ಜನರು ಪ್ರೀತಿಸುತ್ತಾರೆ. ಅಲ್ಲದೆ, ಸಾಕು ನಾಯಿಗಳು ಮತ್ತು ಬೆಕ್ಕುಗಳಿಗೆ ಜನ್ಮದಿನವನ್ನು ಸಹ ಜನ ಆಚರಿಸುತ್ತಾರೆ. ಇಂತಹ ಆಚರಣೆಗಳ ವೀಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ ವೈರಲ್ ಆಗುತ್ತಿರುತ್ತವೆ. ಹುಟ್ಟುಹಬ್ಬದ ಹೆಸರಲ್ಲಿ ಸೀಮಂತದಲ್ಲಿ ಹೆಣ್ಣಿಗೆ ಕೊಡುವಂತೆ ಕನ್ನಡಕವನ್ನು ಕಟ್ ಮಾಡಿ ಆಚರಣೆ ಮಾಡುತ್ತಾರೆ. ಪ್ರತಿಯೊಂದನ್ನೂ ಶೂಟ್ ಮಾಡಿ ಪೋಸ್ಟ್ ಮಾಡುತ್ತಾರೆ. ಆದರೆ, ಇತ್ತೀಚಿಗೆ ಹಸುವಿನ ಕರುವಿನ ತೊಟ್ಟಿಲು ಶಾಸ್ತ್ರ ಸಮಾರಂಭ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಸಾಮಾನ್ಯವಾಗಿ, ಶಿಶುಗಳಿಗೆ ಜನ್ಮ ನೀಡಿದ ನಂತರ ಜನ ಮಗುವನ್ನು ತೊಟ್ಟಿಲಿನಲ್ಲಿರಿಸಿ ತೊಟ್ಟಿಲು ಶಾಸ್ತ್ರ ಮಾಡುತ್ತಾರೆ. ಆದರೆ ಹಸು ಕರುವನ್ನು ತೊಟ್ಟಿಲು ಹಾಕುವುದನ್ನು ನೀವು ಎಂದಾದರೂ ನೋಡಿದ್ದೀರಾ? ಹೌದು, ಕರುವನ್ನು ಮಗುವಿನಂತೆ ತೊಟ್ಟಿಲಲ್ಲಿ ಹಾಕಿ ಇಲ್ಲಿ ಸಮಾರಂಭ ನಡೆಸಲಾಗಿದೆ. ಇದಕ್ಕೆ ಸಂಬಂಧಿಸಿದ ಮುದ್ದಾದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ದೃಶ್ಯ ಇದೀಗ ನೆಟ್ಟಿಗರ ಮನ ಗೆದ್ದಿದೆ.

ಕರ್ನಾಟಕ ರಾಜ್ಯದ ಉಡುಪಿ ಜಿಲ್ಲೆಯ ಅನಂತಕೃಷ್ಣ ಗೋಶಾಲೆಯಲ್ಲಿ ಕರುವಿನ ತೊಟ್ಟಿಲು ಶಾಸತ್ರದ ಕಾರ್ಯಕ್ರಮ ಅದ್ದೂರಿಯಾಗಿ ನಡೆದಿದೆ. ಈ ವೀಡಿಯೋವನ್ನು ಆದರ್ಶ್ ಹೆಗ್ಡೆ (adarshahgd) ಅವರು ತಮ್ಮ X ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಕರುವನ್ನು ಮಗುವಿನಂತೆ ತೊಟ್ಟಿಲಲ್ಲಿಟ್ಟು ಮಂತ್ರಗಳನ್ನು ಪಠಿಸುತ್ತಾ ನಾಮಕರಣ ಮಾಡಿದ್ದಾರೆ.

ಜನವರಿ 9 ರಂದು ಹಂಚಿಕೊಳ್ಳಲಾದ ವೀಡಿಯೊ 95,000 ಕ್ಕೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿದೆ. ಈ ಬಗ್ಗೆ ಸಾಕಷ್ಟು ಮಂದಿ ಒಳ್ಳೆಯ ಕಾಮೆಂಟ್ ಕೂಡ ಮಾಡಿದ್ದಾರೆ. ಕೆಲವರು ಅದ್ಭುತ ಎಂದು ಬರೆದರೆ, ಮತ್ತೊಬ್ಬರು ಗೋವುಗಳನ್ನು ಕುಟುಂಬದ ಸದಸ್ಯರನ್ನಾಗಿ ಪರಿಗಣಿಸುವ ಸಂಸ್ಕೃತಿ ನಮ್ಮ ದೇಶದಲ್ಲಿ ಮಾತ್ರ ಸಾಧ್ಯ ಎಂದು ಪ್ರತಿಕ್ರಿಯಿಸಿದ್ದಾರೆ. ಈ ಸಮಾರಂಭವನ್ನು ಕಂಡು ಅನೇಕರು ಸಂತಸದಿಂದ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಅನೇಕರ ಮನಸ್ಸನ್ನು ಗೆದ್ದಿದೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News